Search
  • Follow NativePlanet
Share
ಮುಖಪುಟ » ಸ್ಥಳಗಳು » ಗಯಾ » ಆಕರ್ಷಣೆಗಳು » ಮಂಗಳ ಗೌರಿ ಮಂದಿರ

ಮಂಗಳ ಗೌರಿ ಮಂದಿರ, ಗಯಾ

3

ಆದಿ ಶಂಕರರ ಪ್ರಕಾರ ಮಂಗಳ ಗೌರಿ ದೇವಸ್ಥಾನವು ಪ್ರಸಿದ್ದ ಮಹಾಶಕ್ತಿ ಪೀಠಗಳಲ್ಲಿ ಒಂದು. ಈ ದೇವಸ್ಥಾನದ ಕುರಿತು ಪದ್ಮ ಪುರಾಣ, ವಾಯು ಪುರಾಣ ಮತ್ತು ಅನೇಕ ತಾಂತ್ರಿಕ , ಧಾರ್ಮಿಕ ಗ್ರಂಥಗಳಲ್ಲಿ ವರ್ಣಿಸಲಾಗಿದೆ. ಈ ದೇವಸ್ಥಾನವು ಹಿಂದುಗಳು ಶಕ್ತಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ದೃಢಕರಿಸುತ್ತದೆ. ಈ ದೇವಸ್ಥಾನವು ಹದಿನೈದು ಶತಮಾನಕ್ಕೆ ಮುಂಚೆ ಜನ್ಮ ತಾಳಿತೆಂದು ಹೇಳಲಾಗುತ್ತದೆ. ಈ ದೇವಾಲಯವು ಶಕ್ತಿ ಎಂಬ ದೇವತೆಗೆ ಸಮರ್ಪಿತವಾಗಿದೆ.

ಈ ದೇವಸ್ಥಾನವು ಮಂಗಳ ಗೌರಿ ಬೆಟ್ಟದ ಮೇಲೆ ನಿರ್ಮಾಣಗೊಂಡಿದೆ. ಈ ಶಕ್ತಿಪೀಠವು ಒಂದು ಉಪ ಶಕ್ತಿ ಪೀಠವನ್ನು ಹೊಂದಿದ್ದು ಇದು ಶಿವ ದೇವರ ದೇಹದ ಒಂದು ಭಾಗವನ್ನು ತನ್ನಲ್ಲಿ ಹೊಂದಿದೆ ಎಂಬ ನಂಬಿಕೆ ಇದೆ. ಇಲ್ಲಿ ಶಕ್ತಿಯನ್ನು ಸ್ತನದ ಸಂಕೇತ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಉತ್ತಮ ಮತ್ತು ಆರೋಗ್ಯಕರವಾದ ಪೋಷಣೆಯನ್ನು ಸೂಚಿಸುತ್ತದೆ. ಈ ದೇವಾಲಯವನ್ನು ತಲುಪಲು ವಿಮಾನವಾಗಲಿ , ರೇಲ್ವೆ ಆಗಲಿ ಅಥವಾ ರಸ್ತೆಗಳಲ್ಲಿ ಓಡಾಡುವ ಮೋಟಾರು ವಾಹನಗಳನ್ನಾಗಲಿ ಬಳಸಬಹುದು. ಈ ಪವಿತ್ರ ಸ್ಥಳವು ದೇವಿಯ ಪವಿತ್ರ ಸಂಕೇತಗಳನ್ನು ಹೊಂದಿದ್ದು, ಅದನ್ನು ಪ್ರಾಚೀನ ಶಿಲೆಗಳ ಮೇಲೆ ಸುಂದರವಾಗಿ ಕೆತ್ತಲಾಗಿದ್ದು ಪ್ರಶಂಸನೀಯ ಯೋಗ್ಯವಾಗಿವೆ.

ದೇವಾಲಯದ ಮುಂಭಾಗವು ಮಂಟಪದಿಂದ ಅಲಂಕೃತಗೊಂಡಿದೆ. ದೇವಾಲಯದಲ್ಲಿ ಅಂಗಳದಲ್ಲಿ ಒಂದು ಅಗ್ನಿ ಗುಂಡಿ ಇದೆ. ದೇವಾಲಯದಲ್ಲಿರುವ ಎರಡು ಸಣ್ಣ ದೇವಾಲಯಗಳು ಈ ಮಂಗಳ ಗೌರಿ ದೇವಾಲಯಕ್ಕೆ ಹೆಚ್ಚಿನ ಮೆರಗನ್ನು ಉಂಟು ಮಾಡಿವೆ. ಈ ಪುಟ್ಟ ದೇವಸ್ಥಾನಗಳು ಶಿವ ದೇವರು ಮತ್ತು ಮಹಿಷಾಸುರ ಮರ್ದಿನಿ, ದುರ್ಗಾ ಮತ್ತು ದಕ್ಷಿಣ ಕಾಳಿಗಳಿಗೆ ಸಮರ್ಪಿತವಾಗಿವೆ. ಇಲ್ಲಿ ವಿವಿಧ ದೇವಾಲಯಗಳು ಆಸ್ತಿತ್ವದಲ್ಲಿವೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat