Search
 • Follow NativePlanet
Share

ಪಟ್ನಾ (ಪಾಟಲಿಪುತ್ರ) : ಪ್ರವಾಸಿಗರ ಮಹಾದಾನಂದ!

62

ಪ್ರಾಚೀನ ಭಾರತದ ನಗರವಾಗಿರುವ ಪಾಟಲಿಪುತ್ರ ಇಂದು ಆಧುನಿಕ ಭಾರತದ ರಾಜ್ಯ ಬಿಹಾರದ ವ್ಯಸ್ತ ರಾಜಧಾನಿ ಪಟ್ನಾ. ಪಾಟಲಿಪುತ್ರ ಶತಮಾನಗಳ ಇತಿಹಾಸ ವೈಭವ ಮತ್ತು ರಾಜಕೀಯ ಅದೃಷ್ಟದ ಮಿಶ್ರಣ. ವಿಶ್ವದ ಅತೀ ಪುರಾತನ ನಗರಗಳಲ್ಲಿ ಒಂದಾಗಿರುವ ಪಾಟಲಿಪುತ್ರವು ಇತಿಹಾಸದಲ್ಲಿ ತನ್ನದೇ ಆದ ಪ್ರಾಬಲ್ಯ ಮರೆದಿದೆ. ಪಾಟಲಿಪುತ್ರ ಗಂಗಾ ನದಿಯ ದಕ್ಷಿಣ ತಟದಲ್ಲಿದೆ.

ಪಾಟಲಿಪುತ್ರದ ಶ್ರೀಮಂತ ಪರಂಪರೆ

ನಗರಕ್ಕೆ ಹಲವಾರು ಮಂದಿ ವಿದೇಶಿಗರು ಭೇಟಿ ನೀಡಿರುವುದರಿಂದ ಕಲಿಕೆ ಮತ್ತು ಕಲೆಗಳಿಗೆ ಒಂದು ಸುಪ್ರಸಿದ್ಧ ಸ್ಥಾನ. ಅಜಾತಶತ್ರುವಿನಿಂದ ಹಿಡಿದು ಬ್ರಿಟಿಷರ ತನಕ ಪ್ರತಿಯೊಬ್ಬ ಆಡಳಿತಗಾರರು ನಗರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪಾಟಲಿಪುತ್ರ ಪ್ರವಾಸೋದ್ಯಮದಲ್ಲಿ  ರಾಜ್ಗಿರ್ ಬೌದ್ಧರ ತಾಣಗಳು, ವೈಶಾಲಿ ಮತ್ತು ಕೆಸರಿಯಾ, ಬೋಧಿ ವೃಕ್ಷ, ಗಾಂಧಿ ಸೇತು, ಗೋಲ್ಘರ್ ಮತ್ತು ತಖ್ತ್ ಶ್ರೀ ಪಾಟಲಿಪುತ್ರ ಸಾಹಿಬ್ ಪ್ರಮುಖ ಪ್ರವಾಸಿ ತಾಣಗಳು. ಮೊದಲು ಪಾಟಲಿಪುತ್ರ ಹುಲ್ಲುಗಾವಲು ಎಂದು ಕರೆಯಲ್ಪಡುತ್ತಿದ್ದ ಗಾಂಧಿ ಮೈದಾನವು ಪಾಟಲಿಪುತ್ರದ ಮಧ್ಯಭಾಗದಲ್ಲಿರುವ ಮೈದಾನ.

ರಾಜಕೀಯ ಹಾಗೂ ವಾಣಿಜ್ಯ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಲೇ ಇರುತ್ತದೆ ಮತ್ತು ಇದರ ಸುತ್ತಲೂ ವಾಣಿಜ್ಯ ಕೇಂದ್ರಗಳಿವೆ. ಶತಮಾನಗಳ ಶ್ರೀಮಂತ ಪರಂಪರೆ ಮತ್ತು ಬೌದ್ಧಿಕ ವಂಶಾವಳಿಯನ್ನು ಹೊಂದಿರುವ ಪಾಟಲಿಪುತ್ರ ನಗರದಲ್ಲಿ ಬಹಳಷ್ಟು ಆಕರ್ಷಣೆಗಳಿವೆ. ಪಾಟಲಿಪುತ್ರದಲ್ಲಿ ಹಿಂದೂಯಿಸಂ, ಬುದ್ದಿಸಂ, ಜೈನಿಸಂ ಮತ್ತು ಇಸ್ಲಾಂ ಧರ್ಮಗಳ ಬೇರುಗಳು ತುಂಬಾ ಆಳವಾಗಿದ್ದು, ಇದು ನಗರದ ವೈಭವವನ್ನು ತೊರಿಸುತ್ತದೆ. ಪಾಟಲಿಪುತ್ರವು ಒಂದು ವಿಶಿಷ್ಟ ಆರ್ದ್ರ ಮತ್ತು ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಿನ ತಾಪಮಾನವಿರುತ್ತದೆ.

ಅಧಿಕ ಉಷ್ಣತೆಯ ಬೇಸಗೆ ಮತ್ತು ಕಟುವಾದ ಚಳಿಗಾಲವನ್ನು ಹೊಂದಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಪಾಟಲಿಪುತ್ರವು ಮಧುಬನಿ ಎಂದು ಕರೆಯಲ್ಪಡುವ ಮಿಥಿಲಾ ವರ್ಣಚಿತ್ರಕ್ಕೆ ಪ್ರಸಿದ್ಧಿ ಪಡೆದುಕೊಂಡಿದೆ. ಇದು ಇದ್ದಿಲು, ಮೆಣಸು ಮತ್ತು ಇತರ ಗಡಸು ಬಣ್ಣಗಳನ್ನು ಬಳಸಿಕೊಂಡು ಮಹಿಳೆಯರು ನಿರ್ಮಿಸಿದಂತಹ ಜಾನಪದ ಕಲೆ. ಪಾಟಲಿಪುತ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ವಾಸ್ತುಶಿಲ್ಪ ಮನೋಧರ್ಮದ ತಾಣಗಳನ್ನು ನೋಡಬಹುದು.

ಸೋನೆಪುರ್ ಮೇಳ ನಗರದ ಜೀವನದಲ್ಲಿ ಒಂದು ಹಬ್ಬವಾಗಿದೆ. ಮಯೂರ ರಾಜ್ಯಾಡಳಿತದಿಂದ ಬಂದಿರುವ ಈ ಮೇಳವು ಪ್ರತೀವರ್ಷ ನವಂಬರ್ ತಿಂಗಳಲ್ಲಿ ನಡೆಯುತ್ತಿದೆ. ಸೋನೆಪುರ್ ಮೇಳವು ಜಾನುವಾರು ಮೇಳವಾಗಿದ್ದು, ಇದು ಏಶ್ಯಾದ ವಿವಿಧೆಡೆಯಿಂದ ಜನರನ್ನು ಆಕರ್ಷಿಸುತ್ತದೆ. ಈ ಮೇಳದಲ್ಲಿ ಎಲ್ಲಾ ಜಾತಿಯ ಜಾನುವಾರುಗಳು ಹಾಗೂ ಪ್ರಾಣಿಗಳಿರುತ್ತದೆ. ಆದರೆ ಇಲ್ಲಿ ಮಾರಾಟಕ್ಕಿರುವ ಆನೆಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. ಪಾಟಲಿಪುತ್ರ ಪ್ರವಾಸೋದ್ಯಮವು ಪ್ರವಾಸಿಗರಾಗಿ ಮಾನವ ಜನ್ಮವನ್ನು ಆನಂದಿಸಲು ಒಂದು ಉತ್ತಮ ಅವಕಾಶ.

ಮನಮೋಹಕ ಬೌದ್ಧ ತಾಣಗಳು

ಬೋಧಗಯಾ, ವೈಶಾಲಿ ಮತ್ತು ಕೆಸರಿಯಾಗೆ ಭೇಟಿ ನೀಡುವ ಪ್ರವಾಸಿಗರು ಬೌದ್ಧಧರ್ಮದ ಹಿತವಾದ ಪರಮಸತ್ವದಲ್ಲಿ ಅದ್ದಿಹೋಗಬೇಕು. ವೈಶಾಲಿ ಮಹಾವೀರ ಭಗವಂತನ ಜನ್ಮಸ್ಥಳ ಮತ್ತು ಬುದ್ಧ ತನ್ನ ಅಂತಿಮ ಹಿತೋಪದೇಶ ನೀಡಿದ ಸ್ಥಳ. ವೈಶಾಲಿಯಲ್ಲಿ ಸುಂದರ ಜಪಾನ್ ನ ಶಾಂತಿ ಮಂದಿರ ಮತ್ತು 2300 ವರ್ಷ ಹಳೆಯ ಅಶೋಕನ ಸ್ತಂಭದ ಮೇಲಿರುವ ಶ್ರೇಷ್ಠ ಸಿಂಹವು ವರ್ಣಿಸಲು ಅಸಾಧ್ಯವಾಗಿರುವಂತಹದ್ದು. ಕೇಸರಿಯಾದಲ್ಲಿ ಬುದ್ಧ ಸಮಾಧಿಗೆ ಮೊದಲು ತನ್ನ ಭಿಕ್ಷಾಪಾತ್ರೆಯನ್ನು ನೀಡಿದ ಸ್ತೂಪವಿದೆ.

ಬೋಧಿ ವೃಕ್ಷದ ಕೆಳಗೆ ಗೌತಮ ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾಕ್ಕೆ ವಿಶ್ವದೆಲ್ಲೆಡೆಯಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗಳು ಭೇಟಿ ನೀಡುತ್ತಾರೆ. ಮೂಲ ಮರದ ಬೇರುಗಳು ಹಾಗೆ ಉಳಿದುಕೊಂಡಿದೆ ಮತ್ತು ಕೆಲವು ಯಾತ್ರಾರ್ಥಿಗಳು ಇದರ ಕೆಳಗಡೆ ಧ್ಯಾನ ಮಾಡುತ್ತಾರೆ. ಅಕ್ಟೋಬರ್ ಮತ್ತು ಮಾರ್ಚ್ ಮಧ್ಯೆ ಹಲವಾರು ಮಂದಿ ಯಾತ್ರಾರ್ಥಿಗಳು ಶಾಂತಿಯ ಸ್ಥಳದಲ್ಲಿ ಪ್ರಾರ್ಥನೆ ಮಾಡಲು ಆಗಮಿಸುವ ಕಾರಣ ಇದು ಕೆಂಗಂದು ಬಣ್ಣದ ನಿಲುವಂಗಿಯ ಸಾಗರದಂತೆ ಕಾಣಿಸುತ್ತದೆ. ದಲಾಯಿ ಲಾಮಾ ಅವರು ಬೋಧಗಯಾದಲ್ಲಿ ಹಲವಾರು ತಿಂಗಳು ಕಳೆದಿದ್ದಾರೆ. ಬೋಧಗಯಾದಿಂದ 12 ಕಿ.ಮೀ. ದೂರದಲ್ಲಿ ದುನಗೇಶ್ವರಿ ಗುಹಾ ಮಂದಿರವಿದೆ. ಇದನ್ನು ಹೊರತುಪಡಿಸಿ ಬೌದ್ಧರ ಮತ್ತು ಹಿಂದೂಗಳ ಹಲವಾರು ಮಂದಿರಗಳು ಇಲ್ಲಿವೆ.

ಪಟ್ನಾ ಪ್ರಸಿದ್ಧವಾಗಿದೆ

ಪಟ್ನಾ ಹವಾಮಾನ

ಪಟ್ನಾ
37oC / 99oF
 • Haze
 • Wind: WSW 15 km/h

ಉತ್ತಮ ಸಮಯ ಪಟ್ನಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಟ್ನಾ

 • ರಸ್ತೆಯ ಮೂಲಕ
  ಪಾಟಲಿಪುತ್ರಕ್ಕೆ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಉತ್ತಮ ರಸ್ತೆಗಳ ಸಂಪರ್ಕವಿದೆ. ರಾಷ್ಟ್ರೀಯ ಹೆದ್ದಾರಿ 19,30,31 ಮತ್ತು 83 ಪಾಟಲಿಪುತ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಹೊರತುಪಡಿಸಿ ಹಲವಾರು ಲಕ್ಸುರಿ ಬಸ್ ಗಳು ನಗರಕ್ಕೆ ಸಂಪರ್ಕ ಒದಗಿಸಿಕೊಡುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹೊಸದಿಲ್ಲಿ ಮತ್ತು ಕೊಲ್ಕತ್ತಾದ ಮಧ್ಯಭಾಗದಲ್ಲಿರುವ ಪಾಟಲೀಪುತ್ರ ಜಂಕ್ಷನ್ ಒಳ್ಳೆಯ ಸಂಪರ್ಕ ಮತ್ತು ಐದು ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪಾಟಲಿಪುತ್ರದಲ್ಲಿ ನಿರ್ಬಂಧಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ಎಲ್ಲಾ ನಗರಗಳಿಗೆ ಸಂಪರ್ಕ ಒದಗಿಸುತ್ತದೆ. ನಗರದೊಳಗೆ ಸುತ್ತಾಡಲು ಟ್ಯಾಕ್ಸಿಗಳು ಸುಲಭವಾಗಿ ಸಿಗುತ್ತದೆ ಮತ್ತು ಬಾಡಿಗೆ ಕಾರುಗಳ ಸೇವೆಯೂ ಲಭ್ಯವಿದೆ.
  ಮಾರ್ಗಗಳ ಹುಡುಕಾಟ

ಪಟ್ನಾ ಲೇಖನಗಳು

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Patna
  37 OC
  99 OF
  UV Index: 9
  Haze
 • Tomorrow
  Patna
  33 OC
  92 OF
  UV Index: 9
  Sunny
 • Day After
  Patna
  33 OC
  91 OF
  UV Index: 10
  Sunny