ಮಹಾಬೋಧಿ ದೇವಾಲಯದಲ್ಲಿರುವ ಬೋಧಿ ವೃಕ್ಷವನ್ನು ಮಹಾಬೋಧಿ ಎಂದೂ ಕರೆಯಲಾಗುತ್ತದೆ. ಬೌದ್ಧ ಧರ್ಮ ಗ್ರಂಥಗಳ ಪ್ರಕಾರ ಬುದ್ಧನು ಈ ಮರದ ಕೆಳಗಡೆ ಕುಳಿತು ತಪಸ್ಸಾನಚರಿಸಿದನು ಮತ್ತು ಜ್ಞಾನೋದಯವನ್ನು ಪಡೆದನು ಹಾಗೂ ಜ್`ಜಾನೋದಯವನ್ನು ಪಡೆದ ಬಳಿಕ ಬೋಧಿ ವೃಕ್ಷದ ಬಗೆಗೆ ಆತನ ಹೃದಯದಲ್ಲಿ ಬಹಳವೇ ಗೌರವ ಭಾವ ಉಂಟಾಯಿತು. ಹಲವು ಮಂದಿ ಇದನ್ನು ಕಡಿಯಲು ಪ್ರಯತ್ನ ಪಟ್ಟರಾದರೂ ಪ್ರತಿಯೊಂದು ಪ್ರಯತ್ನದ ಬಳಿಕವೂ ಇದು ಮತ್ತಷ್ಟು ಮತ್ತಷ್ಟು ಚಿಗುರತೊಡಗಿತು. ಈಗ ನಾವು ಕಾಣುವ ಬೋಧಿ ವೃಕ್ಷ ಮೂಲ ಬೋಧಿ ವೃಕ್ಷದ ಐದನೆಯ ಸರದಿಯ ಬೋಧಿ ವೃಕ್ಷ ಎಂದು ನಂಬಲಾಗಿದೆ.