ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ

ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ ಪಶ್ಚಿಮಕ್ಕೆ ಬೋಕಾರೋ ಮತ್ತು ಡುಮ್ಕಾ,  ಗಿರಿಡಿಹ್ ಜಿಲ್ಲೆ  ಉತ್ತರಕ್ಕೆ ಮತ್ತು ಪೌರೀಲಾ ಜಿಲ್ಲೆ ಪೂರ್ವ ಮತ್ತು ದಕ್ಷಿಣಕ್ಕಿದೆ. ದಾಮೋದರ ನದಿ ಈ ಭಾಗದ ಜನತೆಯ ಜೀವನದಿ. ಬರ್ಕಾರ್ ನದಿ ಕೂಡಾ ಈ ನಗರದಲ್ಲಿ ಹಾದು ಹೋಗುತ್ತದೆ.

ಗೋಬಾಯ್, ಇರ್ಜಿ, ಖುಡಿಯಾ ಮತ್ತು ಖತ್ರಿ ಮುಂತಾದ ಸಣ್ಣ ನದಿಗಳು, ಸಾಮಾಜೀಕತೆಯನ್ನು ಬಿಂಬಿಸುವ ಪದ್ದತಿಗಳು, ವಾಣಿಜ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯಾಗಿರುವುದರಿಂದ ಧನಾಬಾದ್ ನಗರ ದೇಶದಲ್ಲೇ ಹೆಸರುವಾಸಿಯಾಗಿದೆ. 100850 ಎಕರೆಯಷ್ಟು ಪ್ರದೇಶಗಳು ಗುಡ್ಡಗಾಡು ಮತ್ತು 56454 ಎಕರೆ ದಟ್ಟ ಅರಣ್ಯ ಪ್ರದೇಶವಾಗಿದೆ. ಕೆಂಪು ಮಣ್ಣು ಈ ಪ್ರದೇಶದಲ್ಲಿ ಹೆಚ್ಚಾಗಿದ್ದರೂ ಅದು ರೈತರಿಗೆ ಅಷ್ಟಾಗಿ ಉಪಯೋಗವಾಗುತ್ತಿಲ್ಲ. ಮೀನುಗಾರಿಕೆಯನ್ನು ಈ ಭಾಗದ ಜನರು ಬಹಳಷ್ಟು ಅವಲಂಬಿಸಿದ್ದಾರೆ.

ಧನಬಾದ್ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳು

ಕಲ್ಲಿದ್ದಲು ಗಣಿಗಾರಿಕೆ ಧನಬಾದ್ ಸುತ್ತಮುತ್ತಲಿನ ಪ್ರಮುಖ ಆಕರ್ಷಣೆ. ಗಣಿಗಾರಿಕೆ ಈ ಜಿಲ್ಲೆ ಮತ್ತು ಆಸುಪಾಸಿನ ಜನರ ಪ್ರಥಮ ಆದ್ಯ ಕಸುಬಾಗಿದೆ. ಶ್ರೀಮಂತ ಗಣಿ ಪ್ರದೇಶಗಳು ವಿವಿಧ ಗಣಿಯಾಗಿ ಮಾರ್ಪಟ್ಟಿದೆ. ಗಣಿಗಾರರನ್ನು ನೋಡುವುದೇ ಒಂದು ಆಕರ್ಷಣೆ.

ದುರ್ಗಾ ದೇವಿಯನ್ನು ಪೂಜಿಸುವ ಶಕ್ತಮಂದಿರ ಜಿಲ್ಲೆಯ ಪುಣ್ಯ ಕ್ಷೇತ್ರಗಳಲ್ಲೊಂದು. ವೈಷ್ಣೋದೇವಿಯ ’ಅಖಂಡ ಜ್ಯೋತಿ’ ಇಲ್ಲಿಡಲಾಗಿದೆ. ದಾಲ್ಮಿ ಎನ್ನುವ ಇನ್ನೊಂದು ದುರ್ಗಾ ದೇವಿಯ ಮಂದಿರ ಇಲ್ಲಿದೆ. ಶಿವ, ಗಣೇಶ, ನಂದಿ ವಿಗ್ರಹವನ್ನೂ ಕಾಣಬಹುದಾಗಿದೆ. ಬುದ್ದ ಮತ್ತು ಜೈನ ಸಮುದಾಯದವರನ್ನೂ ಇಲ್ಲಿ ನೋಡಬಹುದಾಗಿದೆ.  

ಮೈಥಾನ್ ಅಣೆಕಣ್ಣು ಜಿಲ್ಲೆಯ ಮತ್ತೊಂದು ಪ್ರವಾಸಿ ಕ್ಷೇತ್ರಗಳಲ್ಲೊಂದು. ಬರಾಕರ್ ನದಿಗೆ ಕಟ್ಟಲಾಗಿರುವ ಈ ಅಣೆಕಟ್ಟು ಮತ್ತು ಮೈಥಾನ್ ಪವರ್ ಸ್ಟೇಶನ್ ಮೂಲಕ ಭಾರೀ ಪ್ರಮಾಣದ ಜಲ ವಿದ್ಯುತ್ ತಯಾರಾಗುತ್ತದೆ. ಥಾಪ್ ಚಂಚಿ ಮತ್ತು ತುಂಡಿಯ ಮೂಲಕ ಜಿಲ್ಲೆಯ ಉತ್ತರಕ್ಕೆ ಪ್ರಶಾಂತ್ ಪರ್ವತವಿದೆ.

ಜಿಲ್ಲೆಯ ಇತರ ಪ್ರಸಿದ್ದ ಪ್ರವಾಸಿ ಸ್ಥಳವೆಂದರೆ ಚರಕ್ ಪಥರ್, ಗೋಲಾಪುರ್, ಚಾಟಿ ಗೋಬಿಂದಪುರ, ಮೇವಾ, ಜಿಂಹನ್ಜಿಪಾರಿ, ಚರಕ್ ಖುರ್ಡ್, ಪನ್ರಾ, ಕಲ್ಯಾಣೇಶ್ವರಿ ಮಂದಿರ, ಥಾಪ್ ಚಂಚಿ ಸರೋವರ, ಭಟಿಂಡಾ ಜಲಪಾತ ಮತ್ತು ಪಂಚೀತ್ ಅಣೆಕಟ್ಟು ಮುಂತಾದ ಪ್ರದೇಶಗಳನ್ನು ಧನಬಾದ್ ಪ್ರವಾಸಕ್ಕೆ ತೆರಳಿದಾಗ ಪ್ರವಾಸಿಗರು ಮರೆಯಬಾರದು. ಜಿಲ್ಲೆಯ ಪ್ರಮ್ಯುಖ ಶೈಕ್ಷಣಿಕ ಕೇಂದ್ರಗಳೆಂದರೆ ಕೇಂದ್ರ ಗಣಿ ಸಂಶೋಧನಾ ಕೇಂದ್ರ, ಕೇಂದ್ರ ಇಂಧನ ಸಂಶೋಧನಾ ಕೇಂದ್ರ ಮತ್ತು ಸ್ಕೂಲ್ ಆಫ್ ಮೈನ್ಸ್.

ಧನಬಾದಿಗೆ ತಲುಪುವುದು ಹೇಗೆ?

ಭೂ, ರೈಲು ಮತ್ತು ವಿಮಾನಯಾನದ ಮೂಲಕ ಧನಬಾದಿಗೆ ಆರಾಮಾಗಿ ತಲುಪಬಹುದಾಗಿದೆ. ದೇಶದ ಪ್ರಮುಖ ಪಟ್ಟಣಗಳಾದ ಕೋಲ್ಕತ್ತಾ ಮತ್ತು ಪಾಟ್ನಾಗೆ ಧನಬಾದಿನಿಂದ ಭೂ ಮತ್ತು ರೈಲು ಸಂಪರ್ಕವಿದೆ. ಇನ್ನು ಸ್ಥಳೀಯ ಓಡಾಟಕ್ಕೆ ಟ್ಯಾಕ್ಸಿ, ಸ್ಕೂಟರ್ ಮತ್ತು ಸೈಕಲ್ ಆಟೋರಿಕ್ಷಾಗಳಿವೆ.

ವಾತಾವರಣ

ಧನಾಬಾದ್ ಜಿಲ್ಲೆಯಲ್ಲಿ ಚಳಿಗಾಲದಲ್ಲಿನ ಒಣಹವೆ ಆನಂದದಾಯಕವಾಗಿರುತ್ತದೆ. ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ಮಧ್ಯೆ ಈ ಜಿಲ್ಲೆಗೆ ಪ್ರವಾಸ ಮಾಡುವುದು ಹೆಚ್ಚು ಸೂಕ್ತ.

Please Wait while comments are loading...