Search
 • Follow NativePlanet
Share

ಮುಂಬೈ - ಮಾಯಾನಗರಿ

84

ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಮುಂಬೈ ಕೂಡಾ ಒಂದು. ಇಲ್ಲಿ ದಿನಂಪ್ರತಿ ಕೆಲಸಕ್ಕಾಗಿ, ಪ್ರವಾಸಕ್ಕಾಗಿ ಹೀಗೆ  ನಾನಾ ಕಾರಣಗಳಿಗೆ ಜನ ಸಾಗರವೇ ಹರಿದು ಬರುತ್ತಿರುತ್ತದೆ. ಇಲ್ಲಿನ ಬೀದಿಗಳಿಂದ ಹಿಡಿದು ಶೋ ರೂಮ್ ಗಳ ವರೆಗೂ ಜನ ಒಂದಿಲ್ಲೊಂದು ಖರೀದಿಯಲ್ಲಿ ತೊಡಗಿರುತ್ತಾರೆ. ಇಲ್ಲಿರುವ ದೇವಾಲಯ, ಮಸೀದಿ ಹಾಗೂ ಚರ್ಚ್ ಗಳು ಕೇವಲ ಆಯಾ ಧರ್ಮದ ಜನರನ್ನು ಮಾತ್ರವಲ್ಲದೆ ಎಲ್ಲಾ ಧರ್ಮದ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಧಾರ್ಮಿಕತೆಯನ್ನು ಹೊರತುಪಡಿಸಿದರೆ, ಇನ್ನು ಮನಸ್ಸನ್ನು ಹಿತಗೊಳಿಸುವ ಸುಂದರವಾದ ಕಡಲ ತೀರಗಳೂ ಕೂಡಾ ಮುಂಬೈ ಆಕರ್ಷಣೆಯ ಪ್ಲಸ್ ಪಾಯಿಂಟ್! ಇಲ್ಲಿನ ಪ್ರಸಿದ್ಧ ತಿಂಡಿಗಳಂತೂ ಇದೀಗ ಭಾರತದೆಲ್ಲೆಡೆ ಮನ್ನಣೆಯನ್ನು ಗಳಿಸಿದೆ. ಬಾಲಿವುಡ್ ನ ತಾರೆಯರ ಮನೆಗಳನ್ನು ಇಲ್ಲಿ ಕಾಣಬಹುದು. ಇಂತಹ ಮಾಯಾ ನಗರಿ ಮುಂಬೈ ಮಹಾನಗರಕ್ಕೆ ನಿಮ್ಮ ಒಂದಿಷ್ಟು ಸಮಯವನ್ನು ಕಳೆಯಲು ನೀವು ಬರುತ್ತೀರಿ ತಾನೆ ?

ಕನಸುಗಳ ನಗರ ಮುಂಬೈ, ಫ್ಯಾಶನ್ ಗೆ ಹೆಸರುವಾಸಿ, ಇಲ್ಲಿನ ಜೀವನ ಶೈಲಿಯೇ ರೋಮಾಂಚನಕಾರಿ, ಇದು ಬಾಲಿವುಡ್ ನ ನೆಲೆ, ವೈವಿಧ್ಯಮಯ ಕಲೆ ಹಾಗೂ ಹಲವಾರು ಹೆಸರಾಂತ ಸಿನಿಮಾ ತಾರೆಯರ ನೆಲೆಯಾಗಿದೆ. ಸರಳವಾಗಿ ಹೇಳುವುದಾದರೆ, ಜಗತ್ತಿನ ಎಲ್ಲಾ ದೇಶಗಳಿಗೂ  ಅಮೇರಿಕಾ ಹೇಗೆ ಕನಸಿನ ರಾಷ್ಟ್ರವೋ ಹಾಗೇ ಭಾರತಕ್ಕೆ ಮುಂಬೈ ಮಹಾನಗರ ಕೂಡಾ ಕನಸಿನಂತೆ!

ಮುಂಬೈ ನಗರವು ಉಳಿದ ಎಲ್ಲಾ ಭಾಗಗಳೊಂದಿಗೆ ರಸ್ತೆ, ರೈಲು, ಸಾಗರ ಹಾಗೂ ವಿಮಾನ ಹೀಗೆ ಎಲ್ಲಾ ಮಾರ್ಗಗಳ ಮೂಲಕವೂ ಉತ್ತಮ ಸಂಪರ್ಕ ಹೊಂದಿದೆ. ನೀವು ಮುಂಬೈ ನಗರವನ್ನು ಪ್ರವೇಶಿಸಿದಾಗ, ದೇಶದ ಉಳಿದ ನಗರಗಳಲ್ಲಿರುವ ಜೀವನಶೈಲಿಗೆ ವಿಭಿನ್ನವಾಗಿ ಇಲ್ಲಿನ ಜೀವನದ ರೀತಿಯಲ್ಲಿ ವಿಶಿಷ್ಟ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಇಲ್ಲಿ ಗೆಳೆತನದ ಸಹಾಯ ಹಸ್ತ ನೀವು ಕಾಣುವ ಪ್ರಮುಖ ಅಂಶ. ಇಲ್ಲಿನ ಟಾಕ್ಸಿಗಳು, ಜನತುಂಬಿದ ಸಾರ್ವಜನಿಕ ಸಾರಿಗೆ ಹಲವಾರು ಮೇಲ್ಸೇತುವೆಗಳು ಇವಕ್ಕೆಲ್ಲ ಜನ ಹೊಂದಿಕೊಂಡು ಹೋಗಿದ್ದಾರೆ. ಮುಂಬೈ ಪ್ರವಾಸಿಗರಿಗೆ, "ನಾನೊಂದು ವಿಶಿಷ್ಟ ಪ್ರವಾಸಿ ತಾಣ "ಎಂಬ ಮಾತು ನೀಡಿದೆ ಹಾಗೂ ಇಲ್ಲಿಯ ತನಕ ಅದನ್ನು ಸಮರ್ಥವಾಗಿ ಉಳಿಸಿಕೊಂಡು ಬಂದಿದೆ.

ಮುಂಬೈ ವೈಶಿಷ್ಟ್ಯಗಳ ಮಿಶ್ರಣ

ಮುಂಬೈ ಇಲ್ಲಿಗೆ ಬರುವ ಪ್ರವಾಸಿಗರಿಗೆ, ಆಹಾರ ಖರೀದಿಯಿಂದ ಹಿಡಿದು ಸಡಗರದ ರಾತ್ರಿ ಜೀವನ ಶೈಲಿ, ಸುಂದರ ಪ್ರಕೃತಿ ವೀಕ್ಷಣೆಯ ಸ್ಥಳದ ವರೆಗೆ ಎಲ್ಲಾ ಬಗೆಯ ಸನ್ನಿವೇಶಗಳನ್ನೂ ಒದಗಿಸುತ್ತದೆ. ನಗರದಲ್ಲಿ ಬ್ರ್ಯಾಂಡ್ ಖರೀದಿಗಳನ್ನು ಹೊರತುಪಡಿಸಿ ಫ್ಯಾಶನ್ ಸ್ಟ್ರೀಟ್ (ಬೀದಿ) ಹಾಗೂ  ಬಾಂದ್ರಾ ಪಟ್ಟಣದ ಲಿಂಕ್ ರಸ್ತೆ ಇವೆರಡೂ ಮುಂಬೈನ ಪ್ರಖ್ಯಾತ ರಸ್ತೆ ಬದಿಯ ಖರೀದಿ ವಲಯಗಳಾಗಿವೆ. ಬೀಚ್ ನಲ್ಲಿ ಮಧ್ಯಾಹ್ನದ ಹೊತ್ತು ಸುತ್ತಾಡುತ್ತ ಬೀಚ್ (ಕಡಲ ತೀರ) ಗಳಲ್ಲಿ ಸಿಗುವ ಮುಂಬೈನ ವಿಶೇಷ ತಿಂಡಿಗಳೆಂದು ಗುರುತಿಸಲ್ಪಡುವ ಸ್ಯಾಂಡ್ ವಿಚ್ ಗಳು, ಕುಲ್ಫಿ, ಹಾಗೂ ಫಾಲೂದಾ, ಪಾನಿ ಪುರಿ ಅಥವಾ ಮಹಾರಾಷ್ಟ್ರ ಮೂಲದ ವಡಾ ಪಾವ್, ಪಾವ್ ಭಾಜಿ ಹೀಗೆ ಮುಂತಾದ ವಿವಿಧ ಶೈಲಿಯಲ್ಲಿ ಬಡಿಸಲಾಗುವ ತಿನಿಸುಗಳನ್ನು ಸವಿಯಬಹುದು. ಮುಂಬೈ ನಗರವು ಪ್ರಮುಖ ಮೂರು ಕಡಲ ತೀರಗಳನ್ನು ಹೊಂದಿದೆ, ಅವುಗಳೆಂದರೆ ಜುಹು ಬೀಚ್, ಚೌಪಾಟಿ ಹಾಗೂ ಗೊರೈ ಬೀಚ್ / ಕಡಲ ತೀರಗಳು. ಪ್ರಕೃತಿ ಆರಾಧಕರಿಗೆ, ಪ್ರವಾಸಿಗರಿಗೆ, ಹೆಚ್ಚು ಜನ ಸಾಂದ್ರತೆಯನ್ನು ಇಷ್ಟಪಡದವರಿಗೆ ಗೊರೈ ಬೀಚ್ ಸೂಕ್ತವಾದ ಸ್ಥಳವಾಗಿದೆ.

ಮುಂಬೈನಲ್ಲಿ ಅಪಾರ ಪ್ರಮಾಣದಲ್ಲಿ ಪ್ರವಾಸ ತಾಣಗಳಿರುವುದರಿಂದಾಗಿ ಪ್ರವಾಸಿಗರು/ಪ್ರಯಾಣಿಕರು ತಮ್ಮ ಸ್ವಂತ ವಾಹವ ಅಥವಾ ಕಾರು/ಕ್ಯಾಬ್ ಗಳನ್ನು ಪಟ್ಟಣ ಪ್ರವಾಸಕ್ಕಾಗಿ ಬಾಡಿಗೆಗೆ ತೆಗೆದುಕೊಂಡು ಹೋಗುವುದು ಒಳಿತು. ಮುಂಬೈನಲ್ಲಿ ಮಧ್ಯಾಹ್ನ ವಿಪರೀತ ಬಿಸಿಲಿರುವ ಕಾರಣ ಒಂದು ವಾಹನವನ್ನು ಹೊಂದಿರುವುದು ಉತ್ತಮ. ಆದರೆ, ಮುಂಬೈನಲ್ಲಿ ದಕ್ಷಿಣ ಮುಂಬೈ ಮಾರ್ಗದಲ್ಲಿ ಅದರಲ್ಲಿಯೂ ವಿಶೇಷವಾಗಿ ಕ್ವೀನ್ಸ್ ನೆಕ್ಲೆಸ್ (ರಾಣಿಯ ಹಾರ) ಎಂದು ಕರೆಯಲ್ಪಡುವ ಮರೀನ್ ಡ್ರೈವ್ ಮಾರ್ಗದಲ್ಲಿ ಸಂಚರಿಸುವ ಉತ್ತಮ ಸೌಲಭ್ಯಗಳಿರುವ ಡಬ್ಬಲ್ ಡೆಕ್ಕರ್  ಬಸ್ಸುಗಳು ಲಭ್ಯವಿದ್ದು ಪ್ರಯಾಣದ ಅನುಭವವನ್ನು ಪಡೆಯಬಹುದು. ನೀವು ಸಾಹಸಿಗಳಾಗಿದ್ದರೆ ಮುಂಬೈನ ಅತ್ಯಂತ ವೇಗವಾದ ಸಾರಿಗೆ ಎಂದು ಪರಿಗಣಿಸಲಾಗಿರುವ ಸ್ಥಳೀಯ ರೈಲಿನಲ್ಲಿಯೂ ಪ್ರಯಾಣ ಮಾಡಬಹುದು. ಪಶ್ಚಿಮ ಹಾಗೂ ಕೇಂದ್ರದ ರೈಲುಗಳು ಚರ್ಚ್ ಗೇಟ್ ಹಾಗೂ ವಿಟಿ ನಿಲ್ದಾಣ (ಸ್ಟೇಶನ್) ದಿಂದ ಹೊರಡುತ್ತದೆ. ನಿಮಿಷಕ್ಕೊಂದರಂತೆ ರೈಲುಗಳು ಇಲ್ಲಿಂದ ಹೊರಡುವುದನ್ನು ನೋಡುವುದೇ ಒಂದು ಮೋಜು.

ಮಳಿಗೆಗೆಳು ಮತ್ತು ಮಂದಿರಗಳು

ಮುಂಬೈನಲ್ಲಿ ಮಾಲ್ ಅಥವಾ ಮಳಿಗೆ ಸಂಸ್ಕೃತಿ ಕಳೆದ ದಶಕಗಳಿಂದ ಆರಂಭವಾಗಿದ್ದು, ಹಾಗೂ ಇಂದು, ಮುಂಬೈನಗರವು ದೇಶದ ಕೆಲವು ಪ್ರೀಮಿಯಂ (ಅಧಿಕ ಬೆಲೆಯ)ಮಳಿಗೆಗಳನ್ನು ಹೊಂದಿದೆ. ಫಿನಿಕ್ಸ್ ನಲ್ಲಿರುವ ಪಲ್ಲಾಡಿಯಮ್ ಒಂದು ಹೊಸ ಸೇರ್ಪಡೆಯಾಗಿದೆ. ಪಲ್ಲಾಡಿಯಮ್ ಮಳಿಗೆಯು ಕ್ಯಾಲಿಫೋರ್ನಿಯಾ ಪಿಜ್ಜಾ ಸೇರಿದಂತೆ ಇನ್ನಿತರ ಸಮೂಹ ಮಾರುಕಟ್ಟೆಯಲ್ಲಿರುವ ಪಿಜ್ಜಾ ಸೇವೆಗಳಿಗಿಂತ ವಿಭಿನ್ನವಾದ ರೆಸ್ಟೋರೆಂಟ್ (ಹೋಟೆಲ್) ಗಳನ್ನು ಹೊಂದಿದೆ.

ಧಾರ್ಮಿಕತೆಯ ಫಲವಾಗಿ ಮುಂಬೈ ಕೆಲವು ಪ್ರಮುಖ ದೇವಾಲಯಗಳ ನೆಲೆಯಾಗಿದೆ. ಭಗವಂತ ಗಣಪತಿಗೆ ಮೀಸಲಾಗಿರುವ ಸಿದ್ಧಿವಿನಾಯಕ ದೇವಾಲಯ ಹಾಗೂ ಹಾಜಿ ಅಲಿ ಮಸೀದಿ, ಇವೆರಡೂ ತಮ್ಮದೇ ಆದ ವಿಭಿನ್ನವಾದ ಅನನ್ಯವಾದ ಕಥೆಗಳನ್ನು ಹೊಂದಿವೆ. ಇವುಗಳಲ್ಲಿನ ಪ್ರಸಿದ್ಧವಾದ ವಾಸ್ತುಶಿಲ್ಪಗಳು ಮೆಚ್ಚುಗೆಗಳನ್ನು ಗಳಿಸಿದ್ದು ಎರಡೂ ಅತ್ಯಂತ ಸಮೀಪದಲ್ಲಿದೆ. ಈ ಎರಡೂ ಸ್ಥಳಗಳೂ ಸದಾ ಜನರಿಂದ ತುಂಬಿರುವುದರಿಂದ ಇಲ್ಲಿಗೆ ಬರಲು ಸೂಕ್ತ ಸಮಯ ಯಾವುದೆಂದು ನಿಮ್ಮ ಮನೆಯವರು, ಸ್ನೇಹಿತರು ಅಥವಾ ಪ್ರವಾಸದ ಮಾರ್ಗದರ್ಶಿಗಳನ್ನು ಕೇಳಿ ತಿಳಿದುಕೊಳ್ಳಿ. ನೀವು ಸಂಪೂರ್ಣವಾಗಿ ಪೂಜಾ ನಿಯಮಗಳಿಗೆ ಬದ್ಧರಾಗಿರದಿದ್ದರೆ ಮಂಗಳವಾರ ಹಾಗೂ ಗುರುವಾರ ಸಿದ್ಧಿವಿನಾಯಕ ದೇವಾಲಯಕ್ಕೆ ಭೇಟಿ ಕೊಡದೇ ಇರುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ದಟ್ಟ ಜನಸಂದಣಿಯಿರುತ್ತದೆ.

ದಿನನಿತ್ಯದ ಕೆಲಸ ಬಳಿಕ ಮುಂಬೈ ನಗರ ಜೀವನ

ಮುಂಬೈನ ರಾತ್ರಿ ಜೀವನ (ನೈಟ್ ಲೈಫ್) ಬಗ್ಗೆ ರಾಷ್ಟ್ರದಾದ್ಯಂತ ಮಾತನಾಡಲಾಗುತ್ತದೆ ಅಲ್ಲದೆ ಇದನ್ನು ಪ್ರಪಂಚದಲ್ಲಿಯೇ ಅತೀ ಸುರಕ್ಷಿತ ನಗರಗಳಲ್ಲಿ ಒಂದೆಂದು ಎಂದು ಪರಿಗಣಿಸಲಾಗಿದೆ. ನೈಟ್ ಕ್ಲಬ್ ಹಾಗೂ ವಿಶ್ರಾಂತಿ ಗೃಹಗಳಾದ ಪಾಲಿಸ್ಟಾರ್ಸ್, ಟೋಟ್ಸ್, ಎಲ್ಬೋ ರೂಮ್ ಹಾಗೂ ದಿ 21 ಡಿಗ್ರೀಸ್ ಫ್ಯಾರನ್ ಹೀಟ್ ಇವುಗಳು ಕೆಲವು ಉದಾಹರಣೆಗಳಷ್ಟೇ. ಮುಂಬಯಿಯ ರಾತ್ರಿ ಜೀವನ, ರಾತ್ರಿ ಸುಮಾರು 1 ರಿಂದ 3 ನಡುವೆ ಕೊನೆಗೊಳ್ಳುತ್ತದೆ. ಅದು ಆ ಹೊಟೇಲಿನಲ್ಲಿ ಕ್ಲಬ್ ಇದೆಯೇ ಇಲ್ಲವೇ ಎನ್ನುವುದರ ಮೇಲೆ ನಿರ್ಧರಿತವಾಗಿದೆ. ಹಾಗೂ ಪಾರ್ಟಿ ಇಲ್ಲಿಗೇ ಕೊನೆಗೊಳ್ಳುವುದಿಲ್ಲ, ಇದಾದ ಬಳಿಕ ಬಡೆ ಮಿಯಾಸ್ ಮತ್ತು ಕೊಲಾಬಾ ಮಾರುಕಟ್ಟೆಗಳ ಕಡೆಗೆ ನಡೆಯಬಹುದು ಇಲ್ಲಿನ ಪ್ರಖ್ಯಾತ ರುಮಾಲಿ ರೋಟಿ ರುಚಿ ಸವಿದವರಿಗೆ ಗೊತ್ತು. ಬಡೆ ಮಿಯಾಸ್ ನತ್ತ ರಾತ್ರಿಯ ಹೊತ್ತು ಹೋಗದೇ ರಾತ್ರಿಯೇ ಆಗದ ಅದೆಷ್ಟೋ ಜನರಿದ್ದಾರೆ. ಎಲ್ಲಾ ಸೀಸನ್ ಗಳಿಗೂ ಸರಿಹೊಂದುವ ಐಸ್ ಬಾರ್ ಇನ್ನೊಂದು ಹೊಸ ಸೇರ್ಪಡೆ. ಈ ಕಟ್ಟಡದ 34 ನೇ ಮಹಡಿಯಲ್ಲಿ ತೆರೆದ ಟೆರೇಸ್ಸಿನ ಮೇಲೆ ಬಂದು ನಿಂತು ರಾತ್ರಿಯಲ್ಲಿ ಮುಂಬಯಿ ನಗರದ ಸೌಂದರ್ಯ ಸವಿಯುವುದೇ ಒಂದು ವಿಶಿಷ್ಟ ಅನುಭವ.

ಒಂದು ವೇಳೆ ನಿಮಗೆ ಕಾರು ಅಥವಾ ಬೇರೆ ಯಾವುದೇ ವಾಹನವನ್ನು ಹೊಂದಿರಲು ಸಾಧ್ಯವಾಗದಿದ್ದರೆ, ಮುಂಬೈ ದರ್ಶನ ಎಂದೇ ಕರೆಯಲ್ಪಡುವ ಸಾಕಷ್ಟು ಮುಂಬೈ ಪ್ರವಾಸಿ ಬಸ್ ಗಳು ಲಭ್ಯ. ಈ ಬಸ್ ಗಳು ಭಾರತದ ಗೇಟ್ವೆಯಿಂದ ಹೊರಟು ಮುಂಬೈನಲ್ಲಿನ ಪ್ರಮುಖ ಆಕರ್ಷಣೀಯ ಸ್ಥಳಗಳಿಗೆ ಕೊಂಡೊಯ್ದು ಸಂಜೆ ಪುನಃ ಗೇಟ್ವೆ ಹತ್ತಿರ ನಿಮ್ಮನ್ನು ತಲುಪಿಸಲಾಗುತ್ತದೆ.  

ಮುಂಬೈ ನಲ್ಲಿ ಎಲ್ಲಾ ವಯಸ್ಸಿನ ಹಾಗೂ ಎಲ್ಲಾ ಜನಾಂಗದ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಪ್ರವಾಸ ಲಭ್ಯವಾಗುತ್ತದೆ. ನಗರವು ಅಷ್ಟೇನು ದುಬಾರಿ ಎನಿಸುವುದಿಲ್ಲ. ಇದರ ಜೊತೆಗೆ ನಿಮಗೆ ಏನೇ ಸಹಾಯ ಬೇಕಿದ್ದರೂ ಅಲ್ಲೇ ಯಾರನ್ನಾದರೂ ಕೇಳಬಹುದಾಗಿದೆ.

ಮುಂಬೈ ಪ್ರಸಿದ್ಧವಾಗಿದೆ

ಮುಂಬೈ ಹವಾಮಾನ

ಉತ್ತಮ ಸಮಯ ಮುಂಬೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮುಂಬೈ

 • ರಸ್ತೆಯ ಮೂಲಕ
  ಮುಂಬೈ, ಭಾರತದ ಉತ್ತರ ಭಾಗದ ಆಗ್ರಾಕ್ಕೆ ಪ್ರಸಿದ್ಧವಾದ LBS ಮಾರ್ಗ್ ಮುಖಾಂತರ ಸಂಪರ್ಕ ಹೊಂದಿದ್ದು, ವಿವಿಧ ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಪೂರ್ವ ಹಾಗು ಪಶ್ಚಿಮ ಎಕ್ಸ್ ಪ್ರೆಸ್ಸ್ ಹೆದ್ದಾರಿಗಳು ಕ್ರಮವಾಗಿ ಇಂದೋರ್ ಹಾಗು ಅಹ್ಮದಾಬಾದ್ ಗಳೊಂದಿಗೆ ಸಂಪರ್ಕ ಹೊಂದಿವೆ. ಎಕ್ಸ್ ಪ್ರೆಸ್ಸ್ ಹೆದ್ದಾರಿಯ ಮೂಲಕ ಪುಣೆಯಿಂದ ಮುಂಬೈ ಕೇವಲ ಒಂದುವರೆ ಗಂಟೆಯ ಪ್ರಯಾಣವಾಗಿದೆ. ಗೋವಾದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ7 ರ ಮೂಲಕವಾಗಿಯೂ ಮುಂಬೈ ತಲುಪಬಹುದಾಗಿದ್ದು 9 ಗಂಟೆ ಪ್ರಯಾಣದಾವಧಿ ಬೇಕಾಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬಹುತೇಕ ಜನರು ಇಷ್ಟಪಡುವ ಸಾರಿಗೆಯ ಮಾಧ್ಯಮವೆಂದರೆ ರೈಲು ಪ್ರಯಾಣ. ಮುಂಬೈನಲ್ಲಿ ಪೂರ್ವ ಹಾಗು ಪಶ್ಚಿಮದ ಪ್ರಮುಖ ರೈಲು ತುದಿಗಳಿದ್ದು ಎಲ್ಲಾ ಭಾಗಗಳಿಗೂ ಸಂಪರ್ಕ ಹೊಂದಿದೆ. ಪ್ರತಿಯೊಂದು ರೈಲು ನಿಲ್ದಾಣಗಳು ಹಾಗು ಜಂಕ್ಷನ್ ಗಳು ಆಧುನಿಕ ಸೌಲಭ್ಯಗಳನ್ನೊಳಗೊಂಡಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬೈ, ಭೂ,(ರಸ್ತೆ ಮಾರ್ಗ), ವಾಯು (ವಿಮಾನ ಮಾರ್ಗ), ಹಾಗೂ ಸಾಗರ (ನೀರಿನ ಮಾರ್ಗ) ಎಲ್ಲಾ ಮಾರ್ಗಗಳ ಮೂಲಕ ಉಳಿದ ಎಲ್ಲಾದೇಶಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ಪ್ರಯಾಣಕ್ಕಾಗಿ ಹೆಚ್ಚಾಗಿ ರೈಲ್ವೆ ಸಾರಿಗೆಗೆ ಆದ್ಯತೆ ನೀಡಲಾಗುತ್ತಿದ್ದು, ದಿನದ ಇಪ್ಪತ್ನಾಲ್ಕು ಗಂಟೆ ಲಭ್ಯವಿರುವ ಅನುಕೂಲಕರ ವಿಮಾನದ ಮೂಲಕವೂ ಕೂಡಾ ಪ್ರಯಾಣ ಬೆಳೆಸಬಹುದು. ಇತ್ತೀಚಿನ ದಿನಗಳಲ್ಲಿ ಮುಂಬೈ ನಗರದಲ್ಲಿ ದೇಶೀಯ ವಿಮಾನಗಳ ಕಾರ್ಯಾಚರಣೆ ಮುಂಜಾನೆ 0500 ಗಂಟೆಗಳಿಂದ ತಡರಾತ್ರಿ 0200 ಗಂಟೆಗಳ ವರೆಗೂ ವಿಸ್ತರಿಸಿದೆ. ಮುಂಬೈನಲ್ಲಿನ ಎಲ್ಲಾ ದೇಶೀಯ ಹಾಗೂ ಅಂತರ ರಾಷ್ಟ್ರೀಯ ರೈಲ್ವೆ ಹಾಗೂ ವಿಮಾನ ಸಾರಿಗೆಗಳು ಉತ್ತಮ ಐಷಾರಾಮಿ ಸೌಕರ್ಯಗಳ ಜೊತೆಗೆ ಉತ್ತಮವಾದ ಆರಾಮ/ ವಿಶ್ರಾಂತಿ ಕೋಣೆಗಳನ್ನು ಪ್ರಯಾಣಿಕರ ನಿರ್ವಹಣೆಗಾಗಿ ಸಜ್ಜುಗೊಳಿಸಿವೆ. ಆದ್ದರಿಂದ ಪ್ರವಾಸಿಗರಿಗೆ ಸ್ವಲ್ಪವೂ ತೊಂದರೆಯಿಲ್ಲದೇ ಯಾವುದೇ ನಗರಗಳಿಂದ ಮುಂಬೈ ನಗರವನ್ನು ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
07 Dec,Tue
Return On
08 Dec,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
07 Dec,Tue
Check Out
08 Dec,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
07 Dec,Tue
Return On
08 Dec,Wed