Search
 • Follow NativePlanet
Share
ಮುಖಪುಟ » ಸ್ಥಳಗಳು» ಮಹಾಬಲೇಶ್ವರ

ಮಹಾಬಲೇಶ್ವರ - ಒಂದು ಐತಿಹಾಸಿಕ ಪ್ರವಾಸ

21

ಮಹಾಬಲೇಶ್ವರ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಒಂದು ಜನಪ್ರಿಯ ಗಿರಿಧಾಮ. ಬಹುಕಾಂತೀಯ ಪಶ್ಚಿಮ ಘಟ್ಟಗಳ ಭಾಗದಲ್ಲಿದ್ದು, ವಿಶ್ವದ ಕೆಲವೇ ನಿತ್ಯಹರಿದ್ವರ್ಣ ತಾಣಗಳಲ್ಲಿ ಇದು ಒಂದಾಗಿದೆ. ಇತರೆ ಅನೇಕ ರೀತಿಯ ಗಿರಿಧಾಮಗಳ ಹಾಗೆ, ಮಹಾಬಲೇಶ್ವರವು ಕೂಡ, ಬ್ರಿಟೀಷರಿಗೆ ಬೇಸಿಗೆಯ ಅನಾನುಕೂಲ ಬೇಗೆಯ ಅವಧಿಯಲ್ಲಿ, ಬೇಸಿಗೆಯಿಂದ ದೂರ ಉಳಿಯಲು ಇದ್ದ ಒಂದು ತಾಣವಾಗಿತ್ತು.

ಮಹಾಬಲೇಶ್ವರವನ್ನು ಅಕ್ಷರಶಃ ಭಾಷಾಂತರಿಸಿದರೆ ‘ಮಹಾಶಕ್ತಿಯುಳ್ಳ ದೇವರು’ ಎಂದಾಗುತ್ತದೆ. ಇದು ಜನಪ್ರಿಯವಾಗಿ ‘ಐದು ನದಿಯ ಜಮೀನು’ ಎಂದು ಕರೆಯಲ್ಪಡುತ್ತದೆ, ನದಿಗಳಾದ ವೆನ್ನ, ಗಾಯತ್ರಿ, ಸಾವಿತ್ರಿ, ಕೊಯ್ನಾ ಮತ್ತು ಕೃಷ್ಣಾ ಮೂಲತಃ ಈ ಸ್ಥಳದಲ್ಲೇ ಉದಯಿಸಿವೆ.

ಸುಮಾರು 4,450 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಈ ಪ್ರವಾಸಿ ತಾಣ ಸುಮಾರು 150 ಚದರ ಕಿಮೀ ನಷ್ಟು ಸಣ್ಣ ವಿಸ್ತೀರ್ಣವನ್ನು ಒಳಗೊಂಡಿದೆ. ಇದು ಪ್ರಮುಖ ಮೆಟ್ರೊ ನಗರಗಳಾದ ಮುಂಬೈ ಮತ್ತು ಪುಣೆಯಿಂದ ಕ್ರಮವಾಗಿ ಕೇವಲ 220 ಕಿಮೀ ಮತ್ತು 180 ಕಿಮೀ ದೂರವಿದ್ದು - ನಗರ ಜೀವನದಿಂದ ಹೊರಬಂದು ಪರಿಪೂರ್ಣ ಏಕಾಂತವನ್ನು ಬಯಸುವವರಿಗೆ ಉತ್ತಮ ಸೇವೆ ಸಲ್ಲಿಸುತ್ತದೆ.

ಮಹಾಬಲೇಶ್ವರದ ಇತಿಹಾಸ

ಮಹಾಬಲೇಶ್ವರ ದೇವಸ್ಥಾನವನ್ನು ನಿರ್ಮಿಸಿದ ರಾಜ ಸಿಂಘಾನ, ಹಳೆಯ ಮಹಾಬಲೇಶ್ವರವನ್ನು ಮೊದಲ ಬಾರಿಗೆ ಕಂಡುಹಿಡಿದರು. 17 ನೇ ಶತಮಾನದಲ್ಲಿ ಶಿವಾಜಿ ಮಹಾರಾಜ್ ಈ ಪ್ರದೇಶವನ್ನು ಆಕ್ರಮಿಸಿಕೊಂಡು ಇಲ್ಲಿ ಸಾಂಪ್ರದಾಯಿಕವಾದ ಪ್ರತಾಪ್ ಗಡ್ ಕೋಟೆಯನ್ನು ನಿರ್ಮಿಸಿದನು. ನಂತರ ಮಹಾಬಲೇಶ್ವರ ಸುಮಾರು 1819 ರ ಸಮಯದಲ್ಲಿ ಬ್ರಿಟೀಷರ ಕೈಗೆ ಸೇರಿತು. ಇದಾದ ಕೆಲ ಕಾಲದ ನಂತರ ಪ್ರಸ್ತುತ ಮಹಾಬಲೇಶ್ವರವನ್ನು ಪತ್ತೆ ಹಚ್ಚಿ ಅದಕ್ಕೆ ಮಾಲ್ಕಮ್ ಪೇಟ್ ಎಂಬ ಹೆಸರನ್ನು ಇಡಲಾಯಿತು.

ಅತಿವಾಸ್ತವಿಕವಾದ ದೃಷ್ಟಿಕೋನಗಳು, ಮರುಳುಗೊಳಿಸುವಂತಹ ವೀಕ್ಷಣೆಗಳು

ಮಹಾಬಲೇಶ್ವರ ತನ್ನ 30 ವೀಕ್ಷಣಾ ಸ್ಥಳಗಳಿಂದಾಗಿ, ಅದ್ಭುತ ಸ್ಥಳಗಳ ಆತಿಥ್ಯವನ್ನು ಒದಗಿಸುತ್ತದೆ. ಕಣಿವೆಗಳ, ಕಾಡುಗಳ, ಜಲಪಾತಗಳ, ನದಿಗಳ, ಮತ್ತು ಸಸ್ಯ ಮತ್ತು ಪ್ರಾಣಿಗಳಿಂದ ಈ ಸ್ಥಳವು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ. ವಿಲ್ಸನ್ ಪಾಯಿಂಟ್ ಅಥವಾ ಸೂರ್ಯೋದಯ ಕೇಂದ್ರ ಈ ಪ್ರದೇಶದಲ್ಲಿನ ಅತ್ಯಂತ ಎತ್ತರದ ಕೇಂದ್ರವಾಗಿದೆ. ಕನೌತ್ ಶಿಖರ ನಿಕಟವಾಗಿ ಎರಡನೆಯದಾಗಿದ್ದು, ಹತ್ತಿರದ ಕ್ಷಿತಿಜದ ಅದ್ಭುತ ದೃಷ್ಟಿಯನ್ನು ನೀಡುತ್ತದೆ. ಇಲ್ಲಿ ಮೊದಲ ಬಾರಿಗೆ ಮನೆ ನಿರ್ಮಿಸಿದ ಖ್ಯಾತಿಗೆ ಕಾರಣನಾದ ಆರ್ಥರ್ ಮಲೆಟ್ ನಿಂದಾಗಿ ಆರ್ಥರ್ ಸೀಟ್ ಎಂಬ ಹೆಸರು ಬಂದಿದೆ. ಎಕೋ ಪಾಯಿಂಟ್ ಮಕ್ಕಳ ನೆಚ್ಚಿನ ತಾಣವಾಗಿದ್ದು, ನೀವು ಜೋರಾಗಿ ಕೂಗಿದರೆ, ಅದು ದೂರದ ವರೆಗೆ ಸಾಗಿ ಬೆಟ್ಟಗಳ ಹಿಂದೆ ನಿಮಗೆ ಪ್ರತಿಧ್ವನಿಸುತ್ತದೆ.

ಎಲ್ಫಿನ್ ಸ್ಟೋನ್ ಪಾಯಿಂಟ್, ಮರ್ಜೋರಿ ಪಾಯಿಂಟ್, ಕ್ಯಾಸಲ್ ರಾಕ್ ಮಹಾಬಲೇಶ್ವರಕ್ಕೆ ಭೇಟಿ ನೀಡಿದ ಸಂಧರ್ಬದಲ್ಲಿ ತಪ್ಪದೆ ವೀಕ್ಷಿಸಬೇಕಾದ ಸ್ಥಳಗಳಾಗಿವೆ. ಇನ್ನೂ ಹೆಚ್ಚಿನ ಕೇಂದ್ರಗಳೆಂದರೆ ಬಾಬಿಂಗ್ ಟನ್ ಪಾಯಿಂಟ್, ಫಾಕ್ಲೆಂಡ್ ಪಾಯಿಂಟ್, ಕರನಾಕ್ ಪಾಯಿಂಟ್ ಮತ್ತು ಬಾಂಬೆ ಪಾಯಿಂಟ್, ಇವು ಸುತ್ತಮುತ್ತಲಿನ ದೃಶ್ಯಾವಳಿಗಳನ್ನು ನೀಡುತ್ತವೆ. ನಮ್ಮವರೆ ಆದ ಶಿವಾಜಿ ಮಹಾರಾಜ್ ನಿರ್ಮಿಸಿದ ಪೌರಾಣಿಕ ಪ್ರತಾಪ್ ಗಡ್ ಕೋಟೆಯನ್ನು ಭೇಟಿನೀಡಲು ಮರೆಯಬೇಡಿ.

ಮಹಾಬಲೇಶ್ವರವು ಸಹ ಕೆಲವು ಪುರಾತನ ದೇವಾಲಯಗಳ ನೆಲೆಯಾಗಿದ್ದು, ಅತ್ಯಂತ ದಿಗ್ಭ್ರಮೆಯುಂಟುಮಾಡುವ ಮಹಾಬಲೇಶ್ವರ ದೇವಸ್ಥಾನವನ್ನು ಹಳೆಯ ಮಹಾಬಲೇಶ್ವರದಲ್ಲಿ ನೋಡಬಹುದು. ವೆನ್ನ ಲೇಕ್, ಸಮೀಪದಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆಯ ಸ್ಥಳವಾಗಿದೆ.

ಮಹಾಬಲೇಶ್ವರ - 'ಹಸಿರಿನ' ಸುತ್ತ

ಮಹಾಬಲೇಶ್ವರ ಅರಣ್ಯಗಳು ಹೇರಳವಾದ ಅಮೂಲ್ಯ ಔಷಧಿ ಮತ್ತು ಆಯುರ್ವೇದ ಸಸ್ಯಗಳನ್ನು ಹೊಂದಿದೆ. ಇಲ್ಲಿನ ಪ್ರಾಣಿ ಸಮೂಹವು ಬುಲ್ಬುಲ್, ನರಿಗಳು, ಜಿಂಕೆಗಳು ಮತ್ತು ಕಾಡುಕೋಣಗಳನ್ನು ಒಳಗೊಂಡಿದೆ. ಮಹಾಬಲೇಶ್ವರದ ಶುದ್ಧ ಹವಾಮಾನ ಮತ್ತು ಹೇರಳವಾದ ಆಮ್ಲಜನಕದಿಂದಾಗಿ ಅನೇಕರಿಗೆ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣುವ ಉದ್ದೇಶದಿಂದ, ಈ ಸ್ಥಳದಲ್ಲಿ ಸಮಯ ಕಳೆಯಲು ಸಲಹೆ ನೀಡಲಾಗುತ್ತದೆ.

ಮಹಾಬಲೇಶ್ವರ ಬೆಟ್ಟದಲ್ಲಿ ತಂಗಿದರೆ ಅದು ನಿಮ್ಮನ್ನು ಬೇಸಿಗೆಯ ಬೇಗೆಯಿಂದ ತಪ್ಪಿಸುತ್ತದೆ. ಈ ಸ್ಥಳದಲ್ಲಿನ ಹವಾಮಾನ ಬಹಳಷ್ಟು ಮಧುರವಾಗಿದ್ದು ವರ್ಷವಿಡೀ ಎಲ್ಲರನ್ನು ಆಕರ್ಷಿಸುತ್ತದೆ. ಇಲ್ಲಿ ಎಂದೂ ಬೇಸಿಗೆಯು ತುಂಬಾ ಬಿಸಿಯಿಂದಾಗಲಿ ಮತ್ತು ಚಳಿಗಾಲವು ತುಂಬಾ ಚಳಿಯಿಂದಾಗಲಿ ಇರುವುದಿಲ್ಲ. ಇನ್ನಿತರ ಯಾವುದೇ ಗಿರಿಧಾಮದ ಹಾಗೆ, ಮಳೆಗಾಲ ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿರುತ್ತದೆ. ಮಳೆಯು ತಾಜಾ ಹಸಿರಿನಿಂದ ಮತ್ತು ಹರಿಯುವ ಜಲಪಾತಗಳಿಂದ ಈ ಸ್ಥಳವನ್ನು ಒಂದು ಆಕಾಶ ಧಾಮವನ್ನಾಗಿ ರೂಪಾಂತರಿಸುತ್ತದೆ.

ಈ ಪ್ರಸ್ಥಭೂಮಿಯು 1800 ರಲ್ಲಿ ಮೂರು ದಶಕಗಳ ಕಾಲ ಚೀನೀ ಮತ್ತು ಮಲಯ ಅಪರಾಧಿಗಳಿಗೆ ಕಾರಾಗೃಹವಾಗಿ ಸೇವೆ ಸಲ್ಲಿಸಿರುವುದು, ಮಹಾಬಲೇಶ್ವರದ ಒಂದು ಆಸಕ್ತಿಕರ ವಾಸ್ತವಾಂಶವಾಗಿದೆ. ಮಹಾಬಲೇಶ್ವರ ಇಂದು ಸ್ಟ್ರಾಬೆರಿಗಳಿಂದ ಪ್ರಖ್ಯಾತವಾಗಿದೆ, ಇದರ ಪ್ರಶಂಸೆ, ಇತರ ವಸ್ತುಗಳಾದ ಬಿದಿರಿನ ಬುಟ್ಟಿಯನ್ನು ನೇಯುವಿಕೆ ಮತ್ತು ಕೆಂಪು ಆಲೂಗಡ್ಡೆಗಳನ್ನು ಬೆಳೆಯುವ ಜೊತೆಗೆ ಕೃಷಿಯನ್ನು ಪ್ರಾರಂಭಿಸಿದ ಸೆರೆಯಾಳುಗಳಿಗೆ ಸಲ್ಲುತ್ತದೆ. ನೀವು ಮಹಾಬಲೇಶ್ವರ ಹೋಗಿಯೂ ಅಲ್ಲಿ ಲಭ್ಯವಿರುವ ಸ್ಟ್ರಾಬೆರಿ ಮತ್ತು ಉಪ್ಪುನೇರಳೆ ಉತ್ಪನ್ನಗಳನ್ನು ಪ್ರಯತ್ನಿಸದೇ ಇರುವುದು ತಪ್ಪಾಗುತ್ತದೆ, 'ಕ್ರೀಮ್ ಜೊತೆಗಿನ ಸ್ಟ್ರಾಬೆರಿ'ಯನ್ನು ಒಂದು ಬಾರಿ ಸವಿಯಲೇಬೇಕು!

ಮಹಾಬಲೇಶ್ವರ - ಪ್ರವಾಸಿಗರ ಸ್ವರ್ಗ

ಮಹಾಬಲೇಶ್ವರವು ಅತ್ಯುತ್ತಮವಾದ ವಾಯು, ರಸ್ತೆ ಮತ್ತು ರೈಲು ಸಂಪರ್ಕಗಳನ್ನು ಹೊಂದಿದೆ. ವಾಯು ಮಾರ್ಗವಾಗಿ ಪುಣೆ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಮಹಾಬಲೇಶ್ವರದ ತನಕ ಕ್ಯಾಬ್ ತೆಗೆದುಕೊಳ್ಳಬೇಕು. ರೈಲುಗಳಲ್ಲಿ ಬಂದರೆ ಗಿರಿಧಾಮಕ್ಕೆ ಹತ್ತಿರವಿರುವ ವಾತರ್ ನಿಲ್ದಾಣದಲ್ಲಿ ನಿಮ್ಮನ್ನು ಇಳಿಸುತ್ತವೆ. ಆದಾಗ್ಯೂ, ನೀವು ಮಹಾರಾಷ್ಟ್ರದ ಒಳಗೆ ವಾಸಿಸುವವರಾಗಿದ್ದು ಮತ್ತು ನಗರಗಳಾದ ಮುಂಬೈ ಅಥವಾ ಪುಣೆಯಿಂದ ಬರುವವರಾಗಿದ್ದರೆ, ನೀವೆ ಗಾಡಿ ಚಾಲನೆ ಮಾಡಿಕೊಂಡು ಬರವುದು ಅತ್ಯುತ್ತಮ ಆಯ್ಕೆಯಾಗಿದೆ. ರಸ್ತೆಗಳು ಸುಂದರವಾಗಿದ್ದು ಮತ್ತು ಪ್ರಯಾಣವು ನೆನಪಿಡಬಹುದಾಗಿದೆ. ನಿಮ್ಮ ಆಯಾ ನಗರಗಳಿಂದ ಬಸ್ಸುಗಳನ್ನು ಆರಿಸಿಕೊಳ್ಳಬಹುದಾಗಿದೆ.

ಮಹಾಬಲೇಶ್ವರ ಒಂದು ಪ್ರವಾಸಿಗರ ಸ್ವರ್ಗವಾಗಿದೆ. ಪ್ರತಿಯೊಬ್ಬರಿಗು ವಾರದ ಕೆಲಸದ ಒತ್ತಡದ ನಂತರ ವಿರಾಮದ ಅವಶ್ಯಕತೆ ಇರುತ್ತದೆ. ನಿಮ್ಮ ಚೀಲಗಳನ್ನು ಕಟ್ಟಿಕೊಂಡು ಮಹಾಬಲೇಶ್ವರಕ್ಕೆ ತೆರಳಿ. ತಂಪಾದ ಗಾಳಿ ಮತ್ತು ಮನೋಹರವಾದ ತಾಣಗಳು ನಿಮಗೆ ಸಂತೋಷಕರ ವಿಶ್ರಾಂತಿಯನ್ನು ನೀಡುತ್ತವೆ. ನೀವು ಮೊದಲ ಬಾರಿ ಈ ಸ್ಥಳಕ್ಕೆ ಭೇಟಿ ನೀಡಿದವರು, ಅಥವಾ ಪದೇ ಪದೇ ಭೇಟಿ ನೀಡುವ ಪ್ರವಾಸಿಗರೇ ಆಗಿದ್ದರು, ಮಹಾಬಲೇಶ್ವರವು ನಿಮಗೆ ಪ್ರತಿ ಬಾರಿ ಅಚ್ಚರಿಯನ್ನು ನೀಡುತ್ತದೆ. ಈ ರಸವತ್ತಾದ ಗಿರಿಧಾಮಕ್ಕೆ ಭೇಟಿ ನೀಡದೆ ಇರುವುದು ಅಕ್ಷಮ್ಯ!

ಮಹಾಬಲೇಶ್ವರ ಪ್ರಸಿದ್ಧವಾಗಿದೆ

ಮಹಾಬಲೇಶ್ವರ ಹವಾಮಾನ

ಮಹಾಬಲೇಶ್ವರ
31oC / 87oF
 • Sunny
 • Wind: NNE 16 km/h

ಉತ್ತಮ ಸಮಯ ಮಹಾಬಲೇಶ್ವರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಹಾಬಲೇಶ್ವರ

 • ರಸ್ತೆಯ ಮೂಲಕ
  ಮಹಾರಾಷ್ಟ್ರದ ಪ್ರಮುಖ ನಗರಗಳಿಂದ ಮಹಾಬಲೇಶ್ವರಕ್ಕೆ ತಲುಪಲು ರಾಜ್ಯ ಸಾರಿಗೆ ಬಸ್ ಅಥವಾ ಖಾಸಗಿ ಐಷಾರಾಮಿ ಬಸ್ಸುಗಳ ಸೌಲಭ್ಯವಿದೆ. ಆಸನದ ಪ್ರತಿ ಸುಂಕದ ದರ 75 ರೂ. ನಿಂದ 250 ರೂ ಇರುತ್ತದೆ. ಐಷಾರಾಮಿ ಬಸ್ಸುಗಳಿಗೆ ಹೆಚ್ಚಿನ ಶುಲ್ಕವಿರುತ್ತದೆ. ಗಿರಿಧಾಮವು ಪುಣೆಯಿಂದ ಬೈಕ್ ನಲ್ಲಿ 2.5-3 ಘಂಟೆಗಳ ಕಾಲದ ಪ್ರಯಾಣವಾಗಿದೆ. ಮಹಾಬಲೇಶ್ವರಕ್ಕೆ ಮುಂಬೈ ನಿಂದ ಪುಣೆಯ ಮೂಲಕ ಮಹದ್ ಮಾರ್ಗವಾಗಿಯೂ ತಲುಪಬಹುದು. ಈ ಮೇಲಿನ ಮೊದಲ ಮಾರ್ಗದಲ್ಲಿ 250 ಕಿಮೀ ಆಗುತ್ತದೆ ಮತ್ತು ಕೊನೆಯ ಮಾರ್ಗದಲ್ಲಿ 300 ಕಿಮೀ ಆಗುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ವಾತರ್ ಸುಮಾರು 60 ಕಿಮೀ ದೂರವಿರುವ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ. ಮುಂಬೈ, ಪುಣೆ ಹಾಗು ಬೇರೆ ಪ್ರಮುಖ ನಗರಗಳಿಂದ ವಾತರ್ ಗೆ ರೈಲು ಸೌಲಭ್ಯವಿದ್ದು ಇಲ್ಲಿಂದ ಟ್ಯಾಕ್ಸಿ ತೆಗೆದುಕೊಂಡು ಮಹಾಬಲೇಶ್ವರಕ್ಕೆ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  120 ಕಿಮೀ ದೂರವಿರುವ ಪುಣೆ ವಿಮಾನ ನಿಲ್ದಾಣ, ಮಹಾಬಲೇಶ್ವರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಟ್ಯಾಕ್ಸಿಯಲ್ಲಿ ಮಹಾಬಲೇಶ್ವರಕ್ಕೆ ಸುಮಾರು 300 ರೂ ಖರ್ಚಾಗುತ್ತದೆ. ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ 245 ಕಿಮೀ ದೂರವಿದ್ದು ಮಹಾಬಲೇಶ್ವರಕ್ಕೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
  ಮಾರ್ಗಗಳ ಹುಡುಕಾಟ

ಮಹಾಬಲೇಶ್ವರ ಲೇಖನಗಳು

One Way
Return
From (Departure City)
To (Destination City)
Depart On
24 Mar,Sun
Return On
25 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Mar,Sun
Check Out
25 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Mar,Sun
Return On
25 Mar,Mon
 • Today
  Mahabaleshwar
  31 OC
  87 OF
  UV Index: 8
  Sunny
 • Tomorrow
  Mahabaleshwar
  27 OC
  80 OF
  UV Index: 8
  Partly cloudy
 • Day After
  Mahabaleshwar
  27 OC
  80 OF
  UV Index: 8
  Partly cloudy