Search
  • Follow NativePlanet
Share
ಮುಖಪುಟ » ಸ್ಥಳಗಳು» ಮಲ್ಶೇಜ್ ಘಾಟ್

ಮಲ್ಶೆಜ್ ಘಾಟ್ - ಪ್ರಾಕೃತಿಕ ಸ್ವರ್ಗ

13

ಮಲ್ಶೆಜ್ ಘಾಟ್ ಎಂಬುದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಪ್ರಸಿದ್ಧ ಪರ್ವತ ರಹದಾರಿಯಾಗಿದೆ.

ಸದಾ ಪ್ರವಾಸಿಗರಿಂದ ಮಿರಿ ಮಿರಿ ಮಿಂಚುವ ಮಲ್ಶೆಜ್ ಘಾಟ್ ಗಿರಿಧಾಮವು ಸಮುದ್ರ ಮಟ್ಟದಿಂದ 700 ಮೀಟರ್ ಎತ್ತರದಲ್ಲಿದ್ದು, ಹಿತಕರವಾದ ಮತ್ತು ಆಹ್ಲಾದಕರವಾದ ಹವಾಮಾನದಿಂದ ಕೂಡಿರುತ್ತದೆ. ಈ ಸ್ಥಳವು ತನ್ನಲ್ಲಿರುವ ಅಸಂಖ್ಯಾತ ಸಂಖ್ಯೆಯಲ್ಲಿರುವ ಕೆರೆಗಳು ಮತ್ತು ಶಿಲಾ ಪರ್ವತಗಳಿಂದ ಕೂಡಿ ಪ್ರಕೃತಿ ಪ್ರಿಯರಿಗೆ, ಸಾಹಸ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ತಾಣವಾಗಿ ರೂಪುಗೊಂಡಿದೆ.

ಹಳ್ಳಿಗಾಡಿನ ವಾತಾವರಣವನ್ನು ಹೊಂದಿರುವ ಮಲ್ಶೆಜ್ ಘಾಟ್ ತನ್ನ ಸಮಕಾಲೀನ ಪ್ರವಾಸಿ ಸ್ಥಳಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಹಲವಾರು ನದಿಗಳು ಈ ಪ್ರದೇಶದಲ್ಲಿ ಹಾದು ಹೋಗುತ್ತವೆ. ಇಲ್ಲಿನ ಐತಿಹಾಸಿಕ ಕೋಟೆಗಳು ನಮ್ಮ ಶ್ರೀಮಂತ ಇತಿಹಾಸವನ್ನು ಪ್ರತಿನಿಧಿಸುತ್ತವೆ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತಗಳು ಮತ್ತು ಅನುಪಮವಾದ ಪ್ರಾಣಿ ಸಂಪತ್ತನ್ನು ಹೊಂದಿರುವ ವನ್ಯಧಾಮಗಳು ಇಲ್ಲಿ ನೆಲೆಗೊಂಡು ಮಲ್ಶೆಜ್ ಘಾಟಿನ ಪ್ರತ್ಯೇಕತೆಯನ್ನು ಇಮ್ಮಡಿಗೊಳಿಸಿವೆ.

ಪ್ರಮುಖ ಆಕರ್ಷಣೆಗಳು

ಮಲ್ಶೆಜ್ ಘಾಟ್ ಮಳೆಗಾಲದಲ್ಲಿ ಕಾಲ ಕಳೆಯಲು ಬಯಸುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನೀವು ಇಲ್ಲಿ ಸುಮ್ಮನೆ ನಡೆದುಕೊಂಡು ಹೋದರೆ ಸಾಕು, ಸ್ವರ್ಗ ಸದೃಶ್ಯವಾದ ಪ್ರಾಕೃತಿಕ ಅದ್ಭುತಗಳನ್ನು ಕಣ್ತುಂಬಿಕೊಳ್ಳಬಹುದು. ನೀವು ಇಲ್ಲಿ ನಡೆಯುತ್ತಿದ್ದರೆ ಮೋಡಗಳ ಜೊತೆ ತೇಲಿ ಹೋದಂತೆ ಭಾಸವಾಗುತ್ತದೆ. ಇಲ್ಲಿ ರೂಪುಗೊಳ್ಳುವ ಮೋಡಗಳು ಸಾಮಾನ್ಯವಾಗಿ ಬೇರೆ ಕಡೆ ಕಾಣುವುದಕ್ಕಿಂತ ಸ್ವಲ್ಪ ದಪ್ಪವಾಗಿದ್ದು, ಅದು ಹಾದು ಹೋಗುವಾಗ ನಿಮಗೆ ವಿನೂತನ ಅನುಭವವನ್ನು ನೀಡುತ್ತದೆ.

ಪಕ್ಷಿ ವೀಕ್ಷಕರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಸಂತಸವನ್ನು ಒದಗಿಸಲು ಇಲ್ಲಿ ಪಿಂಪಲ್ ಗಾಂವ್ ಜಲಾಶಯವಿದೆ. ಇಲ್ಲಿ ಹಲವಾರು ವಲಸೆ ಹಕ್ಕಿಗಳು ಕಾಣಸಿಗುತ್ತವೆ. ಸ್ವಚ್ಛ ಹಿನ್ನೀರಿನಲ್ಲಿ ವಿಹರಿಸುವ ಪಕ್ಷಿಗಳನ್ನು ಪರ್ವತದ ಹಿನ್ನಲೆಯಲ್ಲಿ ಕಾಣುವುದೆ ಒಂದು ವೈಭೋಗ. ಇಲ್ಲಿಗೆ ಭೇಟಿಕೊಡುವ ಯಾರಾದರು ಸರಿ ಫ್ಲೆಮಿಂಗೊಗಳನ್ನು ಕಾಣುವ ಅವಕಾಶದಿಂದ ವಂಚಿತರಾಗುವುದು ಸಾಧ್ಯವಿಲ್ಲದ ಮಾತು.

ವಾಸ್ತು ಶಿಲ್ಪ ಪ್ರಿಯರಿಗಾಗಿ ಇಲ್ಲಿ ಅಜೊಬ ಬೆಟ್ಟದ ಕೋಟೆ, ಜೀವ್‍ಧಾನ್ ಚಾವಂದ್ ಕೋಟೆ ಮತ್ತು ಹೆಮ್ಮೆಯ ಹರಿಶ್ಚಂದ್ರಘಡ್ ಕೋಟೆಗಳು ಇದ್ದು, ಅವರು ಇವುಗಳನ್ನು ಸುತ್ತಾಡಿ ನೋಡಬಹುದು. ಶಿವನೇರಿ ಕೋಟೆಯು ಇಡಿ ಪ್ರಾಂತ್ಯದಲ್ಲಿಯೆ ಪ್ರಸಿದ್ಧವಾದ ಕೋಟೆಯಾಗಿದೆ. ಇದು ಮಹಾರಾಜ ಶಿವಾಜಿಯು ಹುಟ್ಟಿದ ಸ್ಥಳ. ನೀವು ಇಲ್ಲಿ ಚಾರಣ ಮತ್ತು ಪರ್ವತಾರೋಹಣದಂತಹ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು.

ಮಲ್ಶೆಜ್ ಘಾಟ್‍ನಲ್ಲಿ ವರ್ಷಪೂರ್ತಿ ಹಲವಾರು ಚಟುವಟಿಕೆಗಳು ಮತ್ತು ಆಕರ್ಷಣೆಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುತ್ತವೆ. ಈ ಸ್ಥಳದ ವರ್ಚಸ್ಸನ್ನು ಅರ್ಥ ಮಾಡಿಕೊಳ್ಳಬೇಕಾದರೆ ನೀವು ಇಲ್ಲಿ ತಂಗಲೇ ಬೇಕು. ಆಗಲೆ ಅದರ ಹೆಚ್ಚುಗಾರಿಕೆ ನಿಮಗೆ ಅರಿವಾಗುತ್ತದೆ.

ಮಲ್ಶೇಜ್ ಘಾಟ್ ಪ್ರಸಿದ್ಧವಾಗಿದೆ

ಮಲ್ಶೇಜ್ ಘಾಟ್ ಹವಾಮಾನ

ಉತ್ತಮ ಸಮಯ ಮಲ್ಶೇಜ್ ಘಾಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಲ್ಶೇಜ್ ಘಾಟ್

  • ರಸ್ತೆಯ ಮೂಲಕ
    ಮಲ್ಶೆಜ್ ಘಾಟ್‍ ಮಹಾರಾಷ್ಟ್ರದ ಎಲ್ಲ ಪಟ್ಟಣ ಮತ್ತು ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಇಲ್ಲಿಗೆ ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್ಸುಗಳು ನಿರಂತರ ಬಂದು ಹೋಗುತ್ತಿರುತ್ತವೆ. ಮುಂಬೈ, ಪುಣೆ, ಕಲ್ಯಾಣ್‍ಗಳಿಂದ ಬಸ್ಸುಗಳು ಮಲ್ಶೆಜ್ ಘಾಟ್‍ಗೆ ಬರತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಯಾಣ್ ರೈಲು ನಿಲ್ದಾಣವು ಮಲ್ಶೆಜ್ ಘಾಟ್‍ಗೆ ಸಮೀಪದಲ್ಲಿರುವ ರೈಲು ನಿಲ್ದಾಣವಾಗಿದೆ. ಈ ನಿಲ್ದಾಣವು ಮಹಾರಾಷ್ಟ್ರ ಮತ್ತು ಇನ್ನಿತರ ರಾಜ್ಯದ ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣವು ಮಲ್ಶೆಜ್ ಘಾಟ್‍ನಿಂದ 86 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇಲ್ಲಿಂದ ಮಲ್ಶೆಜ್ ಘಾಟ್‍ಗೆ ತಲುಪಲು ಸುಮಾರು ಒಂದೂವರೆ ಘಂಟೆಗಳಷ್ಟು ಪ್ರಯಾಣ ಅವಧಿಯಾಗುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಲ್ಶೆಜ್ ಘಾಟ್‍ಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣವು ಮುಂಬೈಯ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವಾಗಿದ್ದು, ಇದು ಇಲ್ಲಿಂದ 150 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ಭಾರತದ ಹೊರಗಿನ ಮತ್ತು ಒಳಗಿನ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಮುಂಬಯಿ ವಿಮಾನ ನಿಲ್ದಾಣವು ಸಿಂಗಾಪುರ, ನ್ಯೂಯಾರ್ಕ್ ಮತ್ತು ಇನ್ನಿತರ ಪ್ರಮುಖ ನಗರಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ. ಹಾಗಾಗಿ ವಿದೇಶಿಯರು ಸಹ ಇಲ್ಲಿಗೆ ಸುಲಭವಾಗಿ ಬರಬಹುದು. ಇಲ್ಲಿಂದ ಮಲ್ಶೆಜ್ ಘಾಟ್‍ಗೆ ಟ್ಯಾಕ್ಸಿ ದರವು 3000 ರೂಪಾಯಿಯಾಗುತ್ತದೆ. ನಾಸಿಕ್‍ನ ಗಾಂಧಿ ನಗರ್ ವಿಮಾನ ನಿಲ್ದಾಣ ಮತ್ತು ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣವು ಇಲ್ಲಿಗೆ ಬರುವ ದೇಶೀಯ ಪ್ರಯಾಣಿಕರಿಗೆ ವಿಮಾನ ಸಂಪರ್ಕವನ್ನು ಒದಗಿಸುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat