Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲ್ಶೇಜ್ ಘಾಟ್ » ಹವಾಮಾನ

ಮಲ್ಶೇಜ್ ಘಾಟ್ ಹವಾಮಾನ

ಮಲ್ಶೆಜ್ ಘಾಟ್ ವರ್ಷಪೂರ್ತಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿನ ಹವಾಮಾನವು ವರ್ಷಪೂರ್ತಿ ಆಹ್ಲಾದಕರವಾಗಿರುತ್ತದೆ. ವರ್ಷ ಪೂರ್ತಿ ಇಲ್ಲಿನ ಸರಾಸರಿ ಉಷ್ಣಾಂಶ 27° ಸೆಲ್ಶಿಯಸ್ ಇರುತ್ತದೆ. ಈ ತಾಣಕ್ಕೆ ಬರಲು ಮಳೆಗಾಲದ ಪೂರ್ವ ಅವಧಿ ಮತ್ತು ನಂತರದ ಅವಧಿ ಅತ್ಯುತ್ತಮ ಕಾಲವಾಗಿರುತ್ತದೆ.

ಬೇಸಿಗೆಗಾಲ

ಮಲ್ಶೆಜ್ ಘಾಟ್‍ನಲ್ಲಿ ಮಾರ್ಚ್‍ನಿಂದ ಮೇವರೆಗೆ ಬೇಸಿಗೆ ಇರುತ್ತದೆ. ಈ ಸಮಯವು ಇಲ್ಲಿ ಬಿಸಿಲಿನಿಂದ ಕೂಡಿದ್ದು, ಉಷ್ಣಾಂಶವು 35° ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

ಮಲ್ಶೆಜ್ ಘಾಟಿನ ಸುಂದರ ಪರಿಸರವನ್ನು ಆಸ್ವಾದಿಸಲು ಮಳೆಗಾಲವು ಹೇಳಿ ಮಾಡಿಸಿದ ಸಮಯವಾಗಿದೆ. ಮಳೆಗಾಲದಲ್ಲಿ ಇಲ್ಲಿ ಸಾಧಾರಣ ಪ್ರಮಾಣದ ಮಳೆ ಬೀಳುತ್ತದೆ. ಈ ಸಮಯದಲ್ಲಿ ಇಲ್ಲಿನ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ನೋಡುವುದೆ ಒಂದು ಭಾಗ್ಯ. ಅವುಗಳು ಈ ಕಾಲದಲ್ಲಿ ತಮ್ಮ ಅತ್ಯುತ್ತಮ ಹಂತವನ್ನು ತಲುಪಿರುತ್ತವೆ. ಅದಕ್ಕಾಗಿ ಈ ಸಮಯವು ತನ್ನ ಮಹತ್ವವನ್ನು ಪಡೆದಿದೆ.

ಚಳಿಗಾಲ

ಮಲ್ಶೆಜ್ ಘಾಟಿನಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಈ ಸಮಯದಲ್ಲಿ ಈ ಪ್ರಾಂತ್ಯವು ಸ್ವರ್ಗಕ್ಕಿಂತ ಮಿಗಿಲಾಗಿ ಕಂಗೊಳಿಸುತ್ತದೆ. ಅಲ್ಲದೆ ಇಲ್ಲಿನ ಉಷ್ಣಾಂಶವು 15° ಸೆಲ್ಶಿಯಸ್‍ನಷ್ಟು ಇದ್ದು, ಚಾರಣ ಮತ್ತಿತರ ಚಟುವಟಿಕೆಗಳಿಗೆ ಸಹಾಯವನ್ನುಂಟು ಮಾಡುತ್ತದೆ.