Search
 • Follow NativePlanet
Share
ಮುಖಪುಟ » ಸ್ಥಳಗಳು» ಮಾಥೆರಾನ್

ಮಾಥೆರಾನ್‌ - ಅದ್ಭುತ ಬೆಟ್ಟದ ಪ್ರದೇಶ

31

ಮಹಾರಾಷ್ಟ್ರದಲ್ಲಿರುವ ಮಾಥೆರಾನ್‌ ಒಂದು ಅದ್ಭುತ ಗುಡ್ಡ ಪ್ರದೇಶವಾಗಿದೆ. ಇದು ಅತಿ ಸಣ್ಣದು ಹಾಗೂ ತುಂಬಾ ಜನಪ್ರಿಯವಾದದ್ದು. ಸುಮಾರು 2,650 ಅಡಿ ಎತ್ತರದ ಈ ಪ್ರವಾಸಿ ತಾಣವು ಪಶ್ಚಿಮ ಘಟ್ಟದ ಸರಣಿಯಲ್ಲಿದೆ. ಮಾಥೆರಾನ್‌ನ ಪ್ರಶಾಂತ ಪರಿಸರವು ಮುಂಬೈ, ಪುಣೆಯಂಥಾ ಬ್ಯುಸಿ ನಗರಗಳಿಂದ ಪ್ರತ್ಯೇಕವಾಗಿರುತ್ತದೆ. ಮಾಥೆರಾನ್‌ ಎಂದರೆ ತಲೆಯ ಮೇಲೆ ಅರಣ್ಯ ಎಂದಾಗುತ್ತದೆ.

ಇತಿಹಾಸವೇನೆಂದರೆ, 1850 ರಲ್ಲಿ ಹಗ್‌ ಪಾಂಲಿಟ್ಜ್‌ ಮ್ಯಾಲೆಟ್‌ ಎನ್ನುವವರು ಈ ಪ್ರದೇಶವನ್ನು ಕಂಡುಹಿಡಿದರು. ಒಂದು ಸಾಮಾನ್ಯ ಹುಡುಕಾಟದ ದಿನ ಇದು ಇವರಿಗೆ ಕಂಡಿದೆ. ಪಂಚ್‌ಗನಿಯ ರೀತಿಯಲ್ಲೇ ಬ್ರಿಟೀಷರು ಈ ಪ್ರದೇಶವನ್ನು ತಮ್ಮ ರಜಾಕಾಲದ ದಿನ ಕಳೆಯುವ ಪ್ರದೇಶವನ್ನಾಗಿಸಿದ್ದರು.

ಮಾಥೆರಾನ್‌ನಲ್ಲಿ ಹಲವು ಆಕರ್ಷಣೆಗಳು

ಇತರ ಎಲ್ಲಾ ಗುಡ್ಡ ಪ್ರದೇಶದ ರೀತಿಯಲ್ಲೇ ಮಾಥೆರಾನ್‌ ಕೂಡಾ ಹಲವು ವೀಕ್ಷಣಾ ತಾಣವನ್ನು ಹೊಂದಿದೆ. 38 ಅಧಿಕೃತ ತಾಣಗಳ ಪೈಕಿ, ಪನೋರಮಾ ಪಾಯಿಂಟ್‌ನಲ್ಲಿ ನೀವು ಇಡೀ ಪ್ರದೇಶವನ್ನು 360 ಡಿಗ್ರಿ ಕೋನದಲ್ಲಿ ನೋಡಬಹುದು. ಇಲ್ಲಿ ಕಾಣುವ ಸೂರ್ಯಾಸ್ತಮಾನ ಮತ್ತು ಸೂರ್ಯೋದಯವನ್ನು ನೋಡಿದ ಪ್ರವಾಸಿಗರು ನಿಸರ್ಗದ ಮೇಲೆ ಅವ್ಯಕ್ತ ಪ್ರೀತಿಯಲ್ಲಿ ಬೀಳುತ್ತಾರೆ. ಮುಂಬೈನಂಥ ನಗರದಲ್ಲಿ ರಾತ್ರಿಯಲ್ಲೂ ಮಿನುಗುವ ಕೃತಕ ಬೆಳಕಿನಿಂದ ದೂರವಾದ ಈ ಪ್ರದೇಶವು ಅದ್ಭುತವಾದ ಪ್ರದೇಶವೆನಿಸುತ್ತದೆ.

ಇಲ್ಲಿರುವ ಪ್ರಬಲ್‌ ಕೋಟೆಯು ಒಂದು ಐತಿಹಾಸಿಕ ಕೋಟೆಯಾಗಿದ್ದು, ಇನ್ನೊಂದು ಪ್ರಮುಖ ಪಾಯಿಂಟ್‌ ಆಗಿರುವ ಲೂಸಿಯಾ ಪಾಯಿಂಟ್‌ನಿಂದ ಸ್ಪಷ್ಟವಾಗಿ ನೋಡಬಹುದು. ಈ ಕೋಟೆ ಸದ್ಯದಲ್ಲಿ ಅವಶೇಷದ ರೀತಿಯಲ್ಲಿದೆ. ಆದರೆ ಹಿಂದೊಂದು ಕಾಲಕ್ಕೆ ಇದು ತುಂಬಾ ಸುಂದರವಾಗಿತ್ತು. ಇನ್ನೂ ಕೆಲವು ಪ್ರಮುಖ ಪಾಯಿಂಟ್‌ಗಳೆಂದರೆ, ಮಂಕಿ ಪಾಯಿಂಟ್, ಪಾರ್ಕ್ಯುಪೈನ್ ಪಾಯಿಂಟ್ ಮತ್ತು ಒನ್‌ಟ್ರೀ ಹಿಲ್‌ ಪಾಯಿಂಟ್. ಬ್ರಿಟೀಷ್‌ ಕಾಲದ ಕಟ್ಟಡಗಳು ಮತ್ತು ವಾಸ್ತುಶಿಲ್ಪಕ್ಕೆ ಮಾಥೆರಾನ್ ಸಾಕ್ಷಿಯಾಗಿದೆ. ಬಹುತೇಕ ಈ ಎಲ್ಲಾ ಕಟ್ಟಡಗಳನ್ನೂ ಕೂಡಾ ಐತಿಹಾಸಿಕವೆಂದು ಗುರುತಿಸಲಾಗಿದೆ.

ರಿಲ್ಯಾಕ್ಸ್ ಮಾಡೋದಿಕ್ಕೆ ಸೂಕ್ತವಾದ ಜಾಗವೆಂದರೆ, ಚಾರ್ಲೆಟ್‌ ಕೆರೆ. ಹಕ್ಕಿ ವೀಕ್ಷಣೆ, ನಿಮ್ಮ ಆತ್ಮೀಯರ ಜೊತೆ ಒಂದು ಸಣ್ಣ ತಿರುಗಾಟಕ್ಕೆ ಗಾರ್ಡನ್‌ ಇದೆ. ಈ ಪ್ರದೇಶಕ್ಕೆ ಭೇಟಿ ನೀಡಿದಾಗ ನೀವು ಪಿಸಾರ್ನಾಥ ದೇವಸ್ಥಾನಕ್ಕೆ ಹೋಗುವುದನ್ನು ಮರೆಯಬೇಡಿ. ಮಾರ್ಬ್‌ ಡ್ಯಾಮ್ ಕೂಡಾ ಇನ್ನೊಂದು ಜಲಾವೃತ ಪ್ರದೇಶವಾಗಿದ್ದು ನೀವು ಮಿಸ್‌ ಮಾಡಿಕೊಳ್ಳುವ ಹಾಗಿಲ್ಲ.

ಮಾಥೆರಾನ್‌ನ ನಿಸರ್ಗ

ಮಾಥೆರಾನ್‌ನ ಕಾಡು ದಟ್ಟವಾಗಿದ್ದು, ವಿಭಾಗಿಸಲಾಗದಂತಹದ್ದಾಗಿದೆ. ಈ ಇಡೀ ಪ್ರದೇಶದಲ್ಲಿ ಮಂಗಗಳು ಯಥೇಚ್ಛವಾಗಿ ಕ್ರಿಯಾಶೀಲವಾಗಿರುವುದನ್ನು ಪ್ರವಾಸಿಗರು ನೋಡಬಹುದಾಗಿದೆ. ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಪ್ರವಾಸಿಗರು ತೆಗೆದುಕೊಂಡು ಹೋದರೆ ಮಂಗಗಳು ಕಸಿದುಕೊಳ್ಳಬಹುದಾದ ಸಾಧ್ಯತೆಗಳಿವೆ.

ಮಾಥೆರಾನ್‌ ಬಗ್ಗೆ ಆಸಕ್ತಿಕರ ಸಂಗತಿಯೆಂದರೆ, ವಾಹನಗಳಿಗೆ ಪ್ರವೇಶ ನೀಡದ ಕೆಲವೇ ಕೆಲವು ಪ್ರದೇಶಗಳಲ್ಲಿ ಇದೂ ಒಂದು. ನೈಸರ್ಗಿಕವಾಗಿ ಇದು ಪ್ರಭಾವೀ ಪರಿಸರವಾಗಿದೆ ಮತ್ತು ಯಾವುದೇ ವಾಹನಗಳು ಇಲ್ಲಿ ಕಾಣದಿರುವುದರಿಂದ ಪ್ರವಾಸಿಗರಿಗೆ ಆತ್ಮೀಯವೆನ್ನಿಸುತ್ತದೆ. ಯಾವುದೇ ವಾಹನಗಳು ಇಲ್ಲದ್ದರಿಂದ ಪರಿಸರ ಮಾಲಿನ್ಯವಿರುವುದಿಲ್ಲ ಮತ್ತು ಶಬ್ದ ಕೂಡಾ ಇರುವುದಿಲ್ಲ. ಇದರ ಪರಿಣಾಮವಾಗಿ ಈ ಶಾಂತ ಗುಡ್ಡ ಪ್ರದೇಶವು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರಿಂದಾಗಿಯೇ ಕುದುರೆ ಸವಾರಿಯು ಇಲ್ಲಿ ಕಡ್ಡಾಯ ಮತ್ತು ಇದರಿಂದ ಪ್ರವಾಸಿಗರು ತಪ್ಪಿಸಿಕೊಳ್ಳುವುದು ಸಾಧ್ಯವೂ ಇಲ್ಲ. ಇಲ್ಲಿ ಸ್ವಯಂಚಾಲಿತ ಗಾಡಿಗಳೂ ಇವೆ. ಇದೊಂದೇ ಗಾಡಿಗೆ ಇಲ್ಲಿ ಪ್ರವೇಶ ನೀಡಲಾಗಿದೆ.

ಮಾಥೆರಾನ್‌ನ ಹಲವು ಮಾರುಕಟ್ಟೆಯಲ್ಲಿ ಖರೀದಿ ಮಾಡಲಿಚ್ಛಿಸುವವರು ತಿರುಗಾಡಬಹದು. ಇಲ್ಲಿ ಪ್ರವಾಸಿಗರಿಗೆಂದೇ ಮಾರಾಟಕ್ಕಿಡಲಾದ ಕಲಾವಸ್ತುಗಳಿಂದ ಹಿಡಿದು ಮೂರ್ತಿಗಳವರೆಗೆ ಎಲ್ಲವೂ ಲಭ್ಯ. ಇದನ್ನು ಪ್ರವಾಸಿಗರು ತಮ್ಮ ಮನೆಗಳ ಶೃಂಗಾರಕ್ಕೆಂದು ಖರಿದಿಸಬಹುದು.

ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಮಾಥೆರಾನ್‌ ಸೂಕ್ತ ಸಂಪರ್ಕವನ್ನು ಹೊಂದಿದೆ. ನೀವು ವಿಮಾನದ ಮೂಲಕ, ರಸ್ತೆಯ ಮೂಲಕ ಅಥವಾ ರೈಲಿನ ಮೂಲಕ ಇಲ್ಲಿಗೆ ಪ್ರಯಾಣಿಸುವ ಇಷ್ಟವಿದ್ದಲ್ಲಿ, ಎಲ್ಲಾ ಮೂಲಗಳಿಂದಲೂ ಕೂಡಾ ಸೂಕ್ತ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಮಾಥೆರಾನ್‌ಗೆ ನೇರಾಲ್‌ನಿಂದ ರೈಲು ಸಂಪರ್ಕವಿದೆ. ನೆರಾಲ್‌ನಿಂದ ಮಾಥೆರಾನ್‌ಗೆ ನೀವು ರೈಲು ಪ್ರಯಾಣ ಮಾಡಿದಲ್ಲಿ ನೀವು ಅವಾಕ್ಕಾಗುತ್ತೀರಿ. ನೀವು ವಿಮಾನದ ಮೂಲಕ ಪ್ರಯಾಣಿಸುವ ಯೋಜನೆ ಮಾಡಿದ್ದರೆ, ಸಮೀಪದ ವಿಮಾನ ನಿಲ್ದಾಣವು ಪುಣೆ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ನೀವು ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಘಾಟಿ ಪ್ರದೇಶಗಳ ಅನುಭವವಾಗುತ್ತದೆ. ಈ ಪ್ರದೇಶಕ್ಕೆ ನೀವು ಡ್ರೈವ್ ಮಾಡುವ ಆಯ್ಕೆ ಉತ್ತಮವಾದದ್ದು, ಆದರೆ ಘಟ್ಟ ಪ್ರದೇಶಗಳು ಅನನುಭವಿ ಚಾಲಕರಿಗೆ ತುಂಬಾ ಕಷ್ಟಕರವಾದದ್ದಾಗಿದೆ. ಅದರಲ್ಲೂ ವಿಶೇಷವಾಗಿ ಮಳೆಗಾಲದ ಸಂದರ್ಭದಲ್ಲಿ.

ನಗರದ ಬೇಸಿಗೆ, ಜೀವನದ ಬ್ಯುಸಿ ಜೀವನ ಶೈಲಿ ಹಾಗೂ ನಗರದ ಟ್ರಾಫಿಕ್‌ ಮತ್ತು ಮಾಲಿನ್ಯದಿಂದ ಹೊರಗುಳಿಯಲು ಇಷ್ಟಪಟ್ಟಲ್ಲಿ ಮಾಥೆರಾನ್‌ ಉತ್ತಮ ತಾಣ. ಈ ಬೆಟ್ಟ ಪ್ರದೇಶದಲ್ಲಿ ನೀವು ಬಹಳಷ್ಟನ್ನು ನೋಡಬಹುದು.

ಮಾಥೆರಾನ್ ಪ್ರಸಿದ್ಧವಾಗಿದೆ

ಮಾಥೆರಾನ್ ಹವಾಮಾನ

ಉತ್ತಮ ಸಮಯ ಮಾಥೆರಾನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಾಥೆರಾನ್

 • ರಸ್ತೆಯ ಮೂಲಕ
  ಸರ್ಕಾರಿ ಮತ್ತು ಖಾಸಗಿ ಬಸ್‌ ಸೇವೆಯು ಮಾಥೆರಾನ್‌ನಿಂದ ಮಹಾರಾಷ್ಟ್ರದ ಎಲ್ಲಾ ಪ್ರಮಖ ನಗರಗಳಿಗೂ ಇದೆ. ಸಾಮಾನ್ಯ ಬಸ್‌ಗಳಿಗಿಂತ ಲಕ್ಷುರಿ ಮತ್ತು ಡಿಲಕ್ಸ್ ಬಸ್‌ಗಳ ಶುಲ್ಕ ಜಾಸ್ತಿ ಇರುತ್ತದೆ. ರಸ್ತೆಯ ಮೂಲಕ ಪ್ರಯಾಣ ಮಾಡುವುದು ಪ್ರವಾಸಿಗರಿಗೆ ಉತ್ತಮ ಅನುಭವ. ಸುತ್ತಲಿನ ಹಸಿರಿನ ಸಿರಿಯನ್ನು ನೋಡಿ ಪ್ರವಾಸಿಗರು ಖುಷಿಪಡಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಾಥೆರಾನ್‌ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ನೆರಾಲ್‌, ಸಮೀಪದ ರೈಲ್ವೆ ಸ್ಟೇಷನ್‌. ಸಿಎಸ್‌ಟಿಯು ನೆರಾಲ್‌ ಸ್ಟೇಷನ್‌ ಗೆ ನೇರವಾಗಿ ಸಂಪರ್ಕವನ್ನು ಹೊಂದಿದೆ. ನೆರಾಲ್‌ನಿಂದ ಮಾಥೆರಾನ್‌ಗೆ ಟ್ಯಾಕ್ಸಿ ಶುಲ್ಕ ಸುಮಾರು 400 ರೂ. ಆಗಬಹುದು. ನೆರಾಲ್‌ನಿಂದ ಮಾಥೆರಾನ್‌ನ ಮುಖ್ಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಲು ಮಿನಿ ಟ್ರೈನ್‌ ಕೂಡಾ ಇದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಾಥೆರಾನ್‌ಗೆ ಹತ್ತಿರವಿದ್ದು, ಇದು ಸುಮಾರು 100 ಕಿ.ಮೀ ದೂರದಲ್ಲಿದೆ. ಮುಂಬೈ ವಿಮಾನ ನಿಲ್ದಾಣದಿಂದ ಮಾಥೆರಾನ್‌ಗೆ ಸರಾಸರಿ ಟ್ಯಾಕ್ಸಿ ಶುಲ್ಕವು ರೂ. 2000 ಆಗಬಹುದು. ಪುಣೆ ವಿಮಾನ ನಿಲ್ದಾಣವು ಇನ್ನೂ ಒಂದು ಆಯ್ಕೆಯಾಗಿದ್ದು ಇದು ಸುಮಾರು 120 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ

ಮಾಥೆರಾನ್ ಲೇಖನಗಳು

One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed