Search
 • Follow NativePlanet
Share
ಮುಖಪುಟ » ಸ್ಥಳಗಳು» ಕರ್ಜಾತ್

ಅವಲೋಕನ – ಕರ್ಜಾತ್

7

ಹಲವರಿಗೆ ಸಾಹಸಮಯ ಆಟಗಳಲ್ಲಿ, ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದೆಂದರೆ ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಕೆಲವರು ಸ್ನೇಹಿತರ ಜೊತೆಗೂಡಿ ಪ್ರತೀ ವರ್ಷ ಚಾರಣಕ್ಕೆ ಹೋಗುವ ಹವ್ಯಾಸವನ್ನೂ ರೂಢಿಸಿಕೊಂಡಿರುತ್ತಾರೆ. ಇಂತಹ ಹವ್ಯಾಸಗಳಿಗೆ ಪುಷ್ಠಿ ನೀಡುವಂತಹ ಹಲವಾರು ಸ್ಥಳಗಳು ಭಾರತದಲ್ಲಿರುವುದು ಹೆಮ್ಮೆಯ ವಿಷಯ. ದೇಶೀಯರು ಮಾತ್ರವಲ್ಲದೇ ವಿದೇಶಿಯರೂ ಕೂಡಾ ಚಾರಣ ಮೊದಲಾದ ಸಾಹಸ ಚಟುವಟಿಕೆಗಳಿಗಾಗಿ ನಮ್ಮ ದೇಶಕ್ಕೆ ಆಗಮಿಸುತ್ತಾರೆ !

ಹೀಗೆ ದೇಶಿಯ ಮಾತ್ರವಲ್ಲದೇ ವಿದೇಶಿಯರನ್ನೂ ಆಕರ್ಷಿಸುವಂತಹ ಚಾರಣ ಸೂಕ್ತ ಸ್ಥಳ ಮಹಾರಾಷ್ಟ್ರದ ಕರ್ಜಾತ್ ಪಟ್ಟಣ. ವರ್ಷದ ಹೆಚ್ಚಿನ ಎಲ್ಲಾ ತಿಂಗಳುಗಳಲ್ಲಿಯೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದವನೇ ಧನ್ಯ! ವಯಸ್ಕರಂತೂ ಈ ಸ್ಥಳಕ್ಕೆ ಬರಲು ಸದಾ ಹವಣಿಸುತ್ತಾರೆ. ಇಂತಹ ಅದ್ಭುತ ಪರಿಸರವನ್ನು ಹೊಂದಿರುವ ಕರ್ಜಾತ್ ಗೆ ನೀವು ಒಮ್ಮೆ ಭೇಟಿ ನೀಡಿ !

ಮಹಾರಾಷ್ಟ್ರ ರಾಜ್ಯದ  ರಾಯಗಡ ಜಿಲ್ಲೆಯ ಉಪ ಜಿಲ್ಲೆ ಹಾಗೂ ಪ್ರಮುಖ ಪಟ್ಟಣವಾದ ಕರ್ಜಾತ್ ಪರ್ವತ ಪ್ರದೇಶದಲ್ಲಿದ್ದು, ಚಿತ್ರ ಸದೃಶ ಕೇಂದ್ರವಾಗಿದೆ. ಇದು ಭವ್ಯ ಸಹ್ಯಾದ್ರಿ ಶ್ರೇಣಿಗಳು, ಪಶ್ಚಿಮ ಘಟ್ಟಗಳು ಮತ್ತು ಭೋರ್ ಘಾಟ್ ಪ್ರದೇಶಗಳಲ್ಲಿ ಆವರಿಸಿದೆ. ಉಲ್ಲಾಸ್ ನದಿಯ ದಂಡೆಯ ಮೇಲೆ ನೆಲೆಯಾಗಿದ್ದು ಕೊಂಕಣ ಪ್ರದೇಶದಲ್ಲಿ ಈ ಪಟ್ಟಣವನ್ನು ಕಾಣಬಹುದು. ಕರ್ಜಾತ್ ಪಟ್ಟಣವು ಸಮೃದ್ಧ ಸಸ್ಯ ಸಂಪತ್ತನ್ನು ಹೊಂದಿದ್ದು ಇದರ ವಿಹಂಗಮ ನೋಟ ಮನಸೂರೆಗೊಳ್ಳುವಂತದ್ದು. ಕಲ್ಲು ಬಂಡೆಗಳ ಭೂಪ್ರದೇಶಗಳು, ಮಳೆಗಾಲದಲ್ಲಿ ತುಂಬಿ ಹರಿಯುವ ಜಲಪಾತಗಳು ಅನುಪಮವಾಗಿವೆ. 

ಸಾಹಸದ ಕೇಂದ್ರ – ಕರ್ಜಾತ್

ಕರ್ಜಾತ್ ಮುಂಬೈ ಮಹಾನಗರದಿಂದ 55 ಕಿ.ಮೀ ದೂರದಲ್ಲಿದೆ. ಕರ್ಜಾತ್ ಪಟ್ಟಣವು ಹೊರಾಂಗಣ ಚಟುವಟಿಕೆಗಳನ್ನು ಹಾಗೂ ಸಾಹಸಗಳನ್ನು ಇಷ್ಟ ಪಡುವವರಿಗೆ ಪರಿಪೂರ್ಣ ಪ್ರಯಾಣದ ಸವಿಯನ್ನು ಉಣಿಸುತ್ತದೆ. ಕರ್ಜಾತ್ ಪಟ್ಟಣವು ಸಾಹಸ ಚಟುವಟಿಕೆಗಳು ಹಾಗೂ ಇನ್ನಿತರ ಉತ್ತಮ ಕಾರಣಗಳಿಗೆ ಮಹಾರಾಷ್ಟ್ರದ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಈ ದೃಶ್ಯ ಗಿರಿಧಾಮವು ಅಡ್ರಿನಲೈನ್ ರಷ್ ಚಟುವಟಿಕೆಗಳಿಗೆ ಹೆಸರುವಾಸಿ. 

ಕರ್ಜಾತ್ ನಲ್ಲಿ ಟ್ರಕ್ಕಿಂಗ್ / ಚಾರಣಕ್ಕೆ ಹೆಚ್ಚು ಬೇಡಿಕೆಯಿದೆ. ಇದು ಸಾಹ ಪ್ರಿಯರಿಗೆ ಚಾರಣ ಮಾಡಲು ಇಷ್ಟವಿರುವ ತಾಣವಾಗಿದ್ದು ಚಾರಣದಲ್ಲಿ ಅನನುಭವಿಗಳಿಗೆ ಹಾಗೂ ಚಾರಣ ನಿರತರಿಗೆ ಬೇರೆ ಬೇರೆ ಚಾರಣ ಮಾರ್ಗಗಳನ್ನು ಒದಗಿಸುತ್ತದೆ. ಚಾರಣ ಮಾಡುವ ಮಾರ್ಗದಲ್ಲಿ ಪರಿಸರವು ಹಚ್ಚ ಹಸಿರಿನಿಂದ ಕೂಡಿದ್ದು , ಮಾರ್ಗದುದ್ದಕ್ಕೂ ಹೊದ್ದಿಕೊಂಡಂತಿರುವ ಸುಂದರ ನೋಟ ಗೋಚರಿಸುತ್ತದೆ. ಇದು ಕೇವಲ ಚಾರಣ ಪ್ರಿಯರಿಗೆ ಮಾತ್ರವಲ್ಲದೇ ನಿಸರ್ಗವನ್ನು ಇಷ್ಟ ಪಡುವವರಿಗೂ ತೃಪ್ತಿಯನ್ನು ನೀಡುತ್ತದೆ.

ಕರ್ಜಾತ್ ಗೆ ಬಂದರೆ, ಉಲ್ಲಾಸ್ ನದಿಯಲ್ಲಿ ರೋಮಾಂಚನಕಾರಿಯಾದ ವಾಟರ್ ರಾಫ್ಟಿಂಗ್ (ನೀರಿನಲ್ಲಿ ತೆಪ್ಪದ ಮೇಲೆ ಹೋಗುವುದು)ಮಾಡಬಹುದು. ಅಲ್ಲದೆ ಇಲ್ಲಿನ ಪುರಾತನ ಸ್ಮಾರಕಗಳಾದ ಪೇಟ್ ಕೋಟೆ ಅಥವಾ ಬೌದ್ಧ ಸ್ಮಾರಕಗಳಿರುವ ಕುಂದನ ಗುಹೆಗಳನ್ನು ಕಾಣಬಹುದು. ಗುಹೆಗಳಲ್ಲಿ ಪತ್ತೆಯಾದ ಕಲಾತ್ಮಕ ಶಿಲ್ಪಗಳು ಹಾಗೂ ವರ್ಣಚಿತ್ರಗಳು ಇತಿಹಾಸದಲ್ಲಿ ಆಸಕ್ತಿಯಿರುವ ಅಥವಾ ವಾಸ್ತುಶಿಲ್ಪ ಉತ್ಸಾಹಿಗಳಿಗೆ ಅತ್ಯಂತ ಇಷ್ಟವಾಗುತ್ತವೆ. ಜೊತೆಗೆ ಪೇಟ್ ಕೋಟೆಯ ಮೇಲೆ ನಿಂತು ನೋಡಿದರೆ ಸುತ್ತಲಿನ ಅಗಮ್ಯ ಪರಿಸರ ಪ್ರವಾಸಿಗರನ್ನು ಬೆರಗು ಗೊಳಿಸುತ್ತದೆ.

ಸುಮಾರು 200 ಮೀಟರ್ ಎತ್ತರದಲ್ಲಿರುವ ಕರ್ಜಾತ್ ಸಾಂಪ್ರದಾಯಿಕ ಹಳ್ಳಿಯಂತಿದ್ದು ಪ್ರಕೃತಿ ಸೌಂದರ್ಯದ ಜೊತೆಗೆ ಐತಿಹಾಸಿಕ ಜನಪ್ರಿಯತೆಯನ್ನೂ ಗಳಿಸಿದೆ. ಕರ್ಜಾತ್, ಸಹಜವಾದ ಆನಂದವನ್ನು ಅನುಭವಿಸುವಂತಹ ಶಾಂತವಾದ ನೆನಪುಗಳನ್ನು ಅಥವಾ ಅಡ್ರಿನಾಲಿನ್ ಪಂಪ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳನ್ನು ಪ್ರವಾಸಿಗರಿಗೆ ನೀಡುತ್ತದೆ.

ಕರ್ಜಾತ್ ಪ್ರಸಿದ್ಧವಾಗಿದೆ

ಕರ್ಜಾತ್ ಹವಾಮಾನ

ಕರ್ಜಾತ್
27oC / 80oF
 • Partly cloudy
 • Wind: NNW 6 km/h

ಉತ್ತಮ ಸಮಯ ಕರ್ಜಾತ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕರ್ಜಾತ್

 • ರಸ್ತೆಯ ಮೂಲಕ
  ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಪ್ರವಾಸಿ ಬಸ್ಗಳು ರಸ್ತೆ ಮೂಲಕ ಮಹಾರಾಷ್ಟ್ರ ರಾಜ್ಯದ ಇತರ ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಕರ್ಜಾತ್ ಪಟ್ಟಣವನ್ನು ಸಂಪರ್ಕಿಸುತ್ತವೆ. ಪ್ರತಿದಿನವು ಮುಂಬೈ, ಪುಣೆ, ಪನ್ವೇಲ್ ಮತ್ತು ಕರ್ಜಾತ್ ನಡುವೆ ನಿಯಮಿತವಾಗಿ ಬಸ್ ಸೌಲಭ್ಯಗಳಿವೆ. ಒಟ್ಟಿನಲ್ಲಿ ಪ್ರವಾಸಿಗರಿಗೆ ಉತ್ತಮವಾದ ಎಲ್ಲಾ ಬಗೆಯ ಸಾರಿಗೆ ವ್ಯವಸ್ಥೆಯೊಂದಿಗೆ ಕರ್ಜಾತ್ ಸ್ಥಳಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ವಾತಾವರಣವನ್ನು ಇಷ್ಟಪಡುವ ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಬರುತ್ತಾರೆ. ಇಲ್ಲಿನ ಕಲ್ಲು ಬಂಡೆಗಳ ಕಡಿದಾದ ದಾರಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅಲ್ಲದೆ, ಮಕ್ಕಳಿಗೆ ಇಷ್ಟವಾಗುವಂತಹ ವನ್ಯಮೃಗ ತಾಣವನ್ನೂ ಇಲ್ಲಿ ವೀಕ್ಷಿಸಬಹುದು. ಆದ್ದರಿಂದ ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಅನುಕೂಲಕರ ವಾತಾವರಣವನ್ನು ಗೊತ್ತು ಮಾಡಿಕೊಂಡು ಕರ್ಜಾತ್ ಪಟ್ಟಣದಲ್ಲಿ ಕಾಲ ಕಳೆಯುವುದಕ್ಕೆ ಬರುವುದು ಒಳಿತು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮುಂಬೈನ ರೈಲ್ವೆ ವಿಭಾಗದಡಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣವನ್ನು ಕರ್ಜಾತ್ ಪಟ್ಟಣ ಹೊಂದಿದೆ. ದೈನಂದಿನ ರೈಲುಗಳ ಮೂಲಕ ಮಹಾರಾಷ್ಟ್ರದ ಒಳಗಿನ ಹಾಗೂ ಹೊರ ರಾಜ್ಯಗಳ ನಗರಗಳೊಂದಿಗೆ ಸಂಪರ್ಕ ಕಲ್ಪಿಸಲಾಗಿದೆ. ಪ್ರವಾಸಿಗರು ಕರ್ಜಾತ್ ಗೆ ಸುಲಭವಾಗಿ ತಲುಪಲು ರೈಲ್ವೆ ನಿಲ್ದಾಣದ ಹೊರಗೆ ಟ್ಯಾಕ್ಸಿಗಳು ದೊರೆಯುತ್ತವೆ. ಅಲ್ಲದೇ, ಕರ್ಜಾತ್ ಪಟ್ಟಣವು ಲೊನಾವಲಾ ಹಾಗೂ ಖಾಂಡಾಲಾ ಪ್ರದೇಶಗಳಿಗೆ ಹತ್ತಿರದಲ್ಲಿರುವುದರಿಂದ ಪುಣೆಯಿಂದ ಬರುವ ರೈಲುಗಳೂ ಕೂಡಾ ಲಭ್ಯ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬೈ ನಗರದ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣವು ಅತ್ಯಂತ ಹತ್ತಿರದ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇದು ಕರ್ಜಾತ್ ನಿಂದ 90 ಕಿ.ಮೀ ಅಂತರದಲ್ಲಿದೆ. ಈ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ದೇಶದಲ್ಲಿನ ಪ್ರಮುಖ ನಗರಗಳಿಗೆ ಮಾತ್ರವಲ್ಲದೇ ವಿದೇಶಗಳಿಗೂ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಕರ್ಜಾತ್ ಗೆ ಸುಲಭವಾಗಿ ತಲುಪಲು ವಿಮಾನ ನಿಲ್ದಾಣದ ಹೊರಗೆ ಟ್ಯಾಕ್ಸಿ ಮತ್ತಿತರ ವಾಹನಗಳು ದೊರೆಯುತ್ತವೆ. ಟ್ಯಾಕ್ಸಿಯ ಸರಾಸರಿ ಶುಲ್ಕ1700 ರೂ. ಗಳಷ್ಟಾಗಬಹುದು.
  ಮಾರ್ಗಗಳ ಹುಡುಕಾಟ

ಕರ್ಜಾತ್ ಲೇಖನಗಳು

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Karjat
  27 OC
  80 OF
  UV Index: 8
  Partly cloudy
 • Tomorrow
  Karjat
  25 OC
  77 OF
  UV Index: 8
  Partly cloudy
 • Day After
  Karjat
  25 OC
  77 OF
  UV Index: 7
  Partly cloudy