Search
 • Follow NativePlanet
Share

ಸಜನ್‌: ಹಣ್ಣುಗಳ ಕಾಡಲ್ಲೊಂದು ಸುಂದರ ನಗರಿ

8

ಸಜನ್‌ ಮಹಾರಾಷ್ಟ್ರ ರಾಜ್ಯದ ಥಾಣೆ ಜಿಲ್ಲೆಯ ಒಂದು ಅತ್ಯಂತ ಚಿಕ್ಕ ಪಟ್ಟಣ. ಇದನ್ನು ಸಾಜನ್‌ ಅಂತಲೂ ಕರೆಯುವುದುಂಟು. ಮುಂಬೈ ಮಹಾನಗರಿಯಿಂದ ಈ ಪಟ್ಟಣ ಸುಮಾರು 135 ಕಿ.ಮೀ. ದೂರದಲ್ಲಿದೆ.

ಇಡಿ ಸಜನ್‌ ಪಟ್ಟಣದ ಸುತ್ತಲಿನ ಪ್ರದೇಶ ದಟ್ಟವಾಗಿ ಮಾವು ಹಾಗೂ ಚಿಕ್ಕು ಮರಗಳ ತೋಟದಿಂದ ಆವೃತ್ತವಾಗಿದೆ. ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲಿ ಹಣ್ಣಿನ ತೋಟಗಳು ಕಾಣಸಿಗುತ್ತವೆ.

ಐತಿಹಾಸಿಕವಾಗಿ ಅರ್ಥಗರ್ಭಿತ

ಚೆರುಸೋನಿಸಸ್‌ ಎಂದೇ ಕರೆಯಲ್ಪಡುತ್ತಿದ್ದ ಪುಟೊಲೋಮಿಗಳ ಆಶ್ರಯದಲ್ಲಿ ಸಿದ್ಧವಾದ ಧರ್ಮಗ್ರಂಥದಲ್ಲಿ ಇದರ ಹಿಂದಿನ ಮಾಹಿತಿಗಳು ದಾಖಲೆಯಾಗಿವೆ. ಇಲ್ಲಿ ಕೊಹೋಜ್‌ ಕೋಟೆ ಅತ್ಯಂತ ಪ್ರಸಿದ್ಧ ಹಾಗೂ ಪುರಾತನ ಕುರುಹಾಗಿದ್ದು, ದೊಡ್ಡ ಗುಡ್ಡದ ಮೇಲೆ ಸ್ಥಾಪಿತವಾಗಿದೆ. ಇದನ್ನು ಬೋಜ ಅರಸರ ಕಾಲದಲ್ಲಿ ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ.

ಇಲ್ಲಿಗೆ ಪೋರ್ಚುಗೀಸರು ಬಂದ ಸಂದರ್ಭದಲ್ಲಿ ಅಂದರೆ 1530 ರಲ್ಲಿ ಸಜನ್‌ ಪಟ್ಟಣವನ್ನು ಥಾಣಾ ಮಯಂಬು ಎಂದು ಹೆಸರಿನಿಂದ ಗುರುತಿಸಿದ್ದರು. ನಂತರದ ದಿನಗಳಲ್ಲಿ ಇದು ಮುಸ್ಲಿಂ ಆಳ್ವಿಕೆಗೆ ಒಳಪಟ್ಟಿತು. ಈ ಆಳ್ವಿಕೆ ಸರಿಸುಮಾರು 360 ವರ್ಷ ಇತ್ತು. ಅಂದರೆ 1300 ರಿಂದ 1660ರವರೆಗೆ. ನಂತರ ಈ ಭಾಗವನ್ನು ಮರಾಠರು ತಮ್ಮ ವಶಕ್ಕೆ ತೆಗೆದುಕೊಂಡರು. ಇಲ್ಲಿ ತಮ್ಮ ಪ್ರಭುತ್ವವನ್ನು ಅವರು 1660 ರಿಂದ 1800 ರವರೆಗೆ ಮುಂದುವರಿಸಿದರು. ನಂತರ ಬ್ರಿಟಿಷರು ತಮ್ಮ ವಶಕ್ಕೆ ಈ ಪ್ರದೇಶವನ್ನು ಪಡೆದುಕೊಂಡರು.

ಸಜನ್‌ ವರ್ಷದ ಎಲ್ಲಾ ದಿನವೂ ಪ್ರವಾಸಿಗರಿಂದ ತುಂಬಿರುತ್ತದೆ. ದೇಶದೆಲ್ಲೆಡೆಯಿಂದ ಇಲ್ಲಿಗೆ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಒಂದು ನಿಟ್ಟಿನಲ್ಲಿ ಇದು ಟೂರಿಸಂ ಹಬ್‌ ಆಗಿ ಪರಿವರ್ತನೆಗೊಂಡಿದೆ. ಮುಂಬೈಗೆ ಹೋಲಿಸಿದರೆ, ಅದರಷ್ಟೇ ಪ್ರಮುಖ ತಾಣವಾಗಿ ಮಹಾರಾಷ್ಟ್ರದಲ್ಲಿ ಈ ಪಟ್ಟಣ ಗುರುತಾಗುತ್ತಿದೆ ಎಂದರೆ ಅಚ್ಚರಿಯಾಗದೆ ಇರಲಾರದು.

ನಿಸರ್ಗದೊಂದಿಗೆ ಧರ್ಮದ ಸಮಾಗಮ

ಇಲ್ಲಿ ಸ್ಥಳ ವೀಕ್ಷಣೆಗೆ ಇಂಬು ಕೊಡುವ ಅನೇಕ ತಾಣಗಳಿವೆ. ಇದರಲ್ಲಿ ಆಕರ್ಷಕ ಹಾಗೂ ಧಾರ್ಮಿಕ ತಾಣಗಳು ಸೇರಿಕೊಂಡಿವೆ. ನಿಸರ್ಗ ಪ್ರೇಮಿಗಳಿಗೆ ರಂಜನೆ ನೀಡುವ ಪಲೂಸಾ ಜಲಪಾತವಿದೆ. 60 ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಸದಾ ಧಾರೆಯಾಗಿ ಧುಮ್ಮಿಕ್ಕುವ ನೀರು ಎಂದೂ ಬತ್ತುವುದಿಲ್ಲ. ಇಲ್ಲಿರುವ ಮೋಹೊ ಕುರ್ಡ ಆಣೆಕಟ್ಟು ಇನ್ನೊಂದು ಆಕರ್ಷಣೆ. ನೈಸರ್ಗಿಕ ಸೌಂದರ್ಯವನ್ನು ಮೈವೆತ್ತಿ ನಿಂತಿರುವ ಈ ಸ್ಥಳ ಕುಟುಂಬದವರೊಂದಿಗೆ ಒಂದು ದಿನ ಆರಾಮವಾಗಿ ಕಳೆಯಲು ಪ್ರಶಸ್ತ ತಾಣ.

ಹುಲಿ ಧಾಮ ಹಾಗೂ ಕೋಹೋಜ್‌ ಗುಡ್ಡದ ಕೋಟೆಗಳು ಇಲ್ಲಿನ ಐತಿಹಾಸಿಕ ಪ್ರಸಿದ್ಧ ತಾಣಗಳು. ಇತಿಹಾಸ ತಜ್ಞರಿಗೆ, ಸಂಶೋಧಕರಿಗೆ ಇದು ಉತ್ತಮ ಸ್ಥಳ. ಪೇಶ್ವಾ ದೇವಾಲಯ ಹಾಗೂ ಮಹಾಲಕ್ಷ್ಮಿ ದೇವಾಲಯಗಳು ಸಜನ್‌ನ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ. ಇಲ್ಲಿ ವಾರ್ಷಿಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಾರೆ.

ಇಲ್ಲಿಗೆ ವಾಯು, ರೈಲು ಹಾಗೂ ರಸ್ತೆ ಮಾರ್ಗದಲ್ಲಿ ಸುಗಮವಾಗಿ ತಲುಪಬಹುದು. ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಸಜನ್‌ ಹೊಂದಿದೆ. ವರ್ಷದ ಎಲ್ಲಾ ಸಮಯದಲ್ಲೂ ಇಲ್ಲಿ ಬಂದು ವಿಹರಿಸಲು ಹೇಳಿ ಮಾಡಿಸಿದ ತಾಣಗಳಿವೆ.

ಸಜನ್ ಪ್ರಸಿದ್ಧವಾಗಿದೆ

ಸಜನ್ ಹವಾಮಾನ

ಉತ್ತಮ ಸಮಯ ಸಜನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಸಜನ್

 • ರಸ್ತೆಯ ಮೂಲಕ
  ಸಜನ್‌ಗೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾಕಷ್ಟು ಉತ್ತಮ ರಸ್ತೆ ಸಂಪರ್ಕವಿದೆ. ಇಲ್ಲಿಗೆ ಬಸ್‌ ಸೌಲಭ್ಯವೂ ಉತ್ತಮವಾಗಿದ್ದು ಎಲ್ಲೆಡೆಯಿಂದ ಹವಾನಿಯಂತ್ರಿತ ಹಾಗೂ ಹವಾನಿಯಂತ್ರಣ ರಹಿತ ಡಿಲಕ್ಸ್‌ ವಾಹನಗಳು ಲಭ್ಯವಿದೆ. ಸಾಮಾನ್ಯ ಬಸ್‌ ದರ ಪ್ರತಿ ಕಿ.ಮಿ.ಗೆ 3 ರಿಂದ 4 ರೂ.ಆಗಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಜನ್‌ಗೆ ಅತ್ಯಂತ ಸಮೀಪದ ರೈಲು ನಿಲ್ದಾಣ ಥಾಣೆ. ಈ ರೈಲು ನಿಲ್ದಾಣ ಮುಂಬಯಿಗೆ ಸಂಪರ್ಕ ಹೊಂದಿದೆ. ಇದಲ್ಲದೆ ಇತರೆ ಪ್ರಮುಖ ರೈಲು ನಿಲ್ದಾಣಗಳಿಂದಲೂ ಇಲ್ಲಿಗೆ ಸಂಪರ್ಕವಿದೆ. ಇದು ಮಹಾರಾಷ್ಟ್ರ ಹಾಗೂ ಅನ್ಯ ರಾಜ್ಯದಿಂದ ಕೂಡ. ಥಾಣೆ ನಿಲ್ದಾಣದಿಂದ ಸಜನ್‌ಗೆ ತಲುಪಲು ಟ್ಯಾಕ್ಸಿ ಸೌಲಭ್ಯವಿದೆ. ಟ್ಯಾಕ್ಸಿಗಳಿಂದ ಸಜನ್ ಗೆ ತಲುಪಲು ಅಂದಾಜು ಸುಮಾರು 200 ರೂ. ಆಗಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಜನ್‌ ನಿಂದ 35 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ನಿತ್ಯ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ಆಗಮಿಸುತ್ತಿದ್ದು, ಉತ್ತಮ ಸಂಪರ್ಕ ಹೊಂದಿದೆ. ಪ್ರಮುಖ ರಾಷ್ಟ್ರಗಳಾದ ಸಿಂಗಪೂರ್‌, ದುಬೈ, ಕೊಲಂಬೊ, ಹಾಂಕ್‌ಕಾಂಗ್‌ ಮತ್ತಿತರ ಕಡೆಗಳಿಂದ ಇಲ್ಲಿಗೆ ಉತ್ತಮ ಸಂಪರ್ಕವಿದೆ. ವಿಮಾನ ನಿಲ್ದಾಣದಿಂದ ಸಜನ್‌ಗೆ ತಲುಪಲು ಟ್ಯಾಕ್ಸಿ ಸೌಲಭ್ಯ ಉತ್ತಮವಾಗಿದೆ. ಇದಕ್ಕೆ ಖರ್ಚು ಸಹ ಕಡಿಮೆ ಇದ್ದು 2,500 ರೂ. ಆಗಲಿದೆ. ಮುಂಬೈ ವಿಮಾನ ನಿಲ್ದಾಣ ಮಾತ್ರವಲ್ಲದೆ, ಪುಣೆಯ ಲೋಹೆಗಾಂವ್ ವಿಮಾನ ನಿಲ್ದಾಣ ಕೂಡ ಸಜನ್ ಗೆ ಹತ್ತಿರವಿರುವ ದೇಸೀಯ ವಿಮಾನ ನಿಲ್ದಾಣ. ಇನ್ನು ಮತ್ತೊಂದು ವಿಮಾನ ನಿಲ್ದಾಣ ನಾಶಿಕ್‌ನ ಗಾಂಧಿನಗರ ವಿಮಾನ ನಿಲ್ದಾಣ. ಇವುಗಳಲ್ಲದೆ ಇನ್ನೂ ಕೆಲ ಡೊಮೆಸ್ಟಿಕ್‌ ವಿಮಾನ ನಿಲ್ದಾಣಗಳು ಇದಕ್ಕೆ ಸಮೀಪದಲ್ಲಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Jun,Tue
Return On
16 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Jun,Tue
Check Out
16 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Jun,Tue
Return On
16 Jun,Wed