ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.
ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕಟ್ಟಡ. ಹಾಗೆಂದು ಇಲ್ಲಿ ಕೇವಲ ತಾಜ್ ಮಹಲ್ ಮಾತ್ರ ಇಲ್ಲ. ಆಗ್ರಾದಲ್ಲಿ ತಾಜ್ ಮಹಲ್ ಹೊರತಾಗಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳು......
ಅಹಮದಾಬಾದ್ : ಒಂದು ಉದಯೋನ್ಮುಖ ನಗರದ ಕತೆ
ಅಹಮದಾಬಾದ್ ಎಂಬುದು ಒಂದು ವಿರೋಧಾಭಾಸಗಳನ್ನು ತನ್ನಲ್ಲಿ ಒಳಗೊಂಡಿರುವ ನಗರವಾಗಿದೆ. ಇಲ್ಲಿ ಒಂದಕ್ಕೊಂದು ತದ್ವಿರುದ್ಧವಾಗಿರುವ ಅಂಶಗಳು ಅಕ್ಕ ಪಕ್ಕದಲ್ಲಿಯೇ ನೆಲೆಗೊಂಡಿವೆ. ಇಲ್ಲಿ ಒಂದೆಡೆ ನಾವು ಭಾರತದ ಉದ್ಯಮಶೀಲತೆಯನ್ನು ಬೆಳಗಿದ ಗುಜರಾತಿಗಳನ್ನು ನೋಡಿದರೆ ಮತ್ತೊಂದೆಡೆ ಸತ್ಯಾಗ್ರಹ ಹಾಗು ಅಹಿಂಸೆ ಎಂಬ ಆಯುಧಗಳನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯವರನ್ನು ನಾವು......
ಅಜಂತಾ - ವಿಶ್ವದ ಒಂದು ಪಾರಂಪರಿಕ ತಾಣ
ಕ್ರಿ.ಪೂ 2 ನೇ ಶತಮಾನದಷ್ಟು ಹಿನ್ನೆಲೆಯುಳ್ಳ , ಅಜಂತಾ ಗುಹೆಗಳು ಹಿಂದು ಧರ್ಮ, ಬೌದ್ಧ ಮತ್ತು ಜೈನ್ ಧರ್ಮಗಳಿಗೆ, ಸಾಕ್ಷಿಯಾಗಿ ನಿಂತಿದೆ. ಮಹಾರಾಷ್ಟ್ರ ರಾಜ್ಯದ ಪ್ರಮುಖ ನಗರವಾದ ಔರಂಗಾಬಾದಿನ ಹತ್ತಿರವಿರುವ ಐತಿಹಾಸಿಕ ತಾಣವಾದ ಎಲ್ಲೋರ ಗುಹೆಗಳ ಜೊತೆಗೆ ಅಜಂತ ಗುಹೆಗಳೂ ಸಹ ಪ್ರಪಂಚದ ಒಂದು ಪ್ರಸಿದ್ದ ಪಾರಂಪರಿಕ ಕ್ಷೇತ್ರವೆಂದು ಯುನೆಸ್ಕೋ ಸಂಸ್ಥೆಯಿಂದ......
ಅಲ್ಮೋರಾ - ಸಾಹಸಕ್ಕೂ ಜೈ ವಿರಾಮಕ್ಕೂ ಜೈ
ಸುಂದರ ಹಿಮಾಲಯದ ಬೆಳ್ಳನೆಯ ಹಿಮದಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಇಂತಹ ಅನುಭವವನ್ನು ನೀವು ಪಡೆಯಬೇಕೆಂದರೆ... ಇಗೊ, ಅಲ್ಮೋರಾ ಗಿರಿಧಾಮ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ. ಇಲ್ಲಿನ ಸೈಸರ್ಗಿಕ ಸೌಂದರ್ಯ ಎಂತಹವರನ್ನಾದರೂ ಮೌನಿಯನ್ನಾಗಿಸಿ ಬಿಡುತ್ತದೆ! ಕುದುರೆಯ ಜೀನು ಆಕಾರದ ಪರ್ವತ ಅಲ್ಮೋರಾ, ಕುಮಾವೂನ್ ಪ್ರದೇಶದ ಜನಪ್ರಿಯ ಗಿರಿಧಾಮ.......
ಅಲಾಂಗ್ - ಕಣಿವೆಗಳ ಕಣ ಕಣಗಳಲ್ಲಿ ಚೆಲುವಿನ ಚಿತ್ತಾರ
ಅರುಣಾಚಲ್ ಪ್ರದೇಶದಲ್ಲಿರುವ ಪಶ್ಚಿಮ ಸಿಯಂಗ್ ಜಿಲ್ಲೆಯಲ್ಲಿನ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಅಲಾಂಗ್ ಎಂಬುದು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ ಒಂದು ಸುಂದರವಾದ ಪಟ್ಟಣವಾಗಿದೆ. ಈ ಪಟ್ಟಣವು ಸಿಯಂಗ್ ನದಿಯ ಉಪನದಿಗಳಾದ ಯೊಮ್ಗೊ ಮತ್ತು ಸಿಪು ನದಿಗಳ ದಂಡೆಯಲ್ಲಿ, ಅಸ್ಸಾಂ ಮತ್ತು ಅರುಣಾಚಲ್ ಪ್ರದೇಶದ ಗಡಿಯಲ್ಲಿ ನೆಲೆಗೊಂಡಿದೆ. ಈ ಪಟ್ಟಣವು ಸಮುದ್ರ ಮಟ್ಟದಿಂದ......
ಅಮ್ರಾವತಿ - ಧಾರ್ಮಿಕತೆಯ ತವರೂರು
ಅಮ್ರಾವತಿ ಮಹಾರಾಷ್ಟ್ರದ ಉತ್ತರ ಗಡಿಭಾಗದಲ್ಲಿರುವ ಊರಾಗಿದೆ. ಅಮ್ರಾವತಿ ಎಂದರೆ 'ಅಮರರಾದವರ ನೆಲೆ' ಎಂದು ಅರ್ಥೈಸಬಹುದು. ದಖನ್ ಪ್ರಸ್ತ ಭೂಮಿಯಲ್ಲಿರುವ ಈ ನಗರವು ಮುಖ್ಯವಾಗಿ ತಾಪಿ ಮುಖಜ ಭೂಮಿಯಲ್ಲಿ ನೆಲೆಗೊಂಡಿದೆ. ಈ ನಗರದ ಕೆಲವು ಪೂರ್ವ ಭಾಗಗಳು ವಾರ್ಧಾ ಕಣಿವೆಯಲ್ಲಿ ಇವೆ. ಮಹಾರಾಷ್ಟ್ರದ ಏಳನೇ ಅತ್ಯಂತ ಜನಸಂಖ್ಯೆ ಹೊಂದಿರುವ ನಗರವಾದ ಅಮ್ರಾವತಿಯು 12,626......
ಅಂತರಗಂಗೆ – ಅತ್ತ್ಯುನ್ನತ ಸಾಹಸಕ್ಕೆ ಕಟ್ಟಕಡೆಯ ಸ್ಥಳ
ಎಂತಹ ಸಾಹಸ ಪ್ರಿಯರ ಮನವನ್ನೇ ಆಗಲಿ ಸೆಳೆಯುವ ಶಕ್ತಿಯುಳ್ಳ ಸ್ಥಳ ಅಂತರಗಂಗೆ. ಕರ್ನಾಟಕದ ಕೋಲಾರ ಜಿಲ್ಲೆಯ ಪೂರ್ವದಲ್ಲಿರುವ ಶಿಖರಗಳ ಮೇಲಿರುವ ಸದಾ ಹರಿವ ಸಣ್ಣ ಹೊಳೆಯಿಂದ ಅಂತರಗಂಗೆ ಎಂಬ ಹೆಸರು ಬಂದಿದೆ. ಬೃಹತ್ತಾದ ಬಂಡೆಗಳ ರಚನೆಗಳಿಂದ ಸೃಷ್ಟಿಯಾಗಿರುವ ಸಣ್ಣ ಮತ್ತು ದೊಡ್ಡ ಗುಹೆಗಳ ನಡುವೆ ಈ ಝರಿಯೂ ಹರಿಯುತ್ತಾ ಸಾಗುತ್ತದೆ. ಈ ಪರ್ವತ ಶ್ರೇಣಿಯ ಅಡಿಯಲ್ಲಿ......
ಅರಿಟಾರ್ - ಮಿತಿಯಿಲ್ಲದ ಸೌಂದರ್ಯ !
ಕೆಲವು ಸ್ಥಳಗಳು ದೈವದತ್ತ. ಯಾಕೆಂದರೆ ಇಂತಹ ಸ್ಥಳಗಳಲ್ಲಿರುವ ಹಸಿರು ಸಿರಿ ಎಲ್ಲರ ಮೈಮನ ತಣಿಸುವಂತದ್ದು. ಇನ್ನೂ ಕೆಲವು ಸ್ಥಳಗಳು ಪ್ರಕೃತಿಯ ತುಂಬಿದ ಒಡಲು. ಇಂತಹ ಅದ್ಭುತ ಸ್ಥಳಗಳಲ್ಲಿ ಸಮಯ ಕಳೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬನ್ನಿ, ಸಮೃದ್ಧ ಸೌಂದರ್ಯ ನಗರಿ ಅರಿಟಾರ್ ನ್ನೊಮ್ಮೆ ಸುತ್ತಿ ಬರೋಣ! ತನ್ನ ಸ್ವಾಭಾವಿಕ ಸೌಂದರ್ಯ ಮತ್ತು ಶ್ರೀಮಂತ......
ಅತ್ತಿರಪಲ್ಲಿ: ಥ್ರಿಲ್ಲಿಂಗ್ ಅನುಭವದ ಮಹಾಪೂರ ಹರಿಸುವ ತಾಣ.
ತ್ರಿಶೂರ್ ಜಿಲ್ಲೆಯ ಮುಕುಂದಪುರಂ ತಾಲೂಕಿನಲ್ಲಿ ಅತ್ತಿರಪಲ್ಲಿ ಇದೆ. ತ್ರಿಶೂರ್ನಿಂದ 60 ಕಿ.ಮೀ. ದೂರದಲ್ಲಿರುವ ಈ ಊರು ಮೊದಲ ದರ್ಜೆಯ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. ಕೊಚ್ಚಿಯಿಂದ 70 ಕಿ.ಮೀ. ದೂರದಲ್ಲಿ ಈ ತಾಣ ಇದೆ. ಆಕರ್ಷಕ ಜಲಪಾತ ಹಾಗೂ ಮಳೆಕಾಡಿನಿಂದ ಇದು ಜನಪ್ರಿಯವಾಗಿದೆ. ಅತ್ಯಂತ ಶ್ರೀಮಂತ ಜೈವಿಕ ಸಂಪನ್ಮೂಲ ಒಳಗೊಂಡ......
ಔಲಿ - ಸಖತ್ ಆಗಿ ಸ್ಕೇಟ್ ಮಾಡಿ
ಇಡೀ ವಿಶ್ವದಲ್ಲೇ ಔಲಿ ಸ್ಕೀಯಿಂಗ್ (ಹಿಮದ ಇಳಿಜಾರಿನಲ್ಲಿ ವಿಶೇಷವಾದ ಸಾಧನಗಳ ಮೂಲಕ ಜಾರುವುದು) ಗೆ ಅತ್ಯಂತ ಹೆಸರುವಾಸಿಯಾದ ಪ್ರದೇಶವಾಗಿದೆ. ಈ ಸುಂದರವಾದ ಪ್ರದೇಶವು ಸಮುದ್ರ ಮಟ್ಟದಿಂದ 2800 ಮೀಟರ್ ಎತ್ತರದಲ್ಲಿದ್ದು, ಓಕ್ ಹಾಗೂ ಕೋನಿಫೆರೋಸ್ ಮರಗಳ ಆಕರ್ಷಕವಾದ ನೋಟವನ್ನು ಒದಗಿಸುತ್ತದೆ. ಈ ಪ್ರದೇಶದ ಇತಿಹಾಸವು 8ನೇ ಶತಮಾನದಿಂದ ಆರಂಭವಾಗುತ್ತದೆ. ಗುರು......
ಬಾಂಧವಗಡ್: ಮಹಾರಾಜರ ಕೋಟೆ ಈಗ ಹುಲಿ ರಕ್ಷಿತಾರಣ್ಯ
ರೆವಾ ಮಹಾರಾಜರಿಗೆ ಬೇಟೆಯಾಡುವ ಪ್ರದೇಶವಾಗಿದ್ದ ಬಾಂಧವಗಡ್ ಪ್ರದೇಶ ಒಂದು ಹಳೆಯ ಕೋಟೆ. ಈ ಕೋಟೆಯನ್ನು ದಟ್ಟ ಅರಣ್ಯ ಸುತ್ತುವರಿದುಕೊಂಡಿದೆ. ಬಾಂಧವಗಡ್ ಬಿಳಿ ಹುಲಿಗಳ ಮೂಲ ಮನೆಯಾಗಿದೆ. ಇದು ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲ್ಪಡುತ್ತದೆ. ಹಿಂದೆ ಇದು ಬೇಟೆಗಾರರಿಗೂ ಅತ್ಯಂತ ಪ್ರಿಯ ಸ್ಥಳವಾಗಿತ್ತು. ಅದರೆ ಈಗ ಬೇಟೆಗೆ ಸಂಪೂರ್ಣವಾಗಿ ತೆರೆ ಬಿದ್ದಿದ್ದು, ಭಾರತ......
ಬಂಡೀಪುರ - ಕಾಡಿನೊಡನೆ ಒಂದು ಭೇಟಿ
ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ದಟ್ಟ ರಕ್ಷಿತಾರಣ್ಯವು ಹುಲಿಗಳ ವಾಸಸ್ಥಾನವೆಂದೇ ಭಾರತ ದೇಶದಲ್ಲಿ ಪ್ರಸಿದ್ಧಿ ಹೊಂದಿದೆ. ಈ ಪ್ರದೇಶವನ್ನು ಸಂರಕ್ಷಿತ ಹುಲಿಗಳ ಪ್ರದೇಶವೆಂದೆ ಕೇಂದ್ರ ಸರಕಾರ ಘೋಷಿಸಿದೆ. ನಮ್ಮ ದೇಶದ ಹೆಮ್ಮೆ ಎನಿಸಿರುವ ಸುಮಾರು 70 ಹುಲಿಗಳು, 900 ಸ್ಕೇ.ಕೀ.ಮೀ.ದಟ್ಟ ಅರಣ್ಯ ಪ್ರದೇಶ ಹೊಂದಿರುವ ಬಂಡೀಪುರದಲ್ಲಿ ವಾಸಿಸುತ್ತಿವೆ. ಈ......
ಭದ್ರಾ ವನ್ಯಜೀವಿ ಅಭಯಾರಣ್ಯ
ಸುಂದರ ಹಸಿರು ಪರಿಸರದಲ್ಲಿ ಮೈ ಚಾಚಿಕೊಂಡಿರುವ ಭದ್ರಾ ವನ್ಯಜೀವಿ ಅಭಯಾರಣ್ಯ ಪ್ರವಾಸಿಗರಿಗೆ ಉತ್ತಮ ಸ್ಥಳವಾಗಿದೆ. ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಭದ್ರಾ ಅಭಯಾರಣ್ಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿದೆ. ಈ ಅಭಯಾರಣ್ಯವನ್ನು ಇಲ್ಲಿರುವ ಕಾಡುಪ್ರಾಣಿಗಳ ರಕ್ಷಣೆ ಮತ್ತು ಹುಲಿಗಳ ಸಂರಕ್ಷಣೆಗೆಂದು ಸರಕಾರ ರಕ್ಷಿತಾರಣ್ಯವೆಂದು ಘೋಷಿಸಿ ವಿಶೇಷ ಯೋಜನೆಯ......
ಭರತ್ಪುರ್ - ಬನ್ನಿ, ಪಕ್ಷಿಗಳ ಜೊತೆ ಸುಮಧುರ ಸಮಯ ಕಳೆಯಿರಿ
ಭಾರತದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಭರತ್ಪುರ್ ಕೂಡ ಒಂದು. ಇದನ್ನು 'ರಾಜಸ್ಥಾನಕ್ಕೆ ಪೂರ್ವದ ದಾರಿ' ಎಂದೂ ಕೂಡ ಕರೆಯಲಾಗುತ್ತದೆ. ಇದು ರಾಜಸ್ಥಾನದ ಭರತ್ಪುರ್ ಜಿಲ್ಲೆಯಲ್ಲಿದೆ. 1733 ರಲ್ಲಿ ಮಹಾರಾಜಾ ಸೂರಜ್ ಮಲ್ ನಿಂದ ನಿರ್ಮಿತವಾದ ಈ ಪಟ್ಟಣ ಒಂದು ಪುರಾತನ ನಗರ. ಹಿಂದುಗಳ ದೇವತೆಯಾದ ಭಗವಾನ್ ರಾಮನ ಸಹೋದರ ಭರತನ ಗೌರವವಾಗಿ ಇದಕ್ಕೆ ಭರತ್ಪುರ್ ಎಂದು......
ಭಾವನಗರ : ಗುಜರಾತಿನ ಗೋಹಿಲ್ವಾಡ್
ಭಾವನಗರ ಗುಜರಾತಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು ಪ್ರಮುಖವಾಗಿ ಹತ್ತಿಬಟ್ಟೆಯ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಭಾವನಗರ ಕಡಲಿಗೆ ಸಂಬಂಧಿಸಿದ ಉದ್ಯಮ, ರತ್ನ, ಮತ್ತು ಬೆಳ್ಳಿಯ ಜ್ಯೂವೆಲ್ಲರಿಯ ಉದ್ಯಮಕ್ಕೆ ಹೆಸರುವಾಸಿ. ಇತಿಹಾಸ ಭಾವನಗರವನ್ನು ಭಾವಸಿನಃಜಿ ಗೋಹಿಲ್ 1723ರಲ್ಲಿ ಕಂಡುಹಿಡಿದ. ಗೋಹಿಲ್ ಮಾರ್ವಾರಿನಿಂದ ವಾದ್ವಾ ಹಳ್ಳಿಯಲ್ಲಿ ತನ್ನ ಉದ್ಯಮವನ್ನು......
ಭೀಮೇಶ್ವರಿ - ಜಲಪಾತಗಳ ನಡುವೆ
ಮಂಡ್ಯ ಜಿಲ್ಲೆಯ ಭೀಮೇಶ್ವರಿ ಗ್ರಾಮ ಸುಂದರ ಜಲಪಾತದಿಂದ ಹೆಸರಾಗಿದೆಯಷ್ಟೇ ಅಲ್ಲದೇ ಸುಂದರ ಪರಿಸರದಲ್ಲಿರುವ ನೈಸರ್ಗಿಕ ತಾಣವೆನಿಸಿಕೊಂಡಿದೆ. ಇಂದು ಭೀಮೇಶ್ವರಿ ಎಲ್ಲರ ಮೆಚ್ಚಿನ ಸಾಹಸಕ್ರೀಡಾ ಸ್ಥಳವಾಗಿ ರೂಪುಗೊಂಡಿದೆ. ಬೆಂಗಳೂರಿನಿಂದ 100 ಕಿ.ಮೀ. ದೂರದಲ್ಲಿರುವ ಭೀಮೇಶ್ವರಿ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗವೆಂಬಂತಿದೆ. ವಾರದ ರಜೆಯ ದಿನಗಳಲ್ಲಿ ಕಳೆಯಬಯಸುವವರಿಗೆ......
ದೇವಾಲಯಗಳ ಪರಿಸರಕ್ಕೊಂದು ಭೇಟಿ : ಭುವನೇಶ್ವರ್ ಪ್ರವಾಸೋದ್ಯಮ
ಒಡಿಶಾ ರಾಜ್ಯದ ರಾಜಧಾನಿ ನಗರವಾದ ಭುವನೇಶ್ವರ್ ಒಂದು ಭವ್ಯವಾದ, ಸುಂದರ ನಗರವಾಗಿದ್ದು, ಇದು ಭಾರತದ ಪೂರ್ವ ಭಾಗದಲ್ಲಿದೆ. ಮಹಾನದಿ ದಂಡೆಯ ನೈಋತ್ಯ ಭಾಗದಲ್ಲಿರುವ ಈ ನಗರವು ಕಳಿಂಗರ ಕಾಲದ, ತೇಜೋಮಯವಾದ ವಾಸ್ತುಶಿಲ್ಪ ಸೌಂದರ್ಯವನ್ನು ಹೊಂದಿದೆ. ಈ ಪುರಾತನವಾದ ನಗರವು 3000 ವರ್ಷಗಳ ಭವ್ಯ ಪರಂಪರೆಯನ್ನು ಹೊಂದಿದೆ. ಭುವನೇಶ್ವರ್ ನಗರದ ಈ ಭೂಮಿಯು ಒಂದು ಕಾಲದಲ್ಲಿ......
ಭುಜ್ : ರಾಜಹಂಸಗಳ ವಿರಾಮದ ತಾಣ
ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು ಭುಜಂಗ ಎಂಬ ದೊಡ್ಡ ಸರ್ಪದ ಕಾರಣದಿಂದಾಗಿ ಈ ನಗರಕ್ಕೆ ಭುಜ್ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ಭುಜಂಗ ನಾಗ ದೇವತೆಗೆ ಈ ಬೆಟ್ಟದ ಮೇಲೆ......
ಬಿಕಾನೇರ್- ರಾಜರ ಕೋಟೆಗಳು, ಕಥೆಗಳು ಮತ್ತು ಉತ್ಸವಗಳ ಬೀಡು.
ಬಿಕಾನೇರ್ ಎಂಬುದು ರಾಜಸ್ಥಾನದ ಒಂದು ಪಟ್ಟಣ. ಇಲ್ಲಿರುವ ಮರುಭೂಮಿಯಲ್ಲಿ ಚಾಚಿಕೊಂಡು ಮಲಗಿರುವ ಹೊಂಬಣ್ಣದ ಮರಳಿನ ಅಲೆಗಳು, ಹೊಡೆದಾಡುವ ಒಂಟೆಗಳು ಮತ್ತು ರಜಪೂತ ದೊರೆಗಳ ಸಾಹಸ ಕಥೆಗಳಿಂದ ಕೂಡಿ, ಈ ಊರಿನ ಬಗ್ಗೆ ಅಸೂಯೆ ಪಡುವಷ್ಟು ಇಷ್ಟವಾಗುತ್ತದೆ. ಈ ಮರುಭೂಮಿ ಪಟ್ಟಣವು ರಾಜಸ್ಥಾನದ ಈಶಾನ್ಯ ಭಾಗದ ಕಡೆ ಇರುವ, ಥಾರ್ ಮರುಭೂಮಿಯ ನಟ್ಟ ನಡುವೆ ನೆಲೆಗೊಂಡಿದೆ. ಈ......
ಬಿಂದು : ಸುಂದರ ಪ್ರವೇಶ ದ್ವಾರ
ಬಿಂದು, ಭಾರತ-ಭೂತಾನ್ ಗಡಿಯಲ್ಲಿರುವ ಕೊನೆಯ ಹಳ್ಳಿ. ಇದು ದೆ. ಈ ಪ್ರದೇಶದ ಬಗೆಗಿನ ಪ್ರತಿಯೊಂದೂ ಅದ್ಭುತವೇ. ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಂತೆ ಇದರ ಸೌಂದರ್ಯಕ್ಕೆ ಪ್ರತಿಯೊಬ್ಬರೂ ಮರುಳಾಗುತ್ತಾರೆ.ಪ್ರವಾಸಿಗರು ಇಲ್ಲಿಂದ ಮುಂದಕ್ಕೆ ಭೂತಾನ್ ಪ್ರವಾಸ ಕೈಗೊಳ್ಳಲು ಸಹ ಬಯಸಬಹುದು. ಇಲ್ಲಿಗೆ ಹೋಗುವ ಮಾರ್ಗವು ಟೀ ಎಸ್ಟೇಟಗಳ ನಡುವೆ ಸಾಗುತ್ತದೆ ಮತ್ತು ಈ......
ಬೀರ್ - ಪ್ಯಾರಗ್ಲೈಡರ್ಸ್ ಗಳಿಗೊಂದು ಅದ್ಭುತ ಅವಕಾಶ
ಹಿಮಾಚಲ ಪ್ರದೇಶದ ಅತ್ಯಂತ ಹೆಸರುವಾಸಿಯಾದ ಪ್ರವಾಸಿ ತಾಣ ಬೀರ್ ಆಗಿದೆ. ಇಲ್ಲಿನ ನಿವಾಸಿಗಳು ಪ್ರಮುಖವಾಗಿ ನೆರೆಯ ಟಿಬೆಟಿನಿಂದ ಬಂದ ನಿರಾಶ್ರಿತರಾಗಿದ್ದಾರೆ. ಈ ಪ್ರದೇಶವು ಅನೇಕ ಧಾರ್ಮಿಕ ಶಿಕ್ಷಣಕ್ಕೆ ಹೆಸರುವಾಗಿಯಾಗಿದ್ದು ಇಲ್ಲಿ ಡೀರ್ ಪಾರ್ಕ್ ಇನ್ಸ್ ಟಿಟ್ಯೂಟ್ ಹಾಗೂ ಧರ್ಮಾಲಯ ಇನ್ಸ್ ಟಿಟ್ಯೂಟ್ ಇದೆ. ಶೈಕ್ಷಣಿಕ ಕೇಂದ್ರಗಳಲ್ಲದೆ ಸಾಹಸ ಕ್ರೀಡೆಗಳಿಗೂ ಬೀರ್......
ಬಿರ್ಭುಂ : ಕೆಂಪು ಮಣ್ಣಿನ ಭೂಮಿ
ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ ಹೊಂದಿರುವ ಸ್ಥಳಗಳನ್ನು ಹೊಂದಿದೆ ಮತ್ತು ಇದು ಟೆರಕೋಟ ರಚನೆಗಳಿಂದಾಗಿ ವಿವಿಧ ನಗರಗಳಿಗೆ ಹೆಸರುವಾಸಿಯಾಗಿದೆ. ಸ್ಥಳೀಯ ಕೈಗಾರಿಕೆಗಳು ಈ ಜಿಲ್ಲೆಯ......
ಬೊಮ್ಡಿಲ : ಸುಂದರ ಪ್ರಾಕೃತಿಕ ನೋಟ
ಬೊಮ್ಡಿಲ ಅರುಣಾಚಲಪ್ರದೇಶದ ಒಂದು ಸಣ್ಣ ಪಟ್ಟಣ ಸಮುದ್ರಮಟ್ಟದಿಂದ 8000 ಅಡಿ ಎತ್ತರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿ ಪೂರ್ವಹಿಮಾಲಯದ ಶ್ರೇಣಿಗಳಿಂದ ಆವೃತವಾಗಿರುವ ಈ ಸ್ಥಳವನ್ನು ನೋಡಲು ಪ್ರವಾಸಿಗರು ದೂರದೂರುಗಳಿಂದ ಬರುತ್ತಾರೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಇಲ್ಲಿ ಸೇಬಿನ ತೋಟಗಳು ಮತ್ತು ಬೌದ್ಧ ಮಂದಿರಗಳು ಇವೆ. ಚಾರಣಪ್ರಿಯರನ್ನು ಸಹ ಈ ಸ್ಥಳ......
ಬಡ್ಗಮ್ - ಮತ್ತೇರಿಸುವ ಪ್ರಕೃತಿ ಸೌಂದರ್ಯ
ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಬಡ್ಗಮ್. ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಈ ಜಿಲ್ಲೆ ಇದೆ. ಬಡ್ಗಮ್ನಲ್ಲಿ ಪ್ರವಾಸಿಗರನ್ನ ಪ್ರಮುಖವಾಗಿ ಆಕರ್ಷಿಸುವುದು ನಿಸರ್ಗ ಸೌಂದರ್ಯ. ಪರ್ವತಗಳಿಂದ ಸಮತಟ್ಟು ಪ್ರದೇಶಗಳವರೆಗೆ ಇಲ್ಲಿನ ಪರಿಸರ ವೈವಿಧ್ಯತೆಯನ್ನು ಹೊಂದಿದೆ. ದಕ್ಷಿಣ ಪ್ರದೇಶಗಳಲ್ಲಿ ಗುಡ್ಡಗಳಿದ್ದರೆ, ಉತ್ತರ ಮತ್ತು......
ಬುಂದಿ – ನಿಂತುಹೋದ ಕಾಲ
ಬುಂದಿಯು ರಾಜಸ್ತಾನದ ಹದೋತಿ ಪ್ರದೇಶದಲ್ಲಿದ್ದು, ಕೋಟಾದಿಂದ ಸುಮಾತು 36 ಕಿ.ಮೀ ದೂರದಲ್ಲಿದೆ. ಅಲಂಕೃತ ಕೋಟೆಗಳು, ಭವ್ಯವಾದ ಅರಮನೆಗಳು ಮತ್ತು ರಜಪೂತ ವಾಸ್ತುಶಿಲ್ಪವು ಈ ಪ್ರದೇಶವನ್ನು ಸುಂದರವಾಗಿಸಿದೆ. ಸುಂದರವಾದ ನದಿಗಳು, ಕೆರೆಗಳು ಮತ್ತು ಚಕಿತರನ್ನಾಗಿಸುವ ಝರಿಗಳು ಈ ಪ್ರದೇಶದ ಸೌಂದರ್ಯವನ್ನು ವೃದ್ಧಿಸಿದೆ. ಬುಂದಿಯ ಬಹುತೇಕ ಎಲ್ಲಾ ಭಾಗಗಳೂ ಕೂಡಾ......
ಕಾವೇರಿ ಮೀನುಗಾರಿಕೆ ಶಿಬಿರ - ಮೀನುಗಾರರ ಹೆಬ್ಬಾಗಿಲು
ದಕ್ಷಿಣ ಕರ್ನಾಟಕದ ಅರಣ್ಯದ ಮಧ್ಯೆ ಗಂಭೀರವಾಗಿ ಹರಿಯುತ್ತಿರುವ ಕಾವೇರಿ ನದಿಯ ತೀರದಲ್ಲಿ ಕಾವೇರಿ ಮೀನುಗಾರಿಕೆ ಕ್ಯಾಂಪ್ ಇದೆ. ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ತಾಣವಿದು. ದಿನನಿತ್ಯದ ಜಂಜಡದ ಮಧ್ಯೆ ಒಂದು ಉತ್ತಮ ರಹದಾರಿಯಿದು. ಸಾಹಸ, ಖುಷಿ, ಶಾಂತತೆ ಮತ್ತು ಸಾಂತ್ವನವನ್ನು ಇಲ್ಲಿ ಪ್ರವಾಸಿಗರಿಗೆ ಈ ತಾಣ ನೀಡುತ್ತದೆ. ಮಂಡ್ಯ ಜಿಲ್ಲೆಯಲ್ಲಿರುವ ಈ ಪ್ರದೇಶ,......
ಚಲ್ಸಾ : ಹಿಮಾಲಯದ ಸುಂದರವಾದ ಕೊಪ್ಪಲಿನ ಪಕ್ಕದ ಸ್ಥಳ
ಚಲ್ಸಾ ಪಶ್ಚಿಮ ಬಂಗಾಲದಲ್ಲಿರುವ ಸುಂದರ ನಗರ, ಇದು ಹಿಮಾಲಯದ ತಪ್ಪಲಿನಲ್ಲಿದೆ. ಇದು ಸಿಲಿಗುರಿಯ ಹಾಗೆ ಹೆಸರಾಂತ ಪ್ರವಾಸಿ ಸ್ಥಳ. ಇಲ್ಲಿ ಚಹಾದ ಗಾರ್ಡನ್ ಗಳು, ವಿಶಾಲವಾದ ಅರಣ್ಯಗಳು ಮತ್ತು ಹಲವಾರು ನದಿಯನ್ನು ಹೊಂದಿದೆ. ಸ್ಥಳೀಯ ವನ್ಯಜೀವಿಧಾಮವು ಇಲ್ಲಿದ್ದು ಅದರಲ್ಲಿ ಪ್ರಮುಖವಾಗಿ ಖಡ್ಗ ಮೃಗದ ಮತ್ತು ಆನೆಯ ವಾಸವಿರುತ್ತದೆ. ಸ್ಥಳೀಯ ನಿವಾಸಿಗಳಿಂದ ಇದರ ಬಗ್ಗೆ......
ಚಂಪಾನೇರ್: ಆನಂದಪರವಶಗೊಳಿಸುವ ತಾಣ!
ಚಂಪಾನೇರನ್ನು ಚಾವ್ಡಾ ವಂಶದ ರಾಜ ವನ್ರಾಜ್ ಚಾವ್ಡಾ ಸ್ಥಾಪಿಸಿದ ಮತ್ತು ತನ್ನ ಮಂತ್ರಿ ಚಂಪಾರಾಜನ ಹೆಸರಿಟ್ಟನು. ಕೆಲವರ ಪ್ರಕಾರ ಈ ಹೆಸರು ‘ಚಂಪಕ’ ಹೂವಿನಿಂದ ಬಂದಿದೆ. ಏಕೆಂದರೆ ಈ ಪ್ರದೇಶದಲ್ಲಿರುವ ಕಲ್ಲುಗಳು ಹೂವಿನಂತೆ ತಿಳಿ ಹಳದಿ ಬಣ್ಣದಲ್ಲಿವೆ. ಪಾವಗಡದ ಕೋಟೆಯನ್ನು ಖಿಚಿ ಚೌವ್ಹಾನ್ ರಜಪೂತರು ಚಂಪನೇರದಿಂದ ಸ್ವಲ್ಪ ಮೇಲೆ ಕಟ್ಟಿದರು. ನಂತರದಲ್ಲಿ ಇದನ್ನು ಮಹಮದ್......
ಚಂಫೈ : ಮಯನ್ಮಾರ್ ಗೆ ವಾಣಿಜ್ಯ ಹೆಬ್ಬಾಗಿಲು
ಸಂಸ್ಕೃತಿ ಮತ್ತು ಪರಂಪರೆಯಿಂದ ಸಿಂಗರಿಸಲ್ಪಟ್ಟ ಭವ್ಯ ಮಯನ್ಮಾರ್ ಬೆಟ್ಟಗಳ, ಮೇಲಿರುವ ಜನಪ್ರಿಯವಾಗಿ 'ಮಿಜೋರಾಂ ಅನ್ನದ ಪಾತ್ರೆ' ಎಂದು ಕರೆಯಲಾಗುವ ಚಂಫೈ ಈಶಾನ್ಯ ಭಾರತದಲ್ಲಿನ ಒಂದು ಪ್ರಮುಖವಾದ ಪ್ರವಾಸಿ ತಾಣವಾಗಿದೆ. ಈ ಅದ್ಭುತ ತಾಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಲೇಬೇಡಿ! ಚಂಫೈ ಪ್ರವಾಸೋದ್ಯಮ ತಾಣ, ಬುಡಕಟ್ಟು ಜನರ ಸಂಪ್ರದಾಯಗಳನ್ನು ಹೊತ್ತು ನಿಂತಿರುವ......