Search
 • Follow NativePlanet
Share

ಬುಂದಿ – ನಿಂತುಹೋದ ಕಾಲ

41

ಬುಂದಿಯು ರಾಜಸ್ತಾನದ ಹದೋತಿ ಪ್ರದೇಶದಲ್ಲಿದ್ದು, ಕೋಟಾದಿಂದ ಸುಮಾತು 36 ಕಿ.ಮೀ ದೂರದಲ್ಲಿದೆ. ಅಲಂಕೃತ ಕೋಟೆಗಳು, ಭವ್ಯವಾದ ಅರಮನೆಗಳು ಮತ್ತು ರಜಪೂತ ವಾಸ್ತುಶಿಲ್ಪವು ಈ ಪ್ರದೇಶವನ್ನು ಸುಂದರವಾಗಿಸಿದೆ. ಸುಂದರವಾದ ನದಿಗಳು, ಕೆರೆಗಳು ಮತ್ತು ಚಕಿತರನ್ನಾಗಿಸುವ ಝರಿಗಳು ಈ ಪ್ರದೇಶದ ಸೌಂದರ್ಯವನ್ನು ವೃದ್ಧಿಸಿದೆ. ಬುಂದಿಯ ಬಹುತೇಕ ಎಲ್ಲಾ ಭಾಗಗಳೂ ಕೂಡಾ ಸೈಲ್ವನ್‌ನಿಂದ ಸುತ್ತುವರಿದಿದೆ ಮತ್ತು ಸಸ್ಯ ಹಾಗೂ ಪ್ರಾಣಿಗಳಿಂದ ಕೂಡಿದೆ. ಬುಂದಿಯು ಹಲವಾರು ಅತ್ಯುತ್ತಮ ಪೇಂಟರುಗಳು, ಲೇಖಕರು ಮತ್ತು ಕಲಾಕಾರರಿಗೆ ಸ್ಫೂರ್ತಿಯಾಗಿದೆ. ರುಡ್ಯಾರ‍್ಡ್‌ ಕಿಪ್ಲಿಂಗ್‌ ಕೂಡಾ ತನ್ನ “ಕಿಮ್‌” ಕೃತಿಗೆ ಇಲ್ಲಿಂದಲೇ ಸ್ಫೂರ್ತಿಯನ್ನು ಪಡೆದಿದ್ದಾರೆ.

ಈ ಜಿಲ್ಲೆಯು 5,500 ಚದರ ಕಿ.ಮೀ ನಷ್ಟು ವಿಸ್ತಾರವಾಗಿ ಹಬ್ಬಿಕೊಂಡಿದೆ ಮತ್ತು 88 ಸಾವಿರ ಜನಸಂಖ್ಯೆಯನ್ನು 2001ರಲ್ಲಿ ಗಣತಿ ಮಾಡಲಾಗಿದೆ. ಬುಂದಿಯನ್ನು ಐದು ತಾಲೂಕುಗಳಾಗಿ , ಆರು ಪಟ್ಟಣಗಳಾಗಿ, ನಾಲ್ಕು ಪಂಚಾಯತ್‌ ಸಮಿತಿಗಳಾಗಿ ಮತ್ತು 890 ಹಳ್ಳಿಗಳನ್ನಾಗಿ ವಿಂಗಡಿಸಲಾಗಿದೆ. ಜಿಲ್ಲಾ ಕೇಂದ್ರವು ಬುಂದಿಯಾಗಿದೆ. ಇದು ಹಲವು ಕೋಟೆಗಳಿಗೆ ಅರಮನೆಗಳಿಗೆ ಮತ್ತು ಬಾವಿಗೆಳಿಗೆ ಜನಪ್ರಿಯವಾಗಿದೆ.

ಹಲವು ಸ್ಥಳೀಯ ಬುಡಕಟ್ಟು ಜನಾಂಗವು ಈ ಪ್ರದೇಶದಲ್ಲಿ ತುಂಬಾ ಹಿಂದಿನಿಂದಲೂ ವಾಸವಾಗಿದೆ. ಈ ಎಲ್ಲಾ ಬುಡಕಟ್ಟು ಜನಾಂಗದಲ್ಲಿ ಎಲ್ಲಕ್ಕಿಂತ ಹೆಚ್ಚು ಜನಪ್ರಿಯವಾದ್ದೆಂದರೆ ಪರಿಹಾರ‍್ ಮೀನಸ್.  ಬುಂದಿ ಪ್ರದೇಶದ ಹೆಸರು ಇಲ್ಲಿನ ರಾಜ ಬುಂದಾ ಮೀನಾರಿಂದ ಬಂತು ಎಂದು ಹೇಳಲಾಗಿದೆ. ಜೈತಾ ಮೀನಾರಿಂದ 1342ರಲ್ಲಿ ಬುಂದಿಯನ್ನು ರಾವ್‌ ದೇವ ಹಡಾ ವಶಪಡಿಸಿಕೊಂಡು ಸುತ್ತಲಿನ ಪ್ರದೇಶವನ್ನು ಹದವತಿ ಅಥವಾ ಹದೋತಿ ಎಂದು ಮರುನಾಮಕರಣ ಮಾಡಿದರು. ಹದ ರಜಪೂತರು ಈ ಪ್ರದೇಶವನ್ನು ಸುಮಾರು 200 ವರ್ಷಗಳ ಕಾಲ ಆಳಿದರು. 1533ರಲ್ಲಿ ಅವರ ಆಡಳಿತವು ಅಂತ್ಯವಾಯ್ತು ಮತ್ತು ಮೊಘಲ್ ದೊರೆ ಅಕ್ಬರ‍್ ಈ ಪ್ರದೇಶವನ್ನು ವಶಪಡಿಸಿಕೊಂಡ.

ಬುಂದಿಯಲ್ಲಿ ವಾಸವಿರುವವರು ರಜಪೂತರು ಮತ್ತು ಅವರ ಸಾಹಸೀ ಪ್ರವೃತ್ತಿಗೆ ಹೆಸರಾದವರು. ಇಲ್ಲಿನ ಬಹುತೇಕ ನಿವಾಸಿಗಳು ಮೂಲ ರಜಪೂತರಾಗಿದ್ದು, ತಮ್ಮ ಸಂಪ್ರದಾಯವನ್ನು ಇನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹಿಂದು ಮತ್ತು ರಾಜಸ್ತಾನಿ ಭಾಷೆಯು ಇಲ್ಲಿ ಪ್ರಮುಖವಾಗಿದೆ.

ಕಾಲಿ ತೀಜ್‌, ಬುಂದಿಯಲ್ಲಿನ ಪ್ರಮುಖ ಹಬ್ಬ. ಈ ಹಬ್ಬವನ್ನು ಅತ್ಯಂತ ಆನಂದದಿಂದ ಆಚರಿಸಲಾಗುತ್ತದೆ. ಇದು ಎರಡು ದಿನದ ಹಬ್ಬವಾಗಿದ್ದು, ಭಾದ್ರ ತಿಂಗಳಿನ ಮೂರನೇ ದಿನದಿಂದ ಈ ಹಬ್ಬವು ಆರಂಭವಾಗುತ್ತದೆ.

ಬುಂದಿ ಸಂಪ್ರದಾಯದ ಪ್ರಮುಖ ಸಂಗತಿಯೆಂದರೆ ಪೇಂಟಿಂಗ್‌ ಮತ್ತು ಸಂಗೀತ. ಇದಕ್ಕೆ ಸಮಾನಾಂತರವಾಗಿ ಈ ಪ್ರದೇಶದಲ್ಲಿ ಅನೇಕರು ಮಹಾನ್‌ ಗಾಯಕರು ಹಾಗೂ ಸಂಗೀತಗಾರರಿದ್ದಾರೆ. ಬುಂದಿಯಲ್ಲಿನ ಪೇಂಟಿಂಗ್‌ ಶಾಲೆಯು  ಮೊಘಲ್‌ ಮತ್ತು ರಾಗಮಾಲಾ ಪೇಂಟಿಂಗ್‌ ಶೈಲಿಯ ಪ್ರಭಾವವನ್ನು ಹೊಂದಿದೆ.

ಈ ಪ್ರದೇಶದಲ್ಲಿ ಹಲವಾರು ಆಕರ್ಷಕ ಪ್ರವಾಸಿ ತಾಣಗಳಿದ್ದು, ತಾರಾಗಢ ಕೋಟೆ, ಬುಂದಿ ಅರಮನೆ, ರಣಜಿ ಕಿ ಬಾವೋರಿ ಮತ್ತು ನವಲ್ ಸಾಗರವು ಪ್ರಮುಖವಾದದ್ದು. ಬುಂದಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಇತರ ತಾಣಗಳೆಂದರೆ ಸುಖ ಮಹಲ್‌, ಚೌರಾಸಿ ಖಾಂಭೋನ್‌ ಕಿ ಛತ್ರಿ, ಜೈತ್‌ ಸಾಗರ‍್ ಕೆರೆ ಮತ್ತು ಫೂಲ್ ಸಾಗರ.

ಬುಂದಿ ರೈಲ್ವೇ ನಿಲ್ದಾಣವು ಕೇಂದ್ರಭಾಗದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಜೈಪುರ, ಆಗ್ರಾ, ವಾರಣಾಸಿ, ಡೆಹ್ರಾಡೂನ್‌ ಇತ್ಯಾದಿ ಭಾರತದ ಪ್ರಮುಖ ನಗರಗಳಿಂದ ಈ ರೈಲ್ವೇ ನಿಲ್ದಾಣಕ್ಕೆ ರೈಲುಗಳು ಆಗಮಿಸುತ್ತವೆ.

ಬುಂದಿಯು ರಾಜಸ್ತಾನದ ಪ್ರಮುಖ ಸ್ಥಳಗಳಿಂದ ಎಕ್ಸ್‌ಪ್ರೆಸ್‌ ಬಸ್‌ ಸೇವೆಯ ಮೂಲಕ ಸಂಪರ್ಕವನ್ನು ಹೊಂದಿದೆ. ಮಧೋಪುರ, ಬಿಕಾನೇರ‍್, ಜೈಪುರ ಮತ್ತು ಕೋಟಾದಿಂದ ಬಸ್‌ಗಳು ಲಭ್ಯವಿದೆ. ಬಿಜೋಲಿಯಾ, ಉದಯಪುರ, ಅಜ್ಮೇರ‍್ ಮತ್ತು ಜೋಧ್‌ಪುರದಿಂದಲೂ ಬುಂದಿಗೆ ಬಸ್‌ ಸೇವೆ ಲಭ್ಯವಿದೆ. ಬುಂದಿಗೆ ಪ್ರಯಾಣಿಸಲು ಸೂಕ್ತವಾದ ಸಮಯ ಅಕ್ಟೋಬರಿನಿಂದ ಮಾರ್ಚ್‌‌ನ ಅವಧಿ.

ಬುಂದಿ ಪ್ರಸಿದ್ಧವಾಗಿದೆ

ಬುಂದಿ ಹವಾಮಾನ

ಉತ್ತಮ ಸಮಯ ಬುಂದಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬುಂದಿ

 • ರಸ್ತೆಯ ಮೂಲಕ
  ಬುಂದಿಗೆ ರಾಜ್ಯದ ಇತರ ನಗರಗಳಿಂದ ಎಕ್ಸ್‌ಪ್ರೆಸ್‌ ಬಸ್‌ ಸೇವೆಯ ಮೂಲಕ ಸಂಪರ್ಕವನ್ನು ಹೊಂದಿವೆ. ಮಧೋಪುರ‍್, ಬಿಕಾನೇರ್‌, ಜೈಪುರ, ಕೋಟಾ, ಬಿಜೋಲಿಯಾ, ಉದಯಪುರ, ಅಜ್ಮೇರ ಮತ್ತು ಜೋಧ್‌ಪುರದಂತಹ ರಾಜ್ಯದ ಇತರ ಪ್ರಮುಖ ನಗರಗಳಿಂದ ವಿವಿಧ ಸೌಲಭ್ಯದ ಬಸ್‌ಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬುಂದಿ ರೈಲ್ವೆ ನಿಲ್ದಾಣವು ಹಳೆಯ ನಗರದಿಂದ ದಕ್ಷಿಣಕ್ಕೆ 2 ಕಿ.ಮೀ ದೂರದಲ್ಲಿದೆ. ದೇಶದ ಇತರ ಭಾಗಗಳಿಗೆ ನಿರಂತರ ರೈಲುಗಳಿಂದ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸಂಗಾನೇರ‍್ ವಿಮಾನ ನಿಲ್ದಾಣವು ಜೈಪುರದಿಂದ 215 ಕಿ.ಮೀ ದೂರದಲ್ಲಿದ್ದು, ಬುಂದಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಟ್ಯಾಕ್ಸಿಗಳು ಕೂಡಾ ವಿಮಾನ ನಿಲ್ದಾಣದಿಂದ ಬುಂದಿಗೆ ಲಭ್ಯವಿದೆ. ಈ ಜೈಪುರ ವಿಮಾನ ನಿಲ್ದಾಣವು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರಂತರ ವಿಮಾನಗಳ ಸಂಪರ್ಕವನ್ನು ಹೊಂದಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Jan,Sat
Return On
23 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Jan,Sat
Check Out
23 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Jan,Sat
Return On
23 Jan,Sun