Search
 • Follow NativePlanet
Share

ಆಗ್ರಾ - ತಾಜ್ ಮಹಲಿನಿಂದ ಆಚೆಗೂ ಇದೆ ಅಂದ ಚೆಂದದ ಆಗರ.

81

ನಮ್ಮ ದೇಶದ ರಾಜಧಾನಿಯಾದ ದೆಹಲಿಯಿಂದ 200 ಕಿ.ಮೀ ದೂರದಲ್ಲಿ, ಉತ್ತರ ಪ್ರದೇಶ ರಾಜ್ಯದಲ್ಲಿ ನೆಲೆಗೊಂಡಿದೆ ಆಗ್ರಾ ನಗರ. ಆಗ್ರಾ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಕಟ್ಟಡ. ಹಾಗೆಂದು ಇಲ್ಲಿ ಕೇವಲ ತಾಜ್ ಮಹಲ್ ಮಾತ್ರ ಇಲ್ಲ. ಆಗ್ರಾದಲ್ಲಿ ತಾಜ್ ಮಹಲ್‍ ಹೊರತಾಗಿ ಆಗ್ರಾ ಕೋಟೆ  ಮತ್ತು ಫತೇಪುರ್ ಸಿಕ್ರಿಗಳು ಯುನೇಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಆಗ್ರಾದ ಇತಿಹಾಸವು ಅಧಿಕೃತವಾಇ 11ನೇ ಶತಮಾನದಲ್ಲಿ ದಾಖಲೆಗಳಲ್ಲಿ ಸೇರ್ಪಡೆಗೊಂಡಿದೆ. ಆಗಿನಿಂದ ಆಗ್ರಾವು ಹಿಂದೂ ಮತ್ತು ಮುಸ್ಲಿಂ ರಾಜರ ಆಳ್ವಿಕೆಗೆ ಒಳಪಟ್ಟು, ಅವರ ಸಾಂಸ್ಕೃತಿಕ ಹೆಜ್ಜೆಗುರುತುಗಳನ್ನು ತನ್ನಲ್ಲಿ ಇಂದಿಗು ಉಳಿಸಿಕೊಂಡು ಬಂದಿದೆ.

ಇತಿಹಾಸ

ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗು ಸಾರಿ ಸಾರಿ ಹೇಳುತ್ತಿವೆ.

ಅದರಲ್ಲಿಯೂ ಚಕ್ರವರ್ತಿ ಶಾ ಜಹಾನ್ ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ತಾಜ್ ಮಹಲ್ ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡು ನಿಂತಿದೆ. ಇದರ ಜೊತೆಗೆ ಅಕ್ಬರ್ ಚಕ್ರವರ್ತಿಯು ಆಗ್ರಾ ನಗರದ ಹೊರಭಾಗದಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳನ್ನು ನಿರ್ಮಿಸಿ ಈ ಊರಿಗೆ ಮತ್ತಷ್ಟು ಮೆರಗು ನೀಡಿದನು.

ಆಗ್ರಾ ಪ್ರವಾಸೋದ್ಯಮ

ಆಗ್ರಾವು ಆಗ್ರಾ , ಜೈಪುರ್ ಮತ್ತು ದೆಹಲಿಗಳನ್ನು ಒಳಗೊಂಡಿರುವ ಸುವರ್ಣ ತ್ರಿಕೋನದ ಒಂದು ಭಾಗವಾಗಿದೆ. ದೆಹಲಿಗೆ ಇದು ಹತ್ತಿರವಿರುವುದರಿಂದಾಗಿ ಹಲವಾರು ಪ್ರವಾಸಿಗರು ಒಂದು ದಿನದ ಪ್ರವಾಸದ ಸಲುವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ತಾಜ್ ಮಹಲ್ ಜೊತೆಗೆ ಮತ್ತಷ್ಟು ಸ್ಥಳಗಳನ್ನು ನೋಡಲು ಬರುವ ಪ್ರವಾಸಿಗರಿಗಾಗಿ ಇಲ್ಲಿ ಹಲವಾರು ಹೋಟೆಲ್ ಮತ್ತು ಲಾಡ್ಜ್ ಗಳು ಇಲ್ಲಿವೆ.

ಸಮೀಪದಲ್ಲಿರುವ ಫತೇಪುರ್ ಸಿಕ್ರಿ ಮತ್ತು ಮಥುರಾಗಳಿಗೆ ಇಲ್ಲಿ ಸ್ಥಳ ವೀಕ್ಷಣಾ ಪ್ರವಾಸಗಳು ಲಭ್ಯವಿವೆ. ಈ ನಗರದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುವ ಒಂದು ಮಾರುಕಟ್ಟೆಯಿದೆ. ಇದರಲ್ಲಿ ಪ್ರವಾಸಿಗರು ತಮಗೆ ಬೇಕಾದ ಆಭರಣಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಕೊಂಡು ಕೊಳ್ಳಬಹುದು. ಇದರ ಜೊತೆಗೆ ಇಲ್ಲಿನ ದಲ್ಲಾಳಿಗಳು, ರಿಕ್ಷಾದವರು ಮತ್ತು ಅನಧಿಕೃತ ಮಾರ್ಗದರ್ಶಿಗಳನ್ನು ನಿಭಾಯಿಸಲು ತಯಾರಾಗಿರಿ.

ಆಗ್ರಾ ಮತ್ತು ಅದರ ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು

ಆಗ್ರಾದಲ್ಲಿರುವ ಐತಿಹಾಸಿಕ ಕಟ್ಟಡಗಳು ನಿಸ್ಸಂಶಯವಾಗಿ ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಪ್ರವಾಸಿಗರು ತಾಜ್ ಮಹಲ್ ಜೊತೆಗೆ ಯಮುನಾ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಆಗ್ರಾ ಕೋಟೆ ಮತ್ತು ಅಕ್ಬರನ ಸಮಾಧಿಗೆ ಭೇಟಿ ನೀಡಬಹುದು. ಚೀನಿ ಕಾ ರೌಝಾ, ದಿವಾನ್- ಇ-ಅಮ್ ಮತ್ತು ದಿವಾನ್- ಇ-ಖಾಸ್ ಕಟ್ಟಡಗಳು ಮೊಘಲರ ಕಾಲದ ವಾಸ್ತುಶಿಲ್ಪ ವೈಭವದ ಒಳನೋಟವನ್ನು ಒದಗಿಸುತ್ತವೆ. ಇತ್‍ಮಡ್- ಉದ್- ದೌಲಾಹ್ ಸಮಾಧಿ, ಮರಿಯಂ ಝಮಾನಿ ಸಮಾಧಿ, ಜಸ್ವಂತ್ ಕಿ ಛಾತ್ರಿ, ಚೌಸತ್ ಖಂಬ ಮತ್ತು ತಾಜ್ ವಸ್ತು ಸಂಗ್ರಹಾಲಯ ಇಲ್ಲಿ ನೋಡಬೇಕಾಗಿರುವ ಆಕರ್ಷಣೆಗಳ ಪಟ್ಟಿಯಲ್ಲಿ ಸೇರಿವೆ. 

ಭಾರತದ ಇತರ ನಗರಗಳಂತೆ ಆಗ್ರಾವು ಸಹ ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಬಿಂಬಿಸುತ್ತಿದೆ. ಇಲ್ಲಿರುವ ಜಾಮಾ ಮಸೀದಿಯು ಪ್ರಖ್ಯಾತ ಹಿಂದೂ ದೇವಾಲಯವಾದ ಬಾಗೇಶ್ವರ್ ದೇವಾಲಯದೊಂದಿಗೆ ಸ್ಥಳವನ್ನು ಹಂಚಿಕೊಂಡಿದೆ. ಬೇರೆ ನಗರಗಳಲ್ಲಿರುವಂತೆ ಆಗ್ರಾದಲ್ಲಿ ಸಹ ನಯನ ಮನೋಹರ ತಾಣಗಳು, ವಾಸನೆಗಳು ಮತ್ತು  ಗೌಜು ಗದ್ದಲಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರ ಜೊತೆಗೆ ಸೋಮಿ ಬಾಗ್ ಮತ್ತು ಮೆಹ್ತಾಬ್ ಬಾಗ್‍ನಂತಹ ಪ್ರಶಾಂತವಾದ ಉದ್ಯಾನವನಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳು ನೋಡಲು ತುಂಬಾ ಸೊಗಸಾಗಿರುತ್ತವೆ. ಅಲ್ಲದೆ ತಾಜ್ ಮಹಲ್ ಸಹ ಜನರ ಗೌಜು ಗದ್ದಲದಿಂದ ದೂರದಲ್ಲಿ ನೆಲೆಗೊಂಡಿದೆ.

ಆಗ್ರಾಗೆ ಕೇವಲ ಪ್ರವಾಸಿಗರು ಮಾತ್ರ ಆಕರ್ಷಿತರಾಗುತ್ತಾರೆ ಎಂದು ತಿಳಿಯಬೇಡಿ. ಇಲ್ಲಿರುವ ಕೀತಂ ಕೆರೆ ಮತ್ತು ಸುರ್ ಸರೋವರ್ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳಾದ  ಹೆರ್ಜಾಲೆ, ಸೈಬಿರಿಯನ್ ಕೊಕ್ಕರೆ, ಸರಸ್ ಕೊಕ್ಕರೆಗಳು, ಬ್ರಾಹ್ಮಣಿ ಬಾತುಕೋಳಿಗಳು, ಗೀಸ್ ಮತ್ತು ಗಡ್‍ವಲ್ ಹಾಗು ಹಂಸಗಳು ಸಹ ಆಕರ್ಷಿತಗೊಂಡು ಭೇಟೀ ನೀಡುತ್ತವೆ.

ಆಗ್ರಾಗೆ ತಲುಪುವ ಬಗೆ

ಆಗ್ರಾಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು

ಭೇಟಿ ನೀಡಲು ಅತ್ಯುತ್ತಮ ಅವಧಿ

ಆಗ್ರಾಗೆ ಭೇಟಿ ನೀಡಲು ಅಕ್ಟೋಬರಿನಿಂದ ಮಾರ್ಚ್ ವರೆಗಿನ ಅವಧಿಯು ಅತ್ಯುತ್ತಮ ಕಾಲವಾಗಿದೆ.

ಆಗ್ರಾ ಪ್ರಸಿದ್ಧವಾಗಿದೆ

ಆಗ್ರಾ ಹವಾಮಾನ

ಉತ್ತಮ ಸಮಯ ಆಗ್ರಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಆಗ್ರಾ

 • ರಸ್ತೆಯ ಮೂಲಕ
  ಆಗ್ರಾವು ದೇಶದ ಇನ್ನಿತರ ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ರಾ.ಹೆ2, ರಾ.ಹೆ3 ಮತ್ತು ರಾ.ಹೆ11 ಗಳು, ಸರ್ಕಾರಿ ಬಸ್ಸುಗಳು, ಖಾಸಗಿ ಬಸ್ಸುಗಳು ಮತ್ತು ಸುವಿಹಾರಿ ಬಸ್ಸುಗಳು ಈ ನಗರವನ್ನು ಸಂಪರ್ಕಿಸಲು ನೆರವಾಗುತ್ತವೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಆಗ್ರಾ ಮತ್ತು ಹತ್ತಿರದ ಸಿಕಂದರ ಹಾಗು ಫತೇಪುರ್ ಸಿಕ್ರಿಗಳಿಗೆ ಮಾರ್ಗದರ್ಶಿಯನ್ನು ಹೊಂದಿದ ಪ್ರವಾಸಗಳನ್ನು ಕೈಗೊಳ್ಳುತ್ತದೆ. ಇತ್ತೀಚೆಗೆ ಪ್ರಾರಂಭಗೊಂಡಿರುವ ನೊಯ್ಡಾ ಎಕ್ಸ್ ಪ್ರೆಸ್ ವೇಯು ಆಗ್ರಾದವರೆಗೆ ತನ್ನ ರಸ್ತೆಯನ್ನು ವಿಸ್ತರಿಸಿದ್ದು, ಪ್ರಯಾಣಾವಧಿಯನ್ನು ತಗ್ಗಿಸಿದೆ. ಇದರ ಮೂಲಕ ನೀವು ದೆಹಲಿಯಿಂದ ಆಗ್ರಾಗೆ ಕೇವಲ ಎರಡು ಗಂಟೆಗಳ ಅವಧಿಯಲ್ಲಿ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಆಗ್ರಾವು ಭಾರತದ ಅತ್ಯಂತ ಪ್ರಸಿದ್ಧವಾದ ಯಾತ್ರಾ ಸ್ಥಳವಾಗಿದೆ. ಇದು ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಗರವು ಏಳು ರೈಲು ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ ಟುಂಡ್ಲ ಜಂಕ್ಷನ್ ಸೇರಿಲ್ಲ ಏಕೆಂದರೆ ಇದು ಇಲ್ಲಿಂದ ಒಂದು ಗಂಟೆಗಳಷ್ಟು ದೂರದಲ್ಲಿ ನೆಲೆಗೊಂಡಿದೆ. ಇರುವ ಏಳು ರೈಲು ನಿಲ್ದಾಣಗಳಲ್ಲಿ ಆಗ್ರಾ ಕೋಟೆ ರೈಲು ನಿಲ್ದಾಣ, ಆಗ್ರಾ ಕಾಂಟ್ ರೈಲು ನಿಲ್ದಾಣ ಮತ್ತು ರಾಜ- ಕಿ- ಮಂಡಿ ರೈಲು ನಿಲ್ದಾಣಗಳು ಪ್ರಮುಖ ರೈಲು ನಿಲ್ದಾಣಗಳಾಗಿವೆ. ರೈಲಿನಲ್ಲಿ ರಾಜ ವೈಭವವನ್ನು ಆನಂದಿಸುವ ಅವಕಾಶವನ್ನೊದಗಿಸುವ ’ಗಾಲಿಗಳ ಮೇಲೆ ಅರಮನೆ’ ರೈಲು, ಶತಾಬ್ದಿ ಮತ್ತು ರಾಜಧಾನಿ ಎಕ್ಸ್ ಪ್ರೆಸ್ ರೈಲು ಸೇರಿದಂತೆ ಹಲವಾರು ಪ್ರಮುಖ ರೈಲುಗಳು ಈ ರೈಲು ನಿಲ್ದಾಣಗಳ ಮೂಲಕ ಹಾದು ಹೋಗುತ್ತವೆ. ಟುಂಡ್ಲ ರೈಲು ನಿಲ್ದಾಣವು ಆಗ್ರಾದೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಆಗ್ರಾವು ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿದೆ. ಇದು ನಗರದ ಕೇಂದ್ರ ಭಾಗದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ದೇಶದ ಪ್ರಮುಖ ನಗರಗಳಿಂದ ವಿಮಾನಗಳು ಬಂದು ಹೋಗುತ್ತಿರುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 May,Mon
Return On
17 May,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 May,Mon
Check Out
17 May,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 May,Mon
Return On
17 May,Tue