India
Search
 • Follow NativePlanet
Share
ಮುಖಪುಟ » ಸ್ಥಳಗಳು» ಘಜಿಯಾಬಾದ್

ಘಜಿಯಾಬಾದ್ : ಉತ್ತರ ಪ್ರದೇಶದ ಹೆಬ್ಬಾಗಿಲು 

18

ದೆಹಲಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಘಜಿಯಾಬಾದ್ ಉತ್ತರ ಪ್ರದೇಶದ ಹೆಬ್ಬಾಗಿಲು ಎಂಬ ಅಭಿಧಾನಕ್ಕೆ ಪಾತ್ರವಾಗಿದೆ. ಈ ನಗರವನ್ನು ಸ್ಥಾಪಿಸಿದ ಘಜಿ-ಉದ್-ದಿನ್ ಇದಕ್ಕೆ ತನ್ನ ಹೆಸರಿನಲ್ಲಿ ಘಜಿಯುದ್ದೀನ್‍ನಗರ್ ಎಂದು ನಾಮಕರಣ ಮಾಡಿದನು. ಈತನು ಒಬ್ಬ ಮೊಘಲ್ ಮಂತ್ರಿಯ ಮಗ. ಕಾಲಾನುಕ್ರಮೇಣ ಇದಕ್ಕೆ ಘಜಿಯಾಬಾದ್ ಎಂದು ಸಂಕ್ಷಿಪ್ತವಾಗಿ ಕರೆಯಲಾಯಿತು. ಈ ನಗರವು ಹಿಂದೊನ್ ನದಿಯಿಂದ 1.5 ಕಿ.ಮೀ ದೂರದಲ್ಲಿದೆ. ಘಜಿಯಾಬಾದ್‍ನಲ್ಲಿ ಲೋಕೊಮೋಟಿವ್ (ರೈಲು ಇಂಜಿನುಗಳು) ನಿರ್ವಹಣೆ ಮತ್ತು ಉತ್ಪಾದನೆ, ರಕ್ಷಣಾ ಉತ್ಪನ್ನಗಳ ಕೈಗಾರಿಕೆ, ಗಾಜಿನ ಉತ್ಪನ್ನಗಳು, ಟೇಪೆಸ್ಟ್ರಿ, ಮಡಿಕೆಗಳು, ಬಣ್ಣ ಮತ್ತು ವಾರ್ನಿಷ್ ಕೈಗಾರಿಕೆಗಳನ್ನು ನಾವು ಕಾಣಬಹುದು.

ಈ ಊರು ರಾಜಧಾನಿ ದೆಹಲಿಗೆ ಸಮೀಪದಲ್ಲಿರುವ ಕಾರಣವಾಗಿ ಇಲ್ಲಿ ಸಹ ದೊಡ್ಡ ಮಾಲ್‍ಗಳು ಮತ್ತು ವ್ಯಾಪಾರ ಕೇಂದ್ರಗಳು ಇಲ್ಲಿ ಸಹ ತೀವ್ರ ವೇಗವಾಗಿ ತಲೆ ಎತ್ತುತ್ತಿವೆ. ವ್ಯಾಪಾರ ವ್ಯವಹಾರ ಮಾಡಲು ಮತ್ತು ಕೊಳ್ಳಲು ದೆಹಲಿಯಿಂದ ಬರುವವರಿಗೆ ಘಜಿಯಾಬಾದ್ ಆಕರ್ಷಿಸುತ್ತಿದೆ. ಘಜಿಯಾಬಾದ್ ಇದೇ ಹೆಸರಿನ ಜಿಲ್ಲೆಯ ಜಿಲ್ಲಾ ಕೇಂದ್ರ ಸಹ ಆಗಿದೆ.

ಘಜಿಯಾಬಾದ್ ಸುತ್ತ ಮುತ್ತ ಇರುವ ಪ್ರವಾಸಿ ತಾಣಗಳು

ಅಂಗಡಿಗಳು ಮತ್ತು ಮಲ್ಟಿಫ್ಲೆಕ್ಸ್ ಗಳ ಜೊತೆಗೆ ಈ ಪಟ್ಟಣದ ಸುತ್ತ ಮುತ್ತ ಹಲವಾರು ಪಟ್ಟಣಗಳು ಮತ್ತು ಹಳ್ಳಿಗಳನ್ನು ನಾವು ಘಜಿಯಾಬಾದ್ ಸುತ್ತ ಮುತ್ತ ನೋಡಬಹುದು. ಅಂತಹ ಹಳ್ಳಿಗಳಲ್ಲಿ ಅಜ್ರರ ಎಂಬುದು ಒಂದು. ಈ ಹಳ್ಳಿಯು ಉತ್ತರ ಪ್ರದೇಶ ರಾಜ್ಯದ ಮೀರತ್ ಜಿಲ್ಲೆಯ ಖರ್ಖೋಡ ಮಂಡಲ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಹಳ್ಳಿಯ ಹೆಸರಿನಲ್ಲಿ ಅಜ್ರರ ಎಂಬ ಮೇಜಿನ ಮೇಲೆ ಆಡುವ ಆಟ ಸಹ ಪ್ರಚಲಿತದಲ್ಲಿದೆ.

ಡಸ್ನ ಎಂಬ ಮನಮೋಹಕ ಪಟ್ಟಣದಲ್ಲಿ ಒಂದು ಸುಂದರವಾದ ಕೋಟೆಯಿದೆ. ದೌಲನ ಎಂಬ ಹಳ್ಳಿಯಲ್ಲಿರುವ ಸತಿ ಮಲಿಂದಿ ದೇವಿ ದೇವಾಲಯವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ಪ್ರತಿ ವರ್ಷವು ಜಾತ್ರೆ ನಡೆಯುತ್ತದೆ. ಬಾದ್‍ಷಾ ಅಕ್ಬರನಿಂದ ನಿರ್ಮಾಣಗೊಂಡ ಫರಿದ್‍ನಗರದಲ್ಲಿ ಪ್ರಸಿದ್ಧ " ಗರ್ಚಿ ಬಲ್ಲೊಚನ್" ಇದೆ. ಇದು ಬೃಹದಾಕಾರದ ಕಬ್ಬಿಣದ ದ್ವಾರಗಳನ್ನು ಹೊಂದಿದೆ. ಜೊತೆಗೆ ಇಲ್ಲಿಗೆ ಸಮೀಪದಲ್ಲಿ ಜಾಮಾ ಮಸೀದಿ ಸಹ ಇದೆ.

ಹಪುರ್ ಎಂಬಲ್ಲಿ ಇರುವ "ಗರ್ ಮುಕ್ತೇಶ್ವರ್" ಎಂಬ ಪವಿತ್ರ ಸ್ಥಳವು ಸಹಸ್ರಾರು ಭಕ್ತಾಧಿಗಳನ್ನು ಪ್ರತಿ ವರ್ಷ ತನ್ನತ್ತ ಆಕರ್ಷಿಸುತ್ತಿರುತ್ತದೆ. ಅಲ್ಲದೆ ಇಲ್ಲಿಗೆ ಸಮೀಪದಲ್ಲಿರುವ ಲೋನಿ ಎಂಬ ಸ್ಥಳದಲ್ಲಿ ಪ್ರಾಚೀನ ಹನುಮಾನ್ ದೇವಾಲಯಕ್ಕೆ ಬೇಕಾದರು ಭೇಟಿ ನೀಡಬಹುದು. ಪರಶುರಾಮನ ಜನ್ಮ ಸ್ಥಳವೆಂದೆ ಗುರುತಿಸಲ್ಪಟ್ಟಿರುವ ಜಲಲಬಾದ್ ಇಲ್ಲಿಗೆ ಸಮೀಪದಲ್ಲಿದೆ. ಭಾರತದ ಪ್ರಸಿದ್ಧ ಉದ್ಯಮಿ ಕುಟುಂಬದ ಹೆಸರಿನಲ್ಲಿರುವ ಮೋಡಿನಗರ್ ಇಲ್ಲಿನ ಪ್ರಮುಖ ಪಟ್ಟಣವಾಗಿದೆ. ಮೋಹನ್ ನಗರ್ ರಾಷ್ಟ್ರದ ರಾಜಧಾನಿ ಪ್ರಾಂತ್ಯದ ಪ್ರಮುಖ ಉದಯೋನ್ಮುಖ ಕಾಲೋನಿಯಾಗಿದೆ. ಮೋಹನ್ ನಗರದಲ್ಲಿ ಪರಿಪೂರ್ಣವಾದ ಮೂಲಭೂತ ಸೌಲಭ್ಯಗಳು,ಶಾಲೆಗಳು, ಆಸ್ಪತ್ರೆಗಳು ಮತ್ತು ಇನ್ನಿತರ ಸೌಲಭ್ಯಗಳು ಲಭ್ಯವಿದೆ.

ಮುರಡ್‍ನಗರದಲ್ಲಿ ಮೂರು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಭಾರತೀಯ ರಕ್ಷಣಾ ಇಲಾಖೆಯ ಶಸ್ತ್ರಗಳ ಉತ್ಪಾದನಾ ಕೈಗಾರಿಕೆಗಳು ಇಲ್ಲಿವೆ. ಕೊನೆಯದಾಗಿ ಇಲ್ಲಿ ದಾದ್ರಿ ಇದೆ. ದಾದ್ರಿಯು ತಂತ್ರಙ್ಞಾನ ಮತ್ತು ನವೀನ ಸೌಲಭ್ಯಗಳನ್ನು ಹೊಂದಿರುವ ಒಂದು ಉದಯೋನ್ಮುಖ ಪಟ್ಟಣವಾಗಿದೆ.

ಘಜಿಯಾಬಾದ್‍ಗೆ ಭೇಟಿ ನೀಡಲು ಅತ್ಯುತ್ತಮ ಅವಧಿ

ದೆಹಲಿಗೆ ಸಮೀಪದಲ್ಲಿರುವುದರಿಂದಾಗಿ ಘಜಿಯಾಬಾದ್‍ನಲ್ಲಿ ದೆಹಲಿಯಂತಹ ಹವಾಮಾನವೇ ಕಂಡು ಬರುತ್ತದೆ. ರಾಜಸ್ಥಾನದಿಂದ ಬರುವ ಧೂಳಿನ ಮಾರುತಗಳು ಮತ್ತು ಹಿಮಾಲಯದ ಹಾಗು ಗರ್ವಾಲ್ ಬೆಟ್ಟಗಳಿಂದ ಉಂಟಾಗುವ ಹಿಮಪಾತವು ಇಲ್ಲಿನ ಹವಾಮಾನದ ಮೇಲೆ ಪರಿಣಾಮವನ್ನು ಬೀರುತ್ತವೆ.

ಘಜಿಯಾಬಾದ್‍ಗೆ ಭೇಟಿ ನೀಡಲು ನವೆಂಬರ್ ನಿಂದ ಏಪ್ರಿಲ್ ತಿಂಗಳುಗಳ ನಡುವಿನ ಅವಧಿಯು ಅತ್ಯುತ್ತಮ ಅವಧಿಯಾಗಿರುತ್ತದೆ. ಆಗ ಇಲ್ಲಿನ ಹವಾಮಾನವು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿರುತ್ತದೆ.

ಘಜಿಯಾಬಾದ್‍ಗೆ ತಲುಪುವುದು ಹೇಗೆ

ಘಜಿಯಾಬಾದ್‍‍ಗೆ ಉತ್ತಮವಾದ ರಸ್ತೆ ಮತ್ತು ರೈಲು ಸಂಪರ್ಕವಿದೆ.

ಘಜಿಯಾಬಾದ್ ಪ್ರಸಿದ್ಧವಾಗಿದೆ

ಘಜಿಯಾಬಾದ್ ಹವಾಮಾನ

ಉತ್ತಮ ಸಮಯ ಘಜಿಯಾಬಾದ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಘಜಿಯಾಬಾದ್

 • ರಸ್ತೆಯ ಮೂಲಕ
  ಘಜಿಯಾಬಾದ್‍ ದೆಹಲಿ ಮತ್ತು ಉತ್ತರ ಪ್ರದೇಶದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ದೆಹಲಿ ಸಾರಿಗೆ ನಿಗಮ, ಉ.ಪ್ರ.ರಾ.ರ.ಸಾ.ನಿಗಮ, ಖಾಸಗಿ ಬಸ್ಸುಗಳು ಮತ್ತು ಇತರ ರಾಜ್ಯದ ಸರ್ಕಾರಿ ಬಸ್ಸುಗಳು ಈ ನಗರಕ್ಕೆ ಬಂದು ಹೋಗಲು ನೆರವಾಗುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಘಜಿಯಾಬಾದ್‍ ರೈಲು ನಿಲ್ದಾಣವು ನಗರದ ಕೇಂದ್ರ ಭಾಗದಲ್ಲಿ ನೆಲೆಗೊಂಡಿದೆ. ಇಲ್ಲಿ ಇ ಎಮ್ ಯು ಎಂಬ ವೇಗವಾಗಿ ಸಾಗುವ ರೈಲುಗಳು ಈ ನಗರವನ್ನು ದೇಶದ ಇತರ ನಗರಗಳ ಜೊತೆಗೆ ಬೆಸೆಯಲು ಕಾರಣವಾಗಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ನೀವು ಘಜಿಯಾಬಾದ್‍ಗೆ ಮೆಟ್ರೊ ಅಥವಾ ಕ್ಯಾಬ್‍ನ ಮೂಲಕ ತಲುಪಬಹುದು. ಘಜಿಯಾಬಾದ್‍‍ನಿಂದ ಈ ವಿಮಾನ ನಿಲ್ದಾಣವು 45 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu