ಮೊರಾದಾಬಾದ್ - ಭಾರತದ ಹಿತ್ತಾಳೆ ನಗರ

ಉತ್ತರಪ್ರದೇಶದಲ್ಲಿ ಅದೇ ಹೆಸರಿನ ಜಿಲ್ಲೆಯಲ್ಲಿರುವ ನಗರವೇ ಮೊರಾದಾಬಾದ್. ಈ ನಗರ ಜನ್ಮ ತಾಳಿದ್ದು ಹೇಗೆ ಎಂದು ಚರಿತ್ರೆ ಹುಡುಕ ಹೊರಟರೆ ಅದು 1600 ರಲ್ಲಿ ಸುಲ್ತಾನ್ ಶಹಜಹಾನ್ ಪುತ್ರ ಮುರಾದ್ ಅವರಿಂದಎಂದು ತಿಳಿದುಬರುತ್ತದೆ. ಮೊರಾದಾಬಾದ್ ಭಾರತದಲ್ಲಿನ ಹಿತ್ತಾಳೆ ಕೈಗಾರಿಕೆಯ ಕೇಂದ್ರ ಸ್ಥಾನ, ಹಾಗಾಗಿ ಇದನ್ನು 'ಪಿತಲ್ ನಗರಿ' (ಹಿತ್ತಾಳೆ ನಗರ) ಎಂದೂ ಕರೆಯುತ್ತಾರೆ.

ಚರಿತ್ರೆ

1632 ರಲ್ಲಿ ಚರಿತ್ರೆಯ ಪ್ರಕಾರ ಮುಘಲ್ ಸಾಮ್ರಾಟ್ ಶಹಜಹಾನ್, ರುಸ್ತುಂ ಖಾನ್ ಎನ್ನುವವನಿಗೆ ಈ ಭಾಗವನ್ನು ಆಕ್ರಮಿಸಿಕೊಳ್ಳಲು ಆದೇಶ ನೀಡಿ, ಕೋಟೆ ನಿರ್ಮಿಸಿ ಅದಕ್ಕೆ ರುಸ್ತುಂ ನಗರವೆಂದು ಹೆಸರಿಡುತ್ತಾನೆ. ಆದರೆ ಈ ನಗರದ ಈ ಹೆಸರನ್ನು ತದನಂತರ ಶಹಜಹಾನ್ ಪುತ್ರ ಮುರಾದ್ ಭಕ್ಷ್ ಬದಲಿಸುತ್ತಾನೆ. 1637 ರಿಂದ ಈ ನಗರ ಮೊರಾದಾಬಾದ್ ಎನ್ನುವ ಹೆಸರಿನಲ್ಲೇ ಇದೆ. ಶಹಜಹಾನ್ ಜಾಮೀಯಾ ಮಸೀದಿಯನ್ನು ನಿರ್ಮಿಸಿದ. ಮೊರಾದಾಬಾದ್ ನಗರ ರಾಮಗಂಗಾ ನದಿಯ ಪಶ್ಚಿಮಕ್ಕಿದೆ.

ಮೇಲೆ ಹೇಳಿದಂತೆ, ಹಿತ್ತಾಳೆ ಕೈಗಾರಿಕೆಯಿಂದಾಗಿ ಈ ನಗರ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಕರಕುಶಲ ಕೈಗಾರಿಕೆಗೂ ಮೊರಾದಾಬಾದ್ ಹೆಸರುವಾಸಿಯಾಗಿದ್ದು, ಇಲ್ಲಿ ತಯಾರಾಗುವ ವಸ್ತುಗಳು ಅಮೇರಿಕಾ, ಬ್ರಿಟನ್, ಕೆನಡಾ, ಜರ್ಮನಿ ಮತ್ತು ಮಧ್ಯಪ್ರಾಚ್ಯ ದೇಶಗಳ ವಾಲ್ಮಾರ್ಟ್, ಟೆಸ್ಕೋ ಮುಂತಾದ ಚಿಲ್ಲರೆ ವ್ಯಾಪಾರೀ ಮಳಿಗೆಯಲ್ಲಿ ಮಾರಾಟವಾಗುವುದು ಹೆಮ್ಮೆಯೆನಿಸುತ್ತದೆ.

ಮೊರಾದಾಬಾದ್ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಹಿತ್ತಾಳೆ ಕೈಗಾರಿಕೆಯ ಹೊರತಾಗಿ ಮೊರಾದಾಬಾದ್ ನಲ್ಲಿ ಪ್ರವಾಸಿಗರು ಬಯಸುವ ಹಲವಾರು ಸಂಗತಿಗಳಿವೆ. ದೇಶದ ಇತರ ನಗರ ಮತ್ತು ಪಟ್ಟಣಗಳಂತೆ ಇಲ್ಲೂ ವಿವಿಧ ಜಾತಿಯ ಧಾರ್ಮಿಕ ಕೇಂದ್ರಗಳಿವೆ. ಪ್ರಮುಖ ದೇವಾಲಯಗಳೆಂದರೆ ಸೀತಾ ದೇವಾಲಯ, ಬಡೇ ಹನುಮಾನ್ಜಿ ದೇವಾಲಯ, ಚಾಂದೌಸಿ ಕುಂಜ್ ಬಿಹಾರಿ ದೇವಾಲಯ, ಸಾಯಿ ಮಂದಿರ, ಪಾತಾಳೇಶ್ವರ ದೇವಾಲಯ ಮತ್ತು ಶನಿಮಹಾತ್ಮನ ದೇವಾಲಯ.

ಮುಘಲ್ ಪೀಳಿಗೆ ಹೊರತಾಗಿ ಈ ನಗರದಲ್ಲಿ ಭಾರತದ ಚರಿತ್ರೆಯ ಹಲವು ಸ್ಮಾರಕಗಳನ್ನು ನೋಡಬಹುದಾಗಿದೆ. ಅದರಲ್ಲಿ ಪ್ರಮುಖವಾಗಿ ಪಟ್ಟಿ ಮಾಡುವುದಾದರೆ ನಿಜಾಬುದುಲ್ಲಾ ಕೋಟೆ, ಮಂದ್ವಾರ್ ಕಾ ಮಹಲ್ ಮತ್ತು ಜಾಮಿಯಾ ಮಸೀದಿ.

ಮೊರಾದಾಬಾದ್ ನಗರದಲ್ಲಿ ಪ್ರವಾಸಿಗರು ಹತ್ತಿರದ ಚಾಂದೌಸಿ (ಚಾಂದ್ ಎಂದರೆ ಚಂದ್ರ ಮತ್ತು ಚಾಂದೌಸಿ ಅಂದರೆ ಒಂದರ್ಥದಲ್ಲಿ ಚಂದ್ರನ ತರಹ). ವಿಜ್ಞಾನದ ನಗರಿಯೂ ಆಗಿರುವ ಇಲ್ಲಿ ಅಚ್ಚನ್ನು ಸಾಗುವಳಿ ಮಾಡುವುದು ಪ್ರಮುಖ ಕಸುಬು ಮತ್ತು ಅಚ್ಚು ಎಣ್ಣೆ ತಯಾರಿಸುವುದು. ಈ ನಗರ ಹಲವು ಧಾರ್ಮಿಕ ಕೇಂದ್ರಗಳಿಗೂ ಸಾಕ್ಷಿಯಾಗಲಿವೆ. ಅದರಲ್ಲಿ ಪ್ರಮುಖವಾಗಿ ರಾಮಬಾಗ್ ಧಾಮ್, ಕುಂಜ್ ಬಿಹಾರಿ ಮಂದಿರ, ವೇಣುಗೋಪಾಲ ದೇವಾಲಯ ಮತ್ತು ಬ್ರಹಂ ದೇವಜಿ ದೇವಾಲಯ.

ಕೆಲವೊಂದು ಕುಟುಂಬಗಳು ತಮಾಷೆ, ವಿಶ್ರಾಂತಿ ಬಯಸುವುದಾದರೆ ಪ್ರೇಮ್ ವಂಡರ್ ಲ್ಯಾಂಡ್ ಮತ್ತು ಪ್ರೇಮ್ ವಾಟರ್ ಕಿಂಗ್ಡಂ. ರಾಮಪುರದಲ್ಲಿರುವ ರಾಜಾ ಲೈಬ್ರರಿಯು ವಿದ್ಯಾವಂತರಿಗೆ ಅನುಕೂಲವಾಗಲಿದ್ದು ಇಂಡೋ ಇಸ್ಲಾಮಿಕ್ ಕಲೆಯನ್ನು ಅರಿಯಲು ಸೂಕ್ತ ಸ್ಥಳವಾಗಿದೆ.

ಮೊರಾದಾಬಾದ್ ತಲುಪುವುದು ಹೇಗೆ?

ಮೊರಾದಾಬಾದ್ ನಗರವನ್ನು ವಿಮಾನ, ರೈಲು ಮತ್ತು ರಸ್ತೆ ಮೂಲಕ ತ್ರಾಸವಿಲ್ಲದೇ ತಲುಪಬಹುದು.

ಮೊರಾದಾಬಾದ್ ತಲುಪಲು ಸೂಕ್ತ ಸಮಯ ಯಾವುದು?

ಮೊರಾದಾಬಾದ್ ಭೇಟಿ ಮಾಡಲು ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೆ ಅತಿ ಸೂಕ್ತ ಯಾಕೆಂದರೆ ವಾತಾವರಣ ಈ ಸಮಯದಲ್ಲಿ ಅತ್ಯಂತ ಪ್ರಸಕ್ತವಿರುತ್ತದೆ. ಇದು ಪ್ರಮುಖ ಕೈಗಾರಿಕಾ ನಗರವಾಗಿರುವುದರಿಂದ, ಮೊರಾದಾಬಾದ್ ವರ್ಷದುದ್ದಕ್ಕೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Please Wait while comments are loading...