ಬುಲಂದ್ ಶಹರ್ - ಮಹಾಭಾರತದೊಂದಿಗೆ ನಂಟು ಹೊಂದಿರುವ ತಾಣ

ಬುಲಂದ್ ಶಹರ್ ನಗರ ಉತ್ತರಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿದೆ ಮತ್ತು ಇದು ಆಡಳಿತ ಮುಖ್ಯಾಲಯವೂ ಹೌದು. ಈ ನಗರದ ಬಗ್ಗೆ ಇತಿಹಾಸ ಜಾಲಾಡಿಸಿದರೆ ಮಹಾಭಾರತದ ಅವಧಿಯಲ್ಲಿ ತಂದು ನಿಲ್ಲಿಸುತ್ತದೆ. ಹಲವು ಭೂಶೋಧನೆಯ ಸಮಯದಲ್ಲಿ ಸಿಕ್ಕ ಮಾಹಿತಿಗಳ ಪ್ರಕಾರ ಪುರಾತನ ನಾಣ್ಯಗಳು, ಮಾನವ ನಿರ್ಮಿತ ವಸ್ತುಗಳು ಪತ್ತೆಯಾಗಿದ್ದು ಅದನ್ನು ಲಕ್ನೋದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.   

ಇತಿಹಾಸ

ಬುಲಂದ್ ಶಹರ್ ನಗರದ ಇತಿಹಾಸ ಹುಡುಕ ಹೊರಟರೆ ಅದು 1200 ಇಸವಿಯದ್ದು. ಈ ಭಾಗ ಹಸ್ತಿನಾಪುರದ ವ್ಯಾಪ್ತಿಯದ್ದು, ಹಸ್ತಿನಾಪುರ ಪಾಂಡವರ ರಾಜಧಾನಿಯಾಗಿತ್ತು. ಹಸ್ತಿನಾಪುರ ಸಾಮ್ಯಾಜ್ಯ ಇಳಿದ ನಂತರ, ಆಹಾರ್ ಎನ್ನುವ ಹೆಸರಿನಲ್ಲಿ ಇದು ಜನಪ್ರಿಯವಾಯಿತು. ಇದು ಬುಲಂದ್ ಶಹರ್ ಜಿಲ್ಲೆಯ ಈಶಾನ್ಯ ಭಾಗದಲ್ಲಿದ್ದು ಕೇಂದ್ರ ಸ್ಥಾನದಲ್ಲಿದೆ.   

ಈದಾದ ಬಳಿಕ ಪರ್ಮಾ ಎನ್ನುವ ರಾಜ ಈ ಭಾಗದಲ್ಲಿ ಕೋಟೆಯನ್ನು ನಿರ್ಮಿಸಿದ. ಕಾಲ ಕ್ರಮೇಣ, ತೋಮರ ಅರಸ ಮತ್ತೊಂದು ಬರಾನ್ ಎನ್ನುವ ಮತ್ತೊಂದು ಕೋಟೆಗೆ ಶಂಕುಸ್ಥಾಪನೆ ನೆರವೇರಿಸಿ ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ. ಬರಾನ್ ಸಾಮ್ರಾಜ್ಯ ಹನ್ನೆರಡನೇ ಶತಮಾನದಲ್ಲಿ ಅಂತ್ಯ ಕಂಡಿತು ಎನ್ನುವುದು ಇತಿಹಾಸ. 1192 ರಲ್ಲಿ ಮೊಘಲ್ ಅರಸ ಮೊಹಮ್ಮದ್ ಘೋರಿ ಭಾರತದ ಹಲವು ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ, ಅದರಲ್ಲಿ ಬರಾನ್ ಕೋಟೆಯೂ ಒಂದು. ಹಲವು ರಾಜರ ಆಡಳಿತದ ನಂತರ ಬರಾನ್ ಮುಂದೆ ಬುಲಂದ್ ಶಹರ್ ಎಂದು  ಕರೆಯಲ್ಪಟ್ಟಿತು. ಬುಲಂದ್ ಶಹರ್ ಎನ್ನುವ ಹೆಸರು ಪರ್ಷಿಯನ್ ಮೂಲದ್ದು ಅದನ್ನು ಹೈ ಸಿಟಿ ಎಂದು ಭಾಷಾಂತರ ಮಾಡಬಹುದು.

ಬುಲಂದ್ ಶಹರ್ ಮತ್ತು ಆಸುಪಾಸಿನ ಪ್ರವಾಸಿ ಸ್ಥಳಗಳು

ಮೇಲೆ ಹೇಳಿದಂತೆ, ಇತಿಹಾಸದ ಪ್ರಕಾರ ಬುಲಂದ್ ಶಹರ್ ನಗರದ ಇತಿಹಾಸ ಪುರಾತನ ಕಾಲದ್ದು, ಮತ್ತು ಹಲವು ಅವಶೇಷಗಳನ್ನು ನಗರದಾದ್ಯಂತ ಕಾಣಬಹುದಾಗಿದೆ. ಪ್ರಮುಖವಾಗಿ ಭಟೋರ ವೀರಪುರ ಮತ್ತು ಗಲೀಬ್ಪುರ. ಆಸಕ್ತಿಯುತವಾದ ಚೋಳ, ಆಹಾರ್ ಮತ್ತು ವಾಲಿಪುರ ಪ್ರದೇಶವಾಗಿದೆ. ಚೋಳ ಎನ್ನುವುದು ಒಂದು ಪುಟ್ಟ ಹಳ್ಳಿಯಾಗಿದ್ದು ಬಿಬ್ಕೋಲ್ ಚೋಲ ಪೋಲಿಯೋ ದನದ ಸಿಡುಬಿನ ಲಸಿಕೆಯ ಕಾರ್ಖಾನೆ ಇಲ್ಲಿದೆ. ಕರ್ಣವಾಸ್ ಐತಿಹಾಸಿಕ ಮಹತ್ವದ್ದು ಮತ್ತು ಮಹಾಭಾರತದ ಹೀರೋ ಕರ್ಣನ ಹೆಸರನ್ನೆ ಇದಕ್ಕಿಡಲಾಗಿದೆ. ವಾಲಿಪುರ ಎನ್ನುವುದು ಮತ್ತೊಂದು ಸಣ್ಣ ಹಳ್ಳಿ ನದಿ ತಟದಲ್ಲಿದ್ದು ಮತ್ತು ಇಲ್ಲಿ ವನಚೇತನ ಕೇಂದ್ರವಿದೆ ಎನ್ನುವುದು ಕುತೂಹಲಕಾರಿ ಅಂಶ.

ಸಿಕಂದರಾಬಾದ್ ಎನ್ನುವ ಪ್ರದೇಶಕ್ಕೂ ಭೇಟಿ ನೀಡಬಹುದು ಇದನ್ನು ಸಿಕಂದರ್ ಲೋಧಿ ಎನ್ನುವವನು ನಿರ್ಮಿಸಿದನು. ಇಲ್ಲಿ ಹಲವಾರು ಪುರಾತನ ಕೀರ್ತಿ ಸ್ಥಂಭವಿದೆ. ಬುಲಂದ್ ಶಹರ್ ಇತರ ಸಣ್ಣ ನಗರಗಳನ್ನೂ ಹೊಂದಿದ್ದು ದೇವಾಲಯಗಳು, ಧಾರ್ಮಿಕ ಚಿಹ್ನೆಗಳು ಬೆಲೋನ್ ದೇವಾಲಯ ಈ ಪ್ರದೇಶದಲ್ಲಿದೆ.

ಬುಲಂದ್ ಶಹರ್ ತಲುಪುದು ಹೇಗೆ?

ಬುಲಂದ್ ಶಹರ್ ನಗರಕ್ಕೆ ರೈಲು ಮತ್ತು ರಸ್ತೆ ಮೂಲಕ ಸಂಪರ್ಕ ಉತ್ತಮವಾಗಿದೆ.

ಭೇಟಿ ನೀಡಲು ಸೂಕ್ತ ಸಮಯ

ಬುಲಂದ್ ಶಹರ್ ಭೇಟಿ ನೀಡಲು ನವೆಂಬರ್ ಮತ್ತು ಎಪ್ರಿಲ್ ತಿಂಗಳು ಅತ್ಯಂತ ಸೂಕ್ತ ಸಮಯ

Please Wait while comments are loading...