Search
 • Follow NativePlanet
Share
ಮುಖಪುಟ » ಸ್ಥಳಗಳು» ಅಲೀಗಡ್

ಅಲೀಗಢ - ಇತಿಹಾಸ ಪ್ರಸಿದ್ಧ ಬೀಗಗಳ ಊರು

22

ಅಲೀಗಢ ನಗರವು ಭಾರತದ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯಲ್ಲಿದೆ. ಈ ನಗರವು ಬಹುಮುಖ್ಯ ಶಿಕ್ಷಣ ಕೇಂದ್ರವಾಗಿದ್ದು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಪ್ರಸಿದ್ಧ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯವು ಈ ಜಿಲ್ಲೆಯಲ್ಲಿದೆ. ಇಲ್ಲಿಯೇ ಫ್ರೆಂಚರು ಮತ್ತು ಬ್ರಿಟೀಷರ ನಡುವಿನ ಇತಿಹಾಸ ಪ್ರಸಿದ್ಧ ಅಲೀ ಘರ್ ಯುದ್ಧವು ನಡೆದಿತ್ತು.

ಅಲೀಗಢವನ್ನು ಮುಂಚೆ ಇಲ್ಲಿನ ಮೂಲನಿವಾಸಿಗಳ ಹೆಸರಾದ ಕೊಲ್ ಎನ್ನುವ ಹೆಸರಿನಲ್ಲಿಯೇ ಕರೆಯಲಾಗುತ್ತಿತ್ತು. ಇನ್ನು ಕೆಲವರ ಪ್ರಕಾರ, ಇದಕ್ಕೆ ಈ ಹೆಸರು ಬರಲು ಬೆಟ್ಟ ಅಥವ ಸನ್ಯಾಸಿ ಅಥವ ರಾಕ್ಷಸ ಕೂಡ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ. ಮುಘಲ್ ದೊರೆ ಇಬ್ರಾಹಿಂ ಲೋಧಿಯ ಕಾಲದಲ್ಲಿ ಉಮರನ ಮಗನಾದ ಮೊಹಮ್ಮದನು ಇಲ್ಲಿನ ಗವರ್ನರನಾಗಿದ್ದನು, ಇಲ್ಲಿ ಕೊಲ್ ಹೆಸರಿನ ಕೋಟೆ ಕಟ್ಟಿದನು. ಈಗ ಇದನ್ನು ಅಲೀಗಢ ಕೋಟೆ ಎಂದು ಕರೆಯುವರು. ಇದು ಈ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಈ ನಗರವು ಅನೇಕ ರಾಜರ ಆಳ್ವಿಕೆಯನ್ನು ಕಂಡಿದ್ದು ಆ ಸಮಯದಲ್ಲಿ ಇದಕ್ಕೆ ಮುಹಮ್ಮದ್ಗಢ್, ಸಬಿತಗಢ್, ರಾಮಗಢ ಎಂಬ ಹೆಸರುಗಳನ್ನು ಇಟ್ಟರೂ ಕೂಡ ಕಡೆಗೆ ಅಲೀಗಢ ಎಂಬ ಹೆಸರೆ ಶಾಶ್ವತವಾಯಿತು.

ಅಲೀಗಢವು ಮುಖ್ಯ ಶಿಕ್ಷಣ ಕೇಂದ್ರವಾಗಿರುವುದರ ಜೊತೆಗೆ ಉತ್ತರ ಭಾರತದ ಪ್ರಮುಖ ವಾಣಿಜ್ಯ ಕೇಂದ್ರ. ಇದು ಬೀಗ ತಯಾರಿಕಾ ಕಾರ್ಖಾನೆಗಳಿಗೆ ಪ್ರಸಿದ್ಧವಾಗಿದೆ. ಮುಘಲರ ಕಾಲದಿಂದಲೂ ಈ ಕಾರ್ಖಾನೆಗಳು ಪ್ರಸಿದ್ಧವಾಗಿವೆ. ಈ ನಗರವು ಕಂಚಿನ ವಸ್ತುಗಳಿಗೆ ಮಾತ್ರವಲ್ಲದೆ 'ಅಲೀಗಢ್ ಪೈಜಾಮಾಗಳು' ಪ್ರಸಿದ್ಧವಾಗಿದೆ. ಈ ವಸ್ತುಗಳನ್ನು ರೈಲ್ವೇ ರೋಡ್ ಮಾರ್ಕೆಟ್ ಮತ್ತು ಕೆಂದ್ರ ಮಾರುಕಟ್ಟೆ ಸ್ಥಳಗಳಲ್ಲಿ ಕೊಳ್ಳಬಹುದು.

ಅಲೀಗಢದ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು

ಅಲೀಗಢದ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಇದರೊಂದಿಗೆ ಇಲ್ಲಿರುವ ಮತ್ತೊಂದು ಆಕರ್ಷಣೆ 'ದೋರ್' ಕೋಟೆ. ಇದು ಈಗ ಹಾಳುಬಿದ್ದಿರುವ ಸ್ಥಿತಿಯಲ್ಲಿದ್ದರೂ ಇದಕ್ಕೆ ಐತಿಹಾಸಿಕ ಮಹತ್ವವಿದೆ. ಇಲ್ಲಿನ ಅಲೀಗಢ ವಿಶ್ವವಿದ್ಯಾಲಯವು ಭಾರತದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದು.

ಈ ನಗರದಲ್ಲಿ ಕೆಲವು ಮುಖ್ಯ ವಸ್ತುಸಂಗ್ರಹಾಲಯಗಳು ಇವೆ. ಸರ್ ಸೈಯದ್ ಅಕಾಡೆಮಿ ಮ್ಯೂಸಿಯಂ, ಚಾಚಾ ನೆಹರು ಜ್ಞಾನ ಪುಷ್ಪ ಮತ್ತು ಹಕೀಂ ಕರಂ ಹುಸೇನ್ ಮ್ಯೂಸಿಯಂ ಇವು ಮುಖ್ಯವಾದವು. ಧಾರ್ಮಿಕ ಸ್ಥಾನವಾಗಿ ಕೂಡ ಇಲ್ಲಿ ಕೆಲವು ಸ್ಥಳಗಳಿವೆ. ಜಾಮಾ ಮಸೀದಿ, ಶಿವರಾಜಪುರದ ಕೀರೇಶ್ವರ ದೇವಾಲಯ, ಜೈನ ಸಮುದಾಯದ ತೀರ್ಥಧಾಮ ಮಂಗಳಾಯಾತನ ಇದು ದೇವಾಲಯಗಳ ಸಂಕೀರ್ಣ ಹಾಗೂ ಅಧ್ಯಯನ ಕೇಂದ್ರ.

ಅಲೀಗಢದಲ್ಲಿ ಕೆಲವು ಪ್ರಸಿದ್ಧ ದರ್ಗಾಗಳು ಕೂಡ ಇವೆ. ಸೂಫಿ ಸಂತರ ನೆಲೆಯಾದ ಇದನ್ನು ಹಿಂದೂಗಳು ಮತ್ತು ಮುಸ್ಲಿಂರು ಪೂಜಿಸುತ್ತಾರೆ. ಬಾಬಾ ಬಾರ್ಚಿ ಬಹದ್ದೂರ ದರ್ಗಾಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅಲೀಗಢದಲ್ಲಿ ಭಾರತದಲ್ಲೇ ದೊಡ್ಡದಾದ ಮತ್ತು ಏಷ್ಯಾದಲ್ಲೇ ಎರಡನೇ ಬೃಹತ್ ಗ್ರಂಥಾಲಯವಾದ ಮೌಲಾನಾ ಅಜಾದ್ ಗ್ರಂಥಾಲಯವಿದೆ.

ನಗರದ ಸದ್ದುಗದ್ದಲಗಳಿಂದ ದೂರವಿರುವ ಶೇಕ್ ಕೆರೆಯಲ್ಲಿ ಸ್ಥಳೀಯ ಮತ್ತು ವಲಸೆ ಬಂದ ಪಕ್ಷಿಗಳನ್ನು ಕಾಣಬಹುದು. ಅಲೀಗಢದ ಸಮೀಪವಿರುವ ನಾಗ್ಲಿಯ ಎನ್ನುವ ಸಂರಕ್ಷಿತ ಹಳ್ಳಿಯಲ್ಲಿ ಅಪರೂಪದ ಪ್ರಾಣಿಗಳಾದ ಕಪ್ಪು ಜಿಂಕೆಯನ್ನು ಕಾಣಬಹುದು. ಅಲೀಗಢದಲ್ಲಿ ಬೀಗಗಳು, ಕಂಚಿನ ವಸ್ತುಗಳು, ಕರಕುಶಲ ವಸ್ತುಗಳನ್ನು ಕೊಳ್ಳುವುದು ಒಂದು ಒಳ್ಳೆಯ ಅನುಭವ.

ಭೇಟಿಗೆ ಸೂಕ್ತ ಸಮಯ

ಅಕ್ಟೋಬರ್ ಇಂದ ಮಾರ್ಚ್ ಭೇಟಿಗೆ ಸೂಕ್ತ ಸಮಯ.

ತಲುಪುವುದು ಹೇಗೆ?

ಅಲೀಗಢಕ್ಕೆ ರಸ್ತೆ, ರೈಲು, ವಿಮಾನ ಮಾರ್ಗದಲ್ಲಿ ಸುಲಭವಾಗಿ ತಲುಪಬಹುದು.

ಅಲೀಗಡ್ ಪ್ರಸಿದ್ಧವಾಗಿದೆ

ಅಲೀಗಡ್ ಹವಾಮಾನ

ಅಲೀಗಡ್
35oC / 94oF
 • Sunny
 • Wind: W 13 km/h

ಉತ್ತಮ ಸಮಯ ಅಲೀಗಡ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಅಲೀಗಡ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಭಾರತದ ಜೈಪುರ, ಆಗ್ರಾ, ಮಥುರ, ಗಾಜಿಬಾದ್, ಹೊಸ ದೆಹಲಿ, ಲಕ್ನೋ ಮತ್ತು ವಾರಣಾಸಿಗಳಂತಹ ಸಂಪರ್ಕ ಹೊಂದಿವೆ. ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ದೆಹಲಿ-ಕೊಲ್ಕತ್ತಾ ಗ್ರಾಂಡ್ ಕೋರ್ಡ್ ಮಾರ್ಗದಲ್ಲಿರುವ ಅಲೀಗಢವು ಭಾರತದ ಎಲ್ಲ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿನ ಪ್ರಮುಖ ನಿಲ್ದಾಣ ಅಲಿಗಢ ಜಂಕ್ಷನ್‍ಗೆ ಹೊಸ ದೆಹಲಿ, ಆಗ್ರಾ, ಕಾನ್ಪುರ, ಲಖ್ನೋ, ಬನಾರಸ್, ಜೈಪುರ, ಕೊಲ್ಕತ್ತಾ ಮತ್ತು ಮುಂಬೈಗಳಿಂದ ಸೂಪರ್‌‌‌‌‌‌‌‍ಫಾಸ್ಟ್ ರೈಲು ಸೌಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಲ್ಲಿಗೆ ಸಮೀಪದ ಹೊಸ ದೆಹಲಿಯ ವಿಮಾನ ನಿಲ್ದಾಣವು 130 ಕಿಮೀ ದೂರದಲ್ಲಿದೆ. ದೆಹಲಿಯಿಂದ ಇಲ್ಲಿಗೆ ಬಸ್ಸು, ರೈಲು ಅಥವಾ ಟ್ಯಾಕ್ಸಿಗಳ ಮೂಲಕ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
06 Aug,Thu
Return On
07 Aug,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
06 Aug,Thu
Check Out
07 Aug,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
06 Aug,Thu
Return On
07 Aug,Fri
 • Today
  Aligarh
  35 OC
  94 OF
  UV Index: 9
  Sunny
 • Tomorrow
  Aligarh
  29 OC
  85 OF
  UV Index: 9
  Sunny
 • Day After
  Aligarh
  31 OC
  88 OF
  UV Index: 9
  Sunny