Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ಹವಾಮಾನ

ಅಲೀಗಡ್ ಹವಾಮಾನ

ಅಲೀಗಢಕ್ಕೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್-ಮಾರ್ಚ್. ಉಳಿದ ತಿಂಗಳುಗಳಲ್ಲಿ ಉಷ್ಣಾಂಶವು 32.2-33.8 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವಾದ್ದರಿಂದ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಎಲ್ಲ ಬಗೆಯ ಪ್ರವಾಸಿಗರಿಗೆ ಹೊಂದುವಂತಹ ಹಲವು ಬಗೆಯ ತಿಂಡಿ ತಿನಿಸುಗಳೊಂದಿಗೆ ಹೋಟಲುಗಳು, ವಸತಿ ಸೌಲಭ್ಯಗಳು ಲಭ್ಯ.

ಬೇಸಿಗೆಗಾಲ

ಅಲೀಗಢದಲ್ಲಿ ಹೆಚ್ಚು ಉಷ್ಣಾಂಶವಿರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಎಂದರೆ 40 ಡಿಗ್ರಿ ಸೆಲಿಯಸ್ ಹಾಗೂ ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವು ಕಂಡುಬರುತ್ತದೆ. ಏಪ್ರಿಲ್ ಮತ್ತು ಮೇ ತೀವ್ರ ಬೇಸಿಗೆಯ ತಿಂಗಳುಗಳು.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶದೊಂದಿಗೆ ಧಗೆ ಕೂಡ ಇರುತ್ತದೆ. ಕೆಲವು ಬಾರಿ ಅಕ್ಟೋಬರ್ ತಿಂಗಳವರೆಗೆ ಮಳೆಗಾಲ ಮುಂದುವರೆಯುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಕನಿಷ್ಠ 7 ಡಿಗ್ರಿಯಿಂದ ಗರಿಷ್ಠ 22 ಡಿಗ್ರಿಯವರೆಗೆ ಉಷ್ಣಾಂಶವಿರುತ್ತದೆ.