ಅಲೀಗಢದಲ್ಲಿನ ಪುರಾತನ ಮತ್ತು ಶ್ರೀಮಂತ ಮಸೀದಿಯಾದ ಜಾಮಾ ಮಸೀದಿಯನ್ನು 1724ರಲ್ಲಿ ಸಾಬಿತ್ ಖಾನ್ ಕಟ್ಟಿಸಿದನು. ಇದನ್ನು ಪೂರ್ಣಗೊಳಿಸಲು 14 ವರ್ಷಗಳು ಬೇಕಾಯಿತಂತೆ. ಈ ಮಸೀದಿಯು ಬಲಾಯಿ ಖಿಲ್ಲಾದಲ್ಲಿ ಇದೆ. ಇದು ನಗರದ ಅತಿ ಎತ್ತರದ ಪ್ರದೇಶವಾದ್ದರಿಂದ ಇದನ್ನು ನಗರದ ಯಾವುದೇ ಭಾಗದಿಂದ ಬೇಕಾದರೂ ನೋಡಬಹುದು.
ಮಸೀದಿಯಲ್ಲಿ ಜನರು ನಮಾಜ್ ಮಾಡಲು ಆರು ಸ್ಥಳಗಳಿವೆ. ಕಾಲಾಂತರದಲ್ಲಿ ಮಸೀದಿಯು ಹಲವು ಬಾರಿ ನವೀಕರಣಗೊಂಡಿದ್ದು ಹಲವು ಬಗೆಯ ವಾಸ್ತುಶೈಲಿಗಳನ್ನು ಅಳವಡಿಸಿಕೊಂಡಿರುವುದನ್ನು ಕಾಣಬಹುದು. ಬಿಳಿ ಬಣ್ಣದ ಗುಮ್ಮಟಗಳು ಮುಸ್ಲಿಂ ಕಲೆ ಮತ್ತು ಸಂಸ್ಕೃತಿಯ ಪ್ರತೀಕ.