Search
 • Follow NativePlanet
Share
ಮುಖಪುಟ » ಸ್ಥಳಗಳು» ನೊಯ್ಡಾ

ಭಾರತದ ಐಟಿ ಕೇಂದ್ರ ನೊಯ್ಡಾ ನಗರ

17

ನೊಯ್ಡಾ ಎನ್ನುವುದು ವಾಸ್ತವವಾಗಿ ಒಖ್ಲಾ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಸಂಕ್ಷಿಪ್ತರೂಪ ಮತ್ತು ಅದೇ ಹೆಸರಿನೊಂದಿಗೆ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದೆ. 1976 ರ ಎಪ್ರಿಲ್ 17 ರಂದು ನೊಯ್ಡಾ ಅಸ್ತಿತ್ವಕ್ಕೆ ಬಂತು ಮತ್ತು ಪ್ರತೀ ವರ್ಷ ಈ ದಿನವನ್ನು ನೊಯ್ಡಾ ದಿನವೆಂದು ಆಚರಿಸಲಾಗುತ್ತದೆ.

ಭಾರತದ ಐಟಿ ಕೇಂದ್ರ

ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ನೊಯ್ಡಾ ನೆಲೆನಿಂತಿದೆ. ಇದರ ಆಡಳಿತ ಮಂಡಳಿ ಸಮೀಪದ ಗ್ರೇಟರ್ ನೊಯ್ಡಾ ನಗರದಲ್ಲಿದೆ. ಗುರ್ಗಾಂವ್ ನೊಂದಿಗೆ ನೊಯ್ಡಾ ಕೂಡ ಭಾರತದ ಐಟಿ ಕ್ಷೇತ್ರದ ಪ್ರಮುಖ ಕೇಂದ್ರ ಹಾಗೂ ಇಂದು ಹೆಚ್ಚಿನ ಅಂತಾರಾಷ್ಟ್ರೀಯ ಕಂಪನಿಗಳ ಕಚೇರಿಗಳು ಇಲ್ಲಿವೆ. ಐಬಿಎಂ, ಮಿರಾಕಲ್, ಫುಜಿಟ್ಸು, ಏವನ್ ಹೆವಿಟ್, ಎಬಿಕ್ಸ್, ಸಿಎಸ್ ಸಿ, ಟ್ರೈಬಲ್ ಫ್ಯೂಷನ್, ಫಿಸೆರ್ವ್, ಟಿಸಿಎಸ್, ವಿಪ್ರೋ, ಎಚ್ ಸಿಎಲ್, ಎರಿಕ್ಸನ್, ಟೆಕ್ ಮಹೀಂದ್ರಾ, ಅಡೋಬ್ ಮತ್ತು ಡೆಲ್ ನಂತಹ ಪ್ರಸಿದ್ಧ ಕಂಪೆನಿಗಳು ಇಲ್ಲಿವೆ.

ವಿಶೇಷ ಆರ್ಥಿಕ ವಲಯ ಮಾನ್ಯತೆಯನ್ನು ಪಡೆದುಕೊಂಡಿರುವ ನೊಯ್ಡಾವನ್ನು ಹೆಚ್ಚಿನ ಕಂಪನಿಗಳು ತಮ್ಮ ಕೇಂದ್ರ ಕಚೇರಿಯನ್ನಾಗಿ ಮಾಡಿವೆ. ನೊಯ್ಡಾ ದೆಹಲಿಗೆ ಹತ್ತಿರವಾಗಿರುವುದು ಇದಕ್ಕೆ ಮತ್ತೊಂದು ಕಾರಣ. ಐಟಿ ಇಂಡಸ್ಟ್ರೀಯನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ನಿರ್ಮಿಸಿರುವ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಗೆ ಇಲ್ಲಿ ಕೇಂದ್ರ ಕಚೇರಿಯಿದೆ.

ನೊಯ್ಡಾ ಮತ್ತಷ್ಟು ಪ್ರಸಿದ್ಧಿಗೆ ಬರಲು ಮತ್ತೊಂದು ಕಾರಣ ಇಲ್ಲಿರುವ ಫಿಲ್ಮ್ ಸಿಟಿ. ಇದನ್ನು ಸಂದೀಪ್ ಮರ್ವಾ ಅವರು ನಿರ್ಮಿಸಿದ್ದು, ಇದು ಇಂದು ಪ್ರಮುಖ ನ್ಯೂಸ್ ಚಾನೆಲ್ ಗಳಾದ ಎನ್ ಡಿಟಿವಿ, ಟಿವಿ ಟುಡೇ ಗ್ರೂಪ್, ಸಿಎನ್ ಎನ್-ಐಬಿಎನ್, ಝೀ ನ್ಯೂಸ್ ಮತ್ತು ಸಿಎನ್ ಬಿಸಿಯ ಕೇಂದ್ರವಾಗಿದೆ. ಕಾನ್ಫರೆನ್ಸ್ ಮತ್ತು ಸಭೆಗಳಳಿಗೆ ಇದು ಪ್ರಮುಖ ಕೇಂದ್ರವಾಗಿದೆ. ದೆಹಲಿಯ ಅತೀ ದೊಡ್ಡ ಕಾನ್ಫರೆನ್ಸ್ ಮತ್ತು ಇಂಡಿಯಾ ಎಕ್ಸ್ ಪೋ ಸೆಂಟರ್ ಮತ್ತು ಮಾರ್ಟ್(ಐಇಸಿಎಂ) ಮತ್ತು ದೆಹಲಿ ಅಂತಾರಾಷ್ಟ್ರೀಯ ಎಕ್ಸ್ ಪೋ ಪ್ರದರ್ಶನಗಳಿಗೆ ಇಲ್ಲಿ ಕೇಂದ್ರಗಳಿವೆ.

ದೆಹಲಿಯ ಮೆಟ್ರೋ ರೈಲು ನೊಯ್ಡಾವನ್ನು ಸಂಪರ್ಕಿಸುತ್ತದೆ ಮತ್ತು ಇಲ್ಲಿ ಹಲವಾರು ಶಾಪಿಂಗ್ ಮಾಲ್ ಮತ್ತು ಗ್ರೇಟ್ ಇಂಡಿಯಾ ಪ್ಲೇಸ್ ನಂತಹ ಮಲ್ಟಿಪ್ಲೆಕ್ಸ್ ಗಳಿವೆ. ಸಭೆ, ಕಾನ್ಫರೆನ್ಸ್, ಪ್ರದರ್ಶನ, ಉದ್ಯಮ ಇತ್ಯಾದಿಗಳಿಗೆ ನೊಯ್ಡಾ ಅತೀ ಮುಖ್ಯ ಕೇಂದ್ರವಾಗಿದೆ. 2015ರ ವೇಳೆಗೆ ಐಇಸಿಎಂ ಇಲ್ಲಿ 400 ಕೋಣೆಗಳ ಪಂಚತಾರಾ ಹೋಟೆಲ್ ನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದೆ. ಸ್ವಚ್ಛತೆಯ ವಿಷಯದಲ್ಲಿ ನೊಯ್ಡಾ ಗುರ್ಗಾಂವ್ ಗಿಂತ ಮುಂದಿದ್ದು, ಭಾರತದಲ್ಲಿ 17ನೇ ಸ್ಥಾನದಲ್ಲಿದೆ. ಗುರ್ಗಾಂವ್ 87ನೇ ಸ್ಥಾನದಲ್ಲಿದೆ.

ನೊಯ್ಡಾ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಇತ್ತೀಚಿನ ವರ್ಷಗಳಲ್ಲಿ ನೊಯ್ಡಾ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತ್ವರಿತ ಏರಿಕೆಯನ್ನು ಕಂಡಿದೆ. ಇಂಟರ್ ನ್ಯಾಶನಲ್ ರಿಕ್ರಿಯೇಶನ್ ಪಾರ್ಕ್ ಪ್ರೈ. ಲಿಮಿಟೆಡ್ ಆ್ಯಂಡ್ ಯುನಿಟೆಕ್ ಲಿಮಿಟೆಡ್ ಜಂಟಿಯಾಗಿ ಆರಂಭಿಸಲಿರುವ ವರ್ಲ್ಡ್ ಆಫ್ ವಂಡರ್ಸ್ ನಂತಹ ಹಲವಾರು ಪ್ರತಿಷ್ಠಿತ ಯೋಜನೆಗಳು ಬರುತ್ತಿವೆ. ಗ್ರೇಟ್ ಇಂಡಿಯನ್ ಪ್ಲೇಸ್ ಉತ್ತರ ಭಾರತದ ಅತ್ಯಂತ ದೊಡ್ಡ ಮಾಲ್ ಆಗಿದ್ದು, ಇಲ್ಲಿ ವಿಶ್ವದ ಹೆಚ್ಚಿನ ಎಲ್ಲಾ ಕಂಪನಿಗಳ ಮಳಿಗೆಗಳಿವೆ. ಇದಲ್ಲದೆ ಹಲವಾರು ಮನರಂಜನಾ ಕೇಂದ್ರಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಇಲ್ಲಿವೆ.

ಭವ್ಯ, ವೈವಿಧ್ಯಮಯ ಕಟ್ಟಡಗಳನ್ನು ಹೊರತುಪಡಿಸಿ ನೊಯ್ಡಾದಲ್ಲಿ ಸಾಯಿಬಾಬಾ ಮಂದಿರ, ಲೋಟಸ್ ಮಂದಿರ ಮತ್ತು ಇಸ್ಕಾನ್ ಮಂದಿರವಿದೆ. ಒಖ್ಲಾ ಪಕ್ಷಿಧಾಮವು ನಗರದ ಜೀವನದ ಜನರಿಗೆ ಪ್ರಶಾಂತತೆಯನ್ನು ಒದಗಿಸುತ್ತದೆ. ಸೆಕ್ಟರ್ 18 ಮಾರ್ಕೆಟ್ ನೊಯ್ಡಾದ ಬೃಹತ್ ವ್ಯಾಪಾರ ಕೇಂದ್ರವಾಗಿದೆ.

ನೊಯ್ಡಾಗೆ ತಲುಪುವುದು

ವಿಮಾನ, ರೈಲು ಮತ್ತು ರಸ್ತೆ ಮೂಲಕ ಅನುಕೂಲಕರವಾಗಿ ನೊಯ್ಡಾಗೆ ತಲುಪುಬಹುದಾಗಿದೆ. ಸಮೀಪದ ವಿಮಾನ ಮತ್ತು ರೈಲು ನಿಲ್ದಾಣಗಳು ದೆಹಲಿಯಲ್ಲಿದೆ.

ನೊಯ್ಡಾ ಪ್ರಸಿದ್ಧವಾಗಿದೆ

ನೊಯ್ಡಾ ಹವಾಮಾನ

ನೊಯ್ಡಾ
35oC / 95oF
 • Haze
 • Wind: W 19 km/h

ಉತ್ತಮ ಸಮಯ ನೊಯ್ಡಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನೊಯ್ಡಾ

 • ರಸ್ತೆಯ ಮೂಲಕ
  ನೊಯ್ಡಾಗೆ ಮೂರು ಎಕ್ಸ್ ಪ್ರೆಸ್ ವೇಗಳಿವೆ. ಡಿಎನ್ ಡಿ ಫ್ಲೈವೇ, ಗ್ರೇಟರ್ ನೊಯ್ಡಾ ಎಕ್ಸ್ ಪ್ರೆಸ್ ವೇ ಮತ್ತು ಯಮುನಾ ಎಕ್ಸ್ ಪ್ರೆಸ್ ವೇ ಇದೆ. ಯುಪಿಎಸ್ ಆರ್ ಟಿಸಿ, ಡಿಟಿಸಿ ಮತ್ತು ಖಾಸಗಿ ಬಸ್ ಗಳು ವಿವಿಧ ಮಾರ್ಗಗಳ ಮೂಲಕ ನೊಯ್ಡಾ ತಲುಪುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನೊಯ್ಡಾದಲ್ಲಿ ಯಾವುದೇ ರೈಲು ನಿಲ್ದಾಣಗಳಿಲ್ಲ. ಸಮೀಪದ ರೈಲು ನಿಲ್ದಾಣ ದೆಹಲಿ. ಇಲ್ಲಿಂದ ಟ್ಯಾಕ್ಸಿ ಅಥವಾ ಮೆಟ್ರೋ ಮೂಲಕ ನೊಯ್ಡಾಗೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಹತ್ತಿರದ ವಿಮಾನ ನಿಲ್ದಾಣ ದೆಹಲಿ ವಿಮಾನ ನಿಲ್ದಾಣ. ಇಲ್ಲಿಂದ ಟ್ಯಾಕ್ಸಿ ಅಥವಾ ದೆಹಲಿ ಮೆಟ್ರೋ ಮೂಲಕ ನೊಯ್ಡಾ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
02 Oct,Fri
Return On
03 Oct,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
02 Oct,Fri
Check Out
03 Oct,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
02 Oct,Fri
Return On
03 Oct,Sat
 • Today
  Noida
  35 OC
  95 OF
  UV Index: 9
  Haze
 • Tomorrow
  Noida
  33 OC
  91 OF
  UV Index: 9
  Sunny
 • Day After
  Noida
  33 OC
  92 OF
  UV Index: 9
  Sunny