Search
 • Follow NativePlanet
Share
ಮುಖಪುಟ » ಸ್ಥಳಗಳು» ಗುರ್ಗಾಂವ್

ಗುರ್ಗಾಂವ್ : ರಿಯಲ್ ಎಸ್ಟೇಟಿನ ಕಣ್ಮಣಿ

131

ಗುರ್ಗಾಂವ್ ಹರಿಯಾಣದ ಅತಿದೊಡ್ಡನಗರ. ಇದನ್ನು ಹರಿಯಾಣದ ಆರ್ಥಿಕ ಮತ್ತು ಕೈಗಾರಿಕ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇದು ದೆಹಲಿಯಿಂದ 30 ಕಿಮೀ ದೂರದಲ್ಲಿದೆ. ಗುರ್ಗಾಂವ್ ದೆಹಲಿಯ ನಾಲ್ಕು ಉಪನಗರಗಳಲ್ಲಿ ಒಂದು ಮತ್ತು ಇದು ರಾಜಧಾನಿ ಪ್ರದೇಶದ ಭಾಗ. ಗುರ್ಗಾಂವ್ನಲ್ಲಿ ಹಳೆಯದು ಮತ್ತು ಹೊಸದು ಎಂಬ ಎರಡು ಪಟ್ಟಣಗಳಿವೆ. ಹಳೆಯ ಗುರ್ಗಾಂವ್ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ ಮತ್ತು ತುಂಬಾ ಇಕ್ಕಟ್ಟಾಗಿದೆ. ಹೊಸ ಗುರ್ಗಾಂವ್ ಇದಕ್ಕೆ ತದ್ವಿರುದ್ಧವಾಗಿದೆ. ಈ ಪಟ್ಟಣವನ್ನು ಯೋಜಿತ ರೀತಿಯಲ್ಲಿ ರೂಪಿಸಲಾಗಿದೆ. ಚಂಡೀಗಢ ಮತ್ತು ಮುಂಬೈನ ನಂತರ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪ್ರದೇಶ ಇದಾಗಿದೆ.

ಗುರ್ಗಾಂವ್ನ ಸುತ್ತಮುತ್ತಲ ಪ್ರವಾಸಿ ತಾಣಗಳು

ಗುರ್ಗಾಂವ್ ಮೊದಲಿಗೆ ದೆಹಲಿಯ ನೈಋತ್ಯ ಭಾಗದಲ್ಲಿನ ಸಣ್ಣ ಹಳ್ಳಿಯಾಗಿತ್ತು. ಆದರೆ ಈಗ ಇದು ಅತಿಹೆಚ್ಚು ಜನಸಂಖ್ಯೆ ಮತ್ತು ಆದಾಯವನ್ನು ಹೊಂದಿರುವ ಪ್ರದೇಶವಾಗಿದೆ. ಈಗ ಪ್ರವಾಸೋದ್ಯಮದಲ್ಲೂ ಈ ನಗರವು ಹೆಸರುಮಾಡಿದೆ. ಈ ನಗರದಲ್ಲಿ 80 ಮಾಲ್ಗಳಿವೆ. ಇವುಗಳಲ್ಲಿ ಆಂಬಿಯನ್ಸ್ ಮಾಲ್ ದೇಶದ ಎರಡನೇ ಅತಿ ದೊಡ್ಡ ಮಾಲ್. ಇದಲ್ಲದೆ ಸಿಟಿ ಸೆಂಟರ್ ಮಾಲ್ ಮತ್ತು ಪ್ಲಾಜಾ ಮಾಲ್ಗಳು ಮುಖ್ಯವಾದವು. ಇವುಗಳಲ್ಲದೆ ಮನೋರಂಜನಾ ಉದ್ಯಾನವನಗಳಿವೆ. ಲೀಶರ್ ವ್ಯಾಲಿ ಪಾರ್ಕ್ ಮತ್ತು ಕಿಂಗ್ಡಂ ಆಫ್ ಡ್ರೀಮ್ಸ್ಗಳು ಸೆಕ್ಟರ್-29ರಲ್ಲಿದೆ. ಇಲ್ಲಿನ ಇನ್ನಿತರ ಆಕರ್ಷಣೆಗಳೆಂದರೆ ಅಪ್ಪುಗರ್, ಸುಲ್ತಾನಪುರ ಪಕ್ಷಿಧಾಮ, ಪಟೌಡಿ ಅರಮನೆ ಇತ್ಯಾದಿ.

ಗುರ್ಗಾಂವ್ನ ಮೂಲಭೂತ ರಚನಾವೈಖರಿ

ದೆಹಲಿಯ ಹತ್ತಿರದ ಒಂದು ಸಣ್ಣ ಹಳ್ಳಿಯಂತಿದ್ದ ಗುರ್ಗಾಂವ್ ಇಂದು ಮಿಲಿಯನ್ ಜನರಿಗೆ ವಸತಿಯನ್ನು, ಹಲವು ವಾಣಿಜ್ಯ ಸಂಕೀರ್ಣಗಳು ಮತ್ತು ಕಛೇರಿಗಳಿಗೆ ತಾಣವನ್ನು ಒದಗಿಸಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಈ ಪ್ರದೇಶವು ಪ್ರಚಂಡವಾಗಿ ಬೆಳೆದಿದೆ. ರಿಯಲ್ ಎಸ್ಟೇಟ್ನಿಂದಾಗಿಯೇ ಈ ಪ್ರದೇಶವು ಜನಸಂಖ್ಯೆ ಮತ್ತು ಆರ್ಥಿಕತೆಯಲ್ಲಿ ಹೆಚ್ಚಳವನ್ನು ಕಂಡಿತು. ಡಿಎಲ್ಎಫ್ ಗ್ರೂಪ್ ಸ್ಥಳೀಯರ ಜಮೀನುಗಳನ್ನು ಖರೀದಿಸಿತು. ಇದೇ ಈ ಬದಲಾವಣೆಗೆ ಮುನ್ನುಡಿಯಾಯಿತು. ಮಿಂಚಿನ ವೇಗದಲ್ಲಿ ಉಂಟಾದ ನಗರೀಕರಣದಿಂದಾಗಿ ಗುರ್ಗಾಂವನ ರೈತರು ತಮ್ಮ ಭೂಮಿಯನ್ನು ಖಾಸಗಿಯವರಿಗೆ ಮಾರುವ ಮೂಲಕ ಕೋಟ್ಯಾಧಿಪತಿಗಳಾದರು.

ರಿಟೈಲ್ ಉದ್ಯಮವು ಇಲ್ಲಿನ ಮತ್ತೊಂದು ಪ್ರಮುಖ ಉದ್ಯಮ. ಇಲ್ಲಿ 43 ಮಾಲ್ಗಳಿವೆ. ಭಾರತದ ಎರಡನೇ ಅತಿ ದೊಡ್ಡ ಮಾಲ್ ಇಲ್ಲಿದೆ. ಮೊದಲನೆಯದು ಕೇರಳದ ಕೊಚ್ಚಿನ್ನಲ್ಲಿರುವ ಲುಲು ಶಾಪಿಂಗ್ ಮಾಲ್. ಕೇರಳದ ಈ ಮಾಲ್ ಏಷ್ಯಾದ ಎರಡನೇ ಅತಿ ದೊಡ್ಡ ಮಾಲ್. ದೆಹಲಿಯಿಂದ ಕೆಲವೇ ಕಿಮೀಗಳ ಅಂತರದಲ್ಲಿರುವ ಗುರ್ಗಾಂವ್ ಮುಖ್ಯ ಕೈಗಾರಿಕಾ ಪ್ರದೇಶ ಕೂಡ ಹೌದು.

ಹಲವು ಮಲ್ಟಿನ್ಯಾಷನಲ್ ಮತ್ತು ನ್ಯಾಷನಲ್ ಕಂಪನಿಗಳು ಈ ನಗರದಲ್ಲಿ ತಮ್ಮ ಕೇಂದ್ರಕಛೇರಿಯನ್ನು ಸ್ಥಾಪಿಸಿದೆ. ಗುರ್ಗಾಂವ್ ಹರಿಯಾಣಕ್ಕೆ ಸೇರಿದ್ದಾದರೂ ಇದು ರಾಜಧಾನಿಯ ಪ್ರದೇಶದಲ್ಲಿದೆ. ಇಲ್ಲಿನ ಮೂಲಭೂತ ಸೌಕರ್ಯಗಳಿಂದಾಗಿ ಇದು ಉದ್ಯಮಗಳಿಗೆ ಪ್ರಿಯವಾದ ಸ್ಥಳವಾಗಿದೆ.

ಗುರ್ಗಾಂವ್ನ ಭೇಟಿಗೆ ಸೂಕ್ತ ಸಮಯ

ವರ್ಷಪೂರ್ತಿ ಇಲ್ಲಿಗೆ ಭೇಟಿ ನೀಡಬಹುದು. ಆದರೂ ಚಳಿಗಾಲ ಇಲ್ಲಿಯ ಭೇಟಿಗೆ ಸೂಕ್ತ ಸಮಯ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಸುತ್ತಾಟಕ್ಕೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು ಕಡಿಮೆಯಿರುವುದರಿಂದ ಎಲ್ಲ ಬಗೆಯ ಚಟುವಟಿಕೆಗಳಿಗೆ ಇದು ಅನುಕೂಲಕರ ಸಮಯ.

ತಲುಪುವುದು ಹೇಗೆ?

ಗುರ್ಗಾಂವ್ಗೆ ಉತ್ತಮ ರೈಲು ಮತ್ತು ರಸ್ತೆ ಸಂಪರ್ಕವಿದೆ. ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಂದ 10 ಕಿಮೀ ದೂರದಲ್ಲಿದೆ. ಇದು ಗುರ್ಗಾಂವ್ ಪ್ರದೇಶವನ್ನು ದೇಶ ಮತ್ತು ವಿದೇಶಗಳೊಂದಿಗೆ ಬೆಸೆಯುತ್ತದೆ.

ಹವಾಮಾನ

ಗುರ್ಗಾಂವ್ ವರ್ಷ ಪೂರ್ತಿ ವಿಪರೀತ ಹವಾಮಾನ ವೈಪರೀತ್ಯಗಳನ್ನು ಕಾಣುತ್ತದೆ. ಇಲ್ಲಿ ಅತ್ಯಂತ ಉಷ್ಣತೆಯಿಂದ ಕೂಡಿದ ಬೇಸಿಗೆ ಮತ್ತು ತೀವ್ರ ಚಳಿಗಾಲಗಳನ್ನು ಕಾಣಬಹುದು. ಗುರ್ಗಾಂವ್ಗೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್-ಮಾರ್ಚ್.

ಗುರ್ಗಾಂವ್ ಪ್ರಸಿದ್ಧವಾಗಿದೆ

ಗುರ್ಗಾಂವ್ ಹವಾಮಾನ

ಗುರ್ಗಾಂವ್
35oC / 95oF
 • Haze
 • Wind: W 13 km/h

ಉತ್ತಮ ಸಮಯ ಗುರ್ಗಾಂವ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಗುರ್ಗಾಂವ್

 • ರಸ್ತೆಯ ಮೂಲಕ
  ಗುರ್ಗಾಂವ್ನಲ್ಲಿ ಉತ್ತಮ ರೀತಿಯಲ್ಲಿ ಯೋಜಿಸಲಾದ ರಸ್ತೆಗಳಿವೆ. ರಾಜ್ಯ ಸಾರಿಗೆ ಬಸ್ಸುಗಳು ದೆಹಲಿ ಮತ್ತು ಉಳಿದ ಪಕ್ಕದ ನಗರಗಳ ನಡುವೆ ಸಂಚರಿಸುತ್ತವೆ. ಇದಲ್ಲದೆ ಟ್ಯಾಕ್ಸಿಗಳು, ಆಟೋ ರಿಕ್ಷಾಗಳು ಕೂಡ ಓಡಾಟಕ್ಕೆ ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಗುರ್ಗಾಂವ್ನ ರೈಲು ನಿಲ್ದಾಣವು ನಗರದ ತುದಿಯಲ್ಲಿದೆ. ಈ ನಿಲ್ದಾಣವು ಒಂದೆಡೆ ರೆವಾರಿಯನ್ನು ಮತ್ತೊಂದೆಡೆ ದೆಹಲಿಯ ದಿಂಡು ನಿಲ್ದಾಣ (ಕಂಟೋನ್ಮೆಂಟ್)ವನ್ನು ಮತ್ತೊಂದೆಡೆ ಸೇರಿಸುತ್ತದೆ. ಇಲ್ಲಿಗೆ ಸಮೀಪದ ಪ್ರಮುಖ ರೈಲು ನಿಲ್ದಾಣಗಳೆಂದರೆ ದೆಹಲಿ ಅಥವ ಫರಿದಾಬಾದ್. ದೆಹಲಿ ಅಥವ ಫರೀದಾಬಾದ್ ನಿಲ್ದಾಣಗಳು ಗುರ್ಗಾಂವ್ ಪ್ರದೇಶವನ್ನು ದೇಶದ ಉಳಿದ ಭಾಗಗಳೊಂದಿಗೆ ಬೆಸೆಯುತ್ತದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿಂದ 10 ಕಿಮೀ ದೂರದಲ್ಲಿದೆ. ಇಲ್ಲಿಂದ ಪ್ರವಾಸಿಗರು ದೇಶ ಮತ್ತು ವಿದೇಶದ ವಿವಿಧ ಭಾಗಗಳಿಗೆ ಸಂಚರಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Gurgaon
  35 OC
  95 OF
  UV Index: 9
  Haze
 • Tomorrow
  Gurgaon
  33 OC
  91 OF
  UV Index: 9
  Sunny
 • Day After
  Gurgaon
  33 OC
  92 OF
  UV Index: 9
  Sunny