Search
 • Follow NativePlanet
Share
ಮುಖಪುಟ » ಸ್ಥಳಗಳು» ರೋಹ್ಟಕ್

ರೋಹ್ಟಕ್ ಪ್ರವಾಸೋದ್ಯಮ : ಹರಿಯಾಣದ ರಾಜಕೀಯ ಹೃದಯ ನಗರಿ

17

ರೋಹ್ಟಕ್ ಹರಿಯಾಣ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಹರಿಯಾಣ ಇದು ತನ್ನದೇ ಆದ ಹೆಸರಿನ ರಾಜಧಾನಿಯನ್ನು ಹೊಂದಿದೆ. ಇದು ದೆಹಲಿಯ ಹತ್ತಿರ ನೆಲೆಗೊಂಡಿದೆ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಅಡಿಯಲ್ಲಿ ಬರುತ್ತದೆ. ರೋಹ್ಟಕ ದೆಹಲಿ ಮತ್ತು ಹರಿಯಾದಿಂದ ಕೇವಲ 70 ಕೀಲೊ ಮೀಟರ ದೂರದಲ್ಲಿದೆ. ರೋಹ್ಟಕ ನಗರವು ಡೈರಿಗಳು, ಜವಳಿ ಮಾರುಕಟ್ಟೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಸಿದ್ಧವಾಗಿದೆ.

ರೋಹ್ಟಕನ ನಗರದ ಮೂಲವನ್ನು ಹುಡುಕಿದರೆ ಅದರ ಮೂಲವು ಸಿಂಧು ನಾಗರಿಕತೆ ಕಾಲದವರೆಗೂ ಹೋಗುತ್ತದೆ ಎಂದು ನಂಬಲಾಗಿದೆ.  ಖೋಕ್ರಕೋಟ ಎಂಬಲ್ಲಿ ಉತ್ಖನನ ಮಾಡಿದಾಗ ದೊರೆತ ಸ್ತಂಭ ಗೋಪುರಗಳು ಸಿಂಧು ನಾಗರಿಕತೆಗೆ ಸೇರಿದ್ದೆಂದು ಹೇಳಲಾಗುತ್ತದೆ. ಈ ನಗರವನ್ನು ಮಹಾಭಾರತದಲ್ಲಿಯೂ ಕೂಡ ರೋಹತಿಕಾ ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ.

ರೋಹ್ಟಕ ನಗರವು ಬಹುಶಃ ಯುಧೇಯರ ಸಾಮ್ರಾಜ್ಯವಾದ ಬಹುಧಾನ್ಯಾಕದ ರಾಜಧಾನಿಯಾಗಿತ್ತು. ಕಿ.ಪೂ 3 ಮತ್ತು 4 ನೇ ಶತಮಾನಕ್ಕೆ ಸೇರಿದ ನಾಣ್ಯದ ಮೊಹರುಗಳು ರೋಹ್ಟಕ ನಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆತಿವೆ. ಇದು ಯುಧೇಯರ ಕಾಲದ ಅವಧಿಯದ್ದಾಗಿವೆ. ಇದು ಕುಶಾನರ ಅವಧಿಯಲ್ಲೂ ಈ ರೋಹ್ಟಕ ನಗರ ಆಸ್ತಿತ್ವದಲ್ಲಿತ್ತು ಎನ್ನಲಿಕ್ಕೆ ಅನೇಕ ಸಾಕ್ಷಿಗಳಿವೆ. ಕುಶಾನರ ಕಾಲಕ್ಕೆ ಸೇರಿದ ಸ್ತಂಭವೊಂದು ಇಲ್ಲಿ ದೊರಕಿದ್ದು ಇದು ಪ್ರಮುಖ ಸಾಕ್ಷಿಯಾಗಿದೆ.

ಇದನ್ನು ರೆಕ್ಕೆಗಳುಳ್ಳ ಸಿಂಹ ಮತ್ತು ಅದರ ಮೇಲಿನ ಸವಾರನ ಚಿತ್ರಗಳಿಂದ ಕೆತ್ತಿ ಅಲಂಕರಿಸಲಾಗಿದೆ.ರೋಹ್ಟಕ ಕ್ರಿ.ಪೂ ಹತ್ತನೇ ಶತಮಾನದವರೆಗೂ ತನ್ನ ವೈಭವದ ಕಾಲವನ್ನು ಕಂಡಿತು ಎಂದು ನಂಬಲಾಗಿದೆ. ಪ್ರಸ್ತುತ ಸಮಯದಲ್ಲಿ ರೋಹ್ಟಕ ಹಲವು ಶೈಕ್ಷಣಿಕ ಸಂಸ್ಥೆಗಳಿಗೆ ಜನ್ಮವನ್ನು ನೀಡಿದೆ. ಅಷ್ಟೇ ಅಲ್ಲ ಇದು ರೇವರಿ ಎಂಬ ಭಾರತೀಯ ಕುರುಕಲು ಲಘು ತಿಂಡಿಗೆ ಜನಪ್ರಿಯವಾಗಿದೆ.

ರೋಹ್ಟಕನಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ರೋಹ್ಟಕ ಬಳಿ ಕೈಗೊಳ್ಳಲಾದ ಉತ್ಖನನ ಸಮಯದಲ್ಲಿ ದೊರೆತ ಬೂದು ಬಣ್ಣದ ಕೆಲವಸ್ತುಗಳು ಹರಪ್ಪನ ಕಾಲಕ್ಕೆ ಸೇರಿದ್ದೆಂದು ತಜ್ಞರು ಹೇಳುತ್ತಾರೆ. ಮದಿನಾ - ಸಮರಗೋಪಾಲಪುರ ಎಂಬ ದಾರಿಯ ಮಧ್ಯದಲ್ಲಿ ಕಾಣ ಸಿಗುವ ಗಿರವಾಡ್ ಎಂಬ ಹಳ್ಳಿಯು ಈ ಉತ್ಖನನ ಸ್ಥಳವಾಗಿದೆ. ಇದು ಮಹಾಭಾರತದ ಅವಧಿಯಲ್ಲಿಯೂ ಇತ್ತು ಎನ್ನಲು ಅನೇಕ ಸಾಕ್ಷಿಗಳಿವೆ. ಇಲ್ಲಿ ನೀವು ತಿಲಯಾರ ಸರೋವರವನ್ನು ಸಹ ನೋಡಬಹುದು. ಅದು ದೆಹಲಿ - ಹರಿಯಾಣ ಗಡಿ ಪ್ರದೇಶದಿಂದ ಸುಮಾರು 42 ಕೀಲೊ ಮೀಟರ ದೂರದಲ್ಲಿದೆ.

ಈ ಸರೋವರದ ಸುತ್ತಮುತ್ತಲಿರುವ ಪ್ರದೇಶವು ಹಸಿರಿನಿಂದ ತುಂಬಿಕೊಂಡಿದೆ. ಆದ್ದರಿಂದ ಇದು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಒಂದು ಸಣ್ಣ ಮೃಗಾಲಯವು ಕೂಡ ಇದ್ದು ಹುಲಿ, ಜಿಂಕೆ, ಮಂಗ, ಪಕ್ಷಿಗಳು ಹಾಗೂ ಇನ್ನು ನಾನಾ ತರಹದ ಪ್ರಾಣಿಗಳನ್ನು  ಇಲ್ಲಿ ನೀವು ಕಾಣಬಹುದು. ಆಸ್ಥಲ ಬೋಹರ ಒಂದು ಆಶ್ರಮ ಅಥವಾ ಗುರು ಗೋರಖ ನಾಥರ ಅನುಯಾಯಿಗಳ ಆಧ್ಯಾತ್ಮಿಕ ವಾಸಸ್ಥಾನವಾಗಿದೆ. ಇಲ್ಲಿ ನೀವು ಧಾರ್ಮಿಕ ಪ್ರಾಮುಖ್ಯತೆ ಇರುವ ಸ್ಮಾರಕಗಳು, ಪ್ರಾಚೀನ ಸಂಶೋಧನೆಗಳು, ಕೆತ್ತಿದ ವಿಗ್ರಹಗಳು, ಗ್ರಂಥಗಳು, ಪುಸ್ತಕಗಳನ್ನು ಕಾಣಬಹುದು.

ಮಹಮನಲ್ಲಿರುವ ರಾಧಾ ಕೃಷ್ಣ ದೇವಸ್ಥಾನವು ವರ್ಷವೀಡಿ ಭಕ್ತರನ್ನು ಆಕರ್ಷಿಸುತ್ತದೆ. ಖೋಖರ ರಾಜವಂಶದವರಿಂದ ನಿರ್ಮಾಣವಾಗಿದೆ ಎನ್ನಲಾದ ಖೋಖರ ಕೋಟೆಗೂ ಸಹ ನೀವು ಭೇಟಿ ನೀಡಬಹುದು. ಇದು ಅಂದಿನ ಕಾಲದಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ಆಗ ಇದು ಅಸಾಧಾರಣ ಮತ್ತು ವೈಭವದ ಕೋಟೆಯಾಗಿತ್ತು. ದುರದೃಷ್ಟಾವಶಾತ  ಈಗ ಈ ಕೋಟೆಯು ನಶಿಸುತ್ತಿದೆ. ರೋಹ್ಟಕನಲ್ಲಿ ಒಂದು ಜಾಮ ಮಸೀದಿಯಾಗಿದ್ದು, ಇದು ಮಹ್ಯಮ ನಗರದ ಮಧ್ಯದಲ್ಲಿದೆ.

ಮಸೀದಿಯಲ್ಲಿ ದೊರೆತ ಒಂದು ಶಾಸನದ ಪ್ರಕಾರ ಈ ಮಸೀದಿಯು ಕ್ರಿ.ಶ 1531 ರಲ್ಲಿ, ಹುಮಾಯೂನನ ಆಡಳಿತದ ಅವಧಿಯಲ್ಲಿ ನಿರ್ಮಾಣವಾಗಿದೆ ಎನ್ನಲಾಗುತ್ತದೆ. ಆದರೆ ಇನ್ನೊಂದು ಶಾಸನದ ಪ್ರಕಾರ ಇದು ಔರಂಗಜೇಬನ ಅವಧಿಯಲ್ಲಿ 1667ರಲ್ಲಿ ನಿರ್ಮಾಣವಾಗಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

ಹರಿಯಾಣದ ಇತರ ನಗರಗಳಂತೆ ರೋಹ್ಟಕ ನಗರವು ಕೂಡ ಪವಿತ್ರ ಟ್ಯಾಂಕ ಸಂಕೀರ್ಣ ಅಂದರೆ ಗೋಖರನ ಅಥವಾ ಗೌ ಕರನ ಟ್ಯಾಂಕ ಸಂಕೀರ್ಣ ಆಯೋಜಿಸುತ್ತದೆ. ಇದು ನಗರದಲ್ಲಿ ಇದೆ.  ಈ ಸಂಕೀರ್ಣವು ಧಾರ್ಮಿಕ ಪ್ರಾಮುಖ್ಯತೆಯ ರಚನೆಗಳನ್ನು ಹೊಂದಿರುವ ಅನೇಕ ದೇವ ಮತ್ತು ದೇವತೆಯರ ದೇವಾಲಯಗಳನ್ನು ಹೊಂದಿದೆ.

ನೀವು ರೋಹ್ಟಕನಲ್ಲಿ ಬಿಂದವಾಸ ಸರೋವರವನ್ನು ಸಹ ಕಾಣಬಹುದು. ಇದು ವಿಹಾರ ಪ್ರಿಯರಿಗೆ ವಾರಾಂತ್ಯದ ವಿಹಾರಕ್ಕೆ ಒಳ್ಳೆಯ ಆಯ್ಕೆ. ಇದು ಪಕ್ಷಿ ಪ್ರಿಯರಿಗೆ, ಛಾಯಾಗ್ರಾಹಕರಿಗೆ ಮತ್ತು  ವಿಡಿಯೋಗ್ರಾಫರಗಳಿಗೆ ಇದು ಸೂಕ್ತವಾದ ಸ್ಥಳ.

ರೋಹ್ಟಕ ಹವಾಮಾನ

ರೋಹ್ಟಕ ಹವಾಮಾನವು ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿನ ಪ್ರಕೃತಿಯಲ್ಲಿ ಕಾಲಗಳಿಗೆ ತಕ್ಕಂತೆ ಬದಲಾವಣೆ ಕಂಡು ಬರುತ್ತದೆ.

ರೋಹ್ಟಕ್ ಪ್ರಸಿದ್ಧವಾಗಿದೆ

ರೋಹ್ಟಕ್ ಹವಾಮಾನ

ಉತ್ತಮ ಸಮಯ ರೋಹ್ಟಕ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರೋಹ್ಟಕ್

 • ರಸ್ತೆಯ ಮೂಲಕ
  ರೋಹ್ಟಕ ನಗರವು ಹರಿಯಾಣದ ಪ್ರಮುಖ ನಗರಗಳಿಗೆ ಮತ್ತು ಪಟ್ಟಣಗಳಿಗೆ ಉತ್ತಮ ಬಸ್ಸು ಸೌಲಭ್ಯ ಹೊಂದಿದೆ. ಸಿರಸಾಮ ಹಿಸಾರ, ಭಿವಾನಿ, ಬಹುದುರ್ಗ, ಜಿಂದ ಮತ್ತು ಗುರಂಗಾವ ಮುಂತಾದ ನಗರಗಳಿಗೆ ಬಸ್ಸು ಸೌಲಭ್ಯ ಇದೆ. ಇದು ನವ ದೆಹಲಿಯಿಂದ 70 ಕೀಲೊ ಮೀಟರ ದೂರದಲ್ಲಿದ್ದು ಇಲ್ಲಿ ಖಾಸಗಿ ಮತ್ತು ಹರಯಾಣ ಸರಕಾರಿ ಬಸ್ಸುಗಳ ಸೌಲಭ್ಯ ಇದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರೋಹ್ಟಕ ನಗರವು ತನ್ನದೇ ಆದ ರೇಲ್ವೆ ನಿಲ್ದಾಣವನ್ನು ಹೊಂದಿದೆ. ಇದು ನವದೆಹಲಿ, ಬಹದುರ್ಗ ಭಿವಾನಿ, ಜಿಂದ, ಗೋಹನ ಮತ್ತು ಪಾಣಿಪತ ಮುಂತಾದ ನಗರಗಳಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರೋಹ್ಟಕಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ ಎಂದರೆ ನವದೆಹಲಿ ವಿಮಾನ ನಿಲ್ದಾಣ. ಇಲ್ಲಿಂದ ನೀವು ಟ್ಯಾಕ್ಸಿ , ಖಾಸಗಿ ವಾಹನಗಳು ಅಥವಾ ಹರಿಯಾಣ ಸರಕಾರಿ ಬಸ್ಸುಗಳ ಮೂಲಕ ರೋಹ್ಟಕವನ್ನು ಸುಲಭವಾಗಿ ತಲುಪಬಹುದು. ರೋಹ್ಟಕ ನಗರವು ಡೈರಿ, ಜವಳಿ ಮಾರುಕಟ್ಟೆ, ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಸಿದ್ಧವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
09 Mar,Tue
Return On
10 Mar,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
09 Mar,Tue
Check Out
10 Mar,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
09 Mar,Tue
Return On
10 Mar,Wed