ನೀವು ರೋಹ್ಟಕನಲ್ಲಿ ಬಿಂದವಾಸ ಸರೋವರವನ್ನು ಸಹ ಕಾಣಬಹುದು. ಇದು ವಿಹಾರ ಪ್ರಿಯರಿಗೆ ವಾರಾಂತ್ಯದ ವಿಹಾರಕ್ಕೆ ಒಳ್ಳೆಯ ಆಯ್ಕೆ. ಇದು ಪಕ್ಷಿ ಪ್ರಿಯರಿಗೆ, ಛಾಯಾಗ್ರಾಹಕರಿಗೆ ಮತ್ತು ವಿಡಿಯೋಗ್ರಾಫರಗಳಿಗೆ ಇದು ಸೂಕ್ತವಾದ ಸ್ಥಳ. ಈ ಸರೋವರವು 12 ಏಕರೆ ಪ್ರದೇಶದಷ್ಟು ವಿಸ್ತಾರವನ್ನು ಹೊಂದಿದೆ. ಇದನ್ನು 1985 ರಲ್ಲಿ ವನ್ಯಜೀವಿ ಮೃಗಧಾಮ ಎಂದು ಘೋಷಿಸಲಾಯಿತು. ಇದು ಮಾನವ ನಿರ್ಮಿತ ಸರೋವರವಾಗಿದೆ.
ಜವಾಹರಲಾಲ ನೆಹರು ಕಾಲುವೆಯಿಂದ ಹೆಚ್ಚುವರಿ ನೀರನ್ನು ವಿದ್ಯುತ ಅಭಾವದ ಕಾರಣದಿಂದಾಗಿ ಹೊರ ಬಿಡಲು ಆಗಲಿಲ್ಲ. ಆಗ ಅದಕ್ಕೆ ಉಪಾಯ ಮಾಡಿ ಈ ಹೆಚ್ಚುವರಿ ನೀರಿನಿಂದ ಈ ಬಿಂದವಾಸ ಸರೋವರವನ್ನು ತಜ್ಞರು ನಿರ್ಮಿಸಿದರು. ಈ ಸರೋವರವು ಜಗತ್ತಿನ ಎಲ್ಲ ಭಾಗಗಳಿಂದಲೂ ಸಾವಿರಾರು ವಲಸೆ ಪಕ್ಷಿಗಳನ್ನು ಆಕರ್ಷಿಸುತ್ತದೆ. ಈ ಪಕ್ಷಿಗಳು ತಮ್ಮ ಚಳಿಗಾಲದ ಆವಾಸ ಸ್ಥಾನವನ್ನು ಬಿಟ್ಟು, ಇಲ್ಲಿನ ಅಹ್ಲಾದಕರ ವಾತಾವರಣದಲ್ಲಿ ತಮ್ಮ ಸಮಯವನ್ನು ಕಳೆಯಲು ಬರುತ್ತವೆ. ಆದ್ದರಿಂದ ಈ ಸರೋವರಕ್ಕೆ ಅಸಂಖ್ಯಾತ ಪಕ್ಷಿ ಪ್ರೇಮಿಗಳು ಭೇಟಿ ನೀಡಿ ಸಂಭ್ರಮಿಸುತ್ತಾರೆ.
ಪ್ರವಾಸಿಗರು ಇಲ್ಲಿ, ಕಿಂಗಫಿಷರ, ನವಿಲುಗಳು, ಬುಲಬುಲಗಳು, ಮುಂತಾದ ನಾನಾ ಜಾತಿಯ ಸಾವಿರಾರು ಪಕ್ಷಿಗಳನ್ನು ನೋಡಿ ಆನಂದಿಸಬಹುದು. ಅವುಗಳ ಧ್ವನಿಯನ್ನು ಕೇಳಿ ಉಲ್ಲಸಿತರಾಗಬಹುದು. ಒಟ್ಟಿನಲ್ಲಿ ಈ ಸರೋವರವು ವೀಕ್ಷಕರ ಕಣ್ಣಿಗೆ ಹಬ್ಬವಾಗಿದೆ.
ಈ ಸರೋವರವು ಸಣ್ಣ ಸಣ್ಣ ದ್ವೀಪಗಳನ್ನು ಸಹ ಹೊಂದಿದ್ದು, ಪಕ್ಷಿಗಳು ತಮ್ಮ ಹಾರಾಟದಿಂದ ಮತ್ತು ನೀರಿನ ಜೊತೆಯ ಚೆಲ್ಲಾಟದ ನಂತರ ಆಯಾಸಗೊಂಡ ಮೇಲೆ ಇಲ್ಲಿಗೆ ಬಂದು ವಿಶ್ರಾಂತಿಯನ್ನು ಪಡೆಯುತ್ತವೆ. ಈ ಸರೋವರವು ಎಷ್ಟು ವಿಸ್ತಾರವಾಗಿದೆ ಎಂದರೆ ಸಾಮಾನ್ಯ ಕ್ಯಾಮೆರಾಗಳ ಲೆನ್ಸನಲ್ಲಿ ಈ ಪ್ರದೇಶದ ಸೌಂದರ್ಯವನ್ನು ಸೆರೆಹಿಡಿಯುವುದು ಅಸಾಧ್ಯದ ಮಾತಾಗಿದೆ.