ತಿಲಯಾರ ಸರೋವರವು ದೆಹಲಿ ಮತ್ತು ಹರಿಯಾಣ ಗಡಿ ಪ್ರದೇಶದಿಂದ ಸುಮಾರು 42 ಕೀಲೊ ಮೀಟರ ದೂರದಲ್ಲಿದೆ. ಇದು 132 ಏಕರೆ ಪ್ರದೇಶಗಳಷ್ಟು ವ್ಯಾಪಿಸಿದೆ. ಮತ್ತು ರೋಹಟಕ ನಗರಕ್ಕೆ ಹತ್ತಿರದಲ್ಲಿದೆ. ಈ ಪ್ರದೇಶದ ಸುತ್ತಮುತ್ತಲಿನ ವಾತಾವರಣವು ಹಸಿರುನಿಂದ ಸಮೃದ್ಧವಾಗಿದೆ. ಆದ್ದರಿಂದ ಇದು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಒಂದು ಸಣ್ಣ ಮೃಗಾಲಯವು ಕೂಡ ಇದ್ದು ಹುಲಿ, ಜಿಂಕೆ, ಮಂಗ, ಪಕ್ಷಿಗಳು ಹಾಗೂ ಇನ್ನು ನಾನಾ ತರಹದ ಪ್ರಾಣಿಗಳನ್ನು ಇಲ್ಲಿ ನೀವು ಕಾಣಬಹುದು. ಇದು ಪ್ರವಾಸಿಗರಿಗೆ ನೆಮ್ಮದಿಯನ್ನು ತರುತ್ತದೆ. ಇಲ್ಲಿ ವಿಧವಿಧವಾದ ಜಲಕ್ರೀಡೆಗಳಿವೆ. ಬೋಟಿಂಗ ಸೌಲಭ್ಯವಿದೆ. ಈ ಪ್ರದೇಶದಲ್ಲಿ ಬಾರ ಮತ್ತು ರೇಸ್ಟೊರೆಂಟ ಸೌಲಭ್ಯವಿದೆ. ಇಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯದ ವ್ಯವಸ್ಥೆಯು ಸಹ ಇದೆ.