India
Search
 • Follow NativePlanet
Share

ಭಾರತದ ವೇಗವಾಗಿ ಬೆಳೆಯುತ್ತಿರುವ ನಗರ ಮೀರತ್

12

ಉತ್ತರ ಪ್ರದೇಶದ ಮೀರತ್ ನಗರ ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 63ನೇ ಸ್ಥಾನ ಮತ್ತು ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ 14ನೇ ಸ್ಥಾನದಲ್ಲಿದೆ. ಉತ್ತರ ಭಾರತದ ಪ್ರಮುಖ ಸೇನಾ ದಂಡು ಮತ್ತು ಪ್ರಮುಖ ಕೈಗಾರಿಕಾ ಚಟುವಟಿಕೆಗಳಿಗೆ ಈ ನಗರ ಒಂದು ತಾಣವಾಗಿದೆ. ಕ್ರೀಡಾ ಸಾಮಗ್ರಿ ಹಾಗೂ ಸಂಗೀತ ಸಾಧನಗಳನ್ನು ಅತೀ ಹೆಚ್ಚು ಉತ್ಪಾದಿಸುವ ನಗರಗಳಲ್ಲಿ ಮೀರತ್ ಕೂಡ ಒಂದಾಗಿದೆ ಮತ್ತು ವಿಶ್ವದಲ್ಲೇ ಅತೀ ಹೆಚ್ಚಿನ ಬೈಸಿಕಲ್ ರಿಕ್ಷಾ ತಯಾರಾಗುವುದು ಇಲ್ಲಿಯೇ.

ಅಮೆರಿಕಾದ ಆರ್ಥಿಕ ಸೇವಾ ಸಂಸ್ಥೆ ಮೊರ್ಗನ್ ಸ್ಟ್ಯಾನ್ಲಿ ಯ `ಅಲ್ಪವೈಸ್ ಸಿಟಿ ವೈಬ್ರೆನ್ಸ್ ಇಂಡೆಕ್ಸ್: ಎ ಗೈಡ್ ಟು ಇಂಡಿಯಾ ಅರ್ಬನೈಸೇಷನ್' ಇತ್ತೀಚಿನ ವರದಿಯ ಪ್ರಕಾರ ಸ್ಪಂದನಕ್ಕೆ ಸಂಯೋಜನೆಗೊಳ್ಳುವಲ್ಲಿ ದೆಹಲಿ ಮತ್ತು ಮುಂಬಯಿಗಿಂತ ಮೀರತ್ ಮುಂದಿದೆ ಎಂದು ಹೇಳಿದೆ. ಭಾರತದ ಇತರ ನಗರಗಳಂತೆ ಮೀರತ್ ಕೂಡ ಆರ್ಥಿಕತೆಯ ಪ್ರಯೋಜನ ಪಡೆಯುತ್ತಿದೆ. ಶಾಪಿಂಗ್ ಕಾಂಪ್ಲೆಕ್ಸ್, ಮಾಲ್, ರಸ್ತೆ, ಪ್ಲೈ ಓವರ್ ಮತ್ತು ಅಪಾರ್ಟ್ ಮೆಂಟ್ ಗಳ ಸಹಿತ ಹಲವಾರು ರಿಯಲ್ ಎಸ್ಟೇಟ್ ಯೋಜನೆಗಳು ಇದಕ್ಕೆ ಸಾಕ್ಷಿಯಾಗಿದೆ.

ಮೀರತ್ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಭಾರತದ ಇತರ ನಗರಗಳಂತೆ ಮೀರತ್ ನಲ್ಲಿ ಕೂಡ ಹಲವಾರು ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಿವೆ. ಚಾಂದಿ ದೇವಿ ಮಂದಿರ ಮತ್ತು ಮನ್ಸ ದೇವಿ ಮಂದಿರ ಇದರಲ್ಲಿ ಪ್ರಮುಖವಾದದ್ದು, ಈ ಎರಡು ದೇವಸ್ಥಾನಗಳಿಗೆ ಭಕ್ತರ ಸಮೂಹವೇ ಬರುತ್ತದೆ. ಅದರಲ್ಲೂ ನವರಾತ್ರಿ ಸಮಯದಲ್ಲಿ ಇದು ಹೆಚ್ಚು. ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ಜುಮಾ ಮಸೀದಿ ಮತ್ತು ಜೈನ ಸಮುದಾಯದವರ ಶ್ರೀ ಶಾಂತಿನಾಥ ದಿಗಂಬರ ಜೈನ ಮಂದಿರವಿದೆ.

ಸೇಂಟ್ ಜಾನ್ ಚರ್ಚ್ ಮತ್ತು ಸರ್ದನ್ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಮಾಡುತ್ತಾರೆ. ಇಲ್ಲಿನ ಬಲೆ ಮಿಯಾನ್ ಕಿ ದರ್ಗಾ ಮತ್ತು ಶಾಹಪೀರ್ ಸಹಾಬ್ ಕಿ ದರ್ಗಾಗಳಿಗೆ ಎಲ್ಲಾ ವರ್ಗದ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ಭೇಟಿ ನೀಡುತ್ತಾರೆ. ಪರಿಸರ ಉದ್ಯಾನ ಮತ್ತು ಪೈನ್ ಚಿಲ್ಡ್ರನ್ ಪಾರ್ಕ್ ಅತ್ಯಗತ್ಯವಿರುವ ಹಸಿರು ಪ್ರದೇಶ ಮತ್ತು ನಗರದ ಗದ್ದಲದಿಂದ ಸಮಾಧಾನವನ್ನು ನೀಡುತ್ತದೆ. ಅಪ್ಪು ಘರ್ ಎನ್ನುವುದು ಮಕ್ಕಳಿಗಾಗಿ ಇರುವ ಜನಪ್ರಿಯ ಅಮ್ಯೂಸ್ ಮೆಂಟ್ ಪಾರ್ಕ್ ಆಗಿದೆ. ಇಲ್ಲಿರುವ ಶಾಹೀದ್ ಸ್ಮಾರಕ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ಗೌರವ ಸಲ್ಲಿಸುತ್ತದೆ.

ಮೀರತ್ ಪ್ರಸಿದ್ಧವಾಗಿದೆ

ಮೀರತ್ ಹವಾಮಾನ

ಉತ್ತಮ ಸಮಯ ಮೀರತ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೀರತ್

 • ರಸ್ತೆಯ ಮೂಲಕ
  ದೆಹಲಿಯಿಂದ ಮೀರತ್ ಗೆ 24 ಗಂಟೆಯೂ ಬಸ್ ಸೇವೆಯಿದೆ. ದೆಹಲಿಯಿಂದ ಮೀರತ್ ಗೆ 60 ಕಿ.ಮೀ. ದೂರವಿದೆ. ನಗರವನ್ನು ರಾಷ್ಟ್ರೀಯ ಹೆದ್ದಾರಿ 58 ದೆಹಲಿಗೆ ಸಂಪರ್ಕಿಸುತ್ತದೆ. ಮತ್ತೊಂದು ರಾಷ್ಟ್ರೀಯ ಹೆದ್ದಾರಿ 119 ಉತ್ತರಖಂಡಕ್ಕೆ ಸಂಪರ್ಕ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೀರತ್ ನಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಿವೆ. ದೆಹಲಿ ಮತ್ತು ಭಾರತದ ಇತರ ನಗರಗಳಿಂದ ಇಲ್ಲಿಗೆ ರೈಲು ಸೇವೆಯಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ದೆಹಲಿ ತುಂಬಾ ಸಮೀಪದ ವಿಮಾನ ನಿಲ್ದಾಣ. ಆದರೆ ನಗರದಲ್ಲಿ ವಾಯುನೆಲೆಯಿದ್ದು, ಇದನ್ನು ಸರ್ಕಾರಿ ಅಧಿಕಾರಿಗಳು ಬಳಸುತ್ತಾರೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Aug,Wed
Return On
18 Aug,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Aug,Wed
Check Out
18 Aug,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Aug,Wed
Return On
18 Aug,Thu