Search
 • Follow NativePlanet
Share
ಮುಖಪುಟ » ಸ್ಥಳಗಳು» ಮಸ್ಸೂರಿ

ಮಸ್ಸೂರಿ - ಗಿರಿಶಿಖರಗಳ ರಾಣಿ

65

ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ’ ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ ಎತ್ತರದಲ್ಲಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು ಡೂನ್ ಕಣಿವೆಗಳ ಅದ್ಭುತವಾದ ದೃಶ್ಯಾವಳಿಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿದೆ. ಇದು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಯಮುನೋತ್ರಿ ಮತ್ತು ಗಂಗೋತ್ರಿಯಿಂದಲೂ ಪ್ರಸಿದ್ಧವಾಗಿದೆ. 

ಹಳೆಯ ಕಾಲದಲ್ಲಿ ಈ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದೊರಕುತ್ತಿದ್ದ ಮನ್ಸೂರ್ ಎಂಬ ಕುರುಚಲು ಪೊದೆಯ ಕಾರಣದಿಂದ ಮಸ್ಸೂರಿ ಎಂಬ ಹೆಸರು ಈ ಪ್ರದೇಶಕ್ಕೆ ಬಂದಿತು ಎಂದು ಹೇಳಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇಲ್ಲಿನ ಸ್ಥಳೀಯ ಜನರು ಮನ್ಸೂರಿ ಎಂದೂ ಕರೆಯುತ್ತಾರೆ. ಈ ಸುಂದರವಾದ ಗಿರಿಧಾಮ ಇಲ್ಲಿನ ಹಳೆಯ ಕಾಲದ ದೇವಸ್ಥಾನಗಳು, ಬೆಟ್ಟಗಳು, ಜಲಪಾತಗಳು, ಕಣಿವೆಗಳು, ಅರಣ್ಯಧಾಮ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದಾಗಿ ಪ್ರಸಿದ್ಧವಾಗಿದೆ. ಜ್ವಾಲಾ ದೇವಿ ದೇವಾಲಯ, ನಾಗ ದೇವತಾ ದೇವಸ್ಥಾನ ಮತ್ತು ಭದ್ರಾಜ್ ದೇವಸ್ಥಾನ ಇಲ್ಲಿನ ಕೆಲವು ಪ್ರಮುಖವಾದ ದೇವಸ್ಥಾನಗಳಾಗಿವೆ.

ಜ್ವಾಲಾ ದೇವಿ ದೇವಾಲಯವು ಹಿಂದೂ ದೇವತೆ ದುರ್ಗೆಯ ಆರಾಧನೆಗಾಗಿ ಮುಡಿಪಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 2100 ಮೀ ಎತ್ತರದಲ್ಲಿದೆ. ಇದು ಹಿಂದೂ ಗಳಲ್ಲಿ ಅತಿ ಪ್ರಮುಖವಾದ ಮತ್ತು ಪಾವಿತ್ರ್ಯ ಭಾವದಿಂದ ಕಾಣುವ ದೇವಾಲಯವಾಗಿದೆ. ಇಲ್ಲಿ ಕಲ್ಲಿನಿಂದ ಮಾಡಿದ ದೇವತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಮತ್ತೊಂದು ಪ್ರಮುಖ ದೇವಾಲಯ ನಾಗದೇವತೆಯ ಪೂಜೆ ನಡೆಯುವ ನಾಗ ದೇವತಾ ದೇವಸ್ಥಾನ. ನಾಗರ ಪಂಚಮಿಯ ದಿನದಂದು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಮಸ್ಸೂರಿಯು ಮನೋಹರವಾದ ಬೆಟ್ಟಗಳಿಗೆ ಹೆಸರುವಾಸಿ ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಗನ್ ಹಿಲ್, ಲಾಲ್ ಟಿಬ್ಬಾ ಮತ್ತು ನಾಗ್ ಟಿಬ್ಬಾ. ಗನ್ ಹಿಲ್ ಸಮುದ್ರಮಟ್ಟದಿಂದ ಸುಮಾರು 2122 ಮೀ ಎತ್ತರದಲ್ಲಿದೆ. ಮಸ್ಸೂರಿಯ ಎರಡನೆ ಅತೀ ಎತ್ತರದ ಬೆಟ್ಟವಾಗಿರುವ ಇದು ತನ್ನ ಐತಿಹಾಸಿಕ ಪ್ರಾಮುಖ್ಯತೆಯ ಕಾರಣದಿಂದ ಪ್ರಸಿದ್ಧವಾಗಿದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ಈ ಬೆಟ್ಟದಿಂದ ಜನರಿಗೆ ಸಮಯ ತಿಳಿಸುವ ಉದ್ದೇಶದಿಂದ ಕೆಲವು ನಿಗದಿತ ಸಮಯದಲ್ಲಿ ತೋಪನ್ನು ಹಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ಅದಕ್ಕೆ ಸರಿಯಾಗಿ ತಮ್ಮ ಗಡಿಯಾರಗಳನ್ನು ಸರಿಮಾಡಿಕೊಳ್ಳುತ್ತಿದ್ದರು. ಈಗ ಮಸ್ಸೂರಿಯ ನೀರಿನ ಸಂಗ್ರಹಾಲಯ ಈ ಬೆಟ್ಟದಲ್ಲಿದೆ. ಇಲ್ಲಿನ ಬೆಟ್ಟಕ್ಕೆ ತಲುಪಲು ಇರುವ ರೋಪ್ ವೆ ಬಹಳ ಪ್ರಸಿದ್ಧವಾಗಿದೆ. ಲಾಲ್ ಟಿಬ್ಬಾ ಮಸ್ಸೂರಿಯ ಅತ್ಯಂತ ಎತ್ತರವಾದ ಬೆಟ್ಟವಾಗಿದ್ದು ಇದನ್ನು ಇಲ್ಲಿ ಇರುವ ಡಿಪೋ ದ ಕಾರಣದಿಂದ ಡಿಪೋ ಬೆಟ್ಟ ಎಂದು ಕರೆಯಲಾಗುತ್ತದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಟವರ್ ಗಳು ಈ ಬೆಟ್ಟದಲ್ಲಿದೆ. 1967 ರಲ್ಲಿ ಪ್ರವಾಸಿರಗಿಗೆ ನೆರವಾಗುವ ಉದ್ದೇಶದಿಂದ ದೂರದರ್ಶಕವನ್ನು ಈ ಬೆಟ್ಟದಲ್ಲಿ ಅಳವಡಿಸಲಾಗಿದೆ. ಈ ದೂರದರ್ಶಕದ ಸಹಾಯದಿಂದ ಜನರು ಇಲ್ಲಿನ ಸಮೀಪದ ಬೆಟ್ಟಗಳಾದ ಬಂದೇರ್ಪಂಚ್, ಕೇದಾರನಾಥ್ ಮತ್ತು ಬದ್ರಿನಾಥ್ ಗಳನ್ನು ನೋಡಬಹುದಾಗಿದೆ. ನಾಗ್ ಟಿಬ್ಬಾ ಇಲ್ಲಿನ ಇನ್ನೊಂದು ಬೆಟ್ಟವಾಗಿದ್ದು ಇದನ್ನು ಸರ್ಪೆಂಟ್ಸ್ ಪೀಕ್ (ಉರಗ ಗಿರಿಧಾಮ) ಎಂದೂ ಕರೆಯುತ್ತಾರೆ. ಇಲ್ಲಿ ಪ್ರವಾಸಿಗರು ಹಲವಾರು ರಂಜನೀಯ ತಾಣಗಳನ್ನು ಆನಂದಿಸಬಹುದು.

ಬೆಟ್ಟಗಳ ಜೊತೆಗೆ ಮಸ್ಸೂರಿ, ತನ್ನಲ್ಲಿರುವ ಹಲವಾರು ಜಲಪಾತಗಳಿಂದಲೂ ಪ್ರಸಿದ್ಧವಾಗಿದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಕೆಂಪ್ಟಿ ಜಲಪಾತ, ಝಾರಿಪಾನಿ ಜಲಪಾತ, ಭತ್ತಾ ಜಲಪಾತ ಮತ್ತು ಮೊಸ್ಸಿ ಜಲಪಾತ. ಕೆಂಪ್ಟಿ ಜಲಪಾತ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದು ಮಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹಳ ಪ್ರಮುಖವಾಗಿದೆ. ಈ ಪ್ರದೇಶದ ಸೌಂದರ್ಯಕ್ಕೆ ಮನಸೋತು 'ಜಾನ್ ಮೆಕಿನಾನ್' ಎಂಬ ಬ್ರಿಟೀಷ್ ಅಧಿಕಾರಿ ಇದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದನು. ಝಾರಿಪಾನಿ ಜಲಪಾತ ಕೂಡ ಪ್ರವಾಸಿಗರಲ್ಲಿ ಬಹಳ ಆಕರ್ಷಣೆ ಹೊಂದಿರುವ ಜಲಪಾತವಾಗಿದೆ. ಇದು ಝಾರಿಪಾನಿ ಎಂಬ ಹಳ್ಳಿಯಲ್ಲಿ ಇದ್ದು, ಅತ್ಯಂತ ಪ್ರಸಿದ್ಧ ಮತ್ತು ಸಾಹಸಿಗಳಿಗೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಭತ್ತಾ ಜಲಪಾತ ಮತ್ತು ಮೊಸ್ಸಿ ಜಲಪಾತ ಮಸ್ಸೂರಿಯಿಂದ ಸುಮಾರು 7 ಕಿ.ಮೀ ದೂರದಲ್ಲಿವೆ.

ಪ್ರವಾಸಿ ತಾಣಗಳ ಹೊರತಾಗಿ ಮಸ್ಸೂರಿ ಇಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಕಾರಣದಿಂದಾಗಿಯೂ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿಸಲಾದ ಹಲವು ಯುರೋಪಿಯನ್ ಶಾಲೆಗಳಿವೆ. ಇಲ್ಲಿ ಬಹಳ ಪ್ರಸಿದ್ಧವಾದ ಮತ್ತು ಅತ್ಯಂತ ಹಳೆಯದಾದ ಸೈಂಟ್ ಜಾರ್ಜ್, ಓಕ್ ಗ್ರೋವ್ ಮತ್ತು ವೈನ್ಬರ್ಗ್ ಆಲನ್ ಮುಂತಾದ ವಸತಿ ಶಾಲೆಗಳಿವೆ. ಇದು ಚಾರಣ ಪ್ರಿಯರಲ್ಲೂ ಅತ್ಯಂತ ಪ್ರಸಿದ್ಧವಾದ ಪ್ರದೇಶವಾಗಿದೆ. ಇಲ್ಲಿ ನಿಸರ್ಗದ ನಡುವೆ ನಡೆಯಬಯಸುವ ಪ್ರವಾಸಿಗಳಿಗೆ ಸೂಕ್ತವಾದ ಹಲವು ಕಾಲುದಾರಿಗಳಿವೆ.

ಮಸ್ಸೂರಿಯು ವಾಯುಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗವಾಗಿ ದೇಶದ ಇತರ ನಗರಗಳಿಗೆ ಸಮರ್ಪಕವಾಗಿ ಸಂಪರ್ಕ ಸಾಧಿಸುತ್ತದೆ. ಇಲ್ಲಿಗೆ ಸಮೀಪವಿರುವ ವಿಮಾನ ನಿಲ್ದಾಣವೆಂದರೆ ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಇದು ಸುಮಾರು 60 ಕಿ.ಮೀ ದೂರದಲ್ಲಿದೆ. ಡೆಹ್ರಾಡೂನ್ ರೈಲ್ವೆ ನಿಲ್ದಾಣ ಇಲ್ಲಿಗೆ ಸಮೀಪವಿರುವ ರೈಲ್ವೆ ನಿಲ್ದಾಣವಾಗಿದೆ.

ಇಲ್ಲಿ ವರ್ಷಪೂರ್ತಿ ಇರುವ ಆಹ್ಲಾದಕರವಾದ ವಾತಾವರಣ ಎಲ್ಲಾ ವರ್ಷಗಳಲ್ಲೂ ಎಲ್ಲಾ ಕಾಲದಲ್ಲೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಗಿರಿಧಾಮಗಳು ಎಲ್ಲಾ ಋತುಮಾನಗಳಲ್ಲೂ ಸುಂದರವಾಗಿ ಕಾಣುತ್ತವೆ. ಆದರೂ ಮಾರ್ಚ್ ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಮಸ್ಸೂರಿ ಪ್ರಸಿದ್ಧವಾಗಿದೆ

ಮಸ್ಸೂರಿ ಹವಾಮಾನ

ಉತ್ತಮ ಸಮಯ ಮಸ್ಸೂರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮಸ್ಸೂರಿ

 • ರಸ್ತೆಯ ಮೂಲಕ
  ಡೆಹ್ರಾಡೂನ್ ನಿಂದ ಹಲವು ರಾಜ್ಯ ಸಾರಿಗೆ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಮಸ್ಸೂರಿಗೆ ಸಂಪರ್ಕ ಸಾಧಿಸುತ್ತವೆ. ಇದಲ್ಲದೆ ಸಮೀಪದ ನೈನಿತಾಲ್ ಅಥವಾ ದೆಹಲಿಯಿಂದ ಡಿಲಕ್ಸ್ ಬಸ್ಸುಗಳೂ ಮಸ್ಸೂರಿಗೆ ಇವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮಸ್ಸೂರಿಗೆ 60 ಕಿ.ಮೀ ದೂರದಲ್ಲಿರುವ ಡೆಹ್ರಾಡೂನ್ ರೈಲ್ವೆ ನಿಲ್ದಾಣ ಅತ್ಯಂತ ಸಮೀಪದಲ್ಲಿರುವ ರೈಲ್ವೆ ನಿಲ್ದಾಣವಾಗಿದೆ. ಭಾರತದ ಪ್ರಮುಖ ನಗರಗಳಿಂದ ಈ ನಿಲ್ದಾಣಕ್ಕೆ ರೈಲು ಸಂಪರ್ಕ ಉತ್ತಮವಾಗಿದೆ. ಅಲ್ಲಿಂದ ಟಾಕ್ಸಿಯ ಮೂಲಕ ಮಸ್ಸೂರಿ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಡೆಹ್ರಾಡೂನ್ ನಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಮಸ್ಸೂರಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದ್ದು ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಟಾಕ್ಸಿಯ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
17 Jan,Mon
Return On
18 Jan,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jan,Mon
Check Out
18 Jan,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jan,Mon
Return On
18 Jan,Tue