ಅಂಬಾಲ : ಅವಳಿ ನಗರ

ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು ವಿಂಗಡಿಸಲ್ಪಡುತ್ತದೆ. ಇವೆರಡು ಮೂರು ಕಿಲೋಮೀಟರ್ ಅಂತರದಲ್ಲಿದೆ.

ಅಂಬಾಲ ನಗರದಲ್ಲಿ ಎರಡು ನದಿಗಳು ಹರಿಯುತ್ತದೆ - ಗಂಗಾ ಮತ್ತು ಇಂಡಸ್ ನದಿಗಳು. ಉತ್ತರಕ್ಕೆ ಗಗ್ಗರ್ ನದಿಯು ಮತ್ತು ದಕ್ಷಿಣಕ್ಕೆ ತಂಗ್ರಿ ನದಿಯಿಂದ ಸುತ್ತಿಕೊಳ್ಳುತ್ತಿದೆ.

ಅಂಬಾಲ ಸುತ್ತಮುತ್ತವಿರುವ ಪ್ರವಾಸಿ ತಾಣಗಳು

ಅಂಬಾಲ ಸಣ್ಣ ನಗರವಾಗಿದ್ದರೂ, ಇಲ್ಲಿ ಭೇಟಿ ನೀಡಬಹುದಾದ ಸ್ಥಳಗಳು ಬೇಕಾದಷ್ಟಿವೆ. ಇದು ಹರ್ಯಾಣ ಮತು ಪಂಜಾಬ್ ಗಡಿಯಲ್ಲಿರುವುದರಿಂದ, ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತಮ ಆದಾಯವಾಗಿದೆ. ಇಲ್ಲಿನ ಅತ್ಯಂತ ಜನಪ್ರಿಯ ಸ್ಥಳವೆಂದರೆ ಭವಾನಿ ಅಂಬಾ ದೇವಾಲಯ, ಈ ದೇವಾಲಯದಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ.

ಇತರ ಆಕರ್ಷಣೀಯ ಸ್ಥಳಗಳೆಂದರೆ ಬಾದಶಾ ಬಾಗ್ ಗುರುದ್ವಾರ, ಸಿಸ್ ಗುಂಜ್ ಗುರುದ್ವಾರ, ಲಾಖಿ ಶಾ ಮತ್ತು ತಾಕ್ವಲ್ ಶಾ, ಸೈಂಟ್ ಪೌಲ್ ಚರ್ಚ್ ಮತ್ತು ಕಾಳಿ ಮಠ ಮಂದಿರ.

ಅಂಬಾಲದಲ್ಲಿರುವ ಮಾರುಕಟ್ಟೆಗಳು

ಅಂಬಾಲದಲ್ಲಿನ ಮಾರುಕಟ್ಟೆ ಬಟ್ಟೆಗೆ ಹೆಸರುವಾಸಿ. ಇಲ್ಲಿನ ಬೀದಿ ಬೀದಿಗಳಲ್ಲಿ ಎಲ್ಲಾ ರೀತಿಯ ಬಟ್ಟೆಗಳು ರಖಂ (ವೋಲ್ಸೇಲ್) ದರದಲ್ಲಿ ಲಭ್ಯವಾಗುತ್ತದೆ. ಇಲ್ಲಿ ಸುಮಾರು ಒಂದು ಸಾವಿರ ರಖಂ ಅಂಗಡಿಗಳಿದ್ದು, ಕೈಮಗ್ಗ ಬಟ್ಟೆಗಳು ಮತ್ತು ಸಿಲ್ಕ್ ಬಟ್ಟೆಗಳು ಲಭ್ಯವಿದ್ದು ಸೂಟ್ ಮತ್ತು ಇತರ ಡ್ರೆಸ್ಸುಗಳಿಗೆ ಯೋಗ್ಯವಾಗಿರುತ್ತದೆ.

ಅಂಬಾಲದಲ್ಲಿ ವಿಜ್ಞಾನದ ಮಾರುಕಟ್ಟೆ ಕೂಡಾ ಇದ್ದು ಇಲ್ಲಿ, ವಿಜ್ಞಾನಕ್ಕೆ ಸಂಬಂಧಪಟ್ಟ ಮತ್ತು ಶಸ್ತ್ರವೈದ್ಯಕ್ಕೆ ಸಂಬಂಧಪಟ್ಟ ಪರಿಕಗಳು ಲಭ್ಯವಿದೆ. ಈ ನಗರವನ್ನು ವೈಜ್ಞಾನಿಕ ಪರಿಕಗಳ ನಗರವೆಂದೇ ಜನಪ್ರಿಯವಾಗಿದೆ.

ಅಂಬಾಲ ನಗರವು ಚಿನ್ನದ ಆಭರಣಗಳಿಗೆ ಮತ್ತು ನಾರು ಬಟ್ಟೆಗಳಿಗೆ ಹೆಸರುವಾಸಿ.

ಅಂಬಾಲದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ

ಅಂಬಾಲ ಉತ್ತರ ರೈಲ್ವೇ ವಿಭಾಗದ ಪ್ರಾದೇಶಿಕ ಕಚೇರಿಯಾಗಿದ್ದು ಮತ್ತು ರಾಜ್ಯದ ಪ್ರಮುಖ ರೈಲು ಕೇಂದ್ರವಾಗಿದೆ.

ಅಂಬಾಲ ಭೇಟಿ ನೀಡಲು ಯಾವ ಸಮಯ ಸೂಕ್ತ

ಅಂಬಾಲ ನಗರವನ್ನು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭೇಟಿ ನೀಡುವುದು ಸೂಕ್ತ, ಆ ಸಮಯದಲ್ಲಿ ಮಳೆಗಾಲ ಮುಗಿದಿರುತ್ತದೆ. ಅಂಬಾಲ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಭಾರತದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲೊಂದು. ಇದರ ಭೌಗೋಳಿಕ ಆಕೃತಿಯಿಂದಾಗಿ ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಚಂಢೀಗಡ ಕೇಂದ್ರಾಡಳಿತ ಪ್ರದೇಶಕ್ಕೆ ನಿರಾಸದಾಯಕವಾಗಿ ತಲುಪಬಹುದಾಗಿದೆ.

ಅಂಬಾಲ ತಲುಪುದು ಹೇಗೆ

ಅಂಬಾಲ ನಗಾವನ್ನು ದೇಶದ ಪ್ರಮುಖ ನಗರಗಳಿಂದ ನಿರಾಸದಾಯಕವಾಗಿ ತಲುಪಬಹುದು. ಹತ್ತಿರದ ವಿಮಾನ ನಿಲ್ದಾಣವೆಂದರೆ ಚಂಢೀಗಡ ವಿಮಾನ ನಿಲ್ದಾಣ. ಅಂಬಾಲ ಕಂಟೋನ್ಮೆಂಟ್ ರೈಲು ಮತ್ತು ಬಸ್ಸಿನ ಮೂಲಕ ತಲುಪವವರುಗೆ ಪ್ರಮುಖ ಪ್ರದೇಶವಾಗಿದೆ.

Please Wait while comments are loading...