Search
 • Follow NativePlanet
Share

ಜಮ್ಮು - ಮೈಮರೆಸುವ ಪ್ರವಾಸಿ ತಾಣ     

53

ಜಮ್ಮು ಪ್ರದೇಶದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಕುತೂಹಲವಿದ್ದೇ ಇರುತ್ತದೆ. ಇದು ಕೇವಲ ರಾಜ್ಯದ ಸಮಸ್ಯೆಗಳನ್ನು ಮಾತ್ರ ಹೊಂದಿರದೇ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಹಲವಾರು ಉತ್ತಮ ಯಾತ್ರಾ ಸ್ಥಳಗಳನ್ನೂ ಕೂಡ ಹೊಂದಿದೆ. ಶಿವ, ವಿಷ್ಣು ಹೀಗೆ ಹಿಂದೂಗಳಿಂದ ಪೂಜಿಸಲ್ಪಡುವ ಹಲವಾರು ದೇವತಾ ಸನ್ನಿಧಾನ ಇಲ್ಲಿದೆ.

ನಿಮ್ಮ ರಜಾದಿನಗಳನ್ನು ಕಳೆಯಲು, ರಜಾದಿನಗಳನ್ನು ಉತ್ತಮವನ್ನಾಗಿಸಲು ಜಮ್ಮುವಿಗೊಮ್ಮೆ ಭೇಟಿ ನೀಡಲೇ ಬೇಕು. ಇಲ್ಲಿ ಎಲ್ಲಾ ವಯಸ್ಸಿನವರು ಖುಷಿಪಡುವಂತಹ ಸ್ಥಳಗಳಿವೆ. ಈ ಜಮ್ಮುವಿನ ಸೌಂದರ್ಯದ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.

ದುಗ್ಗರ್ದೇಶ್ ಎಂಬ ಹೆಸರನ್ನೂ ಹೊಂದಿರುವ ಜಮ್ಮು, ಭಾರತದ ಅತಿ ಹೆಚ್ಚು ಸಂದರ್ಶಿತ ತಾಣಗಳಲ್ಲಿ ಒಂದಾಗಿದೆ. ಚಳಿಗಾಲದಲ್ಲಿ ಶ್ರೀನಗರದಲ್ಲಿ ಭಾರಿ ಹಿಮಪಾತವುಂಟಾಗುವುದರಿಂದ ಆ ಸಂದರ್ಭದಲ್ಲಿ ಜಮ್ಮು, ಜಮ್ಮು ಮತ್ತು ಕಾಶ್ಮೀರದ ಆಡಳಿತಾತ್ಮಕ ರಾಜಧಾನಿಯಾಗಿ ಪರಿವರ್ತಿತವಾಗುತ್ತದೆ. ರಾಜ ಜಂಬು ಲೋಚನನಿಂದ ಈ ಪ್ರದೇಶವು 8 ನೇ ಶತಮಾನದಲ್ಲಿ ಸ್ಥಾಪಿಸಲಾಗಿದ್ದು ರಾಜನ ಹೆಸರನ್ನೇ ಇದಕ್ಕಿಡಲಾಗಿದೆ.

ಅನೇಕ ದೇವಾಲಯಗಳನ್ನು ಹೊಂದಿರುವ ಕಾರಣ, ಜಮ್ಮು 'ದೇವಾಲಯಗಳ ನಗರ' ಎಂಬ ಶೀರ್ಷಿಕೆ ಪಡೆದಿದೆ. ಈ ಪ್ರದೇಶದಲ್ಲಿರುವ ಪ್ರಖ್ಯಾತ ಹಿಂದೂ ಪುಣ್ಯಕ್ಷೇತ್ರ, ವೈಷ್ಣೋ ದೇವಿಯ ತೀರ್ಥಯಾತ್ರೆ, ಪ್ರವಾಸಿ ತಾಣವಾಗಿಯೂ ಸಹ ಜಮ್ಮುವಿನಲ್ಲಿ ಜನಪ್ರಿಯವಾಗಿದೆ.

ಆದಾಗ್ಯೂ, ಜಮ್ಮು ವಿಶ್ವದ ವಿವಿಧ ಭಾಗಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಯಾತ್ರಾಸ್ಥಳವನ್ನು ಮಾತ್ರವಲ್ಲದೇ ಅದ್ಭುತ ಸೌಂದರ್ಯವನ್ನು ಹೊಂದಿದೆ. ಜಮ್ಮು, ದಕ್ಷಿಣದಲ್ಲಿ ಬೃಹತ್ ಹಿಮಾಲಯ ಶ್ರೇಣಿ ಮತ್ತು ಉತ್ತರದಲ್ಲಿ ಪಂಜಾಬ್ ಮೈದಾನವನ್ನು ಹೊಂದಿದೆ. ಇಲ್ಲಿನ ಕೆಳ ಪ್ರದೇಶಗಳಲ್ಲಿ ಚೆಸ್ಟ್ನಟ್ ಮತ್ತು ಓಕ್ ಕಾಡುಗಳು ಆವರಿಸಿವೆ. ಮುಂದೆ ಉತ್ತರದಲ್ಲಿ ದೇವದಾರು ಮತ್ತು ಪೈನ್ ಮರಗಳ ಸಸ್ಯವರ್ಗವು ಪ್ರದೇಶವನ್ನು ವೈಭವಿಕರಿಸಿರುವುದನ್ನು ಕಾಣಬಹುದು.

ಜಮ್ಮುವಿಗೆ ಭೇಟಿ ನೀಡಲು ಇಚ್ಛಿಸುವ ಪ್ರವಾಸಿಗರು ವೈಷ್ಣೋ ದೇವಿ ದೇವಸ್ಥಾನ, ರಘುನಾಥ್ ದೇವಸ್ಥಾನ, ಮುಬಾರಕ್ ಮಂಡಿ ಪ್ಯಾಲೇಸ್, ಮನಸರ್ ಲೇಕ್, ಬಹು ಫೋರ್ಟ್ ಮತ್ತು ಅಮರ್ ಮಹಲ್ ಮೊದಲಾದವುಗಳನ್ನು ನೋಡುವುದನ್ನು ತಪ್ಪಿಸಿಕೊಳ್ಳಲೇಬಾರದು. ವೈಷ್ಣೋ ದೇವಿ ದೇವಸ್ಥಾನ, ಹಿಂದೂ ದೇವತೆ, ವೈಷ್ಣೋ ದೇವಿಗೆ ಮೀಸಲಾಗಿರುವ ಗುಹಾ ದೇವಾಲಯವಾಗಿದೆ. ಈ ದೇವಾಲಯದ ಮುಖ್ಯ ಆಕರ್ಷಣೆಗಳು ವೈಷ್ಣೋ ದೇವಿಯ ಮೂರು ರೂಪಗಳಾದ ಸಮಯ ಮತ್ತು ಅಂತ್ಯದ ದೇವತೆ ಮಹಾಕಾಳಿ, ವಿದ್ಯಾಧಿದೇವತೆ ಮಹಾಸರಸ್ವತಿ ಮತ್ತು ಸಂಪತ್ತು ಮತ್ತು ಐಶ್ವರ್ಯದ ದೇವತೆ ಮಹಾಲಕ್ಷ್ಮಿ ವಿಗ್ರಹಗಳು.

ಜಮ್ಮುವಿನ ಹಿಂದಿನ ರಾಜರುಗಳಾದ, ಮಹಾರಾಜ ರಣಬೀರ್ ಸಿಂಗ್ ಮತ್ತು ಅವರ ತಂದೆ ಮಹಾರಾಜ ಗುಲಾಬ್ ಸಿಂಗ್ ನಿರ್ಮಿಸಿದ ರಘುನಾಥ್ ದೇವಾಲಯ, ಈ ಪ್ರದೇಶದ ಮತ್ತೊಂದು ಮುಖ್ಯ ಯಾತ್ರಾಸ್ಥಳವಾಗಿದೆ. ಈ ದೇವಾಲಯದ ನಿರ್ಮಾಣದಲ್ಲಿ ಮುಘಲ್ ವಾಸ್ತುಶಿಲ್ಪವನ್ನು ಕಾಣಬಹುದಾಗಿದೆ.

ಜಮ್ಮು ಪ್ರದೇಶಕ್ಕೆ ಭೇಟಿ ನೀಡುವುದಾದರೆ ಪ್ರಯಾಣಿಕರು, ಡೋಗ್ರಾ ರಾಜರ ನಿವಾಸಸ್ಥಾನವಾದ ಮುಬಾರಕ್ ಮಂಡಿ ಪ್ಯಾಲೇಸ್ ಗೆ ಭೇಟಿ ನೀಡಲೇಬೇಕು. ಈ ಅರಮನೆಯ ಅನನ್ಯ ಲಕ್ಷಣವೆಂದರೆ, ಇದು ಹೊಂದಿರುವ ರಾಜಸ್ಥಾನಿ, ಮೊಘಲ್, ಬರೊಕ್ ಮತ್ತು ಯುರೋಪಿಯನ್ ವಾಸ್ತುಶಿಲ್ಪ ಶೈಲಿಯ ಸಂಯೋಜನೆ. ಅರಮನೆಯ ಸಂಕೀರ್ಣದ ಒಳಗಿರುವ ಶೀಶ್ ಮಹಲ್, ಮುಬಾರಕ್ ಮಂಡಿ ಪ್ರಧಾನ ಆಕರ್ಷಣೆ.

ಮಾನಸ ಸರೋವರ ಅಥವಾ 'ಶುದ್ಧತೆ ವ್ಯಕ್ತೀಕರಣ' ಎಂದು ಪರಂಪರೆಯಿಂದ ಕರೆಯಲ್ಪಟ್ಟಿರುವ ಮನಸರ್ ಸರೋವರ, ಜಮ್ಮುವಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಸಮೃದ್ಧ ಹಸಿರು ಕಾಡುಗಳಿಂದ ಆವೃತವಾಗಿದ್ದು, ಈ ನದಿಯ ತೀರದಲ್ಲಿ ಹಾವುಗಳ ರಾಜ ಶೇಷನಾಗನನ್ನು ಪೂಜಿಸುವ ದೇವಾಯವೂ ಇದೆ.ಬಹು ಫೋರ್ಟ್, ಜಮ್ಮುವಿನ ಹಳೆಯ ಕೋಟೆ. ಸೋಲಾರ್ ರಾಜವಂಶಕ್ಕೆ ಸೇರಿದ ರಾಜಾ ಬಹು ಲೋಚನನಿಂದ ಸುಮಾರು 300 ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಕೋಟೆ ಬಾಗ್-ಈ-ಬಹು ಎಂದು ಕರೆಯಲ್ಪಡುವ ವ್ಯಾಪಕ ಹುಲ್ಲುಗಾವಲಿನಿಂದ ಸುತ್ತುವರಿದಿದೆ. ಪ್ರವಾಸಿಗರು ಈ ಕೋಟೆಯ ಭಾಗದಲ್ಲಿ ಸಮಯ ಮತ್ತು ಹಿಂದೂ ಉಗ್ರ ದೇವತೆ ಕಾಳಿಯನ್ನು ಪೂಜಿಸಲ್ವಡುವ ಬವ್ವೆ ವಾಲಿ ಮಾತಾ ದೇವಾಲಯ, ವನ್ನು ಕೂಡ ಕಾಣಬಹುದು.

ಜಮ್ಮುವಿನಲ್ಲಿ ನೋಡಬಹುದಾದಂತಹ ಇತರೆ ಸ್ಥಳಗಳಲ್ಲಿ ಕೆಲವನ್ನು ನಮೂದಿಸುವುದಾದರೆ, ಪೀರ್ ಬಾಬಾ ದರ್ಗಾ, ಸುರಿನ್ಸರ್ ಸರೋವರ, ಪೀರ್ ಖೋ ಗುಹಾ ದೇವಾಲಯ, ಜೈರತ್ ಪೀರ್ ಮಿಠ ಮತ್ತು ನಂದಿನಿ ವನ್ಯಜೀವಿಗಳ ಅಭಯಾರಣ್ಯ ಮೊದಲಾದವು.

ಪ್ರವಾಸಿಗರು ಜಮ್ಮುವನ್ನು ವಿಮಾನ, ರೈಲು, ಅಥವಾ ರಸ್ತೆ ಮೂಲಕ ತಲುಪಬಹುದು. ಜಮ್ಮುವಿನ ದೇಶೀಯ ವಾಯುನೆಲೆ ಭಾರತದ ಇತರ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ.

ಜಮ್ಮು ತಾವಿ ರೈಲು ನಿಲ್ದಾಣ ಜಮ್ಮುವಿನ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಇತರೆ ಪ್ರಮುಖ ರೈಲು ನಿಲ್ದಾಣಗಳಾದ, ಪುಣೆ, ಚೆನೈ, ದೆಹಲಿ, ನಗರಗಳಿಗೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಮೂಲಕ ಪ್ರಯಾಣ ಮಾಡಲು ಆಸಕ್ತಿಯಿರುವ ಪ್ರವಾಸಿಗರು ದಹಲಿ, ಅಂಬಾಲ, ಅಮೃತಸರ, ಲುಧಿಯಾನ, ಶಿಮ್ಲಾ, ಮತ್ತು ಮನಾಲಿ ಸೇರಿದಂತೆ ಮೊದಲಾದ ನಗರಗಳಿಂದ ಖಾಸಗಿ ಬಸ್, ಜೊತೆಗೆ ಟ್ಯಾಕ್ಸಿ ಮೂಲಕವೂ ಪ್ರಯಾಣ ಮಾಡಬಹುದು.

ಜಮ್ಮು ಪ್ರದೇಶಕ್ಕೆ ಪ್ರವಾಸಕ್ಕೆ ಬರಲು ಆಸಕ್ತಿಯುಳ್ಳ ಪ್ರವಾಸಿಗರು ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ನಡುವೆ ಪ್ರಯಾಣ ಮಾಡುವುದು ಸೂಕ್ತ. ಈ ಸಮಯದಲ್ಲಿ ಆರ್ದ್ರತೆಯ ಹವಾಮಾನ ಇರುವುದಿಲ್ಲ.

ಜಮ್ಮು ಪ್ರಸಿದ್ಧವಾಗಿದೆ

ಜಮ್ಮು ಹವಾಮಾನ

ಜಮ್ಮು
32oC / 90oF
 • Sunny
 • Wind: SE 15 km/h

ಉತ್ತಮ ಸಮಯ ಜಮ್ಮು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜಮ್ಮು

 • ರಸ್ತೆಯ ಮೂಲಕ
  ರಸ್ತೆ ಮೂಲಕ ಜಮ್ಮು ತಲುಪಲು ಆಸಕ್ತಿಯುಳ್ಳ ಪ್ರವಾಸಿಗರು ಲುಧಿಯಾನ, ದೆಹಲಿ, ಮನಾಲಿ, ಅಂಬಾಲ, ಶಿಮ್ಲಾ ಮತ್ತು ಅಮೃತಸರ್ ಮುಂತಾದ ನಗರಗಳಿಂದ ನೇರವಾಗಿ ಬಸ್ ಮೂಲಕ ಹೋಗಬಹುದು. ಅಲ್ಲದೇ ಜಮ್ಮುವಿಗೆ ಹವಾನಿಯಂತ್ರಿತವಲ್ಲದ ಹಾಗೂ ಹವಾನಿಯಂತ್ರಿತ ಖಾಸಗಿ ಬಸ್ಸುಗಳೂ ಸಹ ಲಭ್ಯವಿದೆ. ಪ್ರವಾಸಿಗರು ಹತ್ತಿರದ ನಗರಗಳಿಂದ ಜಮ್ಮುವಿಗೆ ಖಾಸಗಿ ಟ್ಯಾಕ್ಸಿ ಕೂಡ ಬುಕ್ ಮಾಡಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಮ್ಮುವಿಗೆ ಜಮ್ಮುತಾವಿ ರೈಲು ನಿಲ್ದಾಣ, ಅತ್ಯಂತ ಹತ್ತಿರದ ರೈಲು ನಿಲ್ದಾಣವಾಗಿದೆ. ಹಾಗೆಯೇ ಇದು ಇತರೆ ಪ್ರಮುಖ ರೈಲ್ವೆ ಜಂಕ್ಷನ್ ಗಳಾದ, ದೆಹಲಿ, ಚೆನೈ ಮತ್ತು ಪುಣೆ, ಇವುಗಳ ಜೊತೆ ಸಂಪರ್ಕ ಹೊಂದಿದೆ. ಪ್ರವಾಸಿಗರು ರೈಲ್ವೆ ನಿಲ್ದಾಣದಿಂದ ಆಟೋ ರಿಕ್ಷಾಗಳು, ಬಸ್ ಅಥವಾ ಟ್ಯಾಕ್ಸಿ ಮೂಲಕ 4 ಕಿ. ಮೀ ದೂರ ಇರುವ ನಗರದ ಕೇಂದ್ರ ಭಾಗಕ್ಕೆ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಜಮ್ಮು ವಿಮಾನ ನಿಲ್ದಾಣ ಜಮ್ಮುವಿಗೆ ಹತ್ತಿರದ ದೇಶೀಯ ವಾಯುನೆಲೆಯಾಗಿದೆ. ಇದು ಭಾರತದ ಇತರ ನಗರಗಳಾದ ದೆಹಲಿ, ಬೆಂಗಳೂರು ಮತ್ತು ಅನೇಕ ಇತರೆ ಪ್ರಮುಖ ಮೆಟ್ರೋಪಾಲಿಟನ್ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಮ್ಮುವಿಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ದೆಹಲಿ ವಿಮಾನಗಳು ವಿದೇಶಗಳ ಜೊತೆಗೆ ಭಾರತದ ಇತರ ರಾಜ್ಯಗಳಿಗೂ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ.
  ಮಾರ್ಗಗಳ ಹುಡುಕಾಟ

ಜಮ್ಮು ಲೇಖನಗಳು

One Way
Return
From (Departure City)
To (Destination City)
Depart On
21 Oct,Wed
Return On
22 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Oct,Wed
Check Out
22 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Oct,Wed
Return On
22 Oct,Thu
 • Today
  Jammu
  32 OC
  90 OF
  UV Index: 8
  Sunny
 • Tomorrow
  Jammu
  25 OC
  77 OF
  UV Index: 8
  Partly cloudy
 • Day After
  Jammu
  25 OC
  77 OF
  UV Index: 9
  Partly cloudy