India
Search
 • Follow NativePlanet
Share

ಕತುವಾ - ಮೋಕ್ಷಕ್ಕೊಂದು ಹಾದಿ

30

ಕತುವಾ ಜಿಲ್ಲೆ ಜಮ್ಮು ಕಾಶ್ಮೀರ ರಾಜ್ಯದಲ್ಲಿದ್ದು ಜಮ್ಮುವಿನಿಂದ 88 ಕಿಲೋ ಮೀಟರ್ ದೂರದಲ್ಲಿದೆ. 2000 ವರ್ಷಗಳ ಇತಿಹಾಸವಿರುವ ಈ ಜಿಲ್ಲೆಯಲ್ಲಿ ಅಂದೋತ್ರಾ ಸಾಮ್ರಾಜ್ಯದ ಪ್ರಸಿದ್ದ ರಜಪೂತ ದೊರೆ ಜೋಧ್ ಸಿಂಗ್ ತನ್ನ ಮೂವರು ಮಕ್ಕಳೊಂದಿಗೆ ಇಲ್ಲಿಯೇ ವಾಸವಾಗಿದ್ದ. ಈ ಮೂವರು ಮಕ್ಕಳು ಮೂರು ಪುಟ್ಟ ನಗರಗಳನ್ನು ಸ್ಥಾಪಿಸುತ್ತಾರೆ- ತರಫ್ ಮಂಜಲಿ, ತರಫ್ ತಾಜ್ವಾಲ್ ಮತ್ತು ತರಫ್ ಭಜ್ವಾಲ್. ಈ ಮೂರೂ ನಗರಗಳನ್ನು ಒಟ್ಟಿಗೆ ಸೇರಿಸಿ ಕತಾಯಿ ಎಂದು ಸ್ಥಳೀಯರು ಕರೆಯುತ್ತಿದ್ದರು. ಕತಾಯಿ ಎಂಬುದು ಮುಂದೆ ಕತುವಾ ಆಗಿದೆ.

ಜಮ್ಮು ಕಾಶ್ಮೀರದಲ್ಲಿಯೇ ಅತ್ಯಂತ ಸುಂದರ ಜಿಲ್ಲೆ ಕತುವಾ ಆಗಿದ್ದು, ಇಲ್ಲಿರುವ ಪ್ರವಾಸಿ ಆಕರ್ಷಣೆಗಳು ಮತ್ತು ಧಾರ್ಮಿಕ ಕೇಂದ್ರಗಳಿಂದಾಗಿ ಪ್ರಸಿದ್ದಿ ಪಡೆದಿದೆ. ಬನಿ, ಪನ್ಯಾಲಾಗ್ ಚಂದೆಲ್, ಸರ್ತಲ್, ದುಗ್ಗಾನ್ ಮತ್ತು ಬನ್ಸಾಲ್ ಗಳು ಕೆಲವು ಪ್ರಮುಖ ಪ್ರವಾಸಿ ತಾಣಗಳು. ಬನಿ ಕಣಿವೆ ನಿಸರ್ಗದ ಮಡಿಲಿನಲ್ಲಿ ನೆಲೆ ನಿಂತಿದ್ದು ದಟ್ಟವಾದ ಅರಣ್ಯ, ಹತ್ತಾರು ಜಲಪಾತಗಳು ಮತ್ತು ಸುಂದರವಾದ ಹುಲ್ಲುಗಾವಲುಗಳಿಂದ ಕೂಡಿದೆ. ಧೌಲಾವಾಲಿ ಮಾತಾ, ಜೋದಿಯಾ ದಿ ಮಾತಾ ದೇವಸ್ಥಾನಗಳು ಬನಿಯಲ್ಲಿವೆ. ಮಾತಾ ಸುಂದ್ರಿಕೋಟ್, ಮಾತಾ ಬಲಾ ಸುಂದ್ರಿ, ಐರ್ವಾನ್ ದೇವಾಲಯ, ಆಶಾ ಪುರಾನಿ ಮಂದಿರ ಇವುಗಳು ಕತುವಾದಲ್ಲಿರುವ ಕೆಲವು ದೇವಸ್ಥಾನಗಳು. ಪೀರ್ ಚತ್ತೇರಷಾ ಮತ್ತು ಗುರುದ್ವಾರ ಸಿಂಗ್ ಸಭಾ ಗಳೂ ಕೂಡ ಇಲ್ಲಿರುವ ಕೆಲವು ಧಾರ್ಮಿಕ ಶೃದ್ದಾ ಕೇಂದ್ರಗಳು. ಬಸೋಲಿ, ಭದ್ದು, ಹೀರಾನಗರ್, ಬಿಲ್ಲಾವರ್ ಮುಂತಾದ ಪ್ರಿಸಿದ್ದ ನಗರಗಳು ಈ ಜಿಲ್ಲೆಯಲ್ಲಿವೆ. ಬಸೋಲಿ ಪುಟ್ಟ ನಗರವಾಗಿದ್ದು ಕಲ್ಲಿನ ಕೆತ್ತನೆಯ ಮೂರ್ತಿಗಳಿವೆ ಮತ್ತು ಸಣ್ಣಳತೆಯ ಚಿತ್ರಕಲೆಗಳೂ ಕೂಡ ಇದ್ದು ಇವುಗಳು ಬಸೋಲಿ ಚಿತ್ರಕಲೆಗಳೆಂದೇ ಹೆಸರು ಪಡೆದಿವೆ. ಬಿಲ್ಲವರ್ ಎನ್ನೋದು ಮತ್ತೊಂದು ನಗರವಾಗಿದ್ದು 1598 ಮತ್ತು 1614 ರ ಮಧ್ಯೆ ರಾಜಾ ಭೋಪಟ್ ಪಾಲ್ ಇದನ್ನು ಕಟ್ಟಿಸಿದ. ಇಲ್ಲಿ ಮಹಾಬಿಲ್ವಕೇಶ್ವರ ದೇವಸ್ಥಾನ ಮತ್ತು ಶಿವ ದೇವಸ್ಥಾನಗಳು ಹಾಗೂ ಸ್ಮಾರಕಗಳಿವೆ.

ಕತುವಾ ಜಿಲ್ಲೆಗೆ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆಗಳಿವೆ. ಶ್ರೀನಗರ ವಿಮಾನ ನಿಲ್ದಾಣ ಕತುವಾ ಜಿಲ್ಲೆಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ವಿದೇಶಿ ಪ್ರವಾಸಿಗರು ಇಲ್ಲಿಂದ ಕತುವಾ ಜಿಲ್ಲೆಗೆ ಬರಬಹುದು.

ಕತುವಾ ರೈಲ್ವೇ ನಿಲ್ದಾಣಕ್ಕೆ ಕಾನ್ಪುರ್, ಜಲಂದರ್, ದೆಹಲಿ, ಜಮ್ಮು, ಮತ್ತು ಕರ್ನಲ್ ಜಿಲ್ಲೆಗೆಳಿಂದ ರೈಲು ಸಂಚಾರವಿದೆ. ರೈಲ್ವೇ ನಿಲ್ದಾಣ ನಗರದ ಮಧ್ಯಭಾಗದಿಂದ 7 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಂದ ಖಾಸಗಿ ಟ್ಯಾಕ್ಸಿ ಸೌಲಭ್ಯಗಳಿವೆ. ನ್ಯೂ ದೆಹಲಿ, ಜಮ್ಮು, ಶಿಮ್ಲಾ, ಶ್ರೀನರ, ಕತ್ರಾ, ಉಧಂಪುರ್, ಚಂಡೀಘರ್ ಮತ್ತು ಪಠಾನ್ ಕೋಟ್ ದಿಂದ ಕತುವಾಗೆ ನಿರಂತರ ಬಸ್ ಸಂಚಾರವಿದೆ.

ಕತುವಾ ಪ್ರಸಿದ್ಧವಾಗಿದೆ

ಕತುವಾ ಹವಾಮಾನ

ಉತ್ತಮ ಸಮಯ ಕತುವಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕತುವಾ

 • ರಸ್ತೆಯ ಮೂಲಕ
  ಉಧಮ್ ಪುರ್, ಜಮ್ಮು, ಕತ್ರಾ, ಶಿಮ್ಲಾ, ಚಂಡೀಘರ್, ಪಠಾನ್ಕೋಟ್, ಶ್ರೀನಗರ ಮತ್ತು ನವ ದೆಹಲಿಯಿಂದ ನಿರಂತರ ಬಸ್ ಸೌಕರ್ಯಗಳಿವೆ. ಜಮ್ಮು ಕಾಶ್ಮೀರ ಸಾರಿಗೆ ಇಲಾಖೆಯ ವತಿಯಿಂದ ಬಸ್ಸುಗಳು ಓಡಾಡತ್ತವೆ. ಖಾಸಗಿ ಬಸ್ಸುಗಳ ಮೂಲಕವೂ ಇಲ್ಲಿಗೆ ಬರಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕತುವಾದಿಂದ 7ಕಿಮೀ ದೂರದಲ್ಲಿ ರೈಲ್ವೇ ನಿಲ್ದಾಣವಿದೆ. ಜಲಂಧರ್, ಕಾನ್ಪುರ್, ಜಮ್ಮು, ದೆಹಲಿ, ಕರ್ನಲ್ ಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶೇಖ್ ಉಲ್-ಅಲಮ್ ವಿಮಾನ ನಿಲ್ದಾಣ ಅಥವಾ ಶ್ರೀನಗರ ವಿಮಾನ ನಿಲ್ದಾಣ ಕತುವಾಗೆ ಹತ್ತಿರದ ಏರ್ ಪೋರ್ಟ್. ಶಿಮ್ಲಾ, ಚಂಡೀಘರ್, ಮುಂಬೈ ಮತ್ತು ದೆಹಲಿಗಳಿಗೆ ಇಲ್ಲಿಂದ ಸಂಪರ್ಕವಿದೆ. ಇಂಧಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಿ ಪ್ರವಾಸಿಗರೂ ಬರಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue