Search
 • Follow NativePlanet
Share
ಮುಖಪುಟ » ಸ್ಥಳಗಳು» ಬಡ್ಗಮ್

ಬಡ್ಗಮ್ - ಮತ್ತೇರಿಸುವ ಪ್ರಕೃತಿ ಸೌಂದರ್ಯ

15

ಜಮ್ಮು ಕಾಶ್ಮೀರದಲ್ಲಿ ತೀರಾ ಇತ್ತೀಚೆಗೆ ರಚನೆಯಾದ ಜಿಲ್ಲೆ ಬಡ್ಗಮ್. ಸಮುದ್ರಮಟ್ಟದಿಂದ ಸುಮಾರು 5,281 ಅಡಿ ಎತ್ತರದಲ್ಲಿ ಈ ಜಿಲ್ಲೆ ಇದೆ. ಬಡ್ಗಮ್‌ನಲ್ಲಿ ಪ್ರವಾಸಿಗರನ್ನ ಪ್ರಮುಖವಾಗಿ ಆಕರ್ಷಿಸುವುದು ನಿಸರ್ಗ ಸೌಂದರ್ಯ. ಪರ್ವತಗಳಿಂದ ಸಮತಟ್ಟು ಪ್ರದೇಶಗಳವರೆಗೆ ಇಲ್ಲಿನ ಪರಿಸರ ವೈವಿಧ್ಯತೆಯನ್ನು ಹೊಂದಿದೆ. ದಕ್ಷಿಣ ಪ್ರದೇಶಗಳಲ್ಲಿ ಗುಡ್ಡಗಳಿದ್ದರೆ, ಉತ್ತರ ಮತ್ತು ಪೂರ್ವದ ಕಡೆಗೆ ಸಮತಟ್ಟಾದ ನೆಲವನ್ನು ಹೊಂದಿದೆ.

ಹಿಂದಿನ ಕಾಲದಲ್ಲಿ ಮೊಘಲರಿಗೆ ಬಡ್ಗಮ್ ಪ್ರಮುಖ ತಂಗುದಾಣವಾಗಿತ್ತು. ಕಾಶ್ಮೀರಕ್ಕೆ ಹೋಗುವ ದಾರಿ ಮಧ್ಯೆ ಈ ತಾಣ ಸಿಗುವುದರಿಂದ ಮೊಘಲರು ಇಲ್ಲಿ ದಣಿವಾರಿಸಿಕೊಳ್ಳಲು ಉಳಿದಕೊಳ್ಳುತ್ತಿದ್ದರು. ಖಾಗ್‌ ಪ್ರದೇಶದಲ್ಲಿ ಬಡ್ಗಮ್‌ನ ಗಡಿಯಾಗಿರುವ ಪೂಂ‌ಚ್‌ ಗಲಿ ಮೂಲಕ ಪ್ರವಾಸಿಗರು ಕಣಿವೆಯನ್ನು ಪ್ರವೇಶಿಸಬಹುದು. ಈ ಜಿಲ್ಲೆಯ ಕೆಲವು ಪ್ರಮುಖ ಪ್ರವಾಸಿ ತಾಣಗಳೆಂದರೆ ಯೂಸ್ಮಾರ್ಗ್‌, ದೂದ್‌ಪಥರ‍್, ತಾಶ್ ಮೈದಾನ್‌, ನಿಲಾಂಗ್‌ ಮತ್ತು ತಾತಾ ಕುಟ್ಟಿ ಬೆಟ್ಟ.

ವಿಶಾಲ ಹುಲ್ಲುಗಾವಲು ಪ್ರದೇಶವನ್ನು ಹೊಂದಿರುವ ಯೂಸ್ಮಾರ್ಗ್‌ ಪಿಕ್‌ನಿಕ್‌ಗೆಂದೇ ಹೇಳಿಮಾಡಿಸಿದ ಸುಂದರವಾದ ತಾಣ. ದಟ್ಟ ಅರಣ್ಯ, ಗುಡ್ಡಗಳು ಮತ್ತು ತೊರೆಗಳನ್ನು ಹೊಂದಿರುವ ದೂದ್‌ಪಥರ‍್ ಇನ್ನೊಂದು ಚಿತ್ರವತ್ತಾದ ತಾಣ. ಇಲ್ಲಿನ ಕೆಲವು ಪ್ರಮುಖ ಜಲಪಾತಗಳೆಂದರೆ ನಿಲ್‌ನಾಗ್‌, ಸುಖನಾಗ್‌, ಪುಷ್ಕರ‍್ ನಾಗ್, ಗಂಧಕ್ ನಾಗ್‌, ಲಯೇನ್ ಕೋಲ್‌, ಆಜಿಹ್‌ ಕೋಲ್‌ ಮತ್ತು ಮಾಲಾ ಕೋಲ್.

ಇಲ್ಲಿನ ಬಡ್ಗಮ್ ಇಮಾಮ್‌ಬಾರಾ, ಶೇಖ್‌ ನೂರ‍್ ಉದ್‌ ದಿನ್‌ ಸ್ತೂಪ, ಶಾಮ್‌ ದೇಡ್‌ ಸ್ತೂಪ, ಬಾಬಾ ಲತೀಫ್‌ ಉದ್‌ ದಿನ್‌ ಸ್ತೂಪ ಮತ್ತು ಹಜರತ್‌ ಗಂಗಾ ಬಾಬಾ ರಿಷಿ ಸ್ತೂಪಗಳು ಇಲ್ಲಿನ ಕೆಲವು ಪ್ರಮುಖ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳು.

ಬಡ್ಗಮ್‌ಗೆ ಪ್ರವಾಸ ಮಾಡಲು ಸಾಮಾನ್ಯ ಸಾರಿಗೆಗಳ ಜೊತೆಗೆ ವಿಮಾನಗಳು, ರೈಲುಗಳ ಮೂಲಕವೂ ಹೋಗಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಶ್ರೀನಗರ ಏರ‍್‌ಪೋರ್ಟ್‌. ಮುಂಬೈ, ಚಂಡೀಗಢ, ದೆಹಲಿ ಮತ್ತು ಶಿಮ್ಲಾದಂತ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ಶ್ರೀನಗರದಿಂದ ದೆಹಲಿ ವಿಮಾನ ನಿಲ್ದಾಣವು 876 ಕಿ.ಮೀ ದೂರದಲ್ಲಿದ್ದು ವಿದೇಶಿ ಪ್ರಯಾಣಿಕರು ದೆಹಲಿಗೆ ಬಂದು ಅಲ್ಲಿಂದ ಶ್ರೀನಗರದ ಮೂಲಕ ಬಡ್ಗಮ್‌ಗೆ ಪ್ರಯಾಣ ನಡೆಸಬಹುದು.

ಬುಡ್ಗಾಮ್‌ಗೆ ಸಮೀಪದ ರೈಲು ನಿಲ್ದಾಣ ಜಮ್ಮು ತಾವಿ ರೈಲ್ವೆ ನಿಲ್ದಾಣವಾಗಿದ್ದು, ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ತ್ರಿವೇಂಡ್ರಮ್‌ ಮತ್ತು ಚೆನ್ನೈಗಳಿಗೆ ನೇರ ಸಂಪರ್ಕವನ್ನು ಹೊಂದಿದೆ. ಬಡ್ಗಮ್‌ಗೆ ಶ್ರೀನಗರದಿಂದ ನೇರ ಬಸ್‌ ಸೌಲಭ್ಯವಿದೆ.

ವರ್ಷಂಪ್ರತಿ ಉತ್ತಮ ವಾತಾವರಣವನ್ನು ಬಡ್ಗಮ್ ಹೊಂದಿರುತ್ತದೆ. ಮಧ್ಯಮ ಪ್ರಮಾಣದ ತಾಪಮಾನವನ್ನು ಹೊಂದಿರುವ ಬೇಸಿಗೆಗಾಲ ಮತ್ತು ಅತಿಯಾದ ಮಂಜು ಸುರಿಯುವ ಚಳಿಗಾಲದ ವಾತಾವರಣ ಇಲ್ಲಿರುತ್ತದೆ. ಇನ್ನು ಮಳೆಗಾಲದಲ್ಲಿ ಸಾಕಷ್ಟು ಪ್ರಮಾಣದ ಮಳೆ ಇಲ್ಲಿ ಸುರಿಯುತ್ತದೆ.

ಬಡ್ಗಮ್ ಪ್ರಸಿದ್ಧವಾಗಿದೆ

ಬಡ್ಗಮ್ ಹವಾಮಾನ

ಬಡ್ಗಮ್
32oC / 90oF
 • Sunny
 • Wind: SE 15 km/h

ಉತ್ತಮ ಸಮಯ ಬಡ್ಗಮ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಬಡ್ಗಮ್

 • ರಸ್ತೆಯ ಮೂಲಕ
  ಶ್ರೀನಗರದಿಂದ ನಿರಂತರ ಬಸ್‌ ಸೌಲಭ್ಯ ಬಡ್ಗಮ್‌ಗೆ ಇದೆ, ಚಂಡೀಗಢ, ಜಮ್ಮು, ಫಲ್ಗಾಂ‌, ದೆಹಲಿ ಮತ್ತು ಲೇಹ್‌ನಿಂದ ಶ್ರೀನಗರಕ್ಕೆ ಬಸ್ಸುಗಳು ಲಭ್ಯವಿದೆ. ಇದೂ ಅಲ್ಲದೇ ಜಮ್ಮು ಕಾಶ್ಮೀರದ ಸರ್ಕಾರಿ ಸಾರಿಗೆ ಬಸ್‌ಗಳನ್ನು ಅವಲಂಬಿಸಿ ಪ್ರವಾಸಿಗರು ಪ್ರಯಾಣ ಕೈಗೊಳ್ಳಬಹುದು. ಜಮ್ಮುವಿನಿಂದ ಇಲ್ಲಿಗೆ ಸಾಕಷ್ಟು ಬಸ್‌ಗಳು ಲಭ್ಯವಿದೆ. ರಾಜ್ಯ ಸಾರಿಗೆ ಬಸ್‌ಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿಮ್ಮಪ್ರಯಾಣವನ್ನು ಒದಗಿಸುತ್ತದೆ. ಅಲ್ಲದೆ ಆರಾಮದಾಯಕ ಕೂಡಾ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಬಡ್ಗಮ್‌ಗೆ ಸಮೀಪದ ರೈಲ್ವೆ ನಿಲ್ದಾಣ ಜಮ್ಮು ತಾವಿ ರೈಲ್ವೆ ಸ್ವೇಷನ್‌. ಭಾರತದ ಪ್ರಮುಖ ನಗರಗಳಾದ ಚೆನ್ನೈ, ಬೆಂಗಳೂರು, ದೆಹಲಿ ಮತ್ತು ತ್ರಿವೇಂಡ್ರಮ್‌ಗೆ ಇಲ್ಲಿಂದ ಸಂಪರ್ಕವನ್ನು ಕಲ್ಪಿಸಲಾಗಿದೆ. ರೈಲ್ವೆ ನಿಲ್ದಾಣದ ಹೊರಗಡೆ ಲಭ್ಯವಿರುವ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕ ಬಡ್ಗಮ್‌ಗೆ ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶ್ರೀನಗರ ವಿಮಾನ ನಿಲ್ದಾಣವು ಬಡ್ಗಮ್‌ಗೆ ಸಮೀಪದಲ್ಲಿದೆ. ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಶಿಮ್ಲಾ ಮತ್ತು ಚಂಡೀಗಢಕ್ಕೆ ಇಲ್ಲಿಂದ ನೇರ ಸಂಪರ್ಕವಿದೆ. ಶ್ರೀನಗರದಿಂದ 876 ಕಿ.ಮೀ ದೂರದಲ್ಲಿ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ವಿದೇಶಿ ಪ್ರವಾಸಿಗರು ಈ ಮೂಲಕ ಆಗಮಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 May,Sun
Return On
20 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 May,Sun
Check Out
20 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 May,Sun
Return On
20 May,Mon
 • Today
  Budgam
  32 OC
  90 OF
  UV Index: 8
  Sunny
 • Tomorrow
  Budgam
  25 OC
  77 OF
  UV Index: 8
  Partly cloudy
 • Day After
  Budgam
  25 OC
  77 OF
  UV Index: 9
  Partly cloudy