Search
  • Follow NativePlanet
Share
ಮುಖಪುಟ » ಸ್ಥಳಗಳು » ಬಡ್ಗಮ್ » ಹವಾಮಾನ

ಬಡ್ಗಮ್ ಹವಾಮಾನ

ಬಡ್ಗಮ್‌ಗೆ ಭೇಟಿ ನೀಡಲು ಬೇಸಿಗೆ ಕಾಲ ಸೂಕ್ತವಾದದ್ದು. ಈ ಅವಧಿಯಲ್ಲಿ ಬಡ್ಗಮ್‌ನ ವಾತಾವರಣವು ಅನುಕೂಲಕರವಾಗಿದ್ದು ಪ್ರಶಾಂತವಾಗಿರುತ್ತದೆ. ಚಳಿಗಾಲದ ಡಿಸೆಂಬರ‍್ ಮತ್ತು ಜನವರಿ ತಿಂಗಳಲ್ಲಿ ಇಲ್ಲಿ ಯಥೇಚ್ಛವಾಗಿ ಮಂಜು ಸುರಿಯುತ್ತದೆ.

ಬೇಸಿಗೆಗಾಲ

(ಮೇನಿಂದ ಜುಲೈ) : ಬೇಸಿಗೆಗಾಲದಲ್ಲಿ ಬಡ್ಗಮ್‌ನ ವಾತಾವರಣ ಮಧ್ಯಮ ಪ್ರಮಾಣದಲ್ಲಿರುತ್ತದೆ. ತಾಪಮಾನವು ಹಗಲಿನ ಅವಧಿಯಲ್ಲಿ 30 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿದ್ದು, ರಾತ್ರಿಯಲ್ಲಿ ಅತ್ಯಂತ ಕಡಿಮೆಯಾಗಿ 18 ಡಿಗ್ರಿ ಸೆಲ್ಷಿಯಸ್‌ಗೆ ಇಳಿಯುತ್ತದೆ. ಬಡ್ಗಮ್‌ನಲ್ಲಿ ಇತರೆಲ್ಲಾ ಅವಧಿಗಿಂತ ಬೇಸಿಗೆಯಲ್ಲೇ ಹೆಚ್ಚು ವಾತಾವರಣ ಹಿತವಾಗಿರುವುದರಿಂದ ಅಪಾರ ಪ್ರಮಾಣದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮಳೆಗಾಲ

(ಅಗಸ್ಟ್‌ನಿಂದ ಸಪ್ಟೆಂಬರ‍್) : ಮಳೆಗಾಲದಲ್ಲಿ ಬಡ್ಗಮ್‌ ಸೂಕ್ತ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

(ಅಕ್ಟೋಬರಿನಿಂದ ಜನವರಿ) : ಬಡ್ಗಮ್ ವಾತಾವರಣವು ಚಳಿಗಾಲದಲ್ಲಿ ಅತ್ಯಂತ ಶೀತಲವಾಗಿರುತ್ತದೆ. ತಾಪಮಾನವಂತೂ -2 ಡಿಗ್ರಿ ಸೆಲ್ಷಿಯಸ್‌ ತನಕ ಇಳಿಯುತ್ತದೆ ಮತ್ತು ಗರಿಷ್ಟ ತಾಪಮಾನವು 8 ಡಿಗ್ರಿ ಸೆಲ್ಷಿಯಸ್‌ ತನಕ ಇರುತ್ತದೆ. ಡಿಸೆಂಬರ‍್ ಮತ್ತು ಜನವರಿ ತಿಂಗಳಲ್ಲಿ ಇಲ್ಲಿ ಮಂಜು ಬೀಳುತ್ತಿರುತ್ತದೆ. ಮಂಜು ಬೀಳುವುದನ್ನು ಅನುಭವಿಸಲು ಪ್ರವಾಸಿಗರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಫೆಬ್ರವರಿ ತಿಂಗಳಲ್ಲಿ ಇಲ್ಲಿನ ತಾಪಮಾನವು ಏರಲು ಆರಂಭವಾಗುತ್ತದೆ.