Search
  • Follow NativePlanet
Share
ಮುಖಪುಟ » ಸ್ಥಳಗಳು» ಕಾರ್ಗಿಲ್

ಕಾರ್ಗಿಲ್‌: ಗಡಿಯಲ್ಲಿರುವ ಸುಂದರ ತಾಣ

32

ಸೈನಿಕರ ನೆಲ ಎಂಬ ವಿಶೇಷ ಹೆಸರನ್ನು ಕೂಡ ಹೊಂದಿರುವ ತಾಣ ಕಾರ್ಗಿಲ್‌. ಜಮ್ಮೂ- ಕಾಶ್ಮೀರ ರಾಜ್ಯದ ಲಡಾಖ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಪ್ರದೇಶವಿದೆ. ಶಿಯಾ ಮುಸ್ಲಿಮರು ಇದನ್ನು ಆವರಿಸಿಕೊಂಡಿದ್ದರಿಂದ ಪ್ರಾಥಮಿಕವಾಗಿ ಈ ಪ್ರದೇಶಕ್ಕೆ ಕಾರ್ಗಿಲ್‌ ಎಂಬ ಹೆಸರು ಬಂತು. ಶ್ರೀನಗರದಿಂದ ಇದು 205 ಕಿ.ಮೀ. ದೂರದಲ್ಲಿದೆ. ಈ ಭಾಗವು ಭಾರತ-ಪಾಕಿಸ್ತಾನ ಗಡಿಪ್ರದೇಶದಲ್ಲಿದ್ದು, ಅತ್ಯಾಕರ್ಷಕ ಕಾಶ್ಮೀರ ಕಣಿವೆ ವೀಕ್ಷಣೆಗೆ ಸೂಕ್ತವಾದ ತಾಣವಾಗಿದೆ. ಭಾರತ- ಪಾಕಿಸ್ತಾನ ನಡುವೆ 1999 ರಲ್ಲಿ ನಡೆದ ಯುದ್ಧ ಭೂಮಿ ಇದಾಗಿದೆ. ಇಲ್ಲಿಯೇ ಕಾರ್ಗಿಲ್‌ ಯುದ್ಧ ನಡೆದಿದ್ದು.

ಕಾರ್ಗಿಲ್‌ ಶಬ್ಧವು ಎರಡು ಶಬ್ಧಗಳ ಮಿಶ್ರರೂಪವಾಗಿದೆ. 'ಕಾರ್‌' ಅಂದರೆ ಕೋಟೆ ಹಾಗೂ 'ರ್ಕಿಲ್‌' ಅಂದರೆ ಕೇಂದ್ರ. ಇದರಿಂದಾಗಿ ತಾಣಕ್ಕೆ ಕೋಟೆ ಎಂದು ಹೆಸರು ಬಂದಿದೆ. ಅಲ್ಲದೇ ಇಲ್ಲಿನ ತಾಣಕ್ಕೆ ಅನುಗುಣವಾಗಿ ಈ ಹೆಸರು ಬಂದಿದೆ. ಏಕೆಂದರೆ ಇದು ಭಾರತ ಹಾಗೂ ಪಾಕಿಸ್ತಾನ ಎರಡು ರಾಷ್ಟ್ರಗಳ ಮಧ್ಯದಲ್ಲಿದೆ. ಅತ್ಯಾಕರ್ಷಕ ಪರ್ವತ, ಛಾಯಾಚಿತ್ರಗ್ರಾಹಿ ಕಣಿವೆಗಳು, ಚಿಕ್ಕ ಪಟ್ಟಣಗಳಿಂದಾಗಿ ಕಾರ್ಗಿಲ್‌ ಜನಪ್ರಿಯವಾಗಿದೆ. ಅತ್ಯುತ್ತಮ ಪ್ರವಾಸಿ ತಾಣ ಹಾಗೂ ಬೌದ್ಧ ಧರ್ಮೀಯರ ಪವಿತ್ರ ಸ್ಥಳವಾಗಿದೆ. ಸನಿ ಆಶ್ರಮ, ಮುಬಾರಕ್‌ ಆಶ್ರಮ ಹಾಗೂ ಶ್ರಂಗೋಲೆ ಆಶ್ರಮಗಳು ಇಲ್ಲಿನ ಪವಿತ್ರ ಸ್ಥಳಗಳಾಗಿ ಜನಪ್ರಿಯವಾಗಿವೆ.

ಸನಿ ಆಶ್ರಮವು ಅತ್ಯಂತ ಪುರಾತನ ಹಾಗೂ ಜನಪ್ರಿಯ ಆಶ್ರಮವಾಗಿದೆ. ಸನಿ ಎಂಬ ಹಳ್ಳಿಗೆ ಸಮೀಪದಲ್ಲಿದೆ. ವಿಶ್ವದ ಪ್ರಮುಖ ಎಂಟು ಬೌದ್ಧ ಗುರುಗಳ ಆಶ್ರಮಗಳಲ್ಲಿ ಇದು ಒಂದಾಗಿದೆ. ಈ ಆಶ್ರಮಕ್ಕೆ ಬುದ್ಧ ಧರ್ಮೀಯರಲ್ಲೇ ಜನಪ್ರಿಯ ಸಾದುಗಳಾದ ಮರ್ಪಾ, ನರೋಪಾ, ಪದ್ಮಸಂಭವ ಭೇಟಿ ನೀಡಿದ್ದರು. ಕುಶಾನ ಅರಸು ಕನಿಷ್ಕನು ಈ ಮಠವನ್ನು ಒಂದನೇ ಶತಮಾನದಲ್ಲಿ ನಿರ್ಮಿಸಿದ್ದ ಎನ್ನಲಾಗುತ್ತದೆ. 108 ಸ್ತೂಪ ಅಥವಾ ಚೋರಿಟನ್‌ಗಳಲ್ಲಿ ಇದು ಒಂದಾಗಿದೆ. ಡೋಮ್‌ ಮಾದರಿಯ ನಿರ್ಮಾಣದ ಬೌದ್ಧ ಮಂದಿರ ಇದೇ ಆಶ್ರಮ ಆವರಣದಲ್ಲಿದೆ. 20 ಅಡಿ ಎತ್ತರದ ಸ್ತೂಪವು ಕನ್ನಿಕಾ ಚೋರ್ಟನ್‌ ಅಂತಲೂ ಜನಪ್ರಿಯವಾಗಿದೆ. ಈ ತಾಣವು ಆಶ್ರಮದ ಹಿಂಭಾಗದಲ್ಲಿದೆ.

ಜನಪ್ರಿಯ ಬುದ್ಧ ಶಿಲ್ಪವಾದ ಮೈತ್ರೇಯ ಬುದ್ಧ ಅಥವಾ ಭವಿಷ್ಯದ ಬುದ್ಧ ಹಾಗೂ ಇನ್ನೊಂದು ಹೆಸರಾದ 'ನಗುವ ಬುದ್ಧ' ಎಂದೇ ಖ್ಯಾತವಾಗಿರುವ ಮೂರ್ತಿಯು ಮುಬಾರಖ್‌ ಆಶ್ರಮದ ಮುಖ್ಯ ಆಕರ್ಷಣೆ. ಆಶ್ರಮವು ಕಲ್ಲಿನ ಪರ್ವತದ ಮೇಲೆ ಸ್ಥಾಪಿತವಾಗಿದೆ. ಅಲ್ಲದೇ ಇಲ್ಲಿ ಬುದ್ಧನ 9 ಮೀಟರ್‌ ಎತ್ತರದ ವಿಗ್ರಹ ಇದೆ. ಕೆಲ ಮಿಷನರಿಗಳು ಇದನ್ನು ಕೊಂಡು ತಂದು ಇಲ್ಲಿರಿಸಿದರು ಎಂದು ಹೇಳಲಾಗುತ್ತದೆ.

ಜನ್ಸಕರ್‌ ಎಂಬುದು ಕಾರ್ಗಿಲ್‌ನ ಉಪ ಜಿಲ್ಲೆಯಾಗಿದೆ. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಅಗಮಿಸುತ್ತಾರೆ. ಈ ತಾಣದ ವಿಶೇಷ ಅಂದರೆ ವರ್ಷದಲ್ಲಿ ಎಂಟು ತಿಂಗಳು ಇದು ಹಿಮದಿಂದ ಆವೃತ್ತವಾಗಿರುತ್ತದೆ. ಇಲ್ಲಿ ಸಾಕಷ್ಟು ಆಶ್ರಮಗಳು ಇವೆ. ಉದಾಹರಣೆಗೆ ಕರಶ ಆಶ್ರಮ, ಜೊಂಗಕುಲ್‌ ಆಶ್ರಮ, ಸ್ಟೊಂಗ್‌ಡೇ ಆಶ್ರಮ, ದ್ರಂಗ-ದುಂಗ ಗ್ಲಾಸಿರ್‌ ಇಲ್ಲಿವೆ. ಇವೆಲ್ಲವೂ ಸುರು ಕಣಿವೆಯ ಕೇಂದ್ರಭಾಗದಲ್ಲಿ ಇವೆ. ಇದು ಕೂಡ ಇಲ್ಲಿನ ಪ್ರಮುಖ ಆಕರ್ಷಣೆಯಲ್ಲಿ ಒಂದೆನಿಸಿದೆ.

ಕೃಷ ಆಶ್ರಮ ಅತಿ ದೊಡ್ಡ ಹಾಗೂ ಶ್ರೀಮಂತ ಆಶ್ರಮ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಸಾಕಷ್ಟು ಪ್ರಾರ್ಥನಾ ಮಂದಿರಗಳು ಇವೆ. 150 ಮೋಂಕ್‌ಗಳು ಉಳಿದುಕೊಳ್ಳಲು ಅನುಕೂಲವಾಗುವ ವಸತಿ ಸೌಲಭ್ಯವೂ ಇದೆ. ಈ ತಾಣ ಅಪಾರ ಸಂಖ್ಯೆಯಲ್ಲಿ ಪರವಾಸಿಗರನ್ನು ಸೆಳೆಯುತ್ತಿದೆ. ಚೊಮೊ ಗೋಂಪಾ ಅಥವಾ ನೂನರಿಯು ಇಲ್ಲಿಗೆ ಸಮೀಪದಲ್ಲಿದೆ. ರಂಗದಂ ಆಶ್ರಮ, ಪುಗ್ತಲ್‌ ಆಶ್ರಮ, ಶರಂಗೊಲೆ ಆಶ್ರಮ ಹಾಗೂ ಸ್ಟರೋಮೋ ಆಶ್ರಮಗಳು ಜಿಲ್ಲೆಯ ಇನ್ನಿತರೆ ಜನಪ್ರಿಯ ಆಶ್ರಮಗಳಾಗಿವೆ.

ಕಾರ್ಗಿಲ್‌ ಶ್ರೀನಗರಕ್ಕೆ ಸಮೀಪವಾಗಿದೆ. ರಸ್ತೆ ಮಾರ್ಗದ ಮೂಲಕ ಆರಾಮವಾಗಿ ತಲುಪಬಹುದು. ಶ್ರೀನಗರದ ಶೇಖ್‌ ಉಲ್‌ ಅಲಂ ವಿಮಾನ ನಿಲ್ದಾಣ ಜನಪ್ರಿಯ ವಿಮಾನ ನಿಲ್ದಾಣವಾಗಿದೆ. ದೇಶದ ನಾನಾ ನಗರಗಳನ್ನು ಇದು ಸಂಪರ್ಕಿಸುತ್ತದೆ. ದಿಲ್ಲಿ, ಶಿಮ್ಲಾ, ಮುಂಬಯಿ, ಚಂಡಿಘಡ ಹಾಗೂ ಇತರೆ ತಾಣಗಳು ಕಾರ್ಗಿಲ್‌ಗೆ ಸಂಪರ್ಕ ಪಡೆಯಲು ಇದು ಸಹಕಾರಿಯಾಗಿದೆ.

ಅತ್ಯಂತ ಸಮೀಪದ ರೈಲು ನಿಲ್ದಾಣ ಜಮ್ಮುವಿನ ತವಿ ರೈಲು ನಿಲ್ದಾಣ. ಇದು ಕಾಗರ್ಗಿಲ್‌ನಿಂದ 540 ಕಿ.ಮೀ. ದೂರದಲ್ಲಿದೆ. ಇದು ಪ್ರಮುಖ ನಗರಗಳಾದ ತ್ರಿವೇಂದ್ರಂ, ಚೆನ್ನೈ, ಬೆಂಗಳೂರು, ದಿಲ್ಲಿ ಹಾಗೂ ಇತರೆ ನಗರಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ರೈಲು ನಿಲ್ದಾಣದಿಂದ ಕಾರ್ಗಿಲ್‌ ತಲುಪಲು ಕಾರು ಹಾಗೂ ಜೀಪ್‌ಗಳು ಬಾಡಿಗೆಗೆ ಸಿಗುತ್ತವೆ. ಇನ್ನು ಬಸ್‌ಗಳು ಕೂಡ ಸಾಕಷ್ಟಿವೆ. ಲೇಹ್‌ ಹಾಗೂ ಶ್ರೀನಗರದಿಂದ ಕಾರ್ಗಿಲ್‌ ತಲುಪಲು ಬಸ್‌ ಸೌಲಭ್ಯ ಉತ್ತಮವಾಗಿದೆ. ಪ್ರವಾಸಿಗರು ಇಲ್ಲಿಂದ ಕೂಡ ಕಾರ್ಗಿಲ್‌ ತಲುಪಲು ಕಾರು ಹಾಗೂ ಜೀಪ್‌ಗಳು ಬಾಡಿಗೆಗೆ ಪಡೆಯಬಹುದು.

ಕಾರ್ಗಿಲ್‌ ತಾಪಮಾನವು ಹಿಮಾಲಯ ಪರ್ವತ ಪ್ರದೇಶ ಹೊಂದಿರುವ ಡೆಸರ್ಟ್ ಮಾದರಿಯ ವಾತಾವರಣ ಸ್ಥಿತಿ ಹೊಂದಿರುತ್ತದೆ. ಚಳಿಗಾಲದಲ್ಲಿ ವಿಪರೀತ ಹಿಮ ಬೀಳುವುದರಿಂದ ಪ್ರವೇಶವನ್ನು ಬಂದ್‌ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ತಾಪಮಾನ ಕೂಡ -48 ಡಿಗ್ರಿ ಸೆಲ್ಶಿಯಸ್‌ ತಲುಪುತ್ತದೆ! ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಬೇಸಿಗೆ ಸೂಕ್ತ ಕಾಲ. ಮೇ ನಿಂದ ಜೂನ್‌ ನಡುವಿನ ಅವಧಿ ಕಾರ್ಗಿಲ್‌ ವೀಕ್ಷಣೆಗೆ ಸೂಕ್ತ ಕಾಲ ಎಂದು ಹೇಳಲಾಗುತ್ತದೆ.

ಕಾರ್ಗಿಲ್ ಪ್ರಸಿದ್ಧವಾಗಿದೆ

ಕಾರ್ಗಿಲ್ ಹವಾಮಾನ

ಉತ್ತಮ ಸಮಯ ಕಾರ್ಗಿಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಾರ್ಗಿಲ್

  • ರಸ್ತೆಯ ಮೂಲಕ
    ಕಾರ್ಗಿಲ್‌ಗೆ ಲೇಹ್‌ ಹಾಗೂ ಶ್ರೀನಗರದಿಂದ ಉತ್ತಮ ಬಸ್‌ ಸಂಪರ್ಕ ಇದೆ. ಶ್ರೀನಗರಕ್ಕೆ ಜಮ್ಮು, ಚಂಡಿಘಡ, ದಿಲ್ಲಿ, ಪಾಲ್ಗಮ್ ಹಾಗೂ ಲೇಹ್‌ ಸೇರಿದಂತೆ ಹಲವೆಡೆಯಿಂದ ಬಸ್‌ ಸೌಲಭ್ಯ ಇದೆ. ಜಮ್ಮು ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸೌಲಭ್ಯ ಜಮ್ಮುವಿನಿಂದ ಇದೆ. ಪ್ರವಾಸಿಗರು ಇದಲ್ಲದೇ ಜೀಪ್‌, ಕಾರು, ಟ್ಯಾಕ್ಸಿ, ಮಿನಿ ಕೋಚ್‌ ವಾಹನಗಳನ್ನು ಬಾಡಿಗೆಗೆ ಪಡೆದು ಬರಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮುವಿನ ತವಿ ರೈಲು ನಿಲ್ದಾಣ ಕಾರ್ಗಿಲ್‌ ಸಮೀಪದ ನಿಲ್ದಾಣವಾಗಿದೆ. 540 ಕಿ.ಮೀ. ದೂರದಲ್ಲಿ ನಿಲ್ದಾಣ ಇದೆ. ದೇಶದ ಪ್ರಮುಖ ನಗರಗಳಾದ ಚೆನ್ನೈ, ತ್ರಿವೇಂದ್ರಂ, ದಿಲ್ಲಿ, ಬೆಂಗಳೂರು ಮತ್ತಿತರ ತಾಣಗಳಿಂದ ಉತ್ತಮ ಸಂಪರ್ಕ ವ್ಯವಸ್ಥೆ ಈ ನಿಲ್ದಾಣ ಹೊಂದಿದೆ. ರೈಲು ನಿಲ್ದಾಣದಿಂದ ಕಾರ್ಗಿಲ್‌ ತಲುಪಲು ಸಾಕಷ್ಟು ಕಾರು, ಟ್ಯಾಕ್ಸಿ ಸಿಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಾರ್ಗಿಲ್‌ ತಲುಪಲು ಸಮೀಪದ ವಿಮಾನ ನಿಲ್ದಾಣ ಶ್ರೀನಗರ. 206 ಕಿ.ಮೀ. ದೂರದಲ್ಲಿದೆ. ದೇಶದ ಪ್ರಮುಖ ನಗರಗಳಾದ ದಿಲ್ಲಿ, ಶಿಮ್ಲಾ, ಚಂಡಿಘಡ ಸೇರಿದಂತೆ ಎಲ್ಲೆಡೆಯಿಂದ ಉತ್ತಮ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದಿಂದ ಕಾರ್ಗಿಲ್‌ ತಲುಪಲು ಸಾಕಷ್ಟು ಟ್ಯಾಕ್ಸಿಗಳು ಸಿಗುತ್ತವೆ. ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ವಿದೇಶಿ ಪ್ರವಾಸಿಗರೂ ಬರಲು ಇದು ಅನುಕೂಲಕರವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri