Search
 • Follow NativePlanet
Share
ಮುಖಪುಟ » ಸ್ಥಳಗಳು» ಪತ್ನಿಟಾಪ್

ಪತ್ನಿಟಾಪ್‌ - ಎಲ್ಲವೂ ಸುಂದರಮಯ

18

ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ ಜಿಲ್ಲೆಯಲ್ಲಿರುವ ಪತ್ನಿಟಾಪ್ ಮನಮೋಹಕವಾದ ಹಿಲ್‌ ರೆಸಾರ್ಟ್‌ನಿಂದಾಗಿ ಗಮನ ಸೆಳೆಯುತ್ತದೆ. ಮೊದಲು 'ಪತನ್‌ ಡಾ ತಲಾಬ್‌' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈ ಸ್ಥಳವನ್ನು ಬಳಿಕ ಪತ್ನೀಟಾಪ್‌ ಎಂದು ಕರೆಯಲು ಪ್ರಾರಂಭಿಸಿದರು. ಪತನ್ ಕಾ ತಲಾಬ್‌ ಅಂದರೆ 'ರಾಜಕುಮಾರಿಯ ಕೊಳ' ಎಂದು ಅರ್ಥೈಸಿಕೊಳ್ಳಬಹುದು.  ಸಮುದ್ರ ಮಟ್ಟದಿಂದ 2024 ಮೀಟರ್ ಎತ್ತರದಲ್ಲಿರುವ ಈ ಸ್ಥಳ ದಟ್ಟವಾದ ದೇವದಾರು ಕಾಡು, ಪರ್ವತಗಳಿಂದ ಕೂಡಿದ್ದು, ಅಚ್ಚರಿಯಿಂದ ಉಸಿರುಗಟ್ಟಿಸುತ್ತದೆ.

ಚಾಲ್ತಿಯಲ್ಲಿರುವ ದಂತಕಥೆಯೊಂದರ ಪ್ರಕಾರ, ಅಲ್ಲಿನ ರಾಜಕುಮಾರಿ ಈ ಕೊಳವನ್ನು ಸ್ನಾನಕ್ಕಾಗಿ ಬಳಸುತ್ತಿದ್ದಳು. ವಿಹಾರಕ್ಕೆ ಉತ್ತಮ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಮೂರು ಸಿಹಿನೀರಿನ ಬುಗ್ಗೆಗಳಿವೆ. ಇಲ್ಲಿಂದ ಲಭ್ಯವಾಗುವ ನೀರಿನಲ್ಲಿ ಹೇರಳವಾದ ಔಷಧೀಯ ಗುಣವಿದೆ ಎಂದು ನಂಬಲಾಗಿದೆ.  

ಚಳಿಗಾಲದಲ್ಲಿ ಪ್ರವಾಸಕ್ಕೆಂದು ಇಲ್ಲಿಗೆ ಬಂದರೆ ಸ್ಕೀಯಿಂಗ್‌, ಟ್ರೆಕ್ಕಿಂಗ್‌ಗೆ ಉತ್ತಮವಾಗಿರುತ್ತದೆ ವಾತಾವರಣ. ಇದರ ಜತೆಯಲ್ಲಿ ಏರೋಕ್ರೀಡೆಗಳು, ಗಾಲ್ಫ್‌, ಕುದುರೆ ಸವಾರಿ, ಪ್ಯಾರಾಗ್ಲೈಂಡಿಂಗ್ ಗೂ ಇಲ್ಲಿ ಸಾಕಷ್ಟು ಅವಕಾಶವಿದೆ. ಛಾಯಾಗ್ರಹಣದಲ್ಲಿ ಆಸಕ್ತಯುಳ್ಳವರು ನೀವಾಗಿದ್ದರೆ, ನಿಮಗಿದು ಸ್ವರ್ಗಸದೃಶ!

ಇವೆಲ್ಲವುಗಳ ಜತೆ ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಅಪರೂಪದ ಪ್ರವಾಸೀ ತಾಣಗಳು ಇಲ್ಲಿವೆ. ಅವುಗಳೆಂದರೆ, ಸರ್ಪ ದೇವಾಲಯ, ಬುದ್ಧ ಅಮರನಾಥ್ ದೇವಾಲಯ, ಬಹು ಫೋರ್ಟ್, ಇವುಗಳ ಜತೆ ಶುಧ್‌ ಮಹಾದೇವ್‌, ಗೌರಿಕುಂಡ, ಕುಡ ಮತ್ತು ಶಿವಘರ್ ನಂತಹ ಪವಿತ್ರ ಸ್ಥಳಗಳು ಇಲ್ಲಿವೆ.

ಇನ್ನುಳಿದಂತೆ ಹೇಳುವುದಾದರೆ ಇಲ್ಲಿಗೆ ರೈಲು ಮತ್ತು ವಿಮಾನ ಸಂಪರ್ಕ ಇಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರಗಳ ಮೂಲಕ ರಸ್ತೆ ಸಾರಿಗೆಯ ಮೂಲಕ ಸುಲಭವಾಗಿ ಪತ್ನಿಟಾಪ್‌ಗೆ ಬರಬಹುದು. ಜಮ್ಮುವಿನ ವಿಮಾನ ಮತ್ತು ರೈಲು ನಿಲ್ದಾಣದಿಂದ ಪತ್ನಿಟಾಪ್‌ಗೆ ಹೇರಳವಾಗಿ ಸಾರಿಗೆ ಸೌಲಭ್ಯವಿದೆ.

ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿಗೆ ಆಗಮಿಸಬಹುದಾದರೂ, ಮೇ ಯಿಂದ ಸೆಪ್ಟೆಂಬರ್‌ ವರರೆಗೆ ಇಲ್ಲಿಗೆ ಆಗಮಿಸಲು ಹೆಚ್ಚು ಸೂಕ್ತವಾಗಿದೆ. ಡಿಸೆಂಬರಿನಿಂದ ಪೆಭ್ರುವರಿ ವರೆಗೆ ಸ್ಕೀಯಿಂಗ್‌, ಟ್ರೆಕ್ಕಿಂಗ್‌ ಕೈಗೊಳ್ಳಲು ವಾತಾವರಣ ಸೂಕ್ತವಾಗಿರುತ್ತದೆ. ಯಾವಾಗ ಬರಬೇಕೆಂಬ ಆಯ್ಕೆ ನಿಮಗೆ ಬಿಟ್ಟದ್ದು.

ಪತ್ನಿಟಾಪ್ ಪ್ರಸಿದ್ಧವಾಗಿದೆ

ಪತ್ನಿಟಾಪ್ ಹವಾಮಾನ

ಪತ್ನಿಟಾಪ್
26oC / 79oF
 • Smoke
 • Wind: NW 7 km/h

ಉತ್ತಮ ಸಮಯ ಪತ್ನಿಟಾಪ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪತ್ನಿಟಾಪ್

 • ರಸ್ತೆಯ ಮೂಲಕ
  ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ 1 ಎ ನಡುವೆ ಸಿಗುವ ಪತ್ನಿಟಾಪ್‌ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಸ್ಥಳೀಯ ಪ್ರವಾಸೋದ್ಯಮ ಇಲಾಖೆ (ಜೆಕೆಟಿಡಿಸಿ) ಸಮೀಪದ ವಿಮಾನ ಮತ್ತು ರೈಲು ನಿಲ್ದಾಣಗಳಿಂದ ಐಷಾರಾಮೀ ಬಸ್‌ ಸೌಲಭ್ಯವನ್ನು ಕೂಡ ಕಲ್ಪಿಸಿದೆ. ಇದರ ಹೊರತಾಗಿ ಸರ್ಕಾರೀ ಬಸ್‌ಗಳು, ಕ್ಯಾಬ್‌ಗಳು ಸಿಗುತ್ತವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಮ್ಮು ತಾವಿ ಮತ್ತು ಉದಂಪುರ್ ರೈಲ್ವೇ ನಿಲ್ದಾಣಗಳಲ್ಲಿ ಇಳಿದು ಪತ್ನಿಟಾಪ್‌ಗೆ ಬರಬಹುದಾಗಿದೆ. ದೇಶದ ಪ್ರಮುಖ ನಗರಗಳೊಂದಿಗೆ ಈ ರೈಲು ನಿಲ್ದಾಣಗಳು ಸಂಪರ್ಕ ಹೊಂದಿವೆ. ಇಲ್ಲಿಂದ ಮುಂದೆ ಬಸ್ಸು, ಟ್ಯಾಕ್ಸಿ ಮೂಲಕ ಪ್ರವಾಸ ಮುಂದುವರೆಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಸ್ಥಳೀಯವಾಗಿ ಯಾವುದೇ ವಿಮಾನ ನಿಲ್ದಾಣವಿಲ್ಲದಿದ್ದರೂ, ಜಮ್ಮೂ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ಬರಬಹುದಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈಗಳೊಂದಿಗೆ ನಿರಂತರ ಸಂಪರ್ಕವಿರುವ ವಿಮಾನ ನಿಲ್ದಾಣ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಇಲ್ಲಿಂದ ಮುಂದೆ ಬಸ್‌ ಹಾಗೂ ಟ್ಯಾಕ್ಸಿಗಳು ಸಿಗುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Sep,Thu
Return On
21 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Sep,Thu
Check Out
21 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Sep,Thu
Return On
21 Sep,Fri
 • Today
  Patnitop
  26 OC
  79 OF
  UV Index: 8
  Smoke
 • Tomorrow
  Patnitop
  25 OC
  77 OF
  UV Index: 8
  Sunny
 • Day After
  Patnitop
  25 OC
  78 OF
  UV Index: 8
  Sunny