Search
  • Follow NativePlanet
Share
ಮುಖಪುಟ » ಸ್ಥಳಗಳು» ಅವಂತೀಪುರ

ಅವಂತೀಪುರ - ಅಷ್ಟೊಂದು ಅನ್ವೇಷಿಸಲ್ಪಡದ ಆಧ್ಯಾತ್ಮಿಕ ತಾಣ

9

ಜಮ್ಮು ಕಾಶ್ಮೀರದಲ್ಲಿನ ಅವಂತೀಪುರ ಒಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಶಿವ ಅವಂತೀಶ್ವರ ಮತ್ತು ಅವಂತಿಸ್ವಾಮಿ ವಿಷ್ಣು ಎಂಬ ಎರಡು ಪುರಾತನ ದೇವಸ್ಥಾನಗಳಿವೆ. ಈ ಎರಡೂ ದೇವಸ್ಥಾನಗಳನ್ನು ನಿರ್ಮಿತವಾದದ್ದು 9ನೇ ಶತಮಾನದ ರಾಜ ಅವಂತಿವರ್ಮನ್‌ ಕಾಲದಲ್ಲಿ. ಅವಂತೀಶ್ವರ ದೇವಸ್ಥಾನವು ಹೆಸರೇ ಹೇಳುವಂತೆ ಶಿವನ ದೇವಸ್ಥಾನ. ಇನ್ನು ಅವಂತಿಸ್ವಾಮಿ ದೇವಸ್ಥಾನವು ವಿಷ್ಣುವಿಗೆ ಅರ್ಪಿಸಲ್ಪಟ್ಟಿದೆ. ಈ ದೇವಸ್ಥಾನಗಳ ವಾಸ್ತುಶಿಲ್ಪವು ಗ್ರೀಕರ ವಾಸ್ತು ಶೈಲಿಯನ್ನು ಹೋಲುತ್ತದೆ.

ಆದರೆ ಈ ಪುರಾತನ ದೇವಸ್ಥಾನಗಳು ಈಗ ಶಿಥಿಲಗೊಂಡ ಸ್ಥಿತಿಯಲ್ಲಿವೆ. ಒಮ್ಮೆ ಅವಂತೀಶ್ವರ ದೇಗುಲಕ್ಕೆ ಸುಲ್ತಾನ್‌ ಸಿಕಂದರ್ ದಾಳಿ ಮಾಡಿದ್ದ. ನಂತರ ಈ ದೇವಸ್ಥಾನವನ್ನು ಬುತ್‌ಶಕೀನ್‌ ಎಂದು ಇದನ್ನು ಮರುನಾಮಕರಣ ಮಾಡಲಾಯಿತು. ಈತ ಈ ಪ್ರಾಂತ್ಯವನ್ನು ಆಳಿದ ಎಂದು ಹೇಳಲಾಗುತ್ತದೆ. ದಾಳಿಯ ಸಂದರ್ಭದಲ್ಲಿ ಈ ದೇವಸ್ಥಾನ ಬಹುತೇಕ ಭಾಗ ಶಿಥಿಲಗೊಂಡಿದೆ. ಅಲ್ಲದೇ ಈ ದೇವಸ್ಥಾನ ನಿರ್ಮಾಣಕ್ಕೆ ಬಳಸಿದ ಕಚ್ಚಾವಸ್ತುಗಳು ದಾಳಿಗೆ ತುತ್ತಾದಾಗ ಸುಲಭವಾಗಿ ನಾಶಗೊಳ್ಳುವಂತಿದ್ದವು. ಅಂದರೆ ಸಾಕಷ್ಟು ಗಟ್ಟಿಮುಟ್ಟಾಗಿ ಈ ದೇವಸ್ಥಾನವನ್ನು ನಿರ್ಮಿಸಲಾಗಿರಲಿಲ್ಲ ಎಂದು ಹೇಳಲಾಗುತ್ತದೆ.

ಕಾಲಾನಂತರದಲ್ಲಿ ದೇವಸ್ಥಾನ ಅವಶೇಷಗಳಾಗಿ ಭೂಮಿಯಲ್ಲಿ ಹೂತು ಹೋಗಿತ್ತು. 18ನೇ ಶತಮಾನದಲ್ಲಿ ಬ್ರಿಟೀಷರ ಆಡಳಿತವಿದ್ದಾಗ ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲಾಯಿತು. ಇಲ್ಲಿನ ಒಂದಷ್ಟು ಮೂರ್ತಿಗಳನ್ನು ಬ್ರಿಟೀಷರು ಹೊತ್ತೊಯ್ದಿದ್ದಾರೆ. ಬ್ರಿಟೀಷರ ಕೈಯಿಂದ ಬಚಾವಾದ ಒಂದಷ್ಟು ಮೂರ್ತಿಗಳು ಶ್ರೀನಗರದ ಶ್ರೀ ಪ್ರತಾಪ ಸಿಂಗ್‌ ಮ್ಯೂಸಿಯಂನಲ್ಲಿವೆ. ಅವಂತೀಶ್ವರ ಮತ್ತು ಅವಂತಿಸ್ವಾಮಿ ದೇವಸ್ಥಾನಗಳು ಶಿಥಿಲಗೊಂಡಿದ್ದರೂ, ಕೆಲವು ಮೂರ್ತಿಗಳು ವಿವಿಧ ರೂಪದಲ್ಲಿ ಇಲ್ಲಿ ಇನ್ನೂ ಕಾಣಸಿಗುತ್ತವೆ.

ಅವಂತೀಪುರಕ್ಕೆ ಬರಲು ಯೋಜಿಸಿದರೆ, ಪ್ರವಾಸಿಗರು ರೈಲು, ವಿಮಾನ ಅಥವಾ ರಸ್ತೆಯ ಮೂಲಕ ಆಗಮಿಸಬಹುದು. ಅವಂತೀಪುರಕ್ಕೆ ಸಮೀಪದ ವಿಮಾನ ನಿಲ್ದಾಣವು ಶ್ರೀನಗರದಲ್ಲಿದ್ದು, ಇಲ್ಲಿಂದ ಸುಮಾರು 29 ಕಿ.ಮೀ ದೂರದಲ್ಲಿದೆ. ಇನ್ನು ಜಮ್ಮು ತಾವಿ ರೈಲ್ವೆ ನಿಲ್ದಾಣವು ಅವಂತಿಪುರಕ್ಕೆ ಸಮೀಪದ ರೈಲ್ವೆ ನಿಲ್ದಾಣ. ಭಾರತದ ಎಲ್ಲಾ ಪ್ರಮುಖ ನಗರಗಳಿಂದಲೂ ಇಲ್ಲಿಗೆ ರೈಲು ಸಂಪರ್ಕವಿದೆ. ಪ್ರವಾಸಿಗರು ಬಸ್ಸಿನಲ್ಲೂ ಅವಂತಿಪುರಕ್ಕೆ ಪ್ರಯಾಣಿಸಬಹುದು. ಆದರೆ ನೇರವಾಗಿ ಅವಂತಿಪುರಕ್ಕೆ ಬಸ್‌ ಸೌಲಭ್ಯವಿಲ್ಲ. ತಮ್ಮ ತಾಣದಿಂದ ಪ್ರವಾಸಿಗರು ಶ್ರೀನಗರಕ್ಕೆ ಬಂದು ಅಲ್ಲಿಂದ ಇನ್ನೊಂದು ಬಸ್‌ ಹಿಡಿದು ಅವಂತೀಪುರಕ್ಕೆ ಆಗಮಿಸಬೇಕು.

ಈ ಸುಂದರ ತಾಣವನ್ನು ವೀಕ್ಷಿಸುವ ಮನಸಿದ್ದವರು ಏಪ್ರಿಲ್‌ನಿಂದ ನವೆಂಬರಿನ ಅವಧಿಯಲ್ಲಿ ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ಒಳಿತು. ಯಾಕೆಂದರೆ ಈ ಅವಧಿಯಲ್ಲಿ ಅವಂತಿಪುರದ ವಾತಾವರಣ ಅತ್ಯಂತ ಹಿತವಾಗಿರುತ್ತದೆ.

ಅವಂತೀಪುರ ಪ್ರಸಿದ್ಧವಾಗಿದೆ

ಅವಂತೀಪುರ ಹವಾಮಾನ

ಉತ್ತಮ ಸಮಯ ಅವಂತೀಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅವಂತೀಪುರ

  • ರಸ್ತೆಯ ಮೂಲಕ
    ಅವಂತೀಪುರಕ್ಕೆ ಹೋಗುವ ಪ್ರವಾಸಿಗರು ನವದೆಹಲಿ (876 ಕಿ.ಮೀ), ಲೇಹ್ (434 ಕಿ.ಮೀ), ಜಮ್ಮು (290 ಕಿ.ಮೀ), ಪಹಲ್ಗಾಂವ್ (96 ಕಿ.ಮೀ) ಮತ್ತು ಚಂಡೀಗಢ (690 ಕಿ.ಮೀ) ದಿಂದ ಬಸ್‌ಗಳ ಮೂಲಕ ಪ್ರಯಾಣಿಸಬಹುದು. ಆದಾಗ್ಯೂ ಇಲ್ಲಿಂದ ಹೊರಡುವ ಬಸ್‌ಗಳು ಕೇವಲ ರಾಜ್ಯದ ರಾಜಧಾನಿ ಶ್ರೀನಗರಕ್ಕೆ ಮಾತ್ರ ಪ್ರವಾಸಿಗರನ್ನು ತಲುಪಿಸುತ್ತದೆ. ನಂತರ ಶ್ರೀನಗರದಿಂದ ಅವಂತೀಪುರಕ್ಕೆ ಇನ್ನೊಂದು ಬಸ್‌ಗಳ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮು ತಾವಿ ರೈಲ್ವೆ ನಿಲ್ದಾಣವು ಅವಂತೀಪುರಕ್ಕೆ ಸಮೀಪವಾಗಿದ್ದು, 329 ಕಿ.ಮೀ ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣ. ಅವಂತೀಪುರಕ್ಕೆ ತಲುಪಲು ರೈಲ್ವೆ ನಿಲ್ದಾಣದ ಹೊರಗೆ ಬಸ್‌ಗಳು ಲಭ್ಯವಿರುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅವಂತೀಪುರದಿಂದ 29 ಕಿ.ಮೀ ದೂರದಲ್ಲಿರುವ ಶ್ರೀನಗರದ ಶೇಖ್‌ ಉಲ್‌ ಅಲಮ್ ವಿಮಾನ ನಿಲ್ದಾಣವು ಅತ್ಯಂತ ಸಮೀಪದ ಏರ್‌ಪೋರ್ಟ್‌. ಸಮೀಪದಲ್ಲಿರುವ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಎಂದರೆ ನವದೆಹಲಿಯ ಇಂದಿರಾಗಾಂಧಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌. ಶೇಖ್‌ ಉಲ್‌ ಅಲಮ್‌ ವಿಮಾನ ನಿಲ್ದಾಣವನ್ನು ಸಾಮಾನ್ಯವಾಗಿ ಶ್ರೀನಗರ ವಿಮಾನ ನಿಲ್ದಾಣ ಎಂದೇ ಕರೆಯಲಾಗುತ್ತದೆ. ಭಾರತದ ಪ್ರಮುಖ ನಗರಗಳಾದ ನವದೆಹಲಿ, ಜಮ್ಮು, ಚಂಡೀಗಢ, ಬೆಂಗಳೂರು, ಗೋವಾ, ಲೇಹ್‌, ಮುಂಬೈ ಮತ್ತು ಇತರೆ ನಗರಗಳಿಗೆ ಇಲ್ಲಿಂದ ಸಂಪರ್ಕವನ್ನು ಕಲ್ಪಿಸಲಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri