ಲೇಹ್: ಮಧುರ ಮನೋಹರ ವಿಹಾರಿ ತಾಣ

ಮುಖಪುಟ » ಸ್ಥಳಗಳು » ಲೇಹ್ » ಮುನ್ನೋಟ

ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ನಗರದ ಬಹುತೇಕ ಭಾಗ 16 ಮತ್ತು 17 ನೇ ಶತಮಾನದ ಮಸೀದಿ ಮತ್ತು ಭೌದ್ದ ಸ್ಮಾರಕಗಳಿಂದ ತುಂಬಿಕೊಂಡಿದೆ. ನಾಮಗ್ಯಾಲ್ ಮನೆತನದ ರಾಜಾ ಸಿಂಗೆ ನಾಮಗ್ಯಾಲ್ ಅವರ ಪುರಾತನ ಅರಮನೆಯೊಂದಿದ್ದು ಮಧ್ಯಯುಗದ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಲೇಹ್ ನಗರದ ಬಹುತೇಕ ಜನಸಂಖ್ಯೆ ಬೌದ್ದ ಭಿಕ್ಷುಗಳು, ಹಿಂದೂ ಮತ್ತು ಲಾಮಾಗಳದ್ದು. ಶಾಂತಿ ಸ್ತೂಪ ಮತ್ತು ಶಂಕರ ಗೊಂಪಗಳಂತಹ ಅಧ್ಯಯನ ಕೇಂದ್ರಗಳು ಸ್ಥಳದ ಹೊಳಪನ್ನು ಇನ್ನಷ್ಟು ಹೆಚ್ಚಿಸಿವೆ. ಹಲವಾರು ವರ್ಷಗಳಿಂದ ಲೇಹ್ ನಗರವು ಮಧ್ಯ ಏಷಿಯಾದ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿ ಬೆಳೆದಿದ್ದು ಸ್ವಂತ ಉದ್ಯೋಗಿಗಗಳಿಗೆ ಮತ್ತು ಉದ್ಯಮಿಗಳಿಗೆ ಬಹಳ ಅವಕಾಶ ದೊರಕಿಸಿಕೊಟ್ಟಿದೆ. ಇಲ್ಲಿ ದೊರಕುವ ಟಿಬೇಟಿಯನ್ ಕಲಾಕೃತಿಗಳು, ಚಳಿಗಾಲದ ಉಣ್ಣೆಯ ಬಟ್ಟೆಗಳು, ಕೈ ಮತ್ತು ಮಗ್ಗದಲ್ಲಿ ನೇಯ್ದ ಕಾರ್ಪೇಟುಗಳನ್ನು ಪ್ರವಾಸಿಗರು ಹೆಚ್ಚು ಇಷ್ಟ ಪಟ್ಟು ಕೊಳ್ಳುತ್ತಾರೆ. ಹಿಮಾವೃತ ಹಿಮಾಲಯ ಪರ್ವತಗಳು ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಸಾಹಸದಲ್ಲಿ ಮನಸ್ಸು ಹಾಗೂ ಪ್ರೀತಿ ಉಳ್ಳವರು ಚಾರಣದ ಮೂಲಕ ಹಿಮಾಲಯ ವನ್ನು ಏರುತ್ತ ಸೌಂದರ್ಯವನ್ನು ಸವಿಯಬಹುದು.

ಪುರಾತನ ಇತಿಹಾಸವುಳ್ಳ ಮೊಘಲರ ಕಾಲದಲ್ಲಿ ಕಟ್ಟಿದ ಜಾಮಾ ಮಸೀದಿ, ಶೇ ಅರಮನೆ ಅಥವಾ ಲಡಾಖಿ ದೊರೆಗಳ ಬೇಸಿಗೆ ಅರಮನೆ, ಬೌದ್ದ ಮೂರ್ತಿಗಳು ಹೀಗೆ ಹತ್ತಾರು ಆಕರ್ಷಣೀಯ ತಾಣಗಳನ್ನು ಇಲ್ಲಿ ನೋಡಬಹುದಾಗಿದೆ.

ಲೇಹ್ ನ ವಾತಾವರಣ ಭವಿಷ್ಯ ನುಡಿಯವಂತದ್ದಲ್ಲ. ಹೀಗಾಗಿ ಪ್ರವಾಸಿಗರು ವಾತಾವರಣದ ಏರಿಳಿತವನ್ನು ತಡೆಯೋದಕ್ಕೆ ಉಣ್ಣೆಯ ಬಟ್ಟೆಗಳನ್ನು ಇಟ್ಟುಕೊಂಡಿರುವುದು ಒಳ್ಳೆಯದು.

Please Wait while comments are loading...