Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು » ಸ್ಪಿತುಕ್‌ ಬೌದ್ಧ ಆಶ್ರಮ

ಸ್ಪಿತುಕ್‌ ಬೌದ್ಧ ಆಶ್ರಮ, ಲೇಹ್

3

ಸ್ಪಿತುಕ್‌ ಬೌದ್ಧ ಆಶ್ರಮವು ಲೇಹ್‌ ಜಿಲ್ಲೆಯ ಲಡಾಖ್‌ನಲ್ಲಿದೆ. ಇದನ್ನು ಸ್ಪಿತುಕ್ ಗೊಂಪಾ ಅಂತಲೂ ಕರೆಯಲಾಗುತ್ತದೆ. ಲೇಹ್‌ನಿಂದ 8 ಕಿ.ಮೀ. ದೂರದಲ್ಲಿದೆ ಈ ಬೌದ್ಧ ಆಶ್ರಮ. 11ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಲಾಹ್‌ ಲಂಬಾ ಚಂಗಚುಬ್‌ ಒಡ್‌ನ ಹಿರಿಯ ಸಹೋದರ ಓಡ್‌-ಡೇ ಎಂಬಾತನು ಇದನ್ನು ನಿರ್ಮಿಸಿದ. ನಂತರದ ದಿನಗಳಲ್ಲಿ ಯಲ್ಲೋವ್ ಹ್ಯಾಟ್ ವಿಭಾಗವು ತಮ್ಮದಾಗಿಸಿಕೊಂಡಿತು. ಇದೊಂದು ತ್ಸೆಂಗಕೋಪಾ ಅವರು ನಿರ್ಮಿಸಿದ ಬೌದ್ಧಧರ್ಮ ಪ್ರಸಾರ ಮಾಡುವ ಶಾಲೆ. ಇದು 15ನೇ ಶತಮಾನದಲ್ಲಿ ನಡೆದ ಘಟನೆ. ಸ್ಪಿತುಕ್‌ ಆಶ್ರಮವು ಲೇಹ್‌ ಜಿಲ್ಲೆಯ ಲಡಾಖ್‌ನಲ್ಲಿದೆ.

ಈ ಆಶ್ರಮವನ್ನು ಸ್ಪಿತುಕ್‌ ಗೊಂಪಾ ಅಂತಲೂ ಕರೆಯಲಾಗುತ್ತದೆ. ಇದಕ್ಕೆ ಈ ಹೆಸರು ಬರಲು ರಿಚೆಂಜನ್‌ ಜಂಗೋಪೊ ಅವರು ಕಾರಣ. ಇವರು ಸಂಸ್ಕೃತ ಬೌದ್ಧ ಲಿಪಿಯ ಟಿಬೇಟಿಯನ್‌ ಭಾಷಾ ಅನುವಾದಕರಾಗಿದ್ದರು. ಅಪರೂಪದ ಹಾಗು ಆಕರ್ಷಕ ಮಾಸ್ಕ್‌ಗಳು, ಐಕಾನ್‌ಗಳು, ಪಾರಂಪರಿಕ ಬಾಣಗಳು, ಟಿಬೇಟಿಯನ್‌ ಧಾರ್ಮಿಕ  ಸಿಲ್ಕ್‌ ಚಿತ್ರಕಲೆಗಳನ್ನು ಈ ಆಶ್ರಮದಲ್ಲಿ ಕಾಣಬಹುದಾಗಿದೆ. ಈ ಆಶ್ರಮವು ಭಕ್ತರನ್ನು ಮಾತ್ರವಲ್ಲ, ಪ್ರವಾಸಿಗರನ್ನೂ ಅಪಾರ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.

ವಾರ್ಷಿಕ ಉತ್ಸವವಾದ ಸ್ಪಿತುಕ್‌ ಗೋಸ್ಟರ್‌ ಉತ್ಸವ ಟಿಬೇಟಿಯನ್‌ ಕ್ಯಾಲೇಂಡರ್‌ನ 11ನೇ ತಿಂಗಳಲ್ಲಿ ಆಗುತ್ತದೆ. ಆ ತಿಂಗಳ 27ರಿಂದ 29 ರ ವರೆಗೆ ಇದು ನಡೆಯುತ್ತದೆ. ಕಾಳಿ ದೇವತೆಯ ಆಕರ್ಷಕ ವಿಗ್ರಹದ ಪ್ರದರ್ಶನ ಆ ಸಂದರ್ಭದಲ್ಲಿ ಈ ಆಶ್ರಮದಲ್ಲಿ ಮಾಡಲಾಗುತ್ತದೆ. 100 ಕ್ಕೂ ಹೆಚ್ಚು ಮೋಂಕ್‌ಗಳು ಈ ಉತ್ಸವದ ಯಶಸ್ಸಿಗಾಗಿ ಶ್ರಮಿಸುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat