Search
  • Follow NativePlanet
Share
ಮುಖಪುಟ » ಸ್ಥಳಗಳು » ಲೇಹ್ » ಆಕರ್ಷಣೆಗಳು » ಸ್ತಂಕ ಬೌದ್ಧ ಆಶ್ರಮ

ಸ್ತಂಕ ಬೌದ್ಧ ಆಶ್ರಮ, ಲೇಹ್

1

ಸ್ತಂಕ ಬೌದ್ಧ ಆಶ್ರಮವು 60 ಮೀ ಎತ್ತರದ ಬೃಹತ್‌ ಬಂಡೆಯ ಮೇಲೆ ಸ್ಥಾಪಿತವಾಗಿದೆ. ಲೇಹ್‌ನಿಂದ 25 ಕಿ.ಮೀ. ದೂರದಲ್ಲಿದೆ ಈ ತಾಣ. ಆಶ್ರಮದ ಒಳಗೆ ಸಾಕಷ್ಟು ಸಂಖ್ಯೆಯಲ್ಲಿ ಕಲಾಚಿತ್ರಗಳು, ಕಲಾ ವಸ್ತುಗಳ ಸಂಗ್ರಹವಿದ್ದು ಪ್ರವಾಸಿಗರ ಗಮನ ಸೆಳೆಯುತ್ತವೆ. ಟಿಬೇಟಿಯನ್‌ ಬೌದ್ಧ ಧರ್ಮದ ದ್ರುಕಪಾ ವಿಭಾಗದವರು ತಮ್ಮ ಮೋಂಕ್‌ ವಸ್ತುಗಳನ್ನು ಇಲ್ಲಿರಿಸಿದ್ದಾರೆ. ಬೌದ್ಧ ಮುನಿ ಚೋಸ್ಜೆ ಜಮ್ಯಂಗ್‌ ಪಲ್ಕಾರ್‌ ಅವರಿಂದ ಈ ಆಶ್ರಮದಲ್ಲಿ ದೇವಾಲಯ 1580 ರಲ್ಲಿ ನಿರ್ಮಾಣವಾಗಿದೆ.

ಈ ಆಶ್ರಮವು 15 ನೇ ಶತಮಾನದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇದು ಪ್ರಸ್ತುತ ಬೌದ್ಧ ಧರ್ಮೀಯರ ಪಾರಂಪರಿಕ ತಾಣವೆಂದು ಪರಿಗಣಿಸ್ಲಪಟ್ಟಿದೆ. ಅವಲೋಕೀಶ್ವರರ ಮಾರ್ಬಲ್‌ ವಿಗ್ರಹ ಇಲ್ಲಿ ಗಮನ ಸೆಳೆಯುತ್ತದೆ. ಇಲ್ಲಿ ಆಯೋಜಿಸಲಾಗುವ ಬುದ್ಧೋತ್ಸವ ಇಲ್ಲಿನ ಪ್ರಮುಖ ಆಕರ್ಷಣೆ. ಎಲ್ಲಾ ಬುದ್ಧ ವಿಗ್ರಹಗಳ ಮಿಶ್ರ ರೂಪ ಇದಾಗಿದೆ. ಈ ವಿಗ್ರಹವನ್ನು ಆಶ್ರಮದವರು ಆಸ್ಸಾಂನಿಂದ ಕೊಂಡು ತಂದಿದ್ದಾರೆ ಎನ್ನಲಾಗುತ್ತದೆ. ಈ ಆಶ್ರಮವು ಕೂಡ ಒಂದು ಮ್ಯೂಸಿಯಂ ಅನ್ನು ಒಳಗೊಂಡಿದ್ದು ಅದರಲ್ಲಿ ಮಧ್ಯಯುಗೀಯ ಕಾಲದ ಬಾಣಗಳು, ಬತ್ತಳಿಕೆ ಮುಂತಾದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.

ಆಶ್ರಮವು ಹುಲಿಯ ಮೂಗಿನ ಆಶ್ರಮ ಅನ್ನುವ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಗೊಂಪಾದ ಕಲ್ಲು ಬಂಡೆಯು ಹುಲಿ ಬಾಯಿತೆರೆದು ಆಕಾಶದತ್ತ ನೋಡಿದಾಗ ಕಾಣುವ ಮಾದರಿಯಲ್ಲಿದೆ. ಆದ್ದರಿಂದ ಈ ಹೆಸರು ಬಂದಿದೆ. ಇಲ್ಲಿಗೆ ತಲುಪುವುದು ಕೂಡ ಸುಲಭ. ಬಸ್‌ ಏರಿ ಬರಬಹುದು ಅಥವಾ ಬೆಟ್ಟವೇರಿ ಬರುವುದಾದರೆ 30 ನಿಮಿಷದಲ್ಲಿ ತಲುಪಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon