Search
 • Follow NativePlanet
Share
ಮುಖಪುಟ » ಸ್ಥಳಗಳು» ದ್ರಾಸ್

ದ್ರಾಸ್ - ಸಾಹಸಿಗರ ಸ್ವರ್ಗ!

10

'ಲಡಾಖ್ ನ ದ್ವಾರ' ಎಂತಲೂ ಕರೆಯಲಾಗುವ ದ್ರಾಸ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಾರ್ಗಿಲ್ ಜಿಲ್ಲೆಯಲ್ಲಿ ನೆಲೆಸಿದೆ. ಈ ಪಟ್ಟಣವು ಸಮುದ್ರಮಟ್ಟದಿಂದ 3280 ಮೀ. ಎತ್ತರದಲ್ಲಿ ನೆಲೆಸಿದೆ. ಪ್ರಪಂಚದಲ್ಲೆ ಸೈಬೀರಿಯಾದ ನಂತರ ಎರಡನೇಯ ಅತಿ ಶೀತಮಯ ಪ್ರದೇಶ ಇದೆಂದು ಪರಿಗಣಿಸಲಾಗಿದೆ. 1999 ರಲ್ಲಿ ಭಾರತ ಹಾಗು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದ ತಾಣವಾದ ಕಾರ್ಗಿಲ್ ನಿಂದ ಈ ಪ್ರದೇಶವು ಕೇವಲ 62 ಕಿ.ಮೀ ದೂರದಲ್ಲಿದೆ. ದ್ರಾಸ್ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.

ಲಡಾಖ್ ಮಾತ್ರವಲ್ಲದೆ, ಇತರೆ ಪ್ರಖ್ಯಾತ ಗಿರಿಧಾಮಗಳು ಹಾಗು ಜಮ್ಮು ಮತ್ತು ಕಾಶ್ಮೀರದ ನಗರಗಳಿಗೆ ದ್ರಾಸ್ ಪ್ರವೇಶ ದ್ವಾರವಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಪಟ್ಟಣವು ತನ್ನಲ್ಲಿರುವ ಕಡಿದಾದ/ಒರಟಾದ ಭೂಮಿಗಳಿಂದ ಸಾಹಸಮಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು ಪ್ರವಾಸಿಗರ ಮಧ್ಯೆ ಜನಪ್ರಿಯವಾಗಿದೆ. ಪ್ರವಾಸಿಗರು ಇಲ್ಲಿನ ಸುರು ಕಣಿವೆಯಿಂದ ಚಾರಣವನ್ನು ಕೈಗೊಳ್ಳಬಹುದು. ಇಷ್ಟೆ ಅಲ್ಲ, ಪ್ರವಾಸಿಗರು 5200 ಮೀ. ಎತ್ತರದ ಮಾರ್ಗವಾದ ಅಮರ್ನಾಥ ಗುಹೆಯ ಚಾರಣ ಮಾರ್ಗವನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಪ್ರವಾಸಿಗರು ದ್ರಾಸ್ ಗೆ ಭೇಟಿ ನೀಡಿದಾಗ ದ್ರಾಸ್ ಯುದ್ಧ ಸ್ಮಾರಕವನ್ನು ನೋಡಲು ಮರೆಯಬಾರದು. ಈ ಸ್ಮಾರಕವನ್ನು ಕಾರ್ಗಿಲ್ ಕಾಳಗದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ದಾಖಲೆಗಳ ಪ್ರಕಾರ, ಈ ಯುದ್ಧದಲ್ಲಿ ಎರಡೂ ಕಡೆಯ(ಭಾರತ ಮತ್ತು ಪಾಕಿಸ್ತಾನ)ಸುಮಾರು 1200 ಸೈನಿಕರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಈ ಸ್ಮಾರಕದ ಪಕ್ಕದಲ್ಲೆ ಸಂಗ್ರಹಾಲಯವೊಂದಿದ್ದು, ಯುದ್ಧದ ಹಲವಾರು ನೆನಪಿನ ಸ್ಮರಣಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಇದರ ಪಕ್ಕದಲ್ಲೆ ದ್ರೋಪದಿ ಕುಂಡವಿದ್ದು ಅನ್ವೇಷಿಸಲು ಯೋಗ್ಯವಾದ ತಾಣವಾಗಿದೆ.

ದ್ರಾಸ್ ಪಟ್ಟಣವನ್ನು ವಾಯುಮಾರ್ಗ, ರೈಲು ಮಾರ್ಗ ಮತ್ತು ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಬೇಸಿಗೆ, ಅಂದರೆ ಜೂನ್ ಹಾಗು ಸೆಪ್ಟಂಬರ್ ಮಧ್ಯದ ಅವಧಿ.

ದ್ರಾಸ್ ಪ್ರಸಿದ್ಧವಾಗಿದೆ

ದ್ರಾಸ್ ಹವಾಮಾನ

ಉತ್ತಮ ಸಮಯ ದ್ರಾಸ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ದ್ರಾಸ್

 • ರಸ್ತೆಯ ಮೂಲಕ
  ಬಸ್ಸು ಇಲ್ಲವೆ ಟ್ಯಾಕ್ಸಿಗಳ ಮುಖಾಂತರ ದ್ರಾಸ್ ಗೆ ತಲುಪಬಹುದಾಗಿದೆ. ದ್ರಾಸ್ ಗೆ ಶ್ರೀನಗರದಿಂದ ಮಾತ್ರವೆ ಬಸ್ಸಿನ ಸೌಲಭ್ಯವಿದ್ದು, ಶ್ರೀನಗರಕ್ಕೆ ಭಾರತದ ಹಲವು ಪ್ರಮುಖ ನಗರಗಳಾದ ದೆಹಲಿ, ಲುಧಿಯಾನಾ, ಚಂಡೀಗಢ್, ಅಂಬಾಲಾ, ಜಲಂಧರ್ ಮತ್ತು ಶಿಮ್ಲಾಗಳಿಂದ ಬಸ್ಸುಗಳ ಸಂಪರ್ಕವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  152 ಕಿ.ಮೀ ದೂರದಲ್ಲಿರುವ ಶ್ರೀನಗರವು ದ್ರಾಸ್ ಗೆ ಹತ್ತಿರದ ರೈಲುತುದಿಯಾಗಿದೆ. ಈ ರೈಲು ನಿಲ್ದಾಣವು ಭಾರತದ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಿನಿಂದ ಟ್ಯಾಕ್ಸಿ ಹಾಗು ಕ್ಯಾಬ್ ಗಳು ದ್ರಾಸ್ ಗೆ ತೆರಳಲು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಶೇಖ್ ಉಲ್ ಅಲಮ್ ಅಥವಾ ಶ್ರೀನಗರ ಏರ್ಪೋರ್ಟ್ ದ್ರಾಸ್ ಗೆ ಹತ್ತಿರದಲ್ಲಿರುವ ವಾಯುನೆಲೆ. ಇದು ದ್ರಾಸ್ ನಿಂದ 157 ಕಿ.ಮೀ ದೂರದಲ್ಲಿದ್ದು, ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಜಮ್ಮು ಮುಂತಾದವುಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಿನಿಂದ ಟ್ಯಾಕ್ಸಿ ಹಾಗು ಕ್ಯಾಬ್ ಗಳು ದ್ರಾಸ್ ಗೆ ತೆರಳಲು ದೊರೆಯುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
05 Oct,Wed
Return On
06 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Oct,Wed
Check Out
06 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Oct,Wed
Return On
06 Oct,Thu