Search
  • Follow NativePlanet
Share
ಮುಖಪುಟ » ಸ್ಥಳಗಳು » ದ್ರಾಸ್ » ಹವಾಮಾನ

ದ್ರಾಸ್ ಹವಾಮಾನ

ದ್ರಾಸ್ ಪಟ್ಟಣವು ಚಳಿಗಾಲದ ಸಮಯದಲ್ಲಿ ಅತಿಯಾದ ಮತ್ತು ಸಹಿಸಲಾರದಂತಹ ಚಳಿಯನ್ನು ಅನುಭವಿಸುವುದರಿಂದ, ಇಲ್ಲಿಗೆ ಭೇಟಿ ನೀಡಲು ಬೇಸಿಗೆ ಅಂದರೆ ಜೂನ್ ಹಾಗು ಸೆಪ್ಟಂಬರ್ ಮಧ್ಯದ ಅವಧಿ ಉತ್ತಮವಾಗಿದೆ.

ಬೇಸಿಗೆಗಾಲ

(ಜೂನ್-ಸೆಪ್ಟಂಬರ್): ಇಲ್ಲಿ ಬೇಸಿಗೆಯು ಜೂನ್ ನಲ್ಲಿ ಪ್ರಾರಂಭವಾಗಿ ಸೆಪ್ಟಂಬರ್ ನಲ್ಲಿ ಮುಕ್ತಾಯಗೊಳ್ಳುತ್ತದೆ. ಈ ಸಂದರ್ಭದಲ್ಲಿ ದಾಖಲಾದ ಗರಿಷ್ಠ ಹಾಗು ಕನಿಷ್ಠ ತಾಪಮಾನಗಳೆಂದರೆ ಕ್ರಮವಾಗಿ 24°C ಮತ್ತು 9°C.

ಮಳೆಗಾಲ

(ಡಿಸೆಂಬರ್-ಮೇ): ದ್ರಾಸ್ ನಲ್ಲಿ ಹೆಚ್ಚಿಗೆ ಮಳೆಯಾಗುವುದಿಲ್ಲ. ಆದರೆ ವಾರ್ಷಿಕ ಮಳೆಯ ಪ್ರಮಾಣವನ್ನು ಡಿಸೆಂಬರ್ ನಿಂದ ಮೇ ಮಧ್ಯದ ಅವಧಿಯಲ್ಲಿ ದಾಖಲಿಸಲಾಗುತ್ತದೆ. ಇಲ್ಲಿವರೆಗಿನ ಅಂಕಿಅಂಶಗಳ ಪ್ರಕಾರ, ದ್ರಾಸ್ ಪಟ್ಟಣವು 360ಮಿ.ಮೀ ಅಥವಾ 14 ಇಂಚುಗಳ ಮಳೆಯನ್ನು ಪ್ರತಿವರ್ಷ ಹಿಮದ ರೂಪದಲ್ಲಿ ಪಡೆಯುತ್ತದೆ.

ಚಳಿಗಾಲ

(ಅಕ್ಟೋಬರ್ ಮಧ್ಯದಿಂದ ಮೇ ಮಧ್ಯದವರೆಗೆ): ದ್ರಾಸ್ ನಲ್ಲಿ ಚಳಿಗಾಲವು ಅಕ್ಟೋಬರ್ ಮಧ್ಯದಿಂದ ಪ್ರಾರಂಭವಾಗಿ ಮೇ ಮಧ್ಯದವರೆಗೂ ಮುಂದುವರೆಯುತ್ತದೆ. ಜಗತ್ತಿನಲ್ಲೆ ಸೈಬೀರಿಯಾದ ನಂತರ ಎರಡನೆ ಚಳಿಮಯ ಪ್ರದೇಶವಾಗಿರುವ ಈ ಪಟ್ಟಣವು ಚಳಿಗಾಲದಲ್ಲಿ ಸರಾಸರಿ ತಾಪಮಾನ -22°C ಹೊಂದಿರುತ್ತದೆ. ಕನಿಷ್ಠ ತಾಪಮಾನವು -45°C ಗೂ ಕುಸಿಯುವುದುಂಟು.