Search
  • Follow NativePlanet
Share

ಸರ್ಚು - ವಿಶ್ರಾಂತಿ ಪಡೆಯಲೊಂದು ಸ್ಥಳ

12

ಸರ್ ಭುಮ್ ಚುನ್ ಎಂತಲೂ ಕರೆಯಲಾಗುವ ಸರ್ಚು ಹಿಮಾಚಲ ಪ್ರದೇಶ ಹಾಗು ಲಡಾಖ್ ನ ಮಧ್ಯದ ಗಡಿ ರೇಖೆಯಲ್ಲಿ ನೆಲೆಗೊಂಡಿದೆ. ಸಮುದ್ರಮಟ್ಟದಿಂದ 4290 ಮೀ. ಎತ್ತರದಲ್ಲಿ ನೆಲೆಗೊಂಡಿರುವ ಇದು, ತನ್ನ ಲಚುಲುಂಗ್ ಲಾ ಮತ್ತು ದಕ್ಷಿಣಕ್ಕೆ  ಬಾರಾಲಾಚಾ ಲಾ ಗಳನ್ನು ಒಳಗೊಂಡಿದೆ.

ಮನಾಲಿಯಿಂದ ಲೇಹ್ ಗೆ ಹೋಗುವ ಪ್ರವಾಸಿಗರಿಗೆ ಈ ಒಂದು ಸ್ಥಳವು ರಾತ್ರಿಯ ಹೊತ್ತು ವಿರಮಿಸಲು ಅಥವಾ ತಂಗಲು ಹೇಳಿಮಾಡಿಸಿದ ಸ್ಥಳವಾಗಿದೆ. ಏಕೆಂದರೆ ಈ ಎರಡರ ಮಧ್ಯೆ ಇರುವ ಅಂತರ ಸುಮಾರು 475 ಕಿ.ಮೀ. ಚಳಿಗಾಲದ ಸಮಯದಲ್ಲಿ ಅತಿಯಾದ ಹಿಮಪಾತವಿರುವ ಕಾರಣ ಸರ್ಚುವಿಗೆ ರಸ್ತೆಗಳು ಮುಚ್ಚಲ್ಪಟ್ಟಿರುತ್ತವೆ ಹಾಗು ಸಂಪರ್ಕವು ಅಸಾಧ್ಯವಾಗಿರುತ್ತದೆ. ಆದರೆ ಮೇ ಮತ್ತು ಸೆಪ್ಟಂಬರ್ ಮಧ್ಯದ ಅವಧಿಯಲ್ಲಿ ಹಿಮ ಕರಗಿರುವುದರಿಂದ ರಸ್ತೆಗಳು ಸಂಚಾರ ಯೋಗ್ಯವಾಗಿರುತ್ತವೆ. ಈ ಒಂದು ನಿಶ್ಚಿತ ಸಮಯದಲ್ಲಿ ಲೇಹ್ ನಿಂದ ಮನಾಲಿಗೆ ಹೊರಡುತ್ತಿರುವ ಪ್ರವಾಸಿಗರು ಈ ಸ್ಥಳದಲ್ಲಿ ತಂಗಲು ಬಯಸುತ್ತಾರೆ. ಇಲ್ಲಿ ಭಾರತೀಯ ಸೈನ್ಯದ ಒಂದು ಬೇಸ್ ಹಾಗು ಸರಪ್ ಚು ನದಿಯನ್ನು ಕಾಣಬಹುದು.

ಜೂನ್ ಹಾಗು ಅಕ್ಟೊಬರ್ ತಿಂಗಳಗಳ ಮಧ್ಯದ ಸಂದರ್ಭದಲ್ಲಿ ಪ್ರಯಾಣಿಸುತ್ತಿರುವ ಪ್ರವಾಸಿಗರು ಟೆಂಟ್ ಗಳ ರೂಪದಲ್ಲಿ ವಸತಿ ಸೌಲಭ್ಯವನ್ನು ಇಲ್ಲಿ ಪಡೆಯಬಹುದು. ಲಡಾಖ್ ನ ಝಂನ್ಸ್ಕರ್ ಪ್ರದೇಶವನ್ನು ಚಾರಣ ಮಾಡಬಯಸುವವರಿಗೆ ಸರ್ಚು ಒಂದು ಟ್ರೆಕ್ ಬೇಸ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಪ್ರವಾಸಿಗರು ಈ ಸ್ಥಳವನ್ನು ಭೇಟಿ ಮಾಡಲು ಬಯಸಿದರೆ, ಬೇಸಿಗೆಯು ಉತ್ತಮವಾದುದೆಂದು ಸಲಹೆ ಮಾಡಬಹುದು. ಏಕೆಂದರೆ ಈ ಸಂದರ್ಭದಲ್ಲಿ ಪ್ರದೇಶದ ತಾಪಮಾನವು 25°C ಆಗಿದ್ದು, ಸ್ಥಳವನ್ನು ಅನ್ವೇಷಿಸಲು ಸೂಕ್ತವಾಗಿರುತ್ತದೆ. ಈ ಕಾಲವು ಜೂನ್ ನಲ್ಲಿ ಪ್ರಾರಂಭವಗಿ ಅಕ್ಟೋಬರ್ ನಲ್ಲಿ ಕೊನೆಗೊಳ್ಳುತ್ತದೆ. ಅಕ್ಟೋಬರ್ ತಿಂಗಳು ಚಳಿಗಾಲದ ಪ್ರಾರಂಭವಾಗಿದ್ದು, ರಸ್ತೆಗಳು ಮುಚ್ಚಲ್ಪಡುತ್ತವೆ. ಈ ಸಮಯದಲ್ಲಿ ಈ ಪ್ರದೇಶದ ತಾಪಮಾನವು -35°C ಗೂ ಕುಸಿಯುವುದುಂಟು.

ಸರ್ಚುಗೆ ತಲುಪಲು ಹತ್ತಿರದಲ್ಲಿರುವ ವಾಯುನೆಲೆ ಎಂದರೆ ಲೇಹ್. ಇದು 255 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ನವದೆಹಲಿ, ಮುಂಬೈ, ಚಂಡೀಗಢ್, ತ್ರಿವೇಂದ್ರಮ್ ಮತ್ತು ಗೋವಾದಂತಹ ಪ್ರಮುಖ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಿನಿಂದ ಪ್ರವಾಸಿಗರು ಸರ್ಚುಗೆ ತಲುಪಲು ಸುಲಭವಾಗಿ ಟ್ಯಾಕ್ಸಿ/ಕ್ಯಾಬ್ ಪಡೆಯಬಹುದು. ಇನ್ನು ವಿಮಾನವಲ್ಲದೆ, ಪ್ರವಾಸಿಗರು ರೈಲಿನ ಮುಖಾಂತರವಾಗಿಯೂ ಸರ್ಚುವನ್ನು ತಲುಪಬಹುದು. 550 ಕಿ.ಮೀ ದೂರದಲ್ಲಿರುವ ಜಮ್ಮು ರೈಲು ನಿಲ್ದಾಣವು ಸರ್ಚುಗೆ ಹತ್ತಿರದಲ್ಲಿರುವ ರೈಲು ನಿಲ್ದಾಣ. ರಸ್ತೆಯ ಮುಖಾಂತರ ಸರ್ಚುಗೆ ಹೋಗಬಯಸುವ ಪ್ರವಾಸಿಗರು ಮನಾಲಿಯಿಂದ ಖಾಸಗಿ ಬಸ್ಸುಗಳು ಇಲ್ಲವೆ ಬಾಡಿಗೆ ಟ್ಯಾಕ್ಸಿಗಳನ್ನು ಪಡೆಯಬಹುದು.

ಸರ್ಚು ಪ್ರಸಿದ್ಧವಾಗಿದೆ

ಸರ್ಚು ಹವಾಮಾನ

ಉತ್ತಮ ಸಮಯ ಸರ್ಚು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸರ್ಚು

  • ರಸ್ತೆಯ ಮೂಲಕ
    ಸರ್ಚು ರಸ್ತೆಯ ಮುಖಾಂತರ ಮನಾಲಿಯಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಬಸ್ಸುಗಳಲ್ಲಿ ಪ್ರಯಾಣ ಮಾಡಬಯಸುವ ಪ್ರವಾಸಿಗರು ಈ ಸೇವೆಯನ್ನು ಮೇ ಹಾಗು ಸೆಪ್ಟಂಬರ್ ಮಧ್ಯದ ಅವಧಿಯಲ್ಲಿ ಪಡೆಯಬಹುದು. ಇದಲ್ಲದೆ ಮನಾಲಿಯಿಂದ ಖಾಸಗಿ ಟ್ಯಾಕ್ಸಿ ಅಥವಾ ಕ್ಯಾಬ್ ಗಳನ್ನೂ ಕೂಡ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    550 ಕಿ.ಮೀ ದೂರದಲ್ಲಿರುವ ಜಮ್ಮು ರೈಲು ನಿಲ್ದಾಣವು ಸರ್ಚುಗೆ ಹತ್ತಿರದಲ್ಲಿರುವ ರೈಲು ತುದಿ. ಈ ರೈಲು ನಿಲ್ದಾಣವು ದೆಹಲಿ, ಮುಂಬೈ, ಚಂಡೀಗಢ್, ಗೋವಾನಂತಹ ಹಲವು ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿಲ್ದಾಣದ ಹೊರಗಿನಿಂದ ಟ್ಯಾಕ್ಸಿ ಅಥವಾ ಕ್ಯಾಬ್ ಪಡೆದು ಸರ್ಚುಗೆ ತೆರಳಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    255 ಕಿ.ಮೀ ದೂರದಲ್ಲಿರುವ ಲೇಹ್ ಏರ್ಪೋರ್ಟ್ ಸರ್ಚುಗೆ ಹತ್ತಿರದಲ್ಲಿರುವ ವಾಯುನೆಲೆ. ಏರ್ ಇಂಡಿಯಾ, ಕಿಂಗ್ ಫಿಶರ್, ಜೆಟ್ ಏರ್ವೇಸ್ ನಂತಹ ವೈಮಾನಿಕ ಸೇವೆಗಳು ಈ ನಿಲ್ದಾಣಕ್ಕೆ ಲಭ್ಯವಿದೆ. ಲೇಹ್ ನಿಲ್ದಾಣವು ನವದೆಹಲಿ, ಮುಂಬೈ ಮತ್ತು ಪುಣೆಗಳಂತಹ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ಒಮ್ಮೊಮ್ಮೆ ಹವಾಮಾನದ ವೈಪರಿತ್ಯದಿಂದಾಗಿ ವಿಮಾನಗಳು ವಿಳಂಬವಾಗಬಹುದು ಇಲ್ಲವೆ ರದ್ದುಗೊಳ್ಳಬಹುದು ಕೂಡ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri