Search
  • Follow NativePlanet
Share
ಮುಖಪುಟ » ಸ್ಥಳಗಳು » ಸರ್ಚು » ಹವಾಮಾನ

ಸರ್ಚು ಹವಾಮಾನ

ಪ್ರವಾಸಿಗರು ಈ ಸ್ಥಳವನ್ನು ಭೇಟಿ ಮಾಡಲು ಬಯಸಿದರೆ, ಬೇಸಿಗೆ (ಜೂನ್-ಅಕ್ಟೋಬರ್)ಯು ಉತ್ತಮವಾದುದೆಂದು ಸಲಹೆ ಮಾಡಬಹುದು. ಏಕೆಂದರೆ ಈ ಸಂದರ್ಭದಲ್ಲಿ ಪ್ರದೇಶದ ತಾಪಮಾನವು 25°C ಆಗಿದ್ದು, ಸ್ಥಳವನ್ನು ಅನ್ವೇಷಿಸಲು ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

(ಜೂನ್-ಅಕ್ಟೋಬರ್): ಇಲ್ಲಿ ಬೇಸಿಗೆಯು ಜೂನ್ ನಲ್ಲಿ ಪ್ರಾರಂಭವಾಗಿ ಅಕ್ಟೋಬರ್ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ 25°C ನಷ್ಟು ಹಿತಕರವಾದ ತಾಪಮಾನ ಇಲ್ಲಿರುತ್ತದೆ.

ಮಳೆಗಾಲ

(ಜುಲೈ-ಅಗಸ್ಟ್): ಮಳೆನೆರಳಿನ ವ್ಯಾಪ್ತಿಯಲ್ಲಿ ಸರ್ಚು ಬರುವುದರಿಂದ, ಅಪರೂಪವಾಗಿ ಇಲ್ಲಿ ಮಳೆ ಬೀಳುತ್ತದೆ. ಆದಾಗ್ಯೂ, ಜುಲೈ ಮತ್ತು ಅಗಸ್ಟ್ ತಿಂಗಳುಗಳಲ್ಲಿ ಅತಿಯಾದ ಮಳೆ ಪ್ರಮಾಣವನ್ನು ದಾಖಲಿಸಲಾಗಿದೆ.

ಚಳಿಗಾಲ

(ಅಕ್ಟೋಬರ್-ಮೇ): ಇಲ್ಲಿ ಚಳಿಗಾಲವು ಅಕ್ಟೋಬರ್ ನಲ್ಲಿ ಪ್ರಾರಂಭವಾಗಿ ಮೇ ವರೆಗೂ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ -35°C ನಷ್ಟು ಅಹಿತಕರವಾದ ಚಳಿ ಇಲ್ಲಿರುತ್ತದೆ. ಅಲ್ಲದೆ ಅತಿಯಾದ ಹಿಮಪಾತವಿರುವುದರಿಂದ ಇಲ್ಲಿನ ಕ್ಯಾಂಪಿಂಗ್ ಸೈಟ್ ಕೂಡ ಮುಚ್ಚಲ್ಪಟ್ಟಿರುತ್ತದೆ.