Search
  • Follow NativePlanet
Share
ಮುಖಪುಟ » ಸ್ಥಳಗಳು » ಅವಂತೀಪುರ » ಹವಾಮಾನ

ಅವಂತೀಪುರ ಹವಾಮಾನ

ಅವಂತೀಪುರಕ್ಕೆ ಪ್ರವಾಸ ಕೈಗೊಳ್ಳಲು ಉತ್ತಮ ಕಾಲ ಏಪ್ರಿಲ್‌ನಿಂದ ನವೆಂಬರಿನ ಅವಧಿ. ಈ ಅವಧಿಯಲ್ಲಿ ಹಿತವಾದ ಚಳಿಯನ್ನು ಪ್ರವಾಸಿಗರು ಅನುಭವಿಸಬಹುದು. ಇದನ್ನು ಹೊರತುಪಡಿಸಿದರೆ ಬೇಸಿಗೆ ಮತ್ತು ಮಳೆಗಾಲ ಉತ್ತಮ ಅವಧಿ. ಆದರೆ ಚಳಿಗಾಲದಲ್ಲಿ ಮಾತ್ರ ಇಲ್ಲಿಗೆ ಪ್ರವಾಸ ಕೈಗೊಳ್ಳಬೇಡಿ.

ಬೇಸಿಗೆಗಾಲ

(ಮಾರ್ಚ್‌ನಿಂದ ಜೂನ್‌) : ಬೇಸಿಗೆ ಇಲ್ಲಿ ಶುರುವಾಗೋದು ಮಾರ್ಚ್‌ನಲ್ಲಾದರೆ ಮುಕ್ತಾಯ ಹಾಡುವುದು ಜೂನ್‌ನಲ್ಲಿ. ಬೇಸಿಗೆಗಾಲದಲ್ಲಿ ಇಲ್ಲಿ ವಾತಾವರಣ ಅತ್ಯಂತ ಹಿತವಾಗಿರುತ್ತದೆ. ಇನ್ನು ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಕ್ರಮವಾಗಿ 22 ಡಿಗ್ರಿ ಸೆಲ್ಷಿಯಸ್‌ ಹಾಗೂ 12 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ. ಈ ಅವಧಿಯಲ್ಲಿ ಅವಂತೀಪುರಕ್ಕೆ ಪ್ರವಾಸಿಗರು ಭೇಟಿ ನೀಡುವುದು ಸೂಕ್ತ.

ಮಳೆಗಾಲ

(ಜುಲೈನಿಂದ ಅಕ್ಟೋಬರ್) : ಜುಲೈನಿಂದ ಮಳೆಗಾಲ ಶುರುವಾಗಿ ಅಕ್ಟೋಬರಿನ ತನಕ ಇಲ್ಲಿ ಮಳೆ ಸುರಿಯುತ್ತಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣ ಹಿತಕರವಾಗಿರುವುದರಿಂದ ಪ್ರವಾಸಿಗರು ಈ ಅವಧಿಯಲ್ಲಿ ಅವಂತೀಪುರಕ್ಕೆ ಭೇಟಿ ನೀಡಲು ಯೋಜನೆ ಹಾಕಿಕೊಳ್ಳಬಹುದು.

ಚಳಿಗಾಲ

(ನವೆಂಬರಿನಿಂದ ಫೆಬ್ರವರಿ) : ನವೆಂಬರಿನಲ್ಲಿ ಚಳಿಗಾಲ ಶುರುವಾದರೆ ಫೆಬ್ರವರಿಯ ತನಕವೂ ಇರುತ್ತದೆ. ಪ್ರವಾಸಿಗರು ಅವಂತೀಪುರಕ್ಕೆ ಈ ಅವಧಿಯಲ್ಲಿ ಭೇಟಿ ನೀಡುವುದನ್ನು ಮುಂದೂಡುವುದು ಸೂಕ್ತ. ಯಾಕೆಂದರೆ ಇಲ್ಲಿನ ವಿಪರೀತ ಚಳಿಯನ್ನು ಪ್ರವಾಸಿಗರು ತಡೆದುಕೊಳ್ಳುವುದು ಕಷ್ಟ. ಗರಿಷ್ಠ ತಾಪಮಾನವು 10 ಡಿಗ್ರಿ ಸೆಲ್ಷಿಯಸ್‌ ಆದರೆ ಕನಿಷ್ಠ ತಾಪಮಾನ 0 ಡಿಗ್ರಿ ಸೆಲ್ಷಿಯಸ್‌ ಇರುತ್ತದೆ.