Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ಹವಾಮಾನ

ಪತ್ನಿಟಾಪ್ ಹವಾಮಾನ

ವರ್ಷಪೂರ್ತಿ ಇಲ್ಲಿಗೆ ಬರಬಹುದಾದರೂ, ಬೇಸಿಗೆಯಲ್ಲಿ ಮೇ ಮತ್ತು ಜೂನ್, ಮಳೆಗಾಲದಲ್ಲಿ ಜುಲೈನಿಂದ ಸೆಪ್ಟೆಂಬರ್, ಚಳಿಗಾಲದಲ್ಲಿ ಡಿಸೆಂಬರ್‌ನಿಂದ ಪೆಬ್ರುವರಿವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ಮಾರ್ಚ್ ತಿಂಗಳಲ್ಲಿ ಶುರುವಾಗುವ ಬೇಸಿಗೆ ಜೂನ್‌ವರೆಗೂ ಮುಂದುವರೆಯುತ್ತದೆ. ದೇಶದೆಲ್ಲೆಡೆ ಉಷ್ಣಾಂಶ 40 ಡಿ.ಸೆ ಗೆ ಏರಿದ್ದರೂ, ಇಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆ. ನಿಂದ 20 ಡಿಗ್ರಿ. ಸೆ. ವರರೆಗೂ ಈ ಅವಧಿಯಲ್ಲಿ ದಾಖಲಾಗುತ್ತದೆ. ಮೇ ಮತ್ತು ಜೂನ್ ತಿಂಗಳು ಇಲ್ಲಿಗೆ ಬರಲು ಸೂಕ್ತವಾಗಿರುತ್ತದೆ.

ಮಳೆಗಾಲ

ಜುಲೈನಲ್ಲಿ ಶುರುವಾಗಿ ಅಕ್ಟೋಬರ್‌ ವರೆಗೂ ಮಳೆಗಾಲವಿರುತ್ತದೆ. ಜುಲೈ, ಆಗಸ್ಟ್‌ ತಿಂಗಳುಗಳಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸಬಹುದು.

ಚಳಿಗಾಲ

(ನವೆಂಬರ್-ಫೆಬ್ರವರಿ ): ಪತ್ನಿಟಾಪ್ನಲ್ಲಿ ಚಳಿಗಾಲ ಹೇರಳವಾಗಿದ್ದು, ಕನಿಷ್ಠ ತಾಪಮಾನ 0 ಡಿಗ್ರಿ. ಸೆ. ಗೆ ಇಳಿಕೆಯಾಗುತ್ತದೆ. ಗರಿಷ್ಠ ತಾಪಮಾನ 10 ಡಿ.ಸೆ. ದಾಖಲಾಗುತ್ತದೆ. ಸ್ಕೀಯಿಂಗ್‌ನಲ್ಲಿ ಆಸಕ್ತಿಯಿರುವ ಪ್ರವಾಸಿಗರು ಡಿಸೆಂಬರ್‌ನಿಂದ ಫೆಬ್ರುವರಿ ವರೆಗೆ ಭೇಟಿ ನೀಡಬಹುದು.