ಅಮರನಾಥ್ - ಅಮರತ್ವದ ರಹಸ್ಯ ಉಪದೇಶಿಸಲಾದ ತಾಣ

ಭಾರತದ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿರುವ ಅಮರನಾಥ್ ಶ್ರೀನಗರದಿಂದ 145 ಕಿಲೋ ಮೀಟರ್ ದೂರದಲ್ಲಿದೆ. ಶಿವ ಕ್ಷೇತ್ರಗಳಲ್ಲಿ ಒಂದಾಗಿರುವ ಅಮರನಾಥದಲ್ಲಿ ನೈಸರ್ಗಿಕವಾಗಿ ರೂಪಗೊಂಡಿರುವ ಹಿಮಲಿಂಗ ಪ್ರಮುಖ ಆಕರ್ಷಣೆ. ಸಮುದ್ರ ಮಟ್ಟದಿಂದ 4175 ಮೀಟರ್ ಎತ್ತರದಲ್ಲಿ ಈ ಹಿಮಲಿಂಗ ಸ್ಥಾಪನೆಯಾಗಿದೆ. ಈ ಯಾತ್ರಾಸ್ಥಳಕ್ಕೆ ಬಂದಿರುವ ಹೆಸರು ಎರಡು ಹಿಂದಿ ಪದಗಳಾದ ಅಮರ್-ಚಿರಂಜೀವಿ, ಮತ್ತು ನಾಥ ಎಂದರೆ ದೇವರು ಎಂಬುದರಿಂದ.

ಜಾನಪದ ಕಥೆಗಳು ಹೇಳುವ ಪ್ರಕಾರ, ಒಮ್ಮೆ ಶಿವನ ಪತ್ನಿ ಪಾರ್ವತಿಯು ಶಿವನಿಗೆ ಅಮರತ್ವದ ರಹಸ್ಯವನ್ನು ತಿಳಿಸುವಂತೆ ಪದೇ ಪದೇ ಕೇಳುತ್ತಾಳೆ. ಕೊನೆಗೆ ಶಿವ ಪಾರ್ವತಿಯನ್ನು ಹಿಮಾಲಯದ ಅಜ್ಞಾತವಾದ ಒಂದು ಸ್ಥಳಕ್ಕೆ ಕರೆದೊಯ್ಯುತ್ತಾನೆ. ಹಿಮಾಲಯಕ್ಕೆ ಹೋಗುವ ದಾರಿಯಲ್ಲಿ ಶಿವನು ತನ್ನ ನೆತ್ತಿ ಮೇಲಿದ್ದ ಚಂದ್ರನನ್ನು ಚಂದನವರಿಯಲ್ಲೂ, ನಂದಿವಾಹನವನ್ನು ಪಹಲ್ಗಮ್ ನಲ್ಲೂ ಬಿಡುತ್ತಾನೆ. ಮಹಾಗುಣ ಬೆಟ್ಟದಲ್ಲಿ ತನ್ನ ಗಜಮುಖ ಗಣಪನನ್ನು ಕೂರಿಸುತ್ತಾನೆ. ಕೊರಳಲ್ಲಿದ್ದ ಹಾವನ್ನು ಶೇಷನಾಗದಲ್ಲಿ ಬಿಡುತ್ತಾನೆ. ಕೊನೆಗೆ ಪಾರ್ವತಿಯನ್ನು ಗುಹೆಯೊಂದರಲ್ಲಿ ಕರೆದೊಯ್ಯುವ ಮುಂಚೆ ತನ್ನ ಐದು ಮೂಲಪಾಠಗಳನ್ನು ಪಂಚತರ್ಣಿಯಲ್ಲಿ ಇರಿಸುತ್ತಾನೆ. ಕೊನೆಯಲ್ಲಿ ಗುಹೆಯೊಳಗೆ ಪ್ರವೇಶಿಸುವ ಪರಶಿವನು ಅಲ್ಲಿನ ಯಾವುದೇ ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳು ತನ್ನ ಮಾತು ಕೇಳಿಸಿಕೊಳ್ಳಬಾರದೆಂದು ಬೆಂಕಿ ಹಚ್ಚುತ್ತಾನೆ. ಆದರೆ ಎರಡು ಪಾರಿವಾಳದ ಮೊಟ್ಟೆಗಳು ಜಿಂಕೆಯ ಚರ್ಮದ ಅಡಿಯಲ್ಲಿ ಅಡಗಿದ್ದರಿಂದ ಶಿವನಿಗೆ ಗೊತ್ತೇ ಆಗುವುದಿಲ್ಲ. ಶಿವ ಅಜರಾಮರತ್ವದ ರಹಸ್ಯವನ್ನು ಹೇಳುವಾಗ ಈ ಎರಡೂ ಮೊಟ್ಟೆಗಳು ಕದ್ದು ಕೇಳಿಸಿಕೊಳ್ಳುತ್ತವೆ.

ಅಮರನಾಥ ಗುಹೆಯನ್ನು ತಲುಪುವ ಪ್ರವಾಸಿಗರು ಈ ಎರಡು ಪಾರಿವಾಳದ ಜೋಡಿಗಳನ್ನು ನೋಡಬಹುದು. ಪ್ರಸಿದ್ದ ನಂಬಿಕೆಯ ಪ್ರಕಾರ, ಶಿವ ಹೇಳಿದ ರಹಸ್ಯವನ್ನು ಕದ್ದು ಕೇಳಿಸಿಕೊಂಡ ಪಾರಿವಾಳಗಳು ಮತ್ತೆ ಮತ್ತೆ ಮೇಲಿಂದ ಮೇಲೆ ಮರುಜನ್ಮ ಪಡೆದುಕೊಂಡು ಅಮರನಾಥ ಗುಹೆಯನ್ನೇ ತಮ್ಮ ಶಾಶ್ವತ ವಾಸಸ್ಥಾನ ಮಾಡಿಕೊಂಡು ಬಿಡುತ್ತವೆ.

6 ನೇ ಶತಮಾನಕ್ಕೆ ಸೇರಿದ ನೀಲಮತ ಪುರಾಣದಲ್ಲಿ ಈ ಸ್ಥಳದ ಉಲ್ಲೇಖವಿದೆ. ಈ ಪುರಾಣದಲ್ಲಿ ಕಾಶ್ಮೀರ ವಾಸಿಗಳ ಶಾಸ್ತ್ರೀಯ ಮತ್ತು ಸಾಂಸ್ಕೃತಿಕ ಜೀವನ ಶೈಲಿಯನ್ನು ತಿಳಿಸಲಾಗಿದೆ. 34 ನೇ ಬಿಸಿ ಈ ದಲ್ಲಿ ಕಾಶ್ಮೀರದ ಗದ್ದುಗೆಯನ್ನು ಏರಿದ ದೊರೆ ಆರ್ಯರಾಜನಿಗೂ ಅಮರನಾಥದ ಸಂಬಂಧವಿದೆ. ದೊರೆ ಆರ್ಯರಾಜ ಬೇಸಿಗೆಯಲ್ಲಿ ಶಿವಲಿಂಗ ಪೂಜೆಗಾಗಿ ಅಮರನಾಥಕ್ಕೆ ಬರುತ್ತಿದ್ದ. ರಾಜತರಂಗಿಣಿ ಕೃತಿಯಲ್ಲಿಯೂ ಅಮರನಾಥವನ್ನು ಅಮರೇಶ್ವರವೆಂದು ಉಲ್ಲೇಖಿಸಲಾಗಿದೆ. ಅಮರನಾಥದ ಭೇಟಿಯ ಸಂದರ್ಭದಲ್ಲಿ 1420 ರಿಂದ 1470 ರ ನಡುವೆ ಸುಲ್ತಾನ್ ಜೈನಲುಬುದ್ದೀನ್ ಶಾಹ್ ಕೋಲ್ ಸುರಂಗವನ್ನು ಕಟ್ಟಿಸಿದ. 

ಅಮರನಾಥ ಯಾತ್ರೆಯ ಸಂದರ್ಭದಲ್ಲಿ, ಸಮದ್ರ ಮಟ್ಟದಿಂದ 3888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯನ್ನು ನೋಡುವುದಕ್ಕೆ ಪ್ರವಾಸಿಗರು ಮರೆಯಬಾರದು. ಇಲ್ಲಿರುವ ಹಿಮದ ಶಿವಲಿಂಗವು ವಾತಾವರಣಕ್ಕೆ ತಕ್ಕಂತೆ ಮಿರುಗುತ್ತದೆ ಮತ್ತು ಕುಂದುತ್ತದೆ. ಮೇ ಮತ್ತು ಆಗಸ್ಟ್ ತಿಂಗಳ ಮಧ್ಯೆ ಗರಿಷ್ಠ ಎತ್ತರವನ್ನು ತಲುಪುತ್ತದೆ. ಪ್ರಸಿದ್ಧ ನಂಬಿಕೆಗಳ ಪ್ರಕಾರ, ಈ ಗುಹೆಯು 5000 ವರ್ಷಗಳಿಗಿಂತಲೂ ಹಳೆಯದು. ಇದೇ ಗುಹೆಯಲ್ಲಿ ಶಿವ ಪರಮಾತ್ಮನು ಅಮರತ್ವದ ರಹಸ್ಯವನ್ನು ಪಾರ್ವತಿಗೆ ತಿಳಿಸಿದನೆಂಬ ನಂಬಿಕೆಯಿದೆ. 

ಮತ್ತೆರಡು ಹಿಮ ಮೂರ್ತಿಗಳಾದ ಗಣೇಶ ಮತ್ತು ಪಾರ್ವತಿಯ ಲಿಂಗರೂಪಗಳೂ ಇಲ್ಲಿವೆ. ಭಾರತೀಯ ಸೇನೆ, ಭಾರತೀಯ ಪಾರ್ಲಿಮೆಂಟರಿ ಫೋರ್ಸ್ ಮತ್ತು ಸಿಆರ್ಪಿಎಫ್ ಪಡೆಗಳು ಇಲ್ಲಿ ಭಾರಿ ಭದ್ರತೆ ಒದಗಿಸುತ್ತವೆ. ಹೀಗಾಗಿ ಅಮರನಾಥಕ್ಕೆ ಭೇಟಿ ನೀಡುವ ಮುನ್ನ ಮೇಲಿನ ಇಲಾಖೆಗಳಿಂದ ಅನುಮತಿ ಅತ್ಯಗತ್ಯ.ಶೇಷನಾಗ್ ಸರೋವರ, ಅಮರನಾಥದ ಮತ್ತೊಂದು ಆಕರ್ಷಣೆ. ಪಹಲ್ಗಮ್ ನಿಂದ ಇದು 27 ಕಿಲೋ ಮೀಟರ್ ದೂರದಲ್ಲಿದೆ. ಈ ಸರೋವರ ಸಮುದ್ರ ಮಟ್ಟದಿಂದ 3658 ಮೀಟರ್ ಎತ್ತರದಲ್ಲಿರುವುದರಿಂದ ಜೂನ್ ತಿಂಗಳಲ್ಲೂ ಹಿಮಾವೃತವಾಗಿರುತ್ತದೆ.

ಅಮರನಾಥ ಯಾತ್ರೆಯ ಸಂದರ್ಭದಲ್ಲಿ, ಅದೂ ಬೇಸಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಈ ಸರೋವರಕ್ಕೂ ಭೆಟಿ ನೀಡುತ್ತಾರೆ. ಅಮರನಾಥ ತಲುಪಲು ಇಚ್ಚಿಸುವವರು ವಿಮಾನ ಮತ್ತು ರೈಲು ಪ್ರಯಾಣದ ಮೂಲಕ ಸುಲಭವಾಗಿ ತಲುಪಬಹುದು. ಅಮರನಾಥದ ಸರಾಸರಿ ಉಷ್ಣಾಂಶ ಬೇಸಿಗೆಯಲ್ಲಿ 15 ಡಿಗ್ರಿ ಸೆಲ್ಶಿಯಸ್. ಚಳಿಗಾಲದಲ್ಲಿ ಅತ್ಯಂತ ಕಡು ಚಳಿಯಿದ್ದು -5 ಡಿಗ್ರಿಗೆ ಕುಸಿಯುತ್ತದೆ. ಸಾಧಾರಣವಾಗಿ ನವೆಂಬರ್ ನಿಂದ ಮಾರ್ಚ್, ಏಪ್ರಿಲ್ ತಿಂಗಳವರೆಗೆ ಅಮರನಾಥ ಹಿಮಾವೃತವಾಗಿರುತ್ತದೆ. ಕೆಲವೊಮ್ಮೆ ಮಳೆಯಾಗುವ ಸಾಧ್ಯತೆಯೂ ಇರುತ್ತದೆ. ಮೇ ಯಿಂದ ಅಕ್ಟೋಬರ್ ತಿಂಗಳು ಅಮರನಾಥಕ್ಕೆ ಭೇಟಿ ನಿಡಲು ಸೂಕ್ತ.

Please Wait while comments are loading...