Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮರನಾಥ್ » ಹವಾಮಾನ

ಅಮರನಾಥ್ ಹವಾಮಾನ

ಮೇ ಮತ್ತು ಅಕ್ಟೋಬರ್ ತಿಂಗಳ ಮಧ್ಯ ಭಾಗ ಅಮರನಾಥದ ಭೆಟಿಗೆ ಪ್ರಶಸ್ತ ಕಾಲ. ಬೇಸಿಗೆ ಹಿತಕರವಾಗಿದ್ದು, ಚಳಿಗಾಲ ಅತ್ಯಂತ ಶೀತವಾಗಿರುತ್ತದೆ. ಚಳಿಗಾಲದಲ್ಲಿ ಅಂದರೆ ನವಂಬರ್ ನಿಂದ ಏಪ್ರಿಲ್ ನಡುವೆ ಅತಿಯಾದ ಹಿಮಪಾತವಿರುವುದರಿಂದ ಚಳಿಗಾಲಕ್ಕಿಂತ ಬೇಸಿಗೆಯೇ ಅಮರನಾಥ ಭೇಟಿಗೆ ಸೂಕ್ತ.

ಬೇಸಿಗೆಗಾಲ

(ಮೇ-ಅಕ್ಟೋಬರ್): ಬೇಸಿಗೆಯಲ್ಲಿ ಅಮರನಾಥದ ವಾತಾವರಣ ಹಿತಕರವಾಗಿರುತ್ತದೆ. ಸರಾಸರಿ ಉಷ್ಣಾಂಶ ಈ ಸಮಯದಲ್ಲಿ 15 ಡಿಗ್ರಿಯಷ್ಟಿರುತ್ತದೆ. ಈ ಟೈಮಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಅಧಿಕ.

ಮಳೆಗಾಲ

(ವರ್ಷದ ಯಾವುದೇ ವೇಳೆಯಲ್ಲಿ): ಅಮರನಾಥದಲ್ಲಿ ಯಾವಾಗ ಮಳೆ ಸುರಿಯುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ವರ್ಷದ ಯಾವುದೇ ಸಮಯದಲ್ಲಿ ಬೇಕಾದರೂ ಮಳೆ ಸುರಿಯಬಹುದು. ಜಾರುವ ರಸ್ತೆಗಳು ತಿರುವು ರಸ್ತೆಗಳನ್ನು ಹತ್ತುವುದಕ್ಕೆ ಕಷ್ಟ ಕೊಡುತ್ತವೆ. ಮಳೆಯ ಸಂದರ್ಭದಲ್ಲಿ ಭೆಟಿ ನೀಡಿದಾಗ ಎಚ್ಚರದಿಂದಿರಬೇಕು.

ಚಳಿಗಾಲ

(ನವಂಬರ್-ಏಪ್ರಿಲ್): ಮರಗಟ್ಟುವ ಚಳಿ ಅಮರನಾಥದಲ್ಲಿ ಅನುಭವಕ್ಕೆ ಬರುತ್ತದೆ. ಉಷ್ಣಾಂಶ ಕನಿಷ್ಠ -5 ಡಿಗ್ರಿಗೆ ಕುಸಿಯುತ್ತದೆ. ಚಳಿಗಾಲದಲ್ಲಿ ಹಿಮ ಮಳೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಾರೆ.