Search
 • Follow NativePlanet
Share
ಮುಖಪುಟ » ಸ್ಥಳಗಳು» ರಾಜೌರಿ

ರಾಜೌರಿ : ಜಮ್ಮುವಿನ ಸೊಬಗು!

5

ಜಮ್ಮು ಮತ್ತು ಕಾಶ್ಮೀರ ಸೌಂದರ್ಯವನ್ನು ಹೊತ್ತು ನಿಂತಿರುವ ಅದ್ಭುತ ಸ್ಥಳಗಳು. ಇಲ್ಲಿನ ನೈಸರ್ಗಿಕ ಭವ್ಯತೆಗೆ ಎಲ್ಲರೂ ಶರಣಾಗಲೇ ಬೇಕು. ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಬರುವವರ ಸಂಖ್ಯೆಯೂ ಅಪಾರ.ಈ ರಾಜ್ಯದ ಹಲವು ಆಕರ್ಷಕ ಸ್ಥಳಗಳಲ್ಲಿ ರಾಜೌರಿಯೂ ಒಂದು. ಈ ಅದ್ಭುತ ಸ್ಥಳದ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ ಇಲ್ಲಿದೆ.

ರಾಜೌರಿ ಜಮ್ಮು ಮತ್ತು ಕಾಶ್ಮೀರದ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಈ ಹಿಂದೆ ಪೂಂಛ್ ಜಿಲ್ಲೆಯ ಒಂದು ಭಾಗವಾಗಿತ್ತು. 1968 ರಲ್ಲಿ ರಾಜೌರಿಯನ್ನು ಒಂದು ಸ್ವತಂತ್ರ ಜಿಲ್ಲೆ ಎಂದು ಘೋಷಿಸಲಾಯಿತು. ಜರಾಲ್ ರಾಜವಂಶ ರಾಜೌರಿಯನ್ನು ಕ್ರಿ.ಶ. 1194 ರಿಂದ 1846 ರ ತನಕ ಆಳ್ವಿಕೆ ನಡೆಸಿತ್ತು. ಇಲ್ಲಿರುವ ಕೋಟೆಗಳು ಮತ್ತು ಮಸೀದಿಗಳನ್ನು ಜರಾಲ್ ರಾಜವಂಶದ ಆಳ್ವಿಕೆಯ ಸಂದರ್ಭದಲ್ಲಿಯೇ ಕಟ್ಟಲಾಯಿತು. ಹೀಗಾಗಿ ಈ ಎಲ್ಲಾ ಕಟ್ಟಡಗಳು ಆ ಕಾಲದ ವಾಸ್ತುಶಿಲ್ಪದ ಶೈಲಿಯನ್ನು ಹೋಲುತ್ತವೆ.

ಇಲ್ಲಿ ನೋಡಲು ಆಕರ್ಷಕವಾದ ಹಲವು ಪ್ರವಾಸಿ ತಾಣಗಳಿವೆ ಅವುಗಳಲ್ಲಿ ಮುಖ್ಯವಾದುವೆಂದರೆ ಪಂಜ್ ಪಿರ್ ಮತ್ತು ಲಾಲ್ ಬೌಜಿ. ರಾಜೌರಿಗೆ ಪ್ರವಾಸ ಮಾಡಲು ನಿರ್ಧರಿಸುವವರು ಪಂಜ್ ಪಿರ್ ಅನ್ನು ಖಂಡಿತ ನೋಡಲೇ ಬೇಕು. ಈ ದೇವಾಲಯದಲ್ಲಿ ಐದು ಸಂತರು ಮತ್ತು ಅವರ ಸಹೋದರಿಯರು ಗತರಾದರೆಂದು ಹೇಳಲಾಗುತ್ತದೆ. ಇಲ್ಲಿಗೆ ಪ್ರತಿ ವರ್ಷ ಹಲವಾರು ಮಂದಿ ಪ್ರವಾಸಿಗರು ಬರುತ್ತಾರೆ, ಅವರಲ್ಲಿ ಸಂಸದರು ಮತ್ತು ಸೈನ್ಯಾಧಿಕಾರಿಗಳೂ ಸೇರಿರುತ್ತಾರೆ. ಲಾಲ್ ಬೌಜಿ, ಒಂದು ನೀರಿನ ಚಿಲುಮೆಯ ಸರೋವರವಾಗಿದ್ದು ರಾಜೌರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಇಲ್ಲಿ ಹಲವಾರು ತಳಿಯ ಮೀನುಗಳನ್ನು ಕಾಣಬಹುದಾಗಿದೆ.

ಈ ಜಿಲ್ಲೆ ಪ್ರಮುಖವಾಗಿ ಇಲ್ಲಿರುವ ಸರೋವರಗಳಿಂದ ಪ್ರಸಿದ್ಧವಾಗಿದೆ. ಅವುಗಳಲ್ಲಿ ಮುಖ್ಯವಾದುವುಗಳೆಂದರೆ ಕಸ್ತೋರಿ ಸಾರ್, ಚಮಾರ್ ಸಾರ್, ದಿಯಾ ಸಾರ್, ಸಮೋತ್ ಸಾರ್, ಗಮ್ ಸಾರ್, ಭಾಗ್ ಸಾರ್ ಮತ್ತು ಅಕಲ್ ದರ್ಶಿನಿ. ಇವುಗಳಲ್ಲದೆ, ಮಂಡಿ ಸರಾಲಿ, ಮಂಗಲದೇವಿ ಕೋಟೆ, ಮುರಾದ್ ಪುರ್ ಸರಾಯಿ ಮತ್ತು ಮಸೀದಿ, ನಾದ್ ಪುರ್ ಸರಾಯಿ ಮತ್ತು ನಾಗಾಝಿ ಜಿಯಾರತ್ ರಾಜೌರಿಯ ಇತರೆ ಪ್ರಮುಖ ತಾಣಗಳು. ಉಸ್ಮಾನ್ ಸ್ಮಾರಕ ಕಟ್ಟಡ ಮತ್ತು ಬಲಿದಾನ ಭವನ ಇಲ್ಲಿನ ಎರಡು ಮುಖ್ಯ ಸ್ಥಳಗಳಾಗಿವೆ. ಇವುಗಳನ್ನು ಪಾಕಿಸ್ತಾನದ ವಿರುದ್ಧ ತಮ್ಮ ಮಾತೃಭೂಮಿಯ ರಕ್ಷಣೆಗೆ ಬಲಿದಾನ ನೀಡಿದ ವೀರರ ನೆನಪಿಗಾಗಿ ಕಟ್ಟಲಾಗಿದೆ.

ರಾಜೌರಿಗೆ ಹೋಗಬಯಸುವ ಪ್ರವಾಸಿಗರು ವಿಮಾನ ಮಾರ್ಗ, ರೈಲ್ವೆ ಮಾರ್ಗ ಮತ್ತು ರಸ್ತೆ ಮಾರ್ಗವಾಗಿ ತಲುಪಬಹುದಾಗಿದೆ. ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಎಪ್ರಿಲ್ ನಲ್ಲಿ ಆರಂಭವಾಗಿ ಜೂನ್ ತನಕ ಮುಂದುವರೆಯುವ ಬೇಸಿಗೆಗಾಲ. ಚಳಿಗಾಲದಲ್ಲಿ ತುಂಬಾ ಚಳಿ ಇದ್ದರೂ ಈ ಅವಧಿಯಲ್ಲೂ ಇಲ್ಲಿ ಭೇಟಿ ನೀಡಲು ಸಾಧ್ಯ. ಚಳಿ ಸ್ವಲ್ಪ ಹೆಚ್ಚಾಗಿದ್ದರೂ ವಾತಾವರಣ ಹೊರಗೆ ತಿರುಗಾಡಿ ಸ್ಥಳಗಳನ್ನು ನೋಡಲು ಸೂಕ್ತವಾಗಿರುತ್ತದೆ.

ರಾಜೌರಿ ಪ್ರಸಿದ್ಧವಾಗಿದೆ

ರಾಜೌರಿ ಹವಾಮಾನ

ರಾಜೌರಿ
32oC / 90oF
 • Sunny
 • Wind: SE 15 km/h

ಉತ್ತಮ ಸಮಯ ರಾಜೌರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ರಾಜೌರಿ

 • ರಸ್ತೆಯ ಮೂಲಕ
  ರಾಜೌರಿ ಜಿಲ್ಲೆಯನ್ನು ನೋಡಲು ಆಸಕ್ತಿಯುಳ್ಳ ವ್ಯಕ್ತಿಗಳು, ಬಸ್ ಮೂಲಕ ಈ ತಾಣಕ್ಕೆ ಭೇಟಿ ಮಾಡಬಹುದು. ಆದಾಗ್ಯೂ, ನೇರ ಬಸ್ ಗಳು ರಾಜೌರಿ ಪ್ರಯಾಣಕ್ಕೆ ಲಭ್ಯವಿಲ್ಲ. ಪ್ರವಾಸಿಗರು, ಪ್ರಮುಖ ನಗರಗಳಾದ,ದೆಹಲಿ, ಅಮೃತಸರ, ಲುಧಿಯಾನ, ಚಂಡೀಘಢ ಮತ್ತು ಶಿಮ್ಲಾದಿಂದ ಸುಲಭವಾಗಿ ಲಭ್ಯವಿರುವ ಜಮ್ಮು ತನಕ ಬಸ್ ಸೌಲಭ್ಯವನ್ನು ಪಡೆಯಬಹುದು. ರಾಜೌರಿಗೆ ತಲುಪಲು ಜಮ್ಮುವಿನ ಮುಖ್ಯ ಬಸ್ ನಿಲ್ದಾಣದಿಂದ ಬಸ್ ಗಳು ಲಭ್ಯವಿದೆ. ಇಲ್ಲಿನ ಬಸ್ ದರ 100 ರಿಂದ 150 ರ ನಡುವೆ ಇರಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಜಮ್ಮು ತಾವಿ ರೈಲ್ವೆ ನಿಲ್ದಾಣ, ರಾಜೌರಿಗೆ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು 150 ಕಿ. ಮೀ ದೂರದಲ್ಲಿದೆ. ಈ ರೈಲ್ವೆ ಜಂಕ್ಷನ್ ಮುಂಬೈ, ದೆಹಲಿ, ಪುಣೆ, ಮತ್ತು ತಿರುವನಂತಪುರ ಮೊದಲಾದ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಜಮ್ಮು ತವಿ ರೈಲು ನಿಲ್ದಾಣ ತಲುಪಿದ ನಂತರ, ಪ್ರಯಾಣಿಕರು ರಾಜೌರಿ ಜಿಲ್ಲೆಗೆ ಹೋಗಲು ಟ್ಯಾಕ್ಸಿ ಅಥವಾ ಬಸ್ ಮೂಲಕ ಪ್ರಯಾಣ ಮಾಡಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ರಾಜೌರಿ ಜಿಲ್ಲೆಯಿಂದ 151 ಕಿ.ಮೀ ದೂರದಲ್ಲಿರುವ ಜಮ್ಮು ವಿಮಾನ ನಿಲ್ದಾಣ ಹತ್ತಿರದ ವಾಯುನೆಲೆಯಾಗಿದೆ. ಈ ವಿಮಾನ ನಿಲ್ದಾಣವು ದೆಹಲಿ, ಮುಂಬೈ, ಮತ್ತು ಶ್ರೀನಗರ ಮೊದಲಾದ ಭಾರತದ ಪ್ರಮುಖ ವಿಮಾನ ನಿಲ್ದಾಣಗಳ ಸಂಪರ್ಕ ಹೊಂದಿದೆ. ಬಸ್ ಅಥವಾ ಟ್ಯಾಕ್ಸಿಗಳು ಜಮ್ಮು ವಿಮಾನ ನಿಲ್ದಾಣದಿಂದ ರಾಜೌರಿಗೆ ಸುಲಭವಾಗಿ ತಲುಪಲು ಲಭ್ಯವಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Rajouri
  32 OC
  90 OF
  UV Index: 8
  Sunny
 • Tomorrow
  Rajouri
  25 OC
  77 OF
  UV Index: 8
  Partly cloudy
 • Day After
  Rajouri
  25 OC
  77 OF
  UV Index: 9
  Partly cloudy