ಮಂಡಿ: ಗುಡ್ಡದ ಮೇಲಿದೆ ಮಾಂಡವ ನಗರಿ

ಮುಖಪುಟ » ಸ್ಥಳಗಳು » ಮಂಡಿ » ಮುನ್ನೋಟ

'ಬೆಟ್ಟಗಳ ವಾರಣಾಸಿ' ಎಂತಲೂ ಕರೆಯಲಾಗುವ ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯು ಬಿಯಸ್ ನದಿ ತೀರದಲ್ಲಿ ನೆಲೆಸಿದೆ. ಇಲ್ಲಿದ್ದ ಪ್ರಸಿದ್ಧ ಋಷಿ ಮಾಂಡವರಿಂದಾಗಿ ಈ ಐತಿಹಾಸಿಕ ಪ್ರಸಿದ್ಧ ಮಂಡಿ ನಗರಿಯು, ಈ ಹಿಂದೆ ಮಾಂಡವನಗರ ಎಂದು ಕರೆಯಲ್ಪಡುತ್ತಿತ್ತು.

ಕಲ್ಲಿನಿಂದ ನಿರ್ಮಾಣಗೊಂಡಿರುವ ದೇವಾಲಯ ಇಲ್ಲಿ ಪ್ರಸಿದ್ಧಿಯಾಗಿದೆ. 300 ವರ್ಷ ಹಳೆಯ ಮಂದಿರ ಇದು. ಇಲ್ಲಿ ಶಿವ ಹಾಗೂ ಕಾಳಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಇದಲ್ಲದೆ, ಇಲ್ಲಿ ಸಾಕಷ್ಟು ಜನಪ್ರಿಯ ಮಂದಿರಗಳೂ ಇವೆ. ಪಂಚವಕ್ತಾರ ದೇಗುಲ, ಅರ್ಧನಾರೀಶ್ವರ ಮಂದಿರ, ತ್ರಿಲೋಕನಾಥ ದೇವಾಲಯ ಪ್ರಮುಖವಾದವುಗಳು.

1520 ರಲ್ಲಿ ನಿರ್ಮಾಣವಾದ ಭೂತನಾಥ ದೇಗುಲ ಇಲ್ಲಿನ ಅತ್ಯಂತ ಪುರಾತನ ದೇವಾಲಯ. ಮಂಡಿಯ ಅತ್ಯಂತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಗುರುದ್ವಾರ ಗೋವಿಂದ ಸಿಂಗ್‌ ಕೂಡ ಪ್ರತಿ ವರ್ಷ ಅಪಾರ ಸಂಖ್ಯೆಯ ವೀಕ್ಷಕರನ್ನು ಆಹ್ವಾನಿಸುತ್ತದೆ. ಇದು ಸಮುದ್ರ ಮಟ್ಟದಿಂದ 11500 ಅಡಿ ಎತ್ತರದಲ್ಲಿದೆ. ಮಂಡಿಯ ಶಿಖಾರಿ ತಪ್ಪಲು ಇನ್ನೊಂದು ಗುರುತರವಾದ ಪ್ರವಾಸಿ ತಾಣ. ಇದು ಶಿಖಾರಿ ದೇವಿ ತಪ್ಪಲು ಅಂತಲೂ ಜನಪ್ರಿಯವಾಗಿದೆ. ಈ ಬೆಟ್ಟದ ತಪ್ಪಲಿನಲ್ಲಿ ಶಿಖಾರಿ ದೇವಿಯ ದೇಗುಲ ಇದೆ.

ಇದಲ್ಲದೆ ಇತರೆ ಆಕರ್ಷಣೆಗಳೆಂದರೆ ಸುಂಕೇನ ಗಾರ್ಡನ್‌, ಜಿಲ್ಲಾ ಗ್ರಂಥಾಲಯ ಕಟ್ಟಡ, ವಿಜಯ ಕೇಸರಿ ಸೇತುವೆ, ಪಂಡೋಹ ಕೆರೆ, ಸುಂದೇರನಗರ, ಪ್ರಶಾರ ಕೆರೆ, ಜಂಜೆಲ್ಲಿ, ರಾಣಿ ಅಮೃತ್‌ ಕೌರ್‌ ಉದ್ಯಾನ, ಬೀರ್‌ ಮಾನೆಸ್ಟ್ರಿ, ನರ್ಗು ವನ್ಯಜೀವಿ ಧಾಮ.

ಶ್ರೀಕರಿ ದೇವಿ ವನ್ಯಜೀವಿ ಧಾಮ ಮಂಡಿಗೆ ಬರುವ ಹಲವು ಪ್ರವಾಸಿಗರಿಗೆ ನೆಚ್ಚಿನ ತಾಣ. ಇದು ಸಾಕಷ್ಟು ಜೀವಿಗಳ ಆವಾಸವಾಗಿದೆ. ಇಲ್ಲಿ ಬೆಟ್ಟದ ಕುರಿ (ಗೋರಲ್‌), ಮೋನಲ್‌ (ರಾಜ್ಯ ಪಕ್ಷಿ), ಕಪ್ಪು ಕರಡಿ, ಬಾರ್ಕಿಂಗ್‌ ಜಿಂಕೆ, ಮಸ್ಕ್‌ ಜಿಂಕೆ, ಹಿಮಾಲಯದ ಕಪ್ಪು ಕರಡಿ, ಬೆಕ್ಕು ಚಿರತೆ, ಹಿಮಾಲಯದ ಮುಂಗುಸಿ ಇಲ್ಲಿವೆ.

ಈ ಪ್ರದೇಶಕ್ಕೆ ತಲುಪುವುದು ಕೂಡ ಸುಲಭ. ರಸ್ತೆ, ರೈಲು, ಹಾಗೂ ವಾಯು ಸಂಪರ್ಕ ಇಲ್ಲಿಗೆ ಉತ್ತಮವಾಗಿದೆ. ಮಾರ್ಚ್ ನಿಂದ ಅಕ್ಟೋಬರ್‌ ನಡುವಿನ ಅವಧಿ ಭೇಟಿಗೆ ಸಕಾಲ.

Please Wait while comments are loading...