Search
 • Follow NativePlanet
Share
ಮುಖಪುಟ » ಸ್ಥಳಗಳು» ನಾದೌನ್

ನಾದೌನ್‌ : ಹಿಮಾಚಲ ಪ್ರದೇಶದ ಸುಂದರ ತಾಣ

8

ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಬಿಯಸ್‌ ನದಿ ದಡದಲ್ಲಿರುವ ಸುಂದರ ಪ್ರವಾಸಿ ತಾಣವೇ ನಾದೌನ್‌‌. ಸಮುದ್ರ ಮಟ್ಟದಿಂದ ಸುಮಾರು 508 ಮೀಟರ‍್ ಎತ್ತರದಲ್ಲಿರುವ ಈ ಪ್ರದೇಶವು ತನ್ನ ಸುತ್ತಲೂ ನಯನಮನೋಹರ ತಾಣಗಳನ್ನು ಹೊಂದಿದೆ. ಐತಿಹಾಸಿಕ ದಾಖಲೆಗಳ ಪ್ರಕಾರ, ನಾದೌನ್‌, ನಾದೌನ್‌ ಜಾಗೀರಿನ ಕೇಂದ್ರಸ್ಥಾನವಾಗಿತ್ತು ಮತ್ತು ಕಾಂಗ್ರಾದ ಮಹಾರಾಜ ಸಂಸಾರ್‌ ಚಾಂದ್‌ರ ಆಡಳಿತಕ್ಕೆ ಒಳಪಟ್ಟಿತ್ತು.

ಈ ಪ್ರದೇಶದ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿವೆ. ಶ್ರೀ ಗುರುದ್ವಾರ ಸಾಹಿಬ್‌, ಬಿಲ್‌-ಕಾಲೇಶ್ವರ ದೇವಸ್ಥಾನ ಮತ್ತು ಅಮ್ತರ್‌-ನಾದೌನ್‌ ಕೋಟೆ. ಬಿಯಸ್‌ ನದಿ ತೀರದಲ್ಲಿರುವ ಶ್ರೀ ಗುರುದ್ವಾರ ಸಾಹಿಬ್‌ ಸಿಖ್‌ ಧಾರ್ಮಿಕ ಕೇಂದ್ರ. ನಾದೌನ್‌ಗೆ ಭೇಟಿ ನೀಡುವ ಪ್ರವಾಸಿಗರು ಬಿಲ್‌-ಕಾಲೇಶ್ವರ ದೇವಸ್ಥಾನಕ್ಕೆ ಒಮ್ಮೆ ಹೋಗಲೇಬೇಕು. ಐತಿಹ್ಯಗಳ ಪ್ರಕಾರ, ಈ ದೇವಸ್ಥಾನವು ಪಾಂಡವರಿಂದ ನಿರ್ಮಾಣವಾಗಿದ್ದು. ಶಿವನಿಗೆ ಈ ದೇವಸ್ಥಾನವನ್ನು ಅರ್ಪಿಸಲಾಗಿದೆ. ಪ್ರತಿವರ್ಷ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಅಮ್ತರ್‌-ನಾದೌನ್‌ ಕೋಟೆಯಲ್ಲಿ ಕಟೋಚ್‌ ರಾಜಮನೆತನದ ರಾಜನಾಗಿದ್ದ ಮಹಾರಾಜ ಸಂಸಾರ್‌ ಚಂದ್‌ರ ಕಾಲದ ಪೇಂಟಿಂಗ್‌ಗಳನ್ನು ನೋಡಬಹುದು. ನಾದೌನ್‌ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಕ ತಾಣವೆಂದರೆ ಪೀರ‍್-ಸಾಹಿಬ್‌ ಸಮಾಧಿ‌. ಇದು ಭರ್ಮೋತಿ ಹಳ್ಳಿಯಲ್ಲಿದೆ. ಪ್ರವಾಸಿಗರು ಬಿಯಸ್‌ ನದಿಯಲ್ಲಿ ಮೀನು ಹಿಡಿಯುವುದು ಮತ್ತು ತೆಪ್ಪದ ಮೇಲೆ ಪ್ರಯಾಣಿಸುವ ಖುಷಿ ಅನುಭವಿಸಬಹುದು.

ಪ್ರವಾಸಿಗರು ರೈಲು, ರಸ್ತೆ ಮತ್ತು ವಿಮಾನದ ಮೂಲಕ ನಾದೌನ್‌ಗೆ ತಲುಪಬಹುದು. ಗಗ್ಗಲ್‌ ವಿಮಾನ ನಿಲ್ದಾಣ ಮತ್ತು ಜ್ವಾಲಾಮುಖಿ ರಸ್ತೆ ರೈಲ್ವೆ ನಿಲ್ದಾಣಗಳು ನಾದೌನ್‌ಗೆ ಸಮೀಪದ ರೈಲು ನಿಲ್ದಾಣ. ಪ್ರವಾಸಿಗರು ನಾದೌನ್‌ಗೆ ಬೇಸಿಗೆ ಕಾಲದಲ್ಲಿ ಭೇಟಿ ನೀಡಬಹುದು. ಮೇ ನಿಂದ ಜುಲೈವರೆಗೆ ಇಲ್ಲಿ ಬೇಸಿಗೆ ಕಾಲವಿರುತ್ತದೆ. ಚಳಿಗಾಲವೂ ಕೂಡಾ ಇಲ್ಲಿನ ಪ್ರವಾಸಕ್ಕೆ ಉತ್ತಮ ಕಾಲವಾಗಿದ್ದು, ಈ ಅವಧಿಯಲ್ಲಿ ಪ್ರಶಾಂತ ವಾತಾವರಣವಿರುತ್ತದೆ.

ನಾದೌನ್ ಪ್ರಸಿದ್ಧವಾಗಿದೆ

ನಾದೌನ್ ಹವಾಮಾನ

ನಾದೌನ್
24oC / 76oF
 • Sunny
 • Wind: E 17 km/h

ಉತ್ತಮ ಸಮಯ ನಾದೌನ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ನಾದೌನ್

 • ರಸ್ತೆಯ ಮೂಲಕ
  ನಾದೌನ್‌ಗೆ ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ. ಖಾಸಗಿ ಮತ್ತು ಸರ್ಕಾರಿ ಬಸ್‌ ಸೇವೆಯು ಶಿಮ್ಲಾ, ಚಂಡೀಗಢದಿಂದ ಹೋಶಿಯಾರ್‌ಪುರದ ರಾಷ್ಟ್ರೀಯ ಹೆದ್ದಾರಿ 88 ಮತ್ತು 70 ರ ಮೂಲಕ ಲಭ್ಯವಿದೆ. ನಾದೌನ್‌ನಲ್ಲಿ ಸಾಕಷ್ಟು ಟ್ಯಾಕ್ಸಿಗಳು ಲಭ್ಯವಿದ್ದು, ಸುತ್ತಲಿನ ಪ್ರದೇಶವನ್ನು ಸುತ್ತಲು ಅನುಕೂಲಕರವಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನಾದೌನ್‌ನಿಂದ 25 ಕಿ.ಮೀ ದೂರದಲ್ಲಿರುವ ಜ್ವಾಲಾಮುಖಿ ರೈಲ್ವೆ ಸ್ಟೇಷನ್‌ ಪ್ರಮುಖ ರೈಲು ನಿಲ್ದಾಣ. ಇನ್ನೊಂದು ರೈಲು ನಿಲ್ದಾಣವಿಂದರೆ ನಾದೌನ್‌ನಿಂದ 44 ಕಿ.ಮೀ ದೂರದಲ್ಲಿರುವ ಕಾಂಗ್ರಾ ರೈಲ್ವೆ ನಿಲ್ದಾಣ. ಈ ರೈಲು ನಿಲ್ದಾಣಗಳಿಂದ ನಾದೌನ್‌ಗೆ ಟ್ಯಾಕ್ಸಿ ಅಥವಾ ಬಸ್‌ಗಳ ಮೂಲಕ ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಗಗ್ಗಲ್‌ ವಿಮಾನ ನಿಲ್ದಾಣವು ನಾದೌನ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಭಾರತದ ಪ್ರಮುಖ ನಗರಗಳಾದ ಚಂಡೀಗಢ, ದೆಹಲಿ ಮತ್ತು ಕುಲುವಿನಿಂದ ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಅಥವಾ ಕ್ಯಾಬ್‌ಗಳನ್ನು ಪಡೆದು ನಾದೌನ್‌ಗೆ ವಿಮಾನ ನಿಲ್ದಾಣದಿಂದ ಪ್ರಯಾಣಿಸಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Oct,Sun
Return On
21 Oct,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Oct,Sun
Check Out
21 Oct,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Oct,Sun
Return On
21 Oct,Mon
 • Today
  Nadaun
  24 OC
  76 OF
  UV Index: 7
  Sunny
 • Tomorrow
  Nadaun
  19 OC
  67 OF
  UV Index: 7
  Partly cloudy
 • Day After
  Nadaun
  21 OC
  69 OF
  UV Index: 7
  Partly cloudy