Search
  • Follow NativePlanet
Share

ಸೋಲನ್: ಭಾರತದ ಅಣಬೆ ನಗರ

11

ಸೋಲನ್, ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಸುಂದರ ಜಿಲ್ಲೆ. ಸೋಲನ್ ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಣಬೆ ಬೆಳೆಯುವುದರಿಂದ 'ಭಾರತದ ಅಣಬೆ ನಗರ' ಎಂಬ ಅನ್ವರ್ಥಕ ನಾಮವೂ ಪಡೆದಿದೆ. ಸಮುದ್ರ ಮಟ್ಟದಿಂದ ಸುಮಾರು 1467 ಮೀಟರ್ ಎತ್ತರದಲ್ಲಿರುವ ಸೋಲನ್ ತನ್ನ ಮೋಹಕ ಸೌಂದರ್ಯದಿಂದ ಗಮನ ಸೆಳೆಯುತ್ತದೆ. ಈ ಪ್ರದೇಶಕ್ಕೆ ಸೋಲನ್ ಎಂಬ ಹೆಸರು ಬಂದಿರುವುದು ಹಿಂದೂ ದೇವತೆ ಶೋಲೊನಿ ದೇವಿಯಿಂದ. ಶೋಲೊನಿ ದೇವಿ ಈ ಪ್ರದೇಶದ ಅಧಿದೇವತೆ. ಇಲ್ಲಿನ ಸಂಪೂರ್ಣ ಪ್ರದೇಶ ದಟ್ಟವಾದ ಕಾಡು ಮತ್ತು ಪರ್ವತ ಶ್ರೇಣಿಯಿಂದ ಆವೃತಗೊಂಡಿದೆ.

ಇಲ್ಲಿರುವ ಮನಮೋಹಕ ಮ್ಯಾತಿಯುಲ್ ಶಿಖರ 1986 ಮೀಟರ್ ಎತ್ತರವಿದ್ದು ಸೋಲನ್ ನಗರದಿಂದ ಪೂರ್ವದಲ್ಲಿ ಕಾಣುತ್ತದೆ. ನಗರದ ಉತ್ತರಕ್ಕೆ ಕರೋಲ್ ಶಿಖರವಿದ್ದು ಇದು ಈ ಪ್ರದೇಶದ ಅತ್ಯಂತ ಎತ್ತರದ ಶಿಖರ. ಸೋಲನ್ ನಗರ ಉಳಿದ ಬೆಟ್ಟಗಳಾದ ಕಂದಘಾಟ್, ಕಸೌಲಿ, ಚೈಲ್ ಮತ್ತು ಧಗ್ಶಾಯಿ ಮುಂತಾದ ಬೆಟ್ಟಗಳ ಪ್ರವಾಸಕ್ಕೆ ಕೇಂದ್ರ ಸ್ಥಾನದಂತಿದೆ.

ಈ ಪ್ರದೇಶ ಹತ್ತಾರು ಬೆಟ್ಟ ಮತ್ತು ಪರ್ವತಗಳನ್ನು ಹೊಂದಿರುವ ಮರಮುಟ್ಟುಗಳಿಂದ ತುಂಬಿಕೊಂಡಿರುವ ಪ್ರದೇಶವಾಗಿರುವುದರಿಂದ ಇಲ್ಲಿ ಕಟ್ಟಡಗಳನ್ನು ಕಟ್ಟುವುದು ಸಾಧ್ಯವಿಲ್ಲ. ಮೌಂಟ್ ಕರೋಲ್ ನ ಸನ್ನಿಧಿಯಲ್ಲಿ ಗುಹೆಯಿದೆ. ಜಾನಪದದ ಪ್ರಕಾರ, ಪುರಾಣ ಕಥೆ ಮಹಾಭಾರತದಲ್ಲಿ ಪಾಂಡವರು ವನವಾಸದ ಸಮಯದಲ್ಲಿ ಇದೇ ಗುಹೆಯಲ್ಲಿ ವಾಸವಾಗಿದ್ದರು ಎಂಬ ನಂಬಿಕೆಯಿದೆ. ಬ್ರಿಟಿಷ್ ಸೇನೆಯ ವಿರುದ್ದದ 1920 ರ ಐರಿಷ್ ದಂಗೆ ಇದೆ ಪ್ರದೇಶದಲ್ಲಿ ಹುಟ್ಟಿದ ಕಾರಣ ಇದಕ್ಕೆ ಐತಿಹಾಸಿಕ ಮಹತ್ವವೂ ಇದೆ. ಬ್ರಿಟಿಷರು ಇಬ್ಬರು ಐರಿಷ್ ಸೈನಿಕರನ್ನು ಕೊಂದ ನಂತರ ಸೇನಾ ದಂಗೆ ಸಂಪೂರ್ಣ ಮುರಿದುಹೋಯ್ತು. ನೂರಾರು ಸೈನಿಕರು ಜೈಲು ಪಾಲಾದರು.

ಸೋಲನ್ ನಲ್ಲಿ ಇರುವ ಪ್ರಮುಖ ಆಕರ್ಷಣೆಯ ತಾಣಗಳಲ್ಲಿ ಯಂಗ್ ಡ್ರಂಗ್ ಟಿಬೇಟಿಯನ್ ಸನ್ಯಾಸ ಮಠ, ಶೊಲೊನಿ ದೇವಿ ಮಂದಿರ, ಗುರ್ಖಾ ಕೋಟೆ ಮತ್ತು ಜತೋಲಿ ಶಿವ ದೇವಸ್ಥಾನ ಪ್ರಮುಖವಾದವುಗಳು. ಮೂಲತಃ ಸೋಲನ್ ಕೈಗಾರಿಕಾ ಪ್ರದೇಶವಾಗಿದ್ದು ಗಮನಿಸತಕ್ಕ ಹತ್ತಾರು ಕೈಗಾರಿಕೆಗಳು ಇಲ್ಲಿನ ಆರ್ಥಿಕತೆಗೆ ಬಲ ತುಂಬಿವೆ. ಹಿಮಾಲಯನ್ ಪೈಪ್ ಇಂಡಸ್ಟ್ರಿ, ಎಚ್ಎಫ್ ಸಿಎಲ್ ಮತ್ತು ಬಿಮೆಟಲ್ ಕಂಟ್ರೋಲ್ಸ್ ಲಿ. ಇವು ಕೆಲವು ಕೈಗಾರಿಕೆಗಳಿಗೆ ಸೂಕ್ತ ಉದಾಹರಣೆಗಳು.

ಚಂಢೀಘಡ ವಿಮಾನ ನಿಲ್ದಾಣ ಸೋಲನ್ ಗೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವಾಗಿದ್ದು 67 ಕಿಲೋ ಮೀಟರ್ ದೂರದಲ್ಲಿವೆ. ಮುಂಬೈ, ನವದೆಹಲಿ, ಶ್ರೀನಗರ್ ಮತ್ತು ಜೈಪುರ್ ಗಳಿಗೆ ಇಲ್ಲಿಂದ ನೇರ ಸಂಪರ್ಕವಿದೆ. ಸೋಲನ್ ನಿಂದ 44 ಕಿಲೋ ಮೀಟರ್ ದೂರದಲ್ಲಿರುವ ಕಲ್ಕಾ ರೈಲ್ವೇ ನಿಲ್ದಾಣದವರೆಗೆ ಪ್ರವಾಸಿಗರು ರೈಲ್ವೇ ಟಿಕೇಟ್ ಪಡೆಯಬಹುದು. ಮುಂಬೈ, ಕೋಲ್ಕತ್ತಾ, ದೆಹಲಿ ಮತ್ತು ಅಮೃತಸರಕ್ಕೆ ಇಲ್ಲಿಂದ ಸಂಪರ್ಕವಿದೆ. ರಸ್ತೆಯ ಮೂಲಕ ಸೋಲನ್ ತಲುಪಲು ಇಚ್ಚಿಸುವ ಪ್ರಯಾಣಿಕರು ಖಾಸಗಿ ಮತ್ತು ಸರ್ಕಾರಿ ಬಸ್ ಸೌಲಭ್ಯಗಳನ್ನು ಪಡೆಯಬಹುದು.

ಸೋಲನ್ ನ ವಾತಾವರಣ ವರ್ಷವಿಡೀ ಒಂದೇ ತೆರನಾಗಿರುತ್ತದೆ. ವರ್ಷದ ಯಾವುದೇ ಸಮಯದಲ್ಲಿ ಪ್ರಯಾಣಿಕರು ಸೋಲನ್ ಗೆ ಭೇಟಿ ನೀಡಬಹುದು.

ಸೋಲನ್ ಪ್ರಸಿದ್ಧವಾಗಿದೆ

ಸೋಲನ್ ಹವಾಮಾನ

ಉತ್ತಮ ಸಮಯ ಸೋಲನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೋಲನ್

  • ರಸ್ತೆಯ ಮೂಲಕ
    ದೆಹಲಿ ಮತ್ತು ಚಂಡೀಘಡದಿಂದ ಸರ್ಕಾರಿ ಮತ್ತು ಖಾಸಗಿ ಬಸ್ ಸೌಕರ್ಯಗಳಿವೆ. ಖಾಸಗಿ ಬಸ್ ದರಗಳು 200 ರೂಪಾಯಿ ಆಸುಪಾಸಿನಲ್ಲಿವೆ. ಸರ್ಕಾರಿ ಬಸ್ಸುಗಳು ಕಡಿಮೆ ದರಕ್ಕೆ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಕಾ ರೈಲ್ವೇ ನಿಲ್ದಾಣ ಸೋಲನ್ ನಗರದಿಂದ 44 ಕಿಲೋ ಮೀಟರ್ ದೂರದಲ್ಲಿದೆ. ಕೋಲ್ಕತ್ತಾ, ದೆಹಲಿ ಮತ್ತು ಅಮೃತಸರ್ ಸೇರಿದಂತೆ ಬಹುತೇಕ ನಗರಕ್ಕೆ ಇಲ್ಲಿಂದ ಸಂಪರ್ಕವಿದೆ. ರೈಲ್ವೇ ನಿಲ್ದಾಣದಿಂದ ಟ್ಯಾಕ್ಸಿಗಳು ಸೋಲನ್ ತಲುಪಲು ಬಾಡಿಗೆಗೆ ದೊರೆಯುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    67 ಕಿಲೋ ಮೀಟರ್ ದೂರದಲ್ಲಿರುವ ಚಂಡೀಘಡ ವಿಮಾನ ನಿಲ್ದಾಣ ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ನವದೆಹಲಿ, ಮುಂಬೈ, ಶ್ರೀನಗರ ಮತ್ತು ಜೈಪುರಗಳಿಂದ ಈ ಡೊಮೆಸ್ಟಿಕ್ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕವಿದೆ.ಇಲ್ಲಿಂದ ಸೋಲನ್ ನಗರಕ್ಕೆ ಟ್ಯಾಕ್ಸಿ ಅಥವಾ ಕಾರ್ ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu